ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು 12 ನೇ ತರಗತಿಯಲ್ಲಿ ಹೆಚ್ಚಿನ ಅಂಕಪಡೆದು ಪ್ರಥಮ ಸ್ಥಾನ ಪಡೆದುಕೊಂಡ ವಿದ್ಯಾರ್ಥಿನಿಯನ್ನು ಸ್ವತಃ ಭೇಟಿಯಾಗಿ ಅಭಿನಂದಿಸಿದ್ದಾರೆ. ರಾಜ್ಯ ಮಂಡಳಿ ಟಾಪರ್ (Topper) ನಂದಿನಿ ಅವರನ್ನು ಮಂಗಳವಾರ ಭೇಟಿಯಾಗಿ ಶುಭಾಶಯಗಳನ್ನು ಕೋರಿದ್ದಾರೆ. ನಂದಿನಿಯ ಉನ್ನತ ಶಿಕ್ಷಣಕ್ಕೆ (Education) ರಾಜ್ಯ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಭರವಸೆ ನೀಡಿದ್ದಾರೆ. ಮಂಗಳವಾರ ತಮಿಳುನಾಡು (Tamilnadu) ಸಿಎಂ ಸ್ಟಾಲಿನ್ ಅವರು ಆಕೆಯನ್ನು ಭೇಟಿಯಾಗಿರುವುದು ಪಾಲಕರಿಗೆ ಹಾಗೂ ವಿದ್ಯಾರ್ಥಿನಿಗೆ ತುಂಬಾ ಸಂತೋಷ ತಂದಿದೆ.
ಸಭೆಯ ಬಳಿಕ ಮಾತನಾಡಿದ ಸಿಎಂ ಸ್ಟಾಲಿನ್, ಶಿಕ್ಷಣ ಯಾರಿಂದಲೂ ಕದಿಯಲು ಸಾಧ್ಯವಿಲ್ಲದ ಆಸ್ತಿ ಎಂದು ಹಲವು ಕಾರ್ಯಕ್ರಮಗಳಲ್ಲಿ ಹೇಳುತ್ತಲೇ ಬಂದಿದ್ದೇನೆ. ಸೋಮವಾರ ಬಿಡುಗಡೆಯಾದ 12ನೇ ತರಗತಿಯ ಪಬ್ಲಿಕ್ ಪರೀಕ್ಷೆಯ ಫಲಿತಾಂಶದಲ್ಲಿ ನಂದಿನಿ ಎಂಬ ವಿದ್ಯಾರ್ಥಿನಿ 600/600 ಅಂಕ ಗಳಿಸಿ ದಾಖಲೆ ಬರೆದಿರುವುದು ನನಗೂ ಖುಷಿ ತಂದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: NEET 2023: ಪರೀಕ್ಷೆ ಬರೆಯುವಾಗ ವಿದ್ಯಾರ್ಥಿನಿಗೆ ಒಳಉಡುಪು ತೆಗೆಯುವಂತೆ ಹೇಳಿದ ಸಿಬ್ಬಂದಿ- ತೀವ್ರ ಆಕ್ರೋಶ
ವಿದ್ಯಾರ್ಥಿನಿಯ ತಂದೆಯ ಕುಲಿ ಕೆಲಸ ಮಾಡುತ್ತಾರೆ. ಆದರೆ ಮಗಳು ತಮಿಳುನಾಡಿನ 12ನೇ ತರಗತಿ ಪರೀಕ್ಷೆಯಲ್ಲಿ 600ಕ್ಕೆ 600 ಅಂಕಗಳಿಸಿ ಪಾಲಕರಿಗೆ ಖುಷಿ ತಂದಿದೆ.ಆಕೆ ದಿಂಡಿಗಲ್ ಜಿಲ್ಲೆಯ ಸರ್ಕಾರಿ ಅನುದಾನಿತ ಶಾಲೆಯ ವಿದ್ಯಾರ್ಥಿನಿಯಾಗಿದ್ದಳು. ನಂದಿನಿ ಅವರು ಮಂಗಳವಾರ ತಮಿಳು, ಇಂಗ್ಲಿಷ್, ಅರ್ಥಶಾಸ್ತ್ರ, ವಾಣಿಜ್ಯ, ಅಕೌಂಟೆನ್ಸಿ ಮತ್ತು ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಅಂದರೆ ಪ್ರತಿಯೊಂದು ವಿಷಯದಲ್ಲೂ ನೂರಕ್ಕೆ ನೂರು ಅಂಕಗಳಿಸಿದ್ದಾಳೆ.
ಅಣ್ಣಾಮಲೈ ಅವರಿಂದ ಶ್ಲಾಘನೆ
ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಕೂಡ ನಂದಿನಿ ಅವರನ್ನು ಅಭಿನಂದಿಸಿದ್ದಾರೆ. ತಮಿಳುನಾಡಿನಲ್ಲಿ ಪ್ರಥಮ ಬಾರಿಗೆ ಸಹೋದರಿ ನಂದಿನಿ 12ನೇ ತರಗತಿಯಲ್ಲಿ 600ಕ್ಕೆ 600 ಅಂಕ ಗಳಿಸಿ ಶಿಕ್ಷಣದಲ್ಲಿ ಸಾಧನೆ ಮಾಡಿದ್ದಾಳೆ ಎಂದು ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.
ನಂದಿನಿ ಅವರು ಆತ್ಮಸ್ಥೈರ್ಯ ಮತ್ತು ಪರಿಶ್ರಮಕ್ಕೆ ನಿದರ್ಶಅಂತಲೇ ಹೇಳಬಹುದು. ನಿನ್ನೆ ನಾನು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ ಎಂದು ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವುದಾಗಿ ಆವಿದ್ಯಾರ್ಥಿನಿ ಹೇಳಿದ್ದಾಳೆ.
எளிய பின்னணியிலிருந்து வந்து, தமிழகத்திலேயே முதன்முறையாக, பன்னிரண்டாம் வகுப்பில் 600க்கு 600 மதிப்பெண்கள் எடுத்து, கல்வியில் சாதிக்க எதுவும் தடையில்லை என்பதை நிரூபித்திருக்கிறார் சகோதரி நந்தினி.
(1/2) pic.twitter.com/r6tfzPrurw
— K.Annamalai (@annamalai_k) May 9, 2023
ಕರ್ನಾಟಕ SSLC ಫಲಿತಾಂಶದಲ್ಲಿ ಈ ಬಾರಿ ಚಿತ್ರದುರ್ಗ ನಂಬರ್ 1
ವಿವಿಧ ಜಿಲ್ಲೆಗಳ ಶೇಕಡಾವಾರು ವಿವರ ಹೀಗಿದೆ
ಬೆಂಗಳೂರು ಗ್ರಾಮಾಂತರ ಶೇಕಡಾ 96.78, ಚಿಕ್ಕಬಳ್ಳಾಪುರ ಶೇಕಡಾ 96.15, ಕೋಲಾರ ಶೇಕಡಾ 94.6, ಮೈಸೂರು ಶೇಕಡಾ 89.75, ಬೆಂಗಳೂರು ಪಶ್ಚಿಮ ಶೇಕಡಾ 80.93, ಬೆಂಗಳೂರು ದಕ್ಷಿಣ ಶೇಕಡಾ 78.95 ಫಲಿತಾಂಶ ಪಡೆದಿವೆ. ಇನ್ನು ಕೊನೆಯ ಸ್ಥಾನದಲ್ಲಿರುವ ಯಾದಗಿರಿ ಜಿಲ್ಲೆಯ ಫಲಿತಾಂಶ ಶೇಕಡಾ 75.49 ಆಗಿದೆ.
ನಿಮ್ಮ ಜಿಲ್ಲೆಯ ಫಲಿತಾಂಶ ಇಲ್ಲಿದೆ ನೋಡಿ
ಚಿತ್ರದುರ್ಗ ಶೇ.96.8, ಮಂಡ್ಯ ಶೇ.96.74, ಹಾಸನ ಶೇ.96.68, ಬೆಂಗಳೂರು ಗ್ರಾಮಾಂತರ ಶೇ.96.48, ಚಿಕ್ಕಬಳ್ಳಾಪುರ ಶೇ.96.15, ಕೋಲಾರ ಶೇ.94.6, ಚಾಮರಾಜನಗರ ಶೇ.,94.32, ಮಧುಗಿರಿ ಶೇ.93.23, ಕೊಡಗು-ಶೇ.93.19, ವಿಜಯನಗರ ಶೇ.91.41, ವಿಜಯಪುರ ಶೇ. 91.23, ಚಿಕ್ಕೋಡಿ 91.07, ಉತ್ತರಕನ್ನಡ ಶೇ.90.53, ದಾವಣಗೆರೆ ಶೇ.90.43, ಕೊಪ್ಪಳ ಶೇ.90.27, ಮೈಸೂರು ಜಿಲ್ಲೆ ಶೇ.89.75, ಚಿಕ್ಕಮಗಳೂರು ಶೇ.89.69, ಉಡುಪಿ- ಶೇ. 89.49, ದಕ್ಷಿಣ ಕನ್ನಡ- ಶೇ. 89.47, ತುಮಕೂರು- ಶೇ. 89.43, ರಾಮನಗರ- ಶೇ. 89.42.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ