• Home
 • »
 • News
 • »
 • jobs
 • »
 • Labour Card Scholarship: ಕಾರ್ಮಿಕರ ಮಕ್ಕಳಿಗೆ ಸಿಗಲಿದೆ 75 ಸಾವಿರ ವಿದ್ಯಾರ್ಥಿ ವೇತನ! ನೀವೂ ಅಪ್ಲೈ ಮಾಡಿ

Labour Card Scholarship: ಕಾರ್ಮಿಕರ ಮಕ್ಕಳಿಗೆ ಸಿಗಲಿದೆ 75 ಸಾವಿರ ವಿದ್ಯಾರ್ಥಿ ವೇತನ! ನೀವೂ ಅಪ್ಲೈ ಮಾಡಿ

ಅಪ್ಲೈ ಮಾಡಿ

ಅಪ್ಲೈ ಮಾಡಿ

ಪೋಷಕರು ತಮ್ಮ ಮಕ್ಕಳು ವಯಸ್ಸಿಗೆ ಬಂದಾಗ ಅವರ ಶಿಕ್ಷಣಕ್ಕೆ ಸಹಾಯವಾಗಲೆಂದು ಈ ಸ್ಕಾಲರ್​ ಶಿಪ್​ಅನ್ನು ಬಳಸಿಕೊಳ್ಳಬಹುದು. ಪ್ರತಿ ಹಣಕಾಸು ವರ್ಷದಲ್ಲಿ ನಿರ್ದಿಷ್ಟ ಮೊತ್ತವನ್ನು ವಿದ್ಯಾರ್ಥಿಗಳ ಅಭ್ಯಾಸಕ್ಕೆಂದೇ ತೆಗೆದಿಡಲಾಗುತ್ತದೆ ಆದರೂ ಆರ್ಥಿಕ ಸಂಕಷ್ಟವಿದ್ದರೆ ಈ ಸ್ಕಾಲರ್​ ಶಿಪ್​ ಸಹಾಯವಾಗುತ್ತದೆ.

ಮುಂದೆ ಓದಿ ...
 • News18 Kannada
 • 2-MIN READ
 • Last Updated :
 • Karnataka, India
 • Share this:

ಸರ್ಕಾರ ವಿದ್ಯಾರ್ಥಿಗಳಿಗೆ ಸಹಕಾರವಾಗಿ ಎಂದು ಹಲವಾರು ಯೋಜನೆಯನ್ನು ಜಾರಿಗೆ ತರುತ್ತದೆ. ಅದೇ ರೀತಿ ಕಾರ್ಮಿಕರ (Labour) ಮಕ್ಕಳಿಗೆ ಸಹಾಯವಾಗಲಿ ಎಂದು ಈ ವಿಶೇಷ ವಿದ್ಯಾರ್ಥಿ ವೇತನವನ್ನು ಜಾರಿಗೆ ತಂದಿದೆ. ಇದರಲ್ಲಿ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೂ ಸಹ ವಿದ್ಯಾರ್ಥಿ ವೇತನ (Scholarship) ಲಭ್ಯವಿದೆ. 4ನೇ ತರಗತಿ ವಿದ್ಯಾರ್ಥಿಗಳಿಂದ ಹಿಡಿದು ವೃತ್ತಿಪರ ಕೋರ್ಸ್​ನಲ್ಲಿ (Job Oriented Course) ಅಭ್ಯಾಸ ಮಾಡುವ ವಿದ್ಯಾರ್ಥಿಗಳವರೆಗೆ ಎಲ್ಲರಿಗೂ ಸಹ ಈ ವಿದ್ಯಾರ್ಥಿ ವೇತನ ಲಭ್ಯವಿದೆ. ಇಲ್ಲಿ ನೀಡಿರುವ ಮಾಹಿತಿ ಪ್ರಕಾರ ನೀವೂ ಸಹ ಅಪ್ಲೈ ಮಾಡಿ. 

ವರ್ಗ ಮೊತ್ತ
ಒಂದರಿಂದ 4ನೇ ತರಗತಿ1000 ರೂ
ಐದರಿಂದ 8ನೇ ತರಗತಿ1500 ರೂ
9 ನೇ ತರಗತಿ2000 ರೂ
10 ನೇ ತರಗತಿ2000 ರೂ
11 ಮತ್ತು 12 ನೇ ತರಗತಿ3000 ರೂ
ಐಟಿಐ 6000 ರೂ
ಪಾಲಿಟೆಕ್ನಿಕ್6000 ರೂ
ಪದವಿ ಕೋರ್ಸ್‌ಗಳು6000 ರೂ
ವೃತ್ತಿಪರ ಕೋರ್ಸ್‌ಗಳು25000 ರೂ

ಹೀಗೆ ಇಲ್ಲಿ ನೀಡಿರುವ ಮೊತ್ತದ ಅನುಸಾರ ವಿದ್ಯಾರ್ಥಿ ವೇತನ ಲಭ್ಯವಾಗುತ್ತದೆ.


ಇದನ್ನೂ ಓದಿ: Fair and Lovely Scholarship: 50 ಸಾವಿರ ಸ್ಕಾಲರ್​ ಶಿಪ್! ಅರ್ಜಿ ಸಲ್ಲಿಸಲು ನವೆಂಬರ್ 27 ಕೊನೆ ದಿನ


ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಪ್ರಾಥಮಿಕವಾಗಿ ರಾಷ್ಟ್ರದ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗೆ ಲೇಬರ್ ಕಾರ್ಡ್ ವಿದ್ಯಾರ್ಥಿವೇತನವನ್ನು ನೀಡುತ್ತದೆ. ಪೋಷಕರು ತಮ್ಮ ಮಕ್ಕಳು ವಯಸ್ಸಿಗೆ ಬಂದಾಗ ಅವರ ಶಿಕ್ಷಣಕ್ಕೆ ಸಹಾಯವಾಗಲೆಂದು ಈ ಸ್ಕಾಲರ್​ ಶಿಪ್​ಅನ್ನು ಬಳಸಿಕೊಳ್ಳಬಹುದು. ಪ್ರತಿ ಹಣಕಾಸು ವರ್ಷದಲ್ಲಿ ನಿರ್ದಿಷ್ಟ ಮೊತ್ತವನ್ನು ವಿದ್ಯಾರ್ಥಿಗಳ ಅಭ್ಯಾಸಕ್ಕೆಂದೇ ತೆಗೆದಿಡಲಾಗುತ್ತದೆ. ನೀವು ಕಾರ್ಮಿಕರ ಮಕ್ಕಳಾಗಿದ್ದು ಆರ್ಥಿಕವಾಗಿ ಶಾಲಾ ಶುಲ್ಕ ಪಾವತಿಸಲು ಕಷ್ಟವಾದರೆ ಅಂಥವರಿಗೆ ಇದು ತುಂಬಾ ಉಪಯೋಗವಾಗುತ್ತದೆ.


ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


ಅಗತ್ಯ ದಾಖಲೆಗಳು
1. ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ
2. ಕಾರ್ಮಿಕರ ಗುರುತಿನ ಚೀಟಿ
3. ಬ್ಯಾಂಕ್ ಪಾಸ್ ಪುಸ್ತಕ
4. ಕಂದಾಯ ಪ್ರಾಧಿಕಾರ ನೀಡಿದ ಆದಾಯ ಪ್ರಮಾಣ ಪತ್ರ
ಇವಿಷ್ಟು ದಾಖಲೆಗಳನ್ನು ನೀವು ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.


ಅರ್ಜಿ ಸಲ್ಲಿಸುವುದು ಹೇಗೆ?
1. ಅಭ್ಯರ್ಥಿಗಳು ಮೊದಲು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು
2. ನಿಮ್ಮ ಸ್ಕ್ರೀನ್​ ಮೇಲೆ ಈಗ ಮುಖಪುಟ ಕಾಣಿತ್ತದೆ.
3. ಹೊಸ ನೋಂದಣಿ ಆಯ್ಕೆಯನ್ನು ಆಯ್ಕೆ ಮಾಡಬೇಕು.
4. ಈಗ ಎಲ್ಲಾ ಮಾಹಿತಿಯನ್ನು ನಮೂದಿಸಿ.
5. ನಿಮ್ಮ ಹೆಸರು, ಜನ್ಮ ದಿನಾಂಕ, ಸೆಲ್ ಫೋನ್ ಸಂಖ್ಯೆ, ಲಿಂಗ, ಇಮೇಲ್ ವಿಳಾಸ, ಬ್ಯಾಂಕ್ ಮಾಹಿತಿ ಇತ್ಯಾದಿಗಳನ್ನು ಟೈಪ್ ಮಾಡಿ.
6. ವಿದ್ಯಾರ್ಥಿಯ ವಾಸಸ್ಥಳ, ಹೆಸರು, ಹುಟ್ಟಿದ ದಿನಾಂಕ, ಸಮುದಾಯ ಅಥವಾ ವರ್ಗ, ತಂದೆಯ ಹೆಸರು, ಆಧಾರ್ ಕಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆ, ವಿದ್ಯಾರ್ಥಿವೇತನ ವರ್ಗ, ಲಿಂಗ, ಧರ್ಮ, ತಾಯಿಯ ಹೆಸರು, ವಾರ್ಷಿಕ ಕುಟುಂಬದ ಆದಾಯ, ಇಮೇಲ್ ವಿಳಾಸ ಮುಂತಾದ ಮಾಹಿತಿಯನ್ನು ಟೈಪ್ ಮಾಡಿ.
7. ಅರ್ಜಿ ನಮೂನೆಯನ್ನು ಯಶಸ್ವಿಯಾಗಿ ಸೇವ್​ ಮಾಡಿ.
8. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡುವುದು ತುಂಬಾ ಮುಖ್ಯ
9. ಕೊನೆಯಲ್ಲಿ ಎಲ್ಲಾ ದಾಖಲೆ ಸೇವ್​ ಮಾಡಿ ಹಾರ್ಡ್​ ಕಾಪಿ ತೆಗೆದಿಟ್ಟುಕೊಳ್ಳಿ


ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವಾಗ?
ಕೊನೆಯ ದಿನಾಂಕ: 31/12/2022 ಈ ದಿನಾಂಕಕ್ಕಿಂತ ಮುಂಚಿತವಾಗಿ ನೀವು ಈ ಸ್ಕಾಲರ್​ ಶಿಪ್​ ಅರ್ಜಿ ಸಲ್ಲಿಸಿ. ಈ ವಿದ್ಯಾರ್ಥಿ ವೇತನ ನಿಮ್ಮದಾಗಿಸಿಕೊಳ್ಳಿ. ಆದಷ್ಟು ಬೇಗ ಅಪ್ಲೈ ಮಾಡಿ. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು