• Home
 • »
 • News
 • »
 • jobs
 • »
 • Education Loan: ಎಜ್ಯುಕೇಶನ್ ಲೋನ್ ಪಡೆಯೋದ್ರಿಂದ ಇಷ್ಟೆಲ್ಲಾ ಲಾಭಗಳಿವೆ ನೋಡಿ!

Education Loan: ಎಜ್ಯುಕೇಶನ್ ಲೋನ್ ಪಡೆಯೋದ್ರಿಂದ ಇಷ್ಟೆಲ್ಲಾ ಲಾಭಗಳಿವೆ ನೋಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶಿಕ್ಷಣದ ಸಾಲ ಪಡೆಯುವುದರಿಂದ ಪಾಲಕರು ತಮ್ಮ ಮಕ್ಕಳ ಬೋಧನಾ ಅಗತ್ಯವನ್ನು ಪೂರೈಸಲು ರಿಯಲ್ ಎಸ್ಟೇಟ್, ಈಕ್ವಿಟಿಗಳು ಅಥವಾ ಚಿನ್ನಗಳನ್ನು ಮಾರಾಟ ಮಾಡಬೇಕಾಗಿಲ್ಲ. ತಮ್ಮ ಉಳಿತಾಯವನ್ನು ಹಾಗೆಯೇ ಇಡಬಹುದು.

 • Trending Desk
 • 2-MIN READ
 • Last Updated :
 • Share this:

  ಶಿಕ್ಷಣ ಕ್ಷೇತ್ರವು(Education Sector) ಮೊದಲಿನಂತಿಲ್ಲ. ಸಾಕಷ್ಟು ತಂತ್ರಜ್ಞಾನವನ್ನು(Technology), ಅನುಭವದ ಕಲಿಕೆಯನ್ನು, ಉದ್ಯಮ ಸಂಯೋಜಿತ ಪಠ್ಯಕ್ರಮಗಳನ್ನು ಒಳಗೊಂಡಿದೆ. ವೃತ್ತಿಪರ ಹಾಗೂ ವೈಯಕ್ತಿಕ ಅವಕಾಶಗಳನ್ನು ಅನ್ಲಾಕ್‌(Unlock) ಮಾಡಲು ಇಂತಹ ಗುಣಮಟ್ಟದ ಶಿಕ್ಷಣ(Quality Education) ಇಂದಿನ ಕಾಲದಲ್ಲಿ ಅವಶ್ಯ ಕೂಡ.


  ಆದ್ರೆ ಶಿಕ್ಷಣದ ಈ ಮಾದರಿಯು ಬೋಧನಾ ಶುಲ್ಕವನ್ನು ಹೆಚ್ಚಿಸುವಲ್ಲಿ ಮತ್ತು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಡ್ಮಿಶನ್‌ ಗಳಿಗಾಗಿ ತೀವ್ರ ಪೈಪೋಟಿಗೆ ಕಾರಣವಾಗಿದೆ.


  ಅಂತೆಯೇ, ಪೋಷಕರು ತಮ್ಮ ಮಕ್ಕಳ ಉನ್ನತ ಅಭ್ಯಾಸಕ್ಕಾಗಿ ಹೆಚ್ಚಿನ ಹಣವನ್ನು ಸುರಿಯುವುದು ಅನಿವಾರ್ಯವಾಗುತ್ತದೆ. ಆದ್ರೆ ಈ ದುಬಾರಿ ಶಿಕ್ಷಣದ ಆರ್ಥಿಕ ಸಂಕೋಲೆಯಿಂದ ಮುಕ್ತವಾಗಲು ಸುಲಭವಾದ ಮಾರ್ಗವೆಂದರೆ ಎಜ್ಯುಕೇಶನ್‌ ಲೋನ್‌ ಮಾಡುವುದು. ಇದು ಸಾಕಷ್ಟು ಪ್ರಯೋಜನಕಾರಿ ಕೂಡ.


  * ಡಬಲ್ ತೆರಿಗೆ ವಿನಾಯಿತಿ ಪ್ರಯೋಜನ: ಇತರ ಸಾಲದ ಪ್ರಕಾರಗಳಿಗಿಂತ ಭಿನ್ನವಾಗಿ, ಶಿಕ್ಷಣ ಸಾಲವನ್ನು ಪಡೆದುಕೊಳ್ಳುವುದು ನಿಮಗೆ ವಿನಾಯಿತಿಗಳನ್ನು ಒದಗಿಸುತ್ತದೆ.


  -TCS (Tax collection at source) : ಶಿಕ್ಷಣ ಸಾಲವನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳು ಕೇವಲ 0.5 ಶೇಕಡಾ TCS ಅನ್ನು ಪಾವತಿಸಬೇಕಾಗುತ್ತದೆ.


  -ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ತೆರಿಗೆ ವಿನಾಯಿತಿ: ಸೆಕ್ಷನ್ 80E (ಭಾರತದ ಆದಾಯ ತೆರಿಗೆ) ಅಡಿಯಲ್ಲಿ, ವಿದ್ಯಾರ್ಥಿಗಳು 8 ವರ್ಷಗಳವರೆಗೆ ಪಾವತಿಸಿದ ಬಡ್ಡಿಯ ಮೇಲೆ ಅನಿಯಮಿತ ತೆರಿಗೆ ಕಡಿತವನ್ನು ಪಡೆಯಬಹುದು


  *ವೈಯಕ್ತಿಕ ಉಳಿತಾಯವನ್ನು ಹಾಗೆಯೇ ಇಡಬಹುದು : ಶಿಕ್ಷಣದ ಸಾಲ ಪಡೆಯುವುದರಿಂದ ಪಾಲಕರು ತಮ್ಮ ಮಕ್ಕಳ ಬೋಧನಾ ಅಗತ್ಯವನ್ನು ಪೂರೈಸಲು ರಿಯಲ್ ಎಸ್ಟೇಟ್, ಈಕ್ವಿಟಿಗಳು ಅಥವಾ ಚಿನ್ನಗಳನ್ನು ಮಾರಾಟ ಮಾಡಬೇಕಾಗಿಲ್ಲ. ತಮ್ಮ ಉಳಿತಾಯವನ್ನು ಹಾಗೆಯೇ ಇಡಬಹುದು.


  *ಸೂಕ್ತವಾದ ಸಾಲದ ಆಯ್ಕೆ: ಅವರ ಪ್ರೊಫೈಲ್ ಮತ್ತು ಕೋರ್ಸ್ ಗಳ ಆಧಾರದ ಮೇಲೆ, ವಿದ್ಯಾರ್ಥಿಗಳು ತಮ್ಮ ಅಧ್ಯಯನ ಅಗತ್ಯಗಳಿಗೆ ಸರಿಹೊಂದುವ ಸಾಲದ ಪ್ರಕಾರವನ್ನು ಆಯ್ಕೆ ಮಾಡಿಕೊಳ್ಳಬಹುದು.


  *ಮರುಪಾವತಿಯ ಅವಧಿ: ಸಾಮಾನ್ಯವಾಗಿ, ಶಿಕ್ಷಣ ಸಾಲಗಳ ಸಂದರ್ಭದಲ್ಲಿ ಕೋರ್ಸ್ ಮುಗಿದ 6 ರಿಂದ 12 ತಿಂಗಳ ನಂತರ EMI ಪಾವತಿಗಳನ್ನು ಪ್ರಾರಂಭಿಸಲು ನಿಗದಿಪಡಿಸಲಾಗಿದೆ. ಇದರಿಂದಾಗಿ ಉದ್ಯೋಗವನ್ನು ಹುಡುಕಲು... ಹುಡುಕಿದ ನಂತರ ಸಾಲ ತುಂಬಲು ಸಾಕಷ್ಟು ಸಮಯ ಸಿಗುತ್ತದೆ.


  *ಭವಿಷ್ಯಕ್ಕಾಗಿ ಕ್ರೆಡಿಟ್ ಹಿಸ್ಟರಿ ನಿರ್ಮಿಸುವುದು: ಶಿಕ್ಷಣ ಸಾಲಗಳನ್ನು ಮರುಪಾವತಿ ಮಾಡುವುದು ವಿದ್ಯಾರ್ಥಿಗಳ ಕ್ರೆಡಿಟ್ ಹಿಸ್ಟರಿಯನ್ನು ನಿರ್ಮಿಸುತ್ತದೆ.


  ಇದು ಭವಿಷ್ಯದಲ್ಲಿ ಗೃಹ ಸಾಲ ಅಥವಾ ವಾಹನ ಸಾಲದಂತಹ ಇತರ ಸಾಲಗಳನ್ನು ಸುಲಭವಾಗಿ ಪಡೆದುಕೊಳ್ಳಲು ಸಹಾಯ ಮಾಡುತ್ತದೆ.


  *ಮೇಲಾಧಾರ ಠೇವಣಿ ಅಗತ್ಯವಿಲ್ಲ: 7.5 ಲಕ್ಷದ ವರೆಗೆ ಹೆಚ್ಚಿನ ಬ್ಯಾಂಕ್‌ಗಳು ಮೇಲಾಧಾರ-ಮುಕ್ತ ಸಾಲಗಳನ್ನು ನೀಡುತ್ತವೆ. ನೀವು ಅದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.


  ಇದನ್ನೂ ಓದಿ: Clinical Education: ಕ್ಲಿನಿಕಲ್ ಶಿಕ್ಷಣ ಪದ್ಧತಿ ಎಂದರೇನು? EXXAT ಸಂಸ್ಥೆಯ ಸಿಇಒ ವಿವರಣೆ ಹೀಗಿದೆ


  *ವಿದ್ಯಾರ್ಥಿಗಳಲ್ಲಿ ಆರ್ಥಿಕ ಶಿಸ್ತನ್ನು ನಿರ್ಮಿಸುವುದು: EMI ಗಳನ್ನು ಮರುಪಾವತಿ ಮಾಡುವುದು ಎಂದರೆ ವಿದ್ಯಾರ್ಥಿಗಳ ವೃತ್ತಿಪರ ಜೀವನದ ಆರಂಭದಲ್ಲಿ ಒಂದು ಮೊತ್ತವನ್ನು ಬದಿಗಿರಿಸುವುದು ಎಂದರ್ಥ. ಅದು ಅವರ ಮುಂದಿನ ಜೀವನದಲ್ಲಿ ಆರ್ಥಿಕ ಉಳಿತಾಯದ ಪಾಠ ಹೇಳಿಕೊಡುತ್ತದೆ.


  *ಕಡಿಮೆ ಬಡ್ಡಿದರಗಳು ಮತ್ತು ಮಹಿಳೆಯರಿಗೆ ಹೆಚ್ಚುವರಿ ಪ್ರಯೋಜನಗಳು: ವಿಶಿಷ್ಟವಾಗಿ, ಸುರಕ್ಷಿತ ಶಿಕ್ಷಣ ಸಾಲಗಳಿಗೆ, ಮಹಿಳೆಯರಿಗೆ ಬಡ್ಡಿದರಗಳು 7.85% ಮತ್ತು ಪುರುಷರಿಗೆ 8.35% ರಿಂದ ಪ್ರಾರಂಭವಾಗುತ್ತವೆ. ಇದು ವೈಯಕ್ತಿಕ ಸಾಲದಂತಹ ಇತರ ಸಾಲಗಳಿಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ.


  *ದೀರ್ಘ ಮರುಪಾವತಿ ಅವಧಿ: ಇತರ ಸಾಲದ ವರ್ಗಗಳಿಗಿಂತ ವಿಭಿನ್ನವಾಗಿ ಶಿಕ್ಷಣ ಸಾಲಗಳ ಮರುಪಾವತಿ ಅವಧಿಯು 20 ವರ್ಷಗಳವರೆಗೆ ಇರುತ್ತದೆ.


  ವಿದ್ಯಾರ್ಥಿ ಸಾಲವನ್ನು ತೆಗೆದುಕೊಳ್ಳುವ ಮೊದಲು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು:


  1. ತೆರಿಗೆ ಪ್ರಯೋಜನಗಳು ಬಡ್ಡಿಯ ಮೇಲೆ ಮಾತ್ರ ಅನ್ವಯಿಸುತ್ತವೆಯೇ ಹೊರತು ಪಾವತಿಸಬೇಕಾದ ಮೂಲ ಮೊತ್ತದ ಮೇಲಲ್ಲ.


  2. ಪ್ರಾಥಮಿಕ ಅರ್ಜಿದಾರರು ಸಾಲ ಮರುಪಾವತಿ ಮಾಡದೇ ಹೋದರೆ ಅದರ ಹೊಣೆಗಾರಿಕೆ ಸಹ ಅರ್ಜಿದಾರರು ಅಥವಾ ಗಾರ್ಡಿಯನ್‌ ಮೇಲಿರುತ್ತದೆ.


  ಇದನ್ನೂ ಓದಿ: Karnataka: ವಿದ್ಯಾರ್ಥಿಗಳೇ ಗಮನಿಸಿ- UG, PG ಪರೀಕ್ಷಾ ಕ್ರಮದಲ್ಲಿ ಮಹತ್ತರ ಬದಲಾವಣೆ


  3. ಅರ್ಜಿದಾರ ಮತ್ತು ಸಹ-ಅರ್ಜಿದಾರರ ಆದಾಯ ಮತ್ತು ಶೈಕ್ಷಣಿಕ ವಿಶ್ವಾಸಾರ್ಹತೆಯ ಪರಿಶೀಲನೆ ಕಡ್ಡಾಯವಾಗಿದೆ.


  ಒಟ್ಟಾರೆ ಶಿಕ್ಷಣದ ಸಾಲದಿಂದ ಸಾಕಷ್ಟು ಪ್ರಯೋಜನಗಳಿವೆ. ಈ ಸಾಲವನ್ನು ಪಡೆಯುವುದರಿಂದ ಆರ್ಥಿಕ ಹೊರೆಯೂ ಕಡಿಮೆಯಾಗುತ್ತದೆ.

  Published by:Latha CG
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು