• Home
 • »
 • News
 • »
 • jobs
 • »
 • Kerala: ವಿದ್ಯಾರ್ಥಿಗಳ ಒತ್ತಡವನ್ನು ಕಡಿಮೆ ಮಾಡಲು ‘ಲಾಫಿಂಗ್ ಬೆಲ್’! ಹೇಗಿದೆ ನೋಡಿ ಈ ನಿಯಮ

Kerala: ವಿದ್ಯಾರ್ಥಿಗಳ ಒತ್ತಡವನ್ನು ಕಡಿಮೆ ಮಾಡಲು ‘ಲಾಫಿಂಗ್ ಬೆಲ್’! ಹೇಗಿದೆ ನೋಡಿ ಈ ನಿಯಮ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪ್ರತಿದಿನ ಬೆಳಿಗ್ಗೆ ಪ್ರಾರ್ಥನೆಯ ನಂತರ ಗಂಟೆ ಬಾರಿಸುತ್ತದೆ ಮತ್ತು  ಮಕ್ಕಳೆಲ್ಲರೂ ಶಾಲೆಯಲ್ಲಿ ತೋಳುಗಳನ್ನು ಬಡಿದುಕೊಳ್ಳುತ್ತಾ ಮತ್ತು ನಗುತ್ತಾರೆ. "ಶಾಲೆಯ ಸಿಬ್ಬಂದಿ ಸಭೆಯಲ್ಲಿ ಈ ವಿಚಾರವು ಚರ್ಚೆಗೆ ಬಂದಾಗ, ಅದರ ಪರಿಣಾಮದ ಬಗ್ಗೆ ಕೆಲವು ಅನುಮಾನಗಳು ಬಂದಿವೆ. ಈಗ, ಪ್ರತಿಯೊಬ್ಬರೂ ಹೆಚ್ಚು ಆರಾಮವಾಗಿ ಕಾಣುತ್ತಿರುವುದರಿಂದ ಮತ್ತು ಕಲಿಕೆಯು ಸುಗಮವಾಗಿ ನಡೆಯುತ್ತಿರುವುದರಿಂದ ಇಲ್ಲಿ ಸುಧಾರಣೆಯಾಗಿದೆ

ಮುಂದೆ ಓದಿ ...
 • Trending Desk
 • 4-MIN READ
 • Last Updated :
 • Kerala, India
 • Share this:

ಮೊದಲೆಲ್ಲಾ ಮಕ್ಕಳು ಶಾಲೆಯಿಂದ (School) ಮನೆಗೆ ಸಂಜೆ ಬಂದು ಸ್ವಲ್ಪ ತಿಂಡಿ ತಿಂದು ಮುಖ ತೊಳೆದುಕೊಂಡು ತಮ್ಮ ಸ್ನೇಹಿತರೊಡನೆ ಆಟವಾಡಲು ಹೋಗಿ ಒಂದೆರಡು ಗಂಟೆಗಳ ಕಾಲ ಚೆನ್ನಾಗಿ ಆಟವಾಡಿ ಬರುತ್ತಿದ್ದರು. ಹಾಗಾಗಿ ಅವರಲ್ಲಿ ಆ ಮಾನಸಿಕ ಮತ್ತು ದೈಹಿಕ ಒತ್ತಡ (Stress) ಎನ್ನುವುದು ಹತ್ತಿರಕ್ಕೂ ಸುಳಿಯುತ್ತಿರಲಿಲ್ಲ.  ಆದರೆ ಈಗ ಮಕ್ಕಳಿಗೆ ಬಿಡುವಿಲ್ಲದ ತರಗತಿಗಳು, ಆನಂತರ ಮನೆಯಲ್ಲಿ ಮಾಡಲು ಹೋಂ ವರ್ಕ್, ಇಷ್ಟೇ ಅಲ್ಲದೆ ಮನೆಗೆ (Home) ಬಂದರೆ ಪೋಷಕರು ತಮ್ಮ ಮಕ್ಕಳು ಉತ್ತಮ ಅಂಕಗಳನ್ನು (Marks) ಗಳಿಸಬೇಕೆಂಬ ಅತಿಯಾದ ನಿರೀಕ್ಷೆಯಿಂದ ಟ್ಯೂಷನ್ ಗೆ ಕಳುಹಿಸುತ್ತಾರೆ. 


ಬೇರೆ ಬೇರೆ ರೀತಿಯ ಕೋಚಿಂಗ್ ಸೆಂಟರ್ ಗಳಿಗೆ ಕಳುಹಿಸುವುದು ಎಲ್ಲವೂ ಮಕ್ಕಳ ಮನಸ್ಸಿನ ಮೇಲೆ ಮತ್ತು ತಲೆಯ ಮೇಲೆ ಎಷ್ಟರ ಮಟ್ಟಿಗೆ ಒತ್ತಡ ಹೇರುತ್ತಿದೆ. ಅವರ ಮುಖದಲ್ಲಿ ಮೊದಲಿದ್ದಂತಹ ನಗು ಈಗಿಲ್ಲ ಅಂತ ಹೇಳಬಹುದು. ಈ ವಿಷಯ ಕೊಟ್ಟಿಯೂರು ಬಳಿಯ ತಲಕ್ಕಣಿ ಜಿಯುಪಿ ಶಾಲೆಯ ಶಿಕ್ಷಕರು ಮತ್ತು ಆಡಳಿತ ಮಂಡಳಿಯವರಿಗೆ ಸರಿಯಾಗಿ ಅರ್ಥವಾದಂತೆ ಕಾಣುತ್ತದೆ. ಆದ್ದರಿಂದ ಲಾಫಿಂಗ್​ ಬೆಲ್​ ಕಾನ್ಸೆಫ್ಟ್​​ ಹುಟ್ಟಿಕೊಂಡಿದೆ.


ಏನಿದು ಲಾಫಿಂಗ್ ಬೆಲ್?


ದಿನಕ್ಕೆ ಒಮ್ಮೆ ಈ ಶಾಲೆಯಲ್ಲಿ "ಲಾಫಿಂಗ್ ಬೆಲ್" ಅಂತ ಬಾರಿಸುತ್ತಾರೆ, ಆಗ ಈ ಗಂಟೆ ಬಾರಿಸಿದ ತಕ್ಷಣ ಶಾಲೆಯಲ್ಲಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಗಹಗಹಿಸಿ ನಗುತ್ತಾರೆ. ವಿದ್ಯಾರ್ಥಿಗಳು ಹೆಚ್ಚು ನಗಲು ಪ್ರಾರಂಭಿಸುವ ಸಲುವಾಗಿ,  ಮಕ್ಕಳ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಈ ರೀತಿಯಾಗಿ ಲಾಫಿಂಗ್ ಬೆಲ್ ಎಂಬ ಕಲ್ಪನೆಯನ್ನು ಪರಿಚಯಿಸಬೇಕಾಯಿತು ಎಂದು ಶಾಲೆಯ ಅಧಿಕಾರಿಗಳು ಹೇಳುತ್ತಾರೆ.


ಪ್ರತಿದಿನ ಬೆಳಿಗ್ಗೆ ಪ್ರಾರ್ಥನೆಯ ನಂತರ ಗಂಟೆ ಬಾರಿಸುತ್ತದೆ ಮತ್ತು  ಮಕ್ಕಳೆಲ್ಲರೂ ಶಾಲೆಯಲ್ಲಿ ತೋಳುಗಳನ್ನು ಬಡಿದುಕೊಳ್ಳುತ್ತಾ ಮತ್ತು ನಗುತ್ತಾರೆ. "ಶಾಲೆಯ ಸಿಬ್ಬಂದಿ ಸಭೆಯಲ್ಲಿ ಈ ವಿಚಾರವು ಚರ್ಚೆಗೆ ಬಂದಾಗ, ಅದರ ಪರಿಣಾಮದ ಬಗ್ಗೆ ಕೆಲವು ಅನುಮಾನಗಳು ಬಂದಿವೆ. ಈಗ, ಪ್ರತಿಯೊಬ್ಬರೂ ಹೆಚ್ಚು ಆರಾಮವಾಗಿ ಕಾಣುತ್ತಿರುವುದರಿಂದ ಮತ್ತು ಕಲಿಕೆಯು ಸುಗಮವಾಗಿ ನಡೆಯುತ್ತಿರುವುದರಿಂದ ಇಲ್ಲಿ ಸುಧಾರಣೆಯಾಗಿದೆ " ಎಂದು ಮುಖ್ಯೋಪಾಧ್ಯಾಯಿನಿ ಎನ್ ಸಾರಾ ಅವರು ಹೇಳುತ್ತಾರೆ.


ಇದನ್ನೂ ಓದಿ: PUC ಪೂರ್ವಸಿದ್ಧತಾ ಪರೀಕ್ಷೆ ನಡೆಸೋದ್ಯಾಕೆ? ಇಲ್ಲಿದೆ ಮಹತ್ವದ ಕಾರಣ 


ಈ ಲಾಫಿಂಗ್ ಬೆಲ್ ಕಾನ್ಸೆಪ್ಟ್ ಹುಟ್ಟಿದ್ದು ಹೇಗೆ?


ಕೋವಿಡ್-ಪ್ರೇರಿತ ನಿರ್ಬಂಧನೆಗಳ ನಂತರ ಶಾಲೆ ಮತ್ತೆ ತೆರೆದಾಗ ಅನೇಕ ವಿದ್ಯಾರ್ಥಿಗಳು ತಮ್ಮ ಓದಿನ ಮತ್ತು ಕಲಿಕೆಯ ಜೊತೆಗೆ ಮುಂಚೆಯಂತೆಯೇ ಹೊಂದಿಕೊಳ್ಳಲು ಮತ್ತು ಅದನ್ನೆಲ್ಲಾ ನಿಭಾಯಿಸಲು ಕಷ್ಟಪಡುತ್ತಿದ್ದರು. "ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಹೊಸ ವಾಸ್ತವತೆಗಳಿಗೆ ಅವರ ಮನಸ್ಸು ಹಾಗೂ ವರ್ತನೆಗಳನ್ನು ಸರಿಹೊಂದಿಸಲು ಸಹಾಯ ಮಾಡಲು ಏನು ಮಾಡಬಹುದು ಎಂಬುದರ ಬಗ್ಗೆ ಶಾಲೆಯಲ್ಲಿ ಸಿಬ್ಬಂದಿ ಸಭೆಯನ್ನು ಕರೆಯಲಾಯಿತು" ಎಂದು ಸಾರಾ ಹೇಳಿದರು. 'ಲಾಫಿಂಗ್ ಬೆಲ್' ಮೊದಲ ಬಾರಿಗೆ ಕಳೆದ ನವೆಂಬರ್ ನಲ್ಲಿ ಜಾರಿಗೆ ತರಲಾಯಿತು.
ಈ ಕಲ್ಪನೆಯ ಹಿಂದಿನ ತರ್ಕವನ್ನು ವಿವರಿಸಿದ ಮುಖ್ಯೋಪಾಧ್ಯಾಯಿನಿ


"ಈ ಚರ್ಚೆಗಳಲ್ಲಿ ಈ ಲಾಫಿಂಗ್ ಬೆಲ್ ಬಗ್ಗೆ ಕಲ್ಪನೆ ಬಂದಿತು. ಆರಂಭದಲ್ಲಿ ಸ್ವಲ್ಪ ಹಿಂಜರಿಕೆ ಇದ್ದರೂ, ಈ ಆಲೋಚನೆಯನ್ನು ಜಾರಿಗೆ ತರಲು ನಿರ್ಧರಿಸಲಾಯಿತು" ಎಂದು ಸಾರಾ ಹೇಳಿದರು.


ನವೆಂಬರ್ 2022 ರಲ್ಲಿ ಜಾರಿಗೆ ತರಲಾಯಿತು


ಈ ಕಲ್ಪನೆಯನ್ನು ನವೆಂಬರ್ 2022 ರಲ್ಲಿ ಜಾರಿಗೆ ತರಲಾಯಿತು ಮತ್ತು ಇದು  ಯಶಸ್ವಿಯಾಗಿದೆ ಎಂದು ಅವರು ಹೇಳಿದರು. "ನಮ್ಮ ವಿದ್ಯಾರ್ಥಿಗಳು ವಿಭಿನ್ನ ಹಿನ್ನೆಲೆಯಿಂದ ಬಂದವರಾಗಿದ್ದು, ನಾವು ಅವರನ್ನು ಶಾಲೆಯಲ್ಲಿ ಆರಾಮದಾಯಕವಾಗಿಸಬೇಕು, ಇದರಿಂದ ಅವರು ಕಲಿಸಿದ ಪಾಠಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ" ಎಂದು  ವಿವರಿಸಿದರು.


'ವಾಟರ್ ಬೆಲ್' ಸಹ ಇದೆಯಂತೆ ನೋಡಿ


ಸುಮಾರು ಐದು ವರ್ಷಗಳ ಹಿಂದೆ, ತ್ರಿಶೂರ್ ನ ಇರಿಂಜಲಕುಡದ ಸೇಂಟ್ ಜೋಸೆಫ್ ಯುಪಿ ಶಾಲೆ ತನ್ನ ವಿದ್ಯಾರ್ಥಿಗಳನ್ನು ಹೈಡ್ರೇಟ್ ಮತ್ತು ಆರೋಗ್ಯಕರವಾಗಿಡಲು "ವಾಟರ್ ಬೆಲ್" ಎಂಬ ಕಲ್ಪನೆಯನ್ನು ಪರಿಚಯಿಸಿತ್ತು. ಈ ಕಲ್ಪನೆಯನ್ನು ರಾಜ್ಯದ ಇತರ ಶಾಲೆಗಳು ಸಹ ಅಳವಡಿಸಿಕೊಂಡವು. ಇದು ಕರ್ನಾಟಕ ಮತ್ತು ಒಡಿಶಾ ಸೇರಿದಂತೆ ಇತರ ರಾಜ್ಯಗಳಿಗೂ ಮಾದರಿಯಾಯಿತು.

First published: