• ಹೋಂ
  • »
  • ನ್ಯೂಸ್
  • »
  • Jobs
  • »
  • Exam: ತಲೆಗೆ 8 ಹೊಲಿಗೆ ಹಾಕಿದ್ರೂ ಆಸ್ಪತ್ರೆಯಿಂದಲೇ ಪರೀಕ್ಷೆ ಬರೆದ ಛಲಗಾರ!

Exam: ತಲೆಗೆ 8 ಹೊಲಿಗೆ ಹಾಕಿದ್ರೂ ಆಸ್ಪತ್ರೆಯಿಂದಲೇ ಪರೀಕ್ಷೆ ಬರೆದ ಛಲಗಾರ!

ಪರೀಕ್ಷೆ ಬರೆಯುತ್ತಿರುವ ಸಂದೀಪ್​

ಪರೀಕ್ಷೆ ಬರೆಯುತ್ತಿರುವ ಸಂದೀಪ್​

ಪರೀಕ್ಷೆ ಬರೆಯೋಕೆ ಅಂತಲೇ ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದ ವಿದ್ಯಾರ್ಥಿ ತನ್ನ ಬೈಕ್​ ಮೂಲಕ ಸಾಗುತ್ತಿದ್ದಾಗ ಬೇರೆ ಒಂದು ಗಾಡಿಗೆ ತಗುಲಿ ಅಫಘಾತವಾಗಿತ್ತು. ಈ ರೀತಿಯಾದ ಕಾರಣ ವಿದ್ಯಾರ್ಥಿಯ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ವಿದ್ಯಾರ್ಥಿಯನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರೂ ಕೂಡಾ ಆತ ತನ್ನನ್ನು ಪರೀಕ್ಷಾ ಕೊಠಡಿಗೆ ಬಿಡಿ ಎಂದು ಮನವಿ ಮಾಡಿಕೊಳ್ಳುತ್ತಲೇ ಇದ್ದ.

ಮುಂದೆ ಓದಿ ...
  • Share this:

ಪರೀಕ್ಷೆ (Exam) ಬರೆಯುವ ಸಲುವಾಗಿ ವಿದ್ಯಾರ್ಥಿಗಳು ಎಷ್ಟೋ ದಿನ ಕಷ್ಟ ಪಟ್ಟು ಓದುತ್ತಾರೆ. ಅದಕ್ಕೆ ತಕ್ಕಂತೆ ತಯಾರಿ (Preparation) ಕೂಡಾ ನಡೆಸುತ್ತಾರೆ. ಆದರೆ ಕೊನೆ ಕ್ಷಣದಲ್ಲಿ ಪರೀಕ್ಷೆಯಿಂದ ವಂಚಿತರಾದ್ರೆ ಎಷ್ಟು ಬೇಜಾರಾಗುತ್ತೆ ಅಲ್ವಾ? ಹಾಗೇ ಒಂದು ಘಟನೆ (Incident) ಇಲ್ಲಿಯೂ ನಡೆಯೋದಿತ್ತು ಆದರೆ ಆ ವಿದ್ಯಾರ್ಥಿ ತಾನು ಪರೀಕ್ಷೆ ಬರೆಯಲೇ ಬೇಕು ಎಂದು ಹಠ ಹಿಡಿದು ಪರೀಕ್ಷೆ ಬರೆದ ಘಟನೆ ನಡೆದಿದೆ. ಆತ ಪರೀಕ್ಷೆ ಬರೆಯಲು ಹೋಗದಂತೆ ಅವನಿಗಾದದ್ದಾದರೂ ಏನು ಎಂಬ ಮಾಹಿತಿ (Information) ಇಲ್ಲಿದೆ ನೋಡಿ.


ಪರೀಕ್ಷೆ ಬರೆಯೋಕೆ ಅಂತಲೇ ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದ ವಿದ್ಯಾರ್ಥಿ ತನ್ನ ಬೈಕ್​ ಮೂಲಕ ಸಾಗುತ್ತಿದ್ದಾಗ ಬೇರೆ ಒಂದು ಗಾಡಿಗೆ ತಗುಲಿ ಅಫಘಾತವಾಗಿತ್ತು. ಈ ರೀತಿಯಾದ ಕಾರಣ ವಿದ್ಯಾರ್ಥಿಯ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ವಿದ್ಯಾರ್ಥಿಯನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರೂ ಕೂಡಾ ಆತ ತನ್ನನ್ನು ಪರೀಕ್ಷಾ ಕೊಠಡಿಗೆ ಬಿಡಿ ಎಂದು ಮನವಿ ಮಾಡಿಕೊಳ್ಳುತ್ತಲೇ ಇದ್ದ.


ಇದನ್ನೂ ಓದಿ: Board Exam ನಡೆಯೋದು ಖಚಿತ, 5 ಮತ್ತು 8ನೇ ತರಗತಿ ಪರೀಕ್ಷೆ ಕುರಿತು ಹೈಕೋರ್ಟ್ ಮಹತ್ವದ ತೀರ್ಪು​


ಪದೇ ಪದೇ ಪರೀಕ್ಷಾ ಕೇಂದ್ರಕ್ಕೆ ಹೋಗುವ ಸಲುವಾಗಿ ಮನವಿ ಮಾಡಿಕೊಂಡಿದ್ದಕ್ಕೆ ಆ ವಿದ್ಯಾರ್ಥಿಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬರಲಾಯಿತು. ಈತ ಅಲಿನಗರ್ ಯಾಸಿನ್​ ಮಲೀಕ್​ ಶಾಲೆಯ ವಿದ್ಯಾರ್ಥಿ 15 ವರ್ಷದ ಸಂದೀಪ್​ ಮಾಝಿ ಎಂಬಾತ ಇವನು ಗಾಯವಾಗಿದ್ದಾಗಲೇ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾನೆ. ಪರೀಕ್ಷೆ ಬರೆಯುತ್ತಿರುವ ಸಂದರ್ಭದಲ್ಲಿ ಈತ ಪ್ರಜ್ಷೆತಪ್ಪಿ ಬಿದ್ದಿದ್ದಾನೆ. ಆಗ ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.


ಅದಾದ ನಂತರ ಚಿಕಿತ್ಸೆ ನೀಡಿ ತಲೆಗೆ ಎಂಟು ಹೊಲಿಗೆಗಳನ್ನು ಹಾಕಲಾಗಿದೆ. ಆದರೂ ಮತ್ತೆ ಮನವಿ ಮಾಡಿಕೊಂಡು ತಾನು ಪರೀಕ್ಷೆ ಬರೆಯಲೇ ಬೇಕು ಎಂದು ಹಠ ಮಾಡಿದ್ದರಿಂದ ಆಸ್ಪತ್ರೆಗೆ ಪರೀಕ್ಷೆ ಪ್ರಶ್ನೆ ಪತ್ರಿಕೆ ತರಿಸಿಕೊಡಲಾಗಿದೆ. ಆಸ್ಪತ್ರೆಯ ಹಾಸಿಗೆಯ ಮೇಲೆ ವಿದ್ಯಾರ್ಥಿ ಕೂತು ಪರೀಕ್ಷೆ ಬರೆದ ಘಟನೆ ಜರುಗಿದೆ. ಇದರಲ್ಲೇ ತಿಳಿಯುತ್ತೆ ಆ ವಿದ್ಯಾರ್ಥಿಗೆ ಪರೀಕ್ಷೆ ಬರೆಯಬೇಕು ಎಂಬ ಛಲ ಎಷ್ಟಿತ್ತು ಎಂಬುದಾಗಿ.


ಇದೇ ರೀತಿ ವೈರಲ್​ ಆಗಿತ್ತು ಇನ್ನೊಂದು ಸುದ್ದಿ
ಮದುವೆ ಮನೆಯಿಂದಾ ಸೀದಾ ಪರೀಕ್ಷೆಗೆ ಬಂದು ಅದೇ ದುಬಾರಿ ಸೀರೆ ಹಾಗೂ ಕುರ್ತಾದಲ್ಲಿ ಪರೀಕ್ಷೆ ಬರೆದ ಎಷ್ಟೋ ಜನರ ಬಗ್ಗೆ ನೀವು ಆಗಾಗ ಕೇಳಿರ್ತೀರಾ ಅದೇ ರೀತಿ ಇಲ್ಲೂ ಒಂದು ಘಟನೆ ನಡೆದಿದೆ ನೋಡಿ. ಮೈತುಂಬಾ ಚಿನ್ನಾಭರಣ ಕಾರಿಂದ ಬಂದಿಳಿದ ಮದು ಮಗಳೇ ವಿದ್ಯಾರ್ಥಿನಿ ಉದ್ದನೆಯ ಜಡೆ ಕೂತೂಹಲದ ಕಣ್ಣುಗಳು ಯಾರಿಗೂ ಇವಳು ಪರೀಕ್ಷೆ ಬರೀತಾಳೆ ಅಂತ ಅನಿಸೋಕು ಸಾಧ್ಯವಿಲ್ಲ. ಆದ್ರೆ ಈ ಮದುಮಗಳು ಕಾರಿನಿಂದ ಇಳಿದ ತಕ್ಷಣ ನಡೆದಿದ್ದೇ ಬೇರೆ. ಏನಾಯ್ತು ಅನ್ನೋ ವಿವರ ಇಲ್ಲಿದೆ ನೋಡಿ.




ಮದುವೆ ಸೀರೆಯ ಮೇಲೆ ಲ್ಯಾಬ್ ಕೋಟ್, ಸ್ಟೆತಸ್ಕೋಪ್ ಧರಿಸಿ ಸೀದಾ ಪರೀಕ್ಷೆ ನಡೆಯುವ ಸ್ಥಳಕ್ಕೆ ಹೋಗಿ ತನ್ನ ಗೆಳೆಯ ಗೆಳತಿಯರಿಗೆಲ್ಲಾ ಒಮ್ಮೆ ಮಂದಹಾಸದ ನಗೆ ಬೀರಿ. ಕೈಯಲ್ಲಿ ಹಾಳೆ ಹಾಗೂ ಪೆನ್ನು ಹಿಡಿದು ಕೂತು ಬಿಟ್ಟಿದ್ದಾಳೆ.ಕಾರಲ್ಲಿ ಬರುತ್ತಲೇ ಓದುತ್ತಾ ಬಂದಿದ್ದಾಳೆ. ಪರೀಕ್ಷೆ ಹಾಲ್​ಗೆ ಅವಳು ಕಾಲಿಡುತ್ತಿದ್ದಂತೆಯೇ ಸ್ನೇಹಿತರೆಲ್ಲಾ ಖುಷಿಯಿಂದ ಕೂಗಿ ನಗುನಗುತ್ತಾ ಆಕೆಯನ್ನು ಸ್ವಾಗತಿಸಿದ್ದಾರೆ. ಪ್ರ್ಯಾಕ್ಟಿಕಲ್‌ ಎಕ್ಸಾಂಗೆ ಅವತ್ತು ನಡೆದಿತ್ತು. ತನ್ನ ವೈವಾಹಿಕ ಜೀವನಕ್ಕೆ ಎಷ್ಟು ಬದ್ಧಳಾಗಿದ್ದಾಳೋ ಅಷ್ಟೇ ಶೈಕ್ಷಣಕ್ಕೂ ಪ್ರಾಮುಖ್ಯತೆ ನೀಡಿದ್ದಾಳೆ ಎನ್ನುವುದು ಖುಷಿಯ ಸಂಗತಿ. ಎಷ್ಟೋ ಜನ ಮದುವೆ ಇದೆ ಎಂದರೆ ಪರೀಕ್ಷೆ ಬಿಟ್ಟು ಒಂದು ವರ್ಷ ಹಾಳು ಮಾಡಿಕೊಳ್ಳುತ್ತಾರೆ.

First published: