ಎಷ್ಟೋ ಸಂಸ್ಥೆಗಳು ಶಾಲೆಗೆ ಅಥವಾ ಸಮಾಜ ಕಾರ್ಯಕ್ಕೆ ಸಹಾಯವಾಗುತ್ತದೆ ಎಂದಾದರೆ ಜಮೀನು ಅಥವಾ ತಮ್ಮ ಸ್ವಂತ ಜಾಗವನ್ನು ಬಿಟ್ಟುಕೊಡುತ್ತಾರೆ. ಅದೇ ರೀತಿ ಇವರೂ ಜಮೀನು ನೀಡಿದ್ದರು. ಆದರೆ ಈಗ ಇಲ್ಲಿ ಶಾಲೆ ಇರುವ ಸ್ಥಳ ತಮ್ಮದೆಂದು ನಡೆಯುತ್ತಿರುವ ಶಾಲೆಗೆ (School) ಬೀಗ ಹಾಕಿಸಿದ ಘಟನೆ ಜರುಗಿದೆ. ಈ ಘಟನೆಯಿಂದ ವಿದ್ಯಾರ್ಥಿಗಳಿಗೆ (Students) ದಿನನಿತ್ಯ ಪಾಠ ಕೇಳಲು ತೊಂದರೆಯಾಗುತ್ತಿದೆ. ಶಿಕ್ಷಕರೂ ಸಹ ಇದರಿಂದಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಯಂಟಗಾನಹಳ್ಳಿ ಸರ್ಕಾರಿ ಪಿಯು (Government PU College) ಕಾಲೇಜಿನಲ್ಲಿ ಈ ರೀತಿಯಾಗಿದೆ. ಈ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.
ಯಂಟಗಾನಹಳ್ಳಿ ಸರ್ಕಾರಿ ಪಿಯು ಕಾಲೇಜಿಗೆ ಬೀಗ
ಕೃಷ್ಣಪ್ಪ ಮತ್ತು ಅವರ ಮಕ್ಕಳು, ಸುಬ್ಬರಾವ್ ಹಾಗೂ ಸಹೋದರರು ಹೀಗೆ 8 ಜನರಿಗೆ ಸೇರಿದ ಜಾಗ ಈಗ ಶಾಲೆ ಇರುವ ಜಾಗವಾಗಿದ್ದು, ಈ ಜಾಗ ತಮಗೆ ಮರಳಿ ಬೇಕು ಎಂದು ಅವರೆಲ್ಲರು ಪಟ್ಟು ಹಿಡಿದು ಕುಳಿತಿದ್ದಾರೆ. ಆ ಕಾರಣದಿಂದ ಕಾಲೇಜಿಗಾಗಿ ಜಮೀನು ನೀಡಿದ್ದ ಕುಟುಂಬ ಈಗ ಅದನ್ನು ಮರಳಿ ಪಡೆಯಲು ಪ್ರಯತ್ನ ನಡೆಸುತ್ತಿದೆ. ಸರ್ವೆ ನಂಬರ್ 2 ಹಾಗೂ 2/5 ರಲ್ಲಿ ಜಮೀನನ್ನು ಶಾಲೆಗೆಂದು ನೀಡಿದ್ದ ಕುಟುಂಬಸ್ಥರು ಈಗ ಮತ್ತೆ ಅದೇ ಜಾಗಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.
1992 ರಲ್ಲಿ 2 ಎಕರೆ 10 ಕುಂಟೆ ಜಾಗ ನೀಡಲಾಗಿತ್ತು
ಇದು ಇತ್ತೀಚಿನ ವಿಷಯವಲ್ಲ 1992ರಲ್ಲಿ ಶಾಲೆಗೆಂದು ಜಮೀನು ನೀಡಿದ್ದರು. ಸರ್ವೆ ನಂಬರ್ 2ರಲ್ಲಿ 1 ಎಕರೆ ಮುವತ್ತು ಕುಂಟೆ ಜಾಗ ನೊಂದಣಿ ಮಾಡಿದ್ದಾರೆ. ಸದ್ಯ ಕಾಲೇಜು ನಿರ್ಮಾಣ ಮಾಡಿರುವುದು ಸರ್ವೆ ನಂಬರ್ 2/5 ರ 30 ಕುಂಟೆ ಜಾಗದಲ್ಲಾಗಿದ್ದು, ಆ ಜಾಗದ ಮೇಲೆ ತಮ್ಮ ಹಕ್ಕಿದೆ ಎಂದು ಇದೀಗ ಆ ಸ್ಥಳ ತಮಗೇ ಬಿಟ್ಟು ಕೊಡಿ ಎಂದು ಕೇಳಿದ್ದಾರೆ.
ಇದನ್ನೂ ಓದಿ: Udupi: ಮಕ್ಕಳ ಎದುರೇ ಕುಡಿದು ಮಲಗಿದ ಶಿಕ್ಷಕ, ಯಾವುದೇ ಕ್ರಮ ಕೈಗೊಳ್ಳದ ಬಿಇಓ
ಈಗ ಆ ಜಾಗ ನೀಡಲು ಸಾಧ್ಯವಿಲ್ಲ ಎಂದ ಅಧಿಕಾರಿಗಳು
ಈಗ ಆ ಜಾಗವನ್ನು ಮರಳಿ ನೀಡಲು ಒಪ್ಪದೇ ಇರುವವರು ಆ ಜಾಗದ ಬದಲಾಗಿ ಬೇರೆ ಜಾಗವನ್ನು ಪರಿಹಾರವಾಗಿ ನೀಡುತ್ತೇವೆ ಎಂದು ಹೇಳಿದ್ದರು. ಆದರೆ ಈ ಕುರಿತು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈವರೆಗೂ ಪರಿಹಾರ, ಬದಲಿ ಜಾಗ ಯಾವುದನ್ನೂ ನೀಡದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇವರ ಕುರಿತು ಯಾವ ಕಾಳಜಿಯನ್ನೂ ತೋರಲಿಲ್ಲ.
ಸದ್ಯ ತಮ್ಮ ಒಡೆತನದ ಜಾಗದಲ್ಲಿರುವ ಕಾಲೇಜಿಗೆ ಬೀಗ
ತಮ್ಮ ಜಮೀನಿನಲ್ಲಿ ಶಾಲೆ ನಿರ್ಮಿಸಿದ ಕಾರಣ ಆ ಜಾಗ ತಮ್ಮದೆಂದು ಈಗ ಆ ಕಾಲೇಜಿಗೆ ಬೀಗ ಹಾಕಿದ್ದಾರೆ. ಅದೊಂದು ಪಿಯುಸಿ ಕಾಲೇಜಾಗಿದ್ದು ಈಗ ಅದಕ್ಕೆ ಬೀಗ ಹಾಕಲಾಗಿದೆ ಈ ಕಾರಣದಿಂದಾಗಿ ವಿದ್ಯಾರ್ಥಿಗಳು ತರಗತಿಯ ಒಳಗೆ ಕೂತು ಪಾಠ ಕೇಳಲಾಗುತ್ತಿಲ್ಲ. ಕಾಲೇಜಿನ ಆವರಣದಲ್ಲಿ ಕುಳಿತು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ಥಳಕ್ಕೆ ಉನ್ನತ ಅಧಿಕಾರಿಗಳು ಆಗಮಿಸಬೇಕೆಂದು ಜಮೀನು ಮಾಲೀಕರ ಆಗ್ರಹ
ಇಷ್ಟೆಲ್ಲಾ ಆಗಿದ್ದರೂ ಸಹ ಯಾವುದೇ ಉನ್ನತ ಅಧಿಕಾರು ಈ ಜಾಗಕ್ಕೆ ಭೇಟಿ ನಿಡುತ್ತಿಲ್ಲ. ಅಥವಾ ಇನ್ಯಾವುದೇ ಪರ್ಯಾಯ ಮಾರ್ಗದಲ್ಲಿಯೂ ಜಮೀನು ಮಾಲಿಕರನ್ನು ಸಂಪರ್ಕಿಸುವ ಪ್ರಯತ್ನವನ್ನೂ ಮಾಡುತ್ತಿಲ್ಲ. ಬೀಗ ಹಾಕಿದಾಗಲಾದರೂ ಯಾರಾದರು ಉನ್ನತ ಅಧಿಕಾರಿಗಳು ಆಗಮಿಸುತ್ತಾರಾ? ಎಂದು ಜಮೀನು ಮಾಲಿಕರು ಕಾದು ನೋಡುವ ಪರಿಸ್ಥಿತಿ ಎದುರಾಗಿದೆ. ಈಗಿರುವ ಜಾಗದ ಪ್ರಮಾಣದಲ್ಲೇ ಪರಿಹಾರವಾಗಿ ಬೇರೆ ಜಾಗವನ್ನಾದರೂ ನೀಡಿ ಎಂದು ಮಾಲಿಕರು ಒತ್ತಾಯಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ