• Home
  • »
  • News
  • »
  • jobs
  • »
  • Koppal: ಕುಡಿದ ಅಮಲಿನಲ್ಲಿ ಬಿದ್ದು ತಲೆಗೆ ಗಾಯ ಮಾಡಿಕೊಂಡ ಶಾಲಾ ಶಿಕ್ಷಕ!

Koppal: ಕುಡಿದ ಅಮಲಿನಲ್ಲಿ ಬಿದ್ದು ತಲೆಗೆ ಗಾಯ ಮಾಡಿಕೊಂಡ ಶಾಲಾ ಶಿಕ್ಷಕ!

ಶಿಕ್ಷಕ ಕೃಷ್ಣೇಗೌಡ

ಶಿಕ್ಷಕ ಕೃಷ್ಣೇಗೌಡ

ಶಾಲೆಗೆ ಗೈರಾಗಿ ಕಂಠಪೂರ್ತಿ ಕುಡಿದು ಬಿದ್ದು ತಲೆಗೆ ಗಾಯ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದಿದೆ. ಇವರು ಶಾಲೆಯ ಶಿಕ್ಷಕರೆಂದು ಹೇಳಲೂ ಸಹ ಅವಮಾನವಾಗುವ ರೀತಿಯಲ್ಲಿ ಕಂಠ ಪೂರ್ತಿಯಾಗಿ ಕುಡಿದು ಬಿದ್ದ ಘಟನೆ ಅಹಿತಕರವಾಗಿದೆ. 

  • Share this:

ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದ ಶಿಕ್ಷಕರೇ ದುರ್ವತನೆ ತೋರಿದರೆ ವಿದ್ಯಾರ್ಥಿಗಳ ಗತಿ ಏನಾಗಬೇಕು? ಮಕ್ಕಳಿಗೆ ಪಾಠ ಮಾಡಬೇಕಾದ ಶಿಕ್ಷಕನೋರ್ವ ಶಾಲೆಗೆ ಕುಡಿದು ಬಂದಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಶಿಕ್ಷಕರು ಎಂದರೆ ವಿದ್ಯಾರ್ಥಿಗಳಿಗೆ (Students) ಮಾದರಿಯಾಗಿರಬೇಕು. ಇವರಂತೆ ನಾನೂ ಕೂಡ ಆಗ್ಬೇಕು ಅಂತ ಅನಿಸುವ ಹಾಗಿರಬೇಕು. ಶಿಕ್ಷಕರು (Teachers) ಯಾವಾಗಲೂ ವಿದ್ಯಾರ್ಥಿಗಳ ಜೀವನ ರೂಪಿಸುವ ಶಕ್ತಿಯಾಗಿರಬೇಕು. ಬದಲಾಗಿ ವಿದ್ಯಾರ್ಥಿಗಳ ಹಾದಿ ತಪ್ಪಿಸಿ ಅವರ ಭವಿಷ್ಯವನ್ನು (Future) ಹಾಳು ಮಾಡುವಂತಿರಬಾರದು. ಆದರೆ ಇಲ್ಲಿ ನಡೆದ ಒಂದು ಘಟನೆ (Insident) ನೋಡಿದರೆ ಇಂಥಾಶಿಕ್ಷಕರೂ ಇರ್ತಾರಾ ಅನಿಸಿಬಿಡುತ್ತದೆ.


ಶಾಲೆಗೆ ಗೈರಾಗಿ ಕಂಠಪೂರ್ತಿ ಕುಡಿದು ಬಿದ್ದು ತಲೆಗೆ ಗಾಯ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದಿದೆ. ಇವರು ಶಾಲೆಯ ಶಿಕ್ಷಕರೆಂದು ಹೇಳಲೂ ಸಹ ಅವಮಾನವಾಗುವ ರೀತಿಯಲ್ಲಿ ಕಂಠ ಪೂರ್ತಿಯಾಗಿ ಕುಡಿದು ಬಿದ್ದ ಘಟನೆ ಅಹಿತಕರವಾಗಿದೆ. ತಾಲೂಕಿನ ಚಿಕ್ಕನಂದಿಹಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೃಷ್ಣೇಗೌಡ ಕುಡಿದು ತೂರಾಡಿದ ಶಿಕ್ಷಕ ಎಂದು ಗುರುತಿಸಲಾಗಿದೆ.


ಈ ರೀತಿಯಾದ ಶಿಕ್ಷಕರ ವರ್ತನೆ ಈ ತಿಂಗಳಲ್ಲೇ ಇದು ನಾಲ್ಕನೇ ಪ್ರಕರಣ ಇದೇ ರೀತಿ ಬೇರೆ ಬೇರೆ ಶಾಲೆಗಳಲ್ಲಿ ಶಿಕ್ಷಕರು ಕುಡಿದು ಪಾನಮತ್ತರಾಗಿ ಶಾಲೆಗೆ ಆಗಮಿಸುವ ಘಟನೆ ನಡೆಯುತ್ತಿದೆ. ಆದ್ದರಿಂದ ಶಿಕ್ಷಣ ಸಂಸ್ಥೆ ಇನ್ನೂ ಹೆಚ್ಚಿನ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ಅವಶ್ಯಕಥೆ ಇದೆ ಎನಿಸುತ್ತಿದೆ.


ಇದನ್ನೂ ಓದಿ: Rishi Sunak: 18 ವರ್ಷದ ವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಗಣಿತ ಕಡ್ಡಾಯಗೊಳಿಸಿದ ರಿಷಿ ಸುನಕ್​


ನಿಜವಾಗಿ ನಡೆದದ್ದೇನು ಎಂಬ ಘಟನೆಯ ವಿವರ
ಮೂಲತಃ ಹಾಸನ ಜಿಲ್ಲೆಯವರಾದ ಕೃಷ್ಣೇಗೌಡ, ವರ್ಷದ ಹಿಂದೆ ಚಿಕ್ಕನಂದಿಹಾಳ ಶಾಲೆಗೆ ವರ್ಗಾವಣೆಗೊಂಡಿದ್ದರು. ಕಳೆದ ಒಂದು ವರ್ಷದಿಂದ ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು ಇವರು ಈಗ ಶಾಲಾ ಸಮಯದಲ್ಲಿ ಪಾನಮತ್ತರಾಗಿ ಬಿದ್ದುಕೊಂಡು ತಲೆಗೆ ಗಾಯಮಾಡಿಕೊಂಡಿದ್ದಾರೆ. ಕುಷ್ಟಗಿ ಬಸ್ ನಿಲ್ದಾಣದ ಬಳಿ ಶಿಕ್ಷಕ ಕೃಷ್ಣೇಗೌಡ ಕಂಠಪೂರ್ತಿ ಕುಡಿದು ತೂರಾಡಿಕೊಂಡು ಹೋಗುವಾಗ ಎಡವಿ ಬಿದ್ದು ತಲೆಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.


ಆರೋಗ್ಯ ಸಹಾಯಕರಿಂದ ಚಿಕಿತ್ಸೆ


ಆಸ್ಪತ್ರೆಯಲ್ಲಿ ಆರೋಗ್ಯ ಸಹಾಯಕರು ಚಿಕಿತ್ಸೆ ನೀಡಿ ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಶಿಕ್ಷಕ ಚಿಕಿತ್ಸೆಗೆ ನಿರಾಕರಿಸಿದ್ದಾರೆ. ಆದರೂ ಸಹ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಸಹಾಯಕರು ಗಾಯಕ್ಕೆ ಚಿಕಿತ್ಸೆ ನೀಡಿದ್ದಾರೆ. ಕುಡಿದ ಅಮಲಿನಲ್ಲಿ ನನ್ನ ಮೂರು ಲಕ್ಷ ಹಣ ಎಂದು ಏನೇನೋ ಗೊಣಗುತ್ತಾ ಓಡಾಡಿದ್ದಾರೆ. ಇದರಿಂದ ಅಸಹಾಯರಾದ ಆಸ್ಪತ್ರೆ ಸಿಬ್ಬಂಧಿಗಳು ಅವರನ್ನು ಬಿಟ್ಟು ಕಳಿಸಿದ್ದಾರೆ.


ಇದನ್ನೂ ಓದಿ: Financial Literacy: ನಿಮ್ಮ ಮಕ್ಕಳಿಗೆ ಈ ರೀತಿ ಶಿಕ್ಷಣ ನೀಡದಿದ್ದರೆ ಎಲ್ಲರಿಂದಲೂ ಮೋಸ ಹೋಗುವ ಸಾಧ್ಯತೆ ಇದೆ!


 ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳೆ ಮಾತು


ಈ ಕುರಿತು ಪ್ರತಿಕ್ರಿಯಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳೆ, ಚಿಕ್ಕನಂದಿಹಾಳ ಶಾಲೆಗೆ ಪರಸ್ಪರ ವರ್ಗಾವಣೆ ಮೇರೆಗೆ ಶಿಕ್ಷಕ ಕೃಷ್ಣೇಗೌಡ ಸೇವೆಯಲ್ಲಿದ್ದರು. ಕರ್ತವ್ಯಕ್ಕೆ ಪದೇ ಪದೇ ಗೈರಾದ ಹಿನ್ನೆಲೆಯಲ್ಲಿ ನೊಟೀಸ್​ ನೀಡಿ ಶಿಕ್ಷಕನ ವೇತನವನ್ನು ತಡೆಹಿಡಿಯಲಾಗಿತ್ತು ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ಅವರು ಕುಡಿದಾಗ ಹಣದ ಕುರಿತು ಮಾತನಾಡಿರಬಹುದು. ಆದರೆ ಈ ಘಟನೆಯ ಕುರಿತು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳೆ ಮುಂದಾಗಿದ್ದಾರೆ. 

First published: