• ಹೋಂ
  • »
  • ನ್ಯೂಸ್
  • »
  • Jobs
  • »
  • Education News: ಶಿಕ್ಷಣದ ಅಭಿವೃದ್ಧಿಗಾಗಿ ಪರಿಚಯಿಸಿರುವ ಯೋಜನೆಗಳ ಮಾಹಿತಿ ಇಲ್ಲಿದೆ

Education News: ಶಿಕ್ಷಣದ ಅಭಿವೃದ್ಧಿಗಾಗಿ ಪರಿಚಯಿಸಿರುವ ಯೋಜನೆಗಳ ಮಾಹಿತಿ ಇಲ್ಲಿದೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಬಡತನದ ಕಾರಣದಿಂದ ಯಾವುದೇ ತಾಯಿ ತನ್ನ ಮಗುವನ್ನು ಶಾಲೆಗೆ ಕಳುಹಿಸುವುದರಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಈ ಯೋಜನೆಯ ಪ್ರಾಥಮಿಕ ಉದ್ದೇಶವಾಗಿದೆ. ಈ ಯೋಜನೆಯು ಸರ್ಕಾರಿ ಶಾಲೆಗಳಲ್ಲಿ, ವಿಶೇಷವಾಗಿ ಹೆಣ್ಣುಮಕ್ಕಳಲ್ಲಿ ದಾಖಲಾತಿ ಮತ್ತು ಧಾರಣವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಮುಂದೆ ಓದಿ ...
  • Trending Desk
  • 4-MIN READ
  • Last Updated :
  • Share this:

ಜಗತ್ತನ್ನು (World) ಬದಲಾಯಿಸುವ ಶಕ್ತಿಶಾಲಿ ಅಸ್ತ್ರ ಎಂದರೆ ಅದು ಶಿಕ್ಷಣವೊಂದೇ (Education) ಎಂದು ದಕ್ಷಿಣ ಆಫ್ರಿಕಾದ ಮೊದಲ ಅಧ್ಯಕ್ಷರು ಹಾಗೂ ರಾಜಕಾರಣಿ ನೆಲ್ಸನ್ ಮಂಡೇಲಾ ನಂಬಿದ್ದರು. ಇದೇ ಸಿದ್ಧಾಂತವನ್ನು ಆಚರಣೆಗೆ ತರಲು ಕಂಕಣಬದ್ಧರಾಗಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಶಿಕ್ಷಣದ ಮೂಲಕ ಸರಿಯಾದ ಭದ್ರ ಬುನಾದಿಯನ್ನು ನಿರ್ಮಿಸುವ ಗುರಿಯನ್ನರಿಸಿಕೊಂಡು ರಾಜ್ಯದಲ್ಲಿ (State) ಕಾರ್ಯನಿರ್ವಹಿಸುತ್ತಿದೆ.


ಶಿಕ್ಷಣದ ಅಭಿವೃದ್ಧಿಗಾಗಿ ಪರಿಚಯಿಸಿರುವ ಯೋಜನೆಗಳು


ಶಿಕ್ಷಣದ ಅಭಿವೃದ್ಧಿಗಾಗಿ ಆಂಧ್ರವು 12% ಬಜೆಟ್ ಅನ್ನು ಮೀಸಲಿರಿಸಿದ್ದು, ಶಿಕ್ಷಣದ ಪ್ರಗತಿಗಾಗಿ ನಾಡು ನೆಡು, ಅಮ್ಮಾ ವೋಡಿ ಹಾಗೂ ವಿದೇಶಿ ವಿದ್ಯಾ ದೀವೆನ ಮೊದಲಾದ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಸುಧಾರಣೆಗಳು ಶಿಕ್ಷಣದ ಸಂಪೂರ್ಣ ದಿಕ್ಕನ್ನೇ ಬದಲಾಯಿಸಿವೆ. ಅಮ್ಮಾ ವೋಡಿ ಯೋಜನೆಯು ಸಮಾಜದ ದುರ್ಬಲ ಹಾಗೂ ಬಡ ತಾಯಂದಿರು ತಮ್ಮ ಮಕ್ಕಳನ್ನು (1 ನೇ ತರಗತಿಯಿಂದ ಮಧ್ಯಂತರ ತರಗತಿಯವರೆಗೆ) ಶಾಲೆಗೆ ಕಳುಹಿಸಿದರೆ ಅವರಿಗೆ ರೂ 15,000 ಆರ್ಥಿಕ ನೆರವು ನೀಡುತ್ತದೆ. ಇದುವರೆಗೆ ಸರಕಾರ ಕಳೆದ ಮೂರೂವರೆ ವರ್ಷಗಳಲ್ಲಿ 19,617 ಕೋಟಿ ರೂ.ಗಳನ್ನು ನೇರವಾಗಿ ಜಮಾ ಮಾಡಿದ್ದು, 2022ರಲ್ಲಿ 44,48,865 ತಾಯಂದಿರಿಗೆ 6,595 ಕೋಟಿ ರೂ.ಗಳನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಿದೆ.


ಬಡತನದ ಕಾರಣದಿಂದ ಯಾವುದೇ ತಾಯಿ ತನ್ನ ಮಗುವನ್ನು ಶಾಲೆಗೆ ಕಳುಹಿಸುವುದರಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಈ ಯೋಜನೆಯ ಪ್ರಾಥಮಿಕ ಉದ್ದೇಶವಾಗಿದೆ. ಈ ಯೋಜನೆಯು ಸರ್ಕಾರಿ ಶಾಲೆಗಳಲ್ಲಿ, ವಿಶೇಷವಾಗಿ ಹೆಣ್ಣುಮಕ್ಕಳಲ್ಲಿ ದಾಖಲಾತಿ ಮತ್ತು ಧಾರಣವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.


ವಿದ್ಯಾರ್ಥಿಗಳ ಅಭಿವೃದ್ಧಿಗೆ ಆರ್ಥಿಕ ನೆರವು


ಕಳೆದ ಎರಡು ವರ್ಷಗಳಲ್ಲಿ ಶಾಲಾ ಶಿಕ್ಷಣವನ್ನು ತ್ಯಜಿಸುವುದರಲ್ಲಿ 25% ಇಳಿಕೆಯಾಗಿದೆ. ‘ಅಮ್ಮ ವೋಡಿ’ ಜೊತೆಗೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ‘ವಿದೇಶಿ ವಿದ್ಯಾ ದೀವೆನಾ’ ಯೋಜನೆಯೂ ಇದೆ. ಈ ಯೋಜನೆಯಿಂದಾಗಿ, ಕಳೆದ ಎರಡು ವರ್ಷಗಳಲ್ಲಿ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ 50% ರಷ್ಟು ಹೆಚ್ಚಾಗಿದೆ. ಡಿಸೆಂಬರ್ 2022 ರ ವೇಳೆಗೆ, 1,645 ವಿದ್ಯಾರ್ಥಿಗಳು ಈ ಯೋಜನೆಯಡಿಯಲ್ಲಿ ಒಟ್ಟು 112 ಕೋಟಿ ರೂ.ಗಳ ಸಹಾಯವನ್ನು ಪಡೆದಿದ್ದಾರೆ. ಈ ವರ್ಷ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಮೊದಲ ಕಂತು ಫೆಬ್ರವರಿ 3 ರಂದು ಬಿಡುಗಡೆಯಾಗಿದ್ದು, 213 ವಿದ್ಯಾರ್ಥಿಗಳಿಗೆ 20 ಕೋಟಿ ರೂ ಅನುದಾನ ದೊರೆತಿದೆ.


ಇದನ್ನೂ ಓದಿ: VIP School: ಸತ್ಯ ನಾಡೆಲ್ಲಾ, ಹರ್ಷ ಭೋಗ್ಲೆ, ಅಜಯ್ ಬಂಗಾ, ನಟ ರಾಮ್ ಚರಣ್, ಇನ್ನೂ ಹಲವರು! ಈ ಎಲ್ಲಾ ಗಣ್ಯರು ಓದಿದ್ದು ಇದೇ ಶಾಲೆಯಲ್ಲಂತೆ!


ಸರಕಾರಿ ಶಾಲೆಯನ್ನು ಖಾಸಗಿ ಶಾಲೆಗೆ ಸರಿಸಮನಾಗಿಸುವುದು


ಇನ್ನೊಂದು ಸುಧಾರಣೆಯೆಂದರೆ ‘ಮನ ಬದಿ – ನಾಡು ನೆಡು’, ಇದು ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಿ ಖಾಸಗಿ ಶಾಲೆಗಳ ಸಮಕ್ಕೆ ತರುವುದಾಗಿದೆ. ಇದಕ್ಕಾಗಿ ರಾಜ್ಯವು ಈಗಾಗಲೇ 4,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ, ಸರ್ಕಾರಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಮತ್ತು ಪೀಠೋಪಕರಣಗಳನ್ನು ಒದಗಿಸುವತ್ತ ಗಮನಹರಿಸಿದೆ. ದುವರೆಗೆ 44,512 ಶಾಲೆಗಳನ್ನು ಈ ಯೋಜನೆಯಡಿಯಲ್ಲಿ ಪರಿವರ್ತಿಸಲಾಗಿದೆ ಎಂದು ವರದಿ ತಿಳಿಸಿದೆ.


ವಿಕಲಚೇತನರಿಗೆ ಆರ್ಥಿಕ ನೆರವು


ವಿಕಲಚೇತನ ವರ್ಗಗಳು ಬೋಧನೆ, ವಿಶೇಷ ಮತ್ತು ಪರೀಕ್ಷಾ ಶುಲ್ಕಗಳು ಸೇರಿದಂತೆ 100% ಶುಲ್ಕ ಮರುಪಾವತಿಯನ್ನು ಪಡೆಯುತ್ತವೆ. ರಾಜ್ಯವು ಇದುವರೆಗೆ 24,74,544 ಫಲಾನುಭವಿಗಳಿಗೆ 9,051 ಕೋಟಿ ರೂ ಅನುದಾನ ಒದಗಿಸಿದೆ. ‘ಜಗನಣ್ಣ ವಸತಿ ದೀವೆನಾ’ ಅಡಿಯಲ್ಲಿ 1 ಮಿಲಿಯನ್‌ಗಿಂತಲೂ ಹೆಚ್ಚು ಬಿಪಿಎಲ್ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಮತ್ತು ಊಟ ಉಪಚಾರದ ಶುಲ್ಕ ಭರಿಸಲು ಆರ್ಥಿಕ ನೆರವು ನೀಡಲಾಗಿದೆ. ಆಂಧ್ರ ಮುಖ್ಯಮಂತ್ರಿಯವರ ಇನ್ನೊಂದು ಉಪಕ್ರಮವೆಂದರೆ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಅಳವಡಿಕೆ. ಇದರೊಂದಿಗೆ ಕಳೆದ ಎರಡು ವರ್ಷಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ದಾಖಲಾತಿ ಶೇ.40ರಷ್ಟು ಹೆಚ್ಚಾಗಿದೆ.
ಹಣ ವ್ಯಯಿಸಿದ್ದಾರೆ ಎಂದವರಿಗೆ ಜಗನ್ ಮೋಹನ್ ರೆಡ್ಡಿ ಉತ್ತರ


ಕಲ್ಯಾಣ ಯೋಜನೆಗಳಲ್ಲಿರುವ ಎಲ್ಲ ಹಣವನ್ನು ಸಿಎಂ ‘ವ್ಯಯ’ ಮಾಡಿದ್ದಾರೆ ಎಂದು ಹಲವಾರು ಜನರು ದೂಷಿಸಿದ್ದಾರೆ. ಆದರೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದೇ ಸಮಾಜಕ್ಕೆ ಕೆಟ್ಟದ್ದು ಎಂದು ತಿಳಿಸಿರುವ ಜಗನ್ಮೋಹನ್ ರೆಡ್ಡಿ, ಫ್ಲೈಓವರ್ ನೀಡುವ ಲಾಭಾಂಶವೇನು? ಹೆಚ್ಚು ಕಟ್ಟಡಗಳಿದ್ದರೆ ಮಾತ್ರವೇ ಅಭಿವೃದ್ಧಿಯೇ? ಮಕ್ಕಳ ಭವಿಷ್ಯವನ್ನು ನಿರ್ಮಿಸಲು ಸಹಕಾರ ನೀಡುವುದು ಉತ್ತಮವೇ ಎಂದು ಹಿಯಾಳಿಸಿದವರನ್ನು ಮರುಪ್ರಶ್ನಿಸಿದ್ದಾರೆ.

First published: