ಸಿಇಟಿ ಪರೀಕ್ಷೆ (CET Exam) ದಿನವೇ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಈಗ ಅದಕ್ಕೆ ಪರಿಹಾರ ಸೂಚಿಸಲಾಗಿದೆ. ವಿದ್ಯಾರ್ಥಿಗಳಿಗೆ (Students) ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗುತ್ತದೆ. ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಕೆಇಎ ವ್ಯವಸ್ಥೆ ಮಾಡುವುದಾಗಿ ತಿಳಿಸಿದೆ. ಟ್ರಾಫಿಕ್ (Traffic) ಕಿರಿಕಿರಿ ಆಗದಂತೆ ಸಂಚಾರಿ ಪೊಲೀಸರೊಂದಿಗೆ ಮಾತುಕತೆ ನಡೆಸಲಾಗಿದೆ. ಈ ಬಗ್ಗೆ ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯ ಹೇಳಿಕೆ ನೀಡಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಸಿಎಂ ಪ್ರಮಾಣವಚನ ಹಿನ್ನೆಲೆ ಸೆಂಟ್ ಜೋಸೆಫ್ಸ್ ಇಂಡಿಯನ್ ಪಿಯು ಕಾಲೇಜು ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಸಿಇಟಿ ವಿದ್ಯಾರ್ಥಿಗಳಿಗೆ ಮುನ್ಸೂಚನೆ, ಬೆಳಿಗ್ಗೆ 8.30ಕ್ಕೇ ಬರಲು ಸೂಚನೆ ನೀಡಲಾಗಿದೆ.
ಊಟದ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ
ಯಾವುದೇ ವಿದ್ಯಾರ್ಥಿಗೆ ಸಂಚಾರ ಸಂಬಂಧಿತ ಸಹಾಯ ಬೇಕಿದ್ದಲ್ಲಿ, ರಸ್ತೆಯಲ್ಲಿ ಕರ್ತವ್ಯನಿರತ ಸಂಚಾರ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ ಮಧ್ಯಾಹ್ನದ ಸಿಇಟಿ ಪರೀಕ್ಷೆಗೆ ಸೆಂಟ್ ಜೋಸೆಫ್ ಪಿಯು ಇಂಡಿಯನ್ ಕಾಲೇಜು, ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳು ಸೆಂಟ್ ಮಾರ್ಕ್ಸ್ ರಸ್ತೆ, ವಿಠಲ್ ಮಲ್ಯ ರಸ್ತೆ ಮೂಲಕ ಬಂದು ಯೂಬಿ ಸಿಟಿಯ ಮುಂಭಾಗದ ಗೇಟ್ನಿಂದ ಕಾಲೇಜಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಸೆಂಟ್ ಜೋಸೆಫ್ ಪಿಯು ಕಾಲೇಜಿನ ಅಧಿಕಾರಿಗಳು ಸೆಂಟ್ ಜೋಸೆಫ್ ಪರೀಕ್ಷಾ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳಿಗೆ ಅಗತ್ಯ ಉಟೋಪಚಾರವನ್ನು ಏರ್ಪಡಿಸಲಾಗಿದೆ.
ಈ ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ಬರೆಯುವವರು ಬೆಳಿಗ್ಗೆ 8.30ಕ್ಕೆ ಬರಲು ಸೂಚನೆ
* ಬಿಷಪ್ ಕಾಟನ್ ಮಹಿಳಾ ಪದವಿಪೂರ್ವ ಕಾಲೇಜು, 3ನೇ ಅಡ್ಡರಸ್ತೆ, ಸಿಎಸ್ಐ ಕಾಂಪೌಂಡ್.
* ಗುಡ್ ವಿಲ್ ಬಾಲಕಿಯರ ಪದವಿಪೂರ್ವ ಕಾಲೇಜು, ಪ್ರೊಮೆನೇಡ್ ರಸ್ತೆ, ಫ್ರೇಸರ್ ಟೌನ್.
* ಸೆಂಟ್ ಜೋಸೆಫ್ಸ್ ಪದವಿಪೂರ್ವ ಕಾಲೇಜು, ರೆಸಿಡೆನ್ಸಿ ರಸ್ತೆ.
* ಸೆಂಟ್ ಜೋಸೆಫ್ಸ್ ಇಂಡಿಯನ್ ಪಿಯು ಕಾಲೇಜು, ವಿಠಲ್ ಮಲ್ಯ ರಸ್ತೆ.
* ಸೆಂಟ್ ಆ್ಯನ್ಸ್ ಬಾಲಕಿಯರ ಪಿಯು ಕಾಲೇಜು, ಮಿಲ್ಲರ್ಸ್ ರಸ್ತೆ.
* ಆರ್. ಬಿ.ಎ.ಎನ್.ಎಂ.ಎಸ್ ಪಿಯು ಕಾಲೇಜು, ಅಣ್ಣಾಸ್ವಾಮಿ ಮೊದಲಿಯಾರ್ ರಸ್ತೆ.
* ಎಸ್.ಜೆ.ಆರ್.ಸಿ. ಬಿಐಎಫ್ಆರ್ ಪಿಯು ಕಾಲೇಜು, ಆನಂದರಾವ್ ವೃತ್ತ.
* ಕ್ಯಾಥೆಡ್ರಲ್ ಕಾಂಪೋಸಿಟ್ ಪಿಯು ಕಾಲೇಜು, ರಿಚ್ಮಂಡ್ ರಸ್ತೆ.
* ಸೆಂಟ್ ಯುಫ್ರಿಶಿಯಸ್ ಬಾಲಕಿಯರ ಪ್ರೌಢಶಾಲೆ ಮತ್ತು ಕಾಂಪೋಸಿಟ್ ಪಿಯು ಕಾಲೇಜು, ಆಲ್ಬರ್ಟ್ ಸ್ಟ್ರೀಟ್, ರಿಚ್ಮಂಡ್ ಟೌನ್.
* ಸ್ಟ್ರೇಸಿ ಮೆಮೋರಿಯಲ್ ಕಾಂಪೋಸಿಟ್ ಪಿಯು ಕಾಲೇಜು, ಸೆಂಟ್ ಮಾರ್ಕ್ಸ್ ರಸ್ತೆ.
* ಹಸನತ್ ಮಹಿಳಾ ಪಿಯು ಕಾಲೇಜು, ಡಿಕನ್ಸನ್ ರಸ್ತೆ.
ಬೆಂಗಳೂರಿನ ಎಲ್ಲ ಪರೀಕ್ಷಾ ಕೇಂದ್ರಗಳ ವಿದ್ಯಾರ್ಥಿಗಳಿಗೂ ಬೆಳಿಗ್ಗೆ 8.30ಕ್ಕೇ ಬರಲು ಸೂಚನೆ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಕೆಇಎ ಮಾಹಿತಿ ಮತ್ತು ಸಹಾಯವಾಣಿ
ನಗರದ ಯಾವುದಾದರೂ ರಸ್ತೆಯಲ್ಲಿ ವಾಹನ ಕೆಟ್ಟು ನಿಂತಲ್ಲಿ ಅಥವಾ ಅಪಘಾತ ಸಂಭವಿಸಿದಲ್ಲಿ ಗಮನಿಸಿದ ಕೂಡಲೇ ಸಂಚಾರ ನಿಯಂತ್ರಣ ಕೋಣೆ ದೂರವಾಣಿ ಸಂಖ್ಯೆ-080-22943131 ಅಥವಾ 080-22943030 ಗೆ ಕರೆ ಮಾಡಿ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ