ಸದ್ಯ ರಾಜ್ಯದ ಎಲ್ಲಾ ಶಾಲೆಗಳಲ್ಲೂ (School) ಸಹ ಹತ್ತನೇ ಹಾಗೂ ಹನ್ನೆರಡನೇ ತರಗತಿ ಪರೀಕ್ಷಾ ವೇಳಾಪಟ್ಟಿಗಳು ಬಿಡುಗಡೆಯಾಗಿದೆ ಇದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ತಯಾರಿ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ ಎಲ್ಲಾ ರಾಜ್ಯಗಳಲ್ಲೂ ಸಾಮಾನ್ಯವಾಗಿ ಮಾರ್ಚ್ ತಿಂಗಳು ವಿದ್ಯಾರ್ಥಿಗಳಿಗೆ (Students) ಬಹುಮುಖ್ಯವಾಗಲಿದೆ. ಎಲ್ಲಾ ವಿದ್ಯಾರ್ಥಿಗಳೂ ಸಹ ಈಗಾಗಲೇ ಪರೀಕ್ಷಾ (Exam) ಸಿದ್ಧತೆ (preparation) ಆರಂಭಿಸಿದ್ದಾರೆ. ಇನ್ನು ಕೆಲವು ರಾಜ್ಯಗಳು ಹತ್ತು ಹಾಗೂ ಹನ್ನೆರಡನೇ ತರಗತಿ ಪರೀಕ್ಷಾ ವೇಳಾಪಟ್ಟಿಯನ್ನು (Exam Time Table) ಬಿಡುಗಡೆ ಮಾಡಿಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.
2023ರಲ್ಲಿ ಬೋರ್ಡ್ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳೂ ಸಹ ಮುಂಬರುವ ಬೋರ್ಡ್ ಪರೀಕ್ಷೆಗಳಿಗೆ ತಯಾರಿಯನ್ನು ಪ್ರಾರಂಭಿಸಿದ್ದಾರೆ. ಅದಕ್ಕೆ ತಕ್ಕಂತೆ ಶಿಕ್ಷರು ಹಾಗೂ ಸರ್ಕಾರವೂ ಪರೀಕ್ಷಾ ಸಿದ್ಧತೆಯನ್ನು ಬರದಿಂದ ಮಾಡುತ್ತಿದೆ. ಹೆಚ್ಚಿನ ಬೋರ್ಡ್ ಪರೀಕ್ಷೆಗಳು ಮಾರ್ಚ್ 2023 ರಲ್ಲಿ ಪ್ರಾರಂಭವಾಗುತ್ತವೆ ಮತ್ತು 2023 ರ ಏಪ್ರಿಲ್ನಲ್ಲಿ ಕೊನೆಗೊಳ್ಳುತ್ತವೆ. ಅನೇಕ ಬೋರ್ಡ್ಗಳು ಪ್ರಕಟಿಸಿದ ವೇಳಾಪಟ್ಟಿ ಪ್ರಕಾರ. ಇಂಟರ್ಮೀಡಿಯೇಟ್ ಮತ್ತು ಮೆಟ್ರಿಕ್ ಪರೀಕ್ಷೆಯ ವೇಳಾಪಟ್ಟಿಯನ್ನು BSEB ಲಭ್ಯಗೊಳಿಸಿದೆ. ಫೆಬ್ರವರಿ 2023 ರಲ್ಲಿ, BSEB 10 ಮತ್ತು 12 ನೇ ತರಗತಿ ಪರೀಕ್ಷೆಗಳು ನಡೆಯುತ್ತವೆ.
ವೇಳಾಪಟ್ಟಿ ಬಿಡುಗಡೆ ಮಾಡದೇ ಇರುವ ರಾಜ್ಯಗಳು
ಸಿಬಿಎಸ್ಇ, ಯುಪಿಎಂಎಸ್ಪಿ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಇತರ ಕೆಲವು ಬೋರ್ಡ್ಗಳು ಇನ್ನೂ 10, 12 ನೇ ತರಗತಿ ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಆಯಾ ಮಂಡಳಿಗಳ ವೆಬ್ಸೈಟ್ಗಳಿಗೆ ನಿಯಮಿತವಾಗಿ ಭೇಟಿ ನೀಡುವ ಮೂಲಕ ವಿದ್ಯಾರ್ಥಿಗಳು ತಮ್ಮನ್ನು ತಾವು ನವೀಕರಿಸಿಕೊಳ್ಳುವಂತೆ ಅಂದರೆ ಅಪ್ಡೇಟ್ಗಳನ್ನು ಪಡೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಮಾರ್ಚ್ನಲ್ಲಿ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಪರೀಕ್ಷೆ
ಮತ್ತೊಂದೆಡೆ, CISCE, PSEB, MPBSE, ಕರ್ನಾಟಕ, ಕೇರಳ, ಅಸ್ಸಾಂ ತಮ್ಮ ಬೋರ್ಡ್ ಪರೀಕ್ಷೆಯ ದಿನಾಂಕಗಳನ್ನು ಬಿಡುಗಡೆ ಮಾಡಿದೆ. ಹೆಚ್ಚಿನ ಬೋರ್ಡ್ಗಳ ಪರೀಕ್ಷೆಯು ಮಾರ್ಚ್ 2023 ರಲ್ಲಿ ಪ್ರಾರಂಭವಾಗುತ್ತದೆ. ಪ್ರಾಯೋಗಿಕ ಪರೀಕ್ಷೆಯ ದಿನಾಂಕಗಳನ್ನು ಸಹ CBSE ಬೋರ್ಡ್ ಸೇರಿದಂತೆ ಮಂಡಳಿಯು ಹೊರಡಿಸಿದೆ. CBSE ಪ್ರಾಯೋಗಿಕ ಪರೀಕ್ಷೆಗಳು ಜನವರಿ 1, 2023 ರಿಂದ ಪ್ರಾರಂಭವಾಗುತ್ತವೆ. ಡೇಟ್ಶೀಟ್, ಪ್ರವೇಶ ಕಾರ್ಡ್, ಪ್ರಾಯೋಗಿಕ ಪರೀಕ್ಷೆಗಳ ಬಗ್ಗೆ ಆಯಾ ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಬಹುದು.
ಇದನ್ನೂ ಓದಿ: Winter Holiday: ಕೋಲಾರದ ಶಾಲೆಗಳಿಗೆ ರಜೆ ಘೋಷಣೆ, ಮುಂದುವರೆದ ಚಳಿ, ಮಳೆ!
ಮಧ್ಯಪ್ರದೇಶದ ಓಪನ್ ಸ್ಕೂಲ್ ಬೋರ್ಡ್ (MPSOS) 10 ನೇ ತರಗತಿ ಮತ್ತು 12 ನೇ ತರಗತಿ ಪರೀಕ್ಷೆಗಳು ಮತ್ತು ರಾಜ್ಯ ಸರ್ಕಾರದ ರುಕ್ ಜನ ನಹಿ ಕೋರ್ಸ್ ಪರೀಕ್ಷೆಗಳು ಸೇರಿದಂತೆ ಹಲವಾರು ಪರೀಕ್ಷೆಗಳಿಗಳ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಅಸ್ಸಾಂ 10 ನೇ ತರಗತಿ ಅಥವಾ HSLC ಪರೀಕ್ಷೆಯು ಮಾರ್ಚ್ 3 ರಂದು ಪ್ರಾರಂಭವಾಗುತ್ತದೆ ಮತ್ತು ಮಾರ್ಚ್ 20, 2023 ರಂದು ಮುಕ್ತಾಯಗೊಳ್ಳುತ್ತದೆ ಎಂದು ತಿಳಿದುಬಂದಿದೆ.
ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸಿದ್ಧತೆ
ಹೌದು, ಎಲ್ಲಾ ರಾಜ್ಯದಲ್ಲಿಯೂ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಬೇಕಾದ ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದಾರೆ. ಅದರಂತೆ ಈ ಬಾರಿ ನಮ್ಮ ಕರ್ನಾಟಕದಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸುವ ಸಲುವಾಗಿ ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಕೊಂಚ ಬದಲಾವಣೆ ಮಾಡುವ ಸಾಧ್ಯತೆ ಇದೆ. ಆದರೆ ಏನೇ ಬದಲಾವಣೆ ಮಾಡಿದರೂ ಸಹ ಪರೀಕ್ಷೆಗೂ ಮುಂಚೆ ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತದೆ. ವಿದ್ಯಾರ್ಥಿಗಳ ಒಳಿತಿನ ದೃಷ್ಟಿಯನ್ನೇ ಆಧರಿಸಿ ಇದನ್ನು ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ. ಇವಿಷ್ಟು ಪರೀಕ್ಷೆಗಳ ಕುರಿತ ಇತ್ತೀಚಿನ ಮಾಹಿತಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ