• ಹೋಂ
  • »
  • ನ್ಯೂಸ್
  • »
  • Jobs
  • »
  • KSOU: 2 ವರ್ಷದ B.Ed ಕೋರ್ಸ್​​ಗೆ ಅರ್ಜಿ ಆಹ್ವಾನ, ಈ ಲಿಂಕ್​ ಬಳಸಿ ಅಪ್ಲೈ ಮಾಡಿ

KSOU: 2 ವರ್ಷದ B.Ed ಕೋರ್ಸ್​​ಗೆ ಅರ್ಜಿ ಆಹ್ವಾನ, ಈ ಲಿಂಕ್​ ಬಳಸಿ ಅಪ್ಲೈ ಮಾಡಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಬಿಎಡ್​ ಸೇರುವ ಮುನ್ನ ನೀವು ಸಿಇಟಿ ಪರೀಕ್ಷೆಯನ್ನು ಎದುರಿಸುವ ಅವಶ್ಯಕತೆ ಇರುವುದರಿಂದ ಮೊದಲು ಅದನ್ನು ಪಾಸ್​ ಮಾಡಿ. ನಾವು ನೀಡಿರುವ ಲಿಂಕ್​ ಮೂಲಕವೂ ನೀವು ಅಪ್ಲೈ ಮಾಡಬಹುದು.

  • Share this:

ಬಿ-ಇಡ್ (B.Ed)​ ಪ್ರವೇಶಾತಿಗಾಗಿ ಕಾಯುತ್ತಿದ್ದರೆ ಇದನ್ನು ಗಮನಿಸಿ. ನೀವು  ಮೊದಲು CET ಪರೀಕ್ಷೆ ಬರೆಯಬೇಕಾಗುತ್ತದೆ ಅದಾದ ನಂತರವೇ ನಿಮಗೆ ಪ್ರವಾಶಾತಿ ಆರಂಭವಾಗುತ್ತದೆ. ಕರಾಮುವಿಯಲ್ಲಿ ನೀವು ದೂರ ಶಿಕ್ಷಣ ಪಡೆಯಲು ಬಯಸಿದ್ದರೆ ಇಲ್ಲಿ ಒಂದು ಉತ್ತಮ ಅವಕಾಶ (Opportunity) ನಿಮಗೆಂದೇ ಕಾದಿದೆ. ಕೋರ್ಸ್ (Course) ಪ್ರವೇಶಕ್ಕೆ ಸಿಇಟಿ ಮೂಲಕ ಪ್ರವೇಶಾತಿಯನ್ನು ನೀಡಲಾಗುತ್ತದೆ. ಹಾಗಾಗಿ ಅಭ್ಯರ್ಥಿಗಳು ಬಿ.ಇಡಿ ಕೋರ್ಸ್‌ ಪ್ರವೇಶ ಪಡೆಯಲು ಮೊದಲು ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಬೇಕು.ಎರಡು (2 Years) ವರ್ಷದ ಬಿ.ಇಡಿ ಕೋರ್ಸ್‌ ಪ್ರವೇಶ ಬಯಸುವ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್​ನಲ್ಲಿ (Website) ಈ ಕುರಿತು ಮಾಹಿತಿ ಬಿಡುಗಡೆ ಮಾಡಿದೆ. 


ನೀವು ಈ ಮಾಹಿತಿ ಅನುಸಾರ ಅಪ್ಲೈ ಮಾಡಿ ಸೀಟ್​ ನಿಮ್ಮದಾಗಿಸಿಕೊಳ್ಳಿ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ನೀವು ಅಡ್ಮಿಷನ್​ ಪಡೆದುಕೊಳ್ಳಲು ಮೊದಲು ಇಲ್ಲಿ ಕ್ಲಿಕ್ ಮಾಡಿ. ಇಲ್ಲಿ ಕ್ಲಿಕ್ ಮಾಡಿದ ತಕ್ಷಣ ನಿಮಗೆ ಅಧಿಕೃತ ಜಾಲತಾಣ ತೆರೆಯುತ್ತದೆ. ಅಲ್ಲಿ ಹೆಚ್ಚಿನ ಮಾಹಿತಿಯನ್ನು ನೀವು ಪಡೆದುಕೊಳ್ಳಲು ಸಹಾಯವಾಗುತ್ತದೆ.


ಇದನ್ನೂ ಓದಿ: KCET Exam: ಇನ್ಮುಂದೆ ಮೈಸೂರು ವಿವಿ ಕೆ-ಸೆಟ್​ ಪರೀಕ್ಷೆ ನಡೆಸಲ್ಲ; ಅಶ್ವಥ್​ ನಾರಾಯಣ್​


ಬಿಎಡ್​ ಸೇರುವ ಮುನ್ನ ನೀವು ಸಿಇಟಿ ಪರೀಕ್ಷೆಯನ್ನು ಎದುರಿಸುವ ಅವಶ್ಯಕತೆ ಇರುವುದರಿಂದ ಮೊದಲು ಅದನ್ನು ಪಾಸ್​ ಮಾಡಿ. ನಾವು ನೀಡಿರುವ ಲಿಂಕ್​ ಮೂಲಕವೂ ನೀವು ಅಪ್ಲೈ ಮಾಡಬಹುದು. ಅರ್ಜಿ ಸಲ್ಲಿಸಲು ನೀವು ಕೆಲವೊಂದು ಅರ್ಹತೆಗಳನ್ನು ಪಡೆಯಲೇ ಬೇಕಾಗುತ್ತದೆ. ಅದರ ಪ್ರಕಾರ ಕೆಲವೊಂದು ಅರ್ಹತೆಗಳನ್ನು ಪಟ್ಟಿ ಮಾಡಲಾಗಿದೆ. ಆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ ನೋಡಿ.


ಅರ್ಹತಾ ಮಾನದಂಡಗಳು
1. ಸಾಮಾನ್ಯ ವರ್ಗದ ವಿದ್ಯಾರ್ಥಿಗಳು, ಪದವಿ ಅಥವಾ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇಕಡ 50 ರಷ್ಟು ಅಂಕ ಪಡೆದಿರಬೇಕು.
2. ಕಾಯ್ದಿರಿಸದ ವರ್ಗದ ಅಭ್ಯರ್ಥಿಗಳು, ಪದವಿ ಅಥವಾ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇಕಡ 45 ರಷ್ಟು ಅಂಕ ಗಳಿಸಿರಬೇಕು.
3. ಕರ್ನಾಟಕ ಬಿ.ಇಡಿ ಪ್ರವೇಶ 2022-23ಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 19 ವರ್ಷ ವಯಸ್ಸಾಗಿರಬೇಕು.
4. ಬಿ.ಇಡಿ ಪ್ರವೇಶಕ್ಕೆ ಯಾವುದೇ ಗರಿಷ್ಠ ವಯಸ್ಸಿನ ಮಿತಿ ಇಲ್ಲ.
5. ಅಂತಿಮ ವರ್ಷದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.


ಈ ಮೇಲಿನ ಎಲ್ಲಾ ಅರ್ಹತಾ ಮಾನದಂಡಗಳನ್ನು ನೀವು ಹೊಂದಿದ್ದರೆ ಖಂಡಿತ ಅಪ್ಲೈ ಮಾಡಬಹುದು.




ಅಗತ್ಯವಿರುವ ದಾಖಲೆಗಳು
1. ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿ ಅಂಕಪಟ್ಟಿ.
2. ಪಿಯುಸಿ ಅಥವಾ 12ನೇ ತರಗತಿ ಅಂಕಪಟ್ಟಿ.
3. ಪದವಿ/ಸ್ನಾತಕೋತ್ತರ ಪದವಿ ಅಂಕಪಟ್ಟಿ.
4. ಜಾತಿ ಪ್ರಮಾಣ ಪತ್ರ.
5. ಆದಾಯ ಪ್ರಮಾಣ ಪತ್ರ.
6. ನಿವಾಸಿ ಪ್ರಮಾಣ ಪತ್ರ.


ಪರೀಕ್ಷೆಗೆ ಅರ್ಜಿ ಸಲ್ಲಿಸುವುದು ಹೇಗೆ?
1. ಅಭ್ಯರ್ಥಿಗಳು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ www.ksoumysuru.ac.in ಗೆ ಭೇಟಿ ನೀಡಿ.
2.  B.Ed ಪ್ರವೇಶ ಪರೀಕ್ಷೆ 2022-23 ಜನವರಿ ಸೆಷನ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
3. ಮತ್ತೊಂದು ಪುಟ ತೆರೆದುಕೊಳ್ಳುತ್ತದೆ ಅದನ್ನು ಸರಿಯಾಗಿ ಓದಿಕೊಳ್ಳಿ.
5. ಆ ಪುಟದಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ.
6. ಅಗತ್ಯ ದಾಖಲೆಗಳನ್ನು ನೀಡಬೇಕಾಗುತ್ತದೆ.
7. ಎಲ್ಲವನ್ನೂ ಸೇವ್​ ಮಾಡಿ.


ಅರ್ಜಿ ಪ್ರಕ್ರಿಯೆ ಆರಂಭ ದಿನಾಂಕ - 17-01-2023.
ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ - 26-02-2023.
ಸಿಇಟಿ ಪ್ರವೇಶ ಪರೀಕ್ಷೆ ದಿನಾಂಕ - 05-03-2023.
ಪ್ರವೇಶಾತಿಗೆ ಅಂತಿಮ ದಿನಾಂಕ - 31-03-2023.


ಸಹಾಯವಾಣಿ ಸಂಖ್ಯೆ 8690544544, 8800335638 ಗೆ ಸಂಪರ್ಕಿಸಿ. ಇ ಮೇಲ್ techsupport@ksouportal.com ಮೇಲ್ ಮಾಡಿ.ಅಥವಾ ಕೇಂದ್ರ ಕಚೇರಿ ಮೈಸೂರಿಗೆ ನೇರವಾಗಿ ಭೇಟಿ ನೀಡಬಹುದು

First published: