• Home
  • »
  • News
  • »
  • jobs
  • »
  • CA Topper ರಮ್ಯಶ್ರೀ ಯಶಸ್ಸಿನ ಗುಟ್ಟು ಇದು, ನೀವು ಈ ರೀತಿ ಅಭ್ಯಾಸ ಮಾಡಿದ್ರೆ ರ‍್ಯಾಂಕ್‌​ ಬರ್ತಿರಾ

CA Topper ರಮ್ಯಶ್ರೀ ಯಶಸ್ಸಿನ ಗುಟ್ಟು ಇದು, ನೀವು ಈ ರೀತಿ ಅಭ್ಯಾಸ ಮಾಡಿದ್ರೆ ರ‍್ಯಾಂಕ್‌​ ಬರ್ತಿರಾ

ರಮ್ಯಶ್ರೀ ಮತ್ತವರ ಕುಟುಂಬ

ರಮ್ಯಶ್ರೀ ಮತ್ತವರ ಕುಟುಂಬ

ಸಾಮಾನ್ಯವಾಗಿ ಮಂಗಳೂರಿನ ಸಿಎ ಆಕಾಂಕ್ಷಿಗಳು ತಮ್ಮ ಬಿಕಾಂ ಕೋರ್ಸ್ ಅನ್ನು ಮುಂದುವರಿಸುವಾಗ ತರಬೇತಿಗೆ ಪಡೆಯುತ್ತಾರೆ ಎಂದು ರಮ್ಯಶ್ರೀ ರಾವ್ ಹೇಳಿದರು. ಆದರೆ, ಪಿಯು ಓದುತ್ತಿರುವಾಗಲೇ ನೇರವಾಗಿ ಸಿಎ ಪರೀಕ್ಷೆಗೆ ಓದಲು ಆರಂಭಿಸಿದವರು ಇವರು.

  • News18 Kannada
  • Last Updated :
  • Mangalore, India
  • Share this:

ಕಳೆದ ಆರು ವರ್ಷಗಳಿಂದ ಸಿಎ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ರಮ್ಯಶ್ರೀ ರಾವ್, ಮೊದಲ ಪ್ರಯತ್ನದಲ್ಲಿ ಎಐಆರ್ ದ್ವಿತೀಯ ಶ್ರೇಣಿಯೊಂದಿಗೆ ಪರೀಕ್ಷೆಯಲ್ಲಿ (Exam) ಉತ್ತೀರ್ಣರಾಗಿದ್ದು, 800 ಕ್ಕೆ 617 ಅಂಕಗಳನ್ನು ಗಳಿಸಿದ್ದಾರೆ. ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ಐಸಿಎಐ) ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಅಖಿಲ ಭಾರತ (India) ಶ್ರೇಣಿಯಲ್ಲಿ (ಎಐಆರ್) ದ್ವಿತೀಯ ಸ್ಥಾನ (2nd Rank) ಗಳಿಸಲು ಕಠಿಣ ಪರಿಶ್ರಮ, ಸ್ಥಿರತೆ ಮತ್ತು ಸಮರ್ಪಣಾ ಮನೋಭಾವನೆ ಸಹಕಾರಿಯಾಗಿದೆ ಎಂದು ಸುರತ್ಕಲ್ ನಿವಾಸಿ ರಮ್ಯಾಶ್ರೀ ರಾವ್ ಹೇಳಿದ್ದಾರೆ.


ಅವರು ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಗಳಲ್ಲಿಯೂ ಉತ್ತಮ ಸಾಧನೆ ಮಾಡಿದ್ದರು. ಖಾಸಗಿ ಸಂಸ್ಥೆಯ ಮೂಲಕ ಸಿಎ ಕಾಮನ್ ಪ್ರೊಫಿಷಿಯನ್ಸಿ ಟೆಸ್ಟ್ (ಸಿಪಿಟಿ) ಮತ್ತು ಮಧ್ಯಂತರ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ರಮೇಶ್ ರಾವ್ ಮತ್ತು ಮೀರಾ ಎಂ ದಂಪತಿಯ ಪುತ್ರಿಯಾದ ಇವರ ತಂದೆ ತಾಯಿ ಇಬ್ಬರೂ ವಿಮಾ ಕಂಪನಿಗಳಲ್ಲಿ ಕೆಲಸ ಮಾಡುತ್ತಾರೆ.


ಪಿಯು ಓದುತ್ತಿರುವಾಗಲೇ ನೇರವಾಗಿ ಸಿಎ ಪರೀಕ್ಷೆಗೆ ಓದಲು ಆರಂಭಿಸಿದರು


ಬುಧವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ರಾವ್, ಸಿಎ ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ 16 ಎಐಆರ್ ಗಳಿಸಿದ್ದಾರೆ. ಅದರ ನಂತರ, ಅವರು ಮಂಗಳೂರಿನ ಕಾಮತ್ ಮತ್ತು ರಾವು ಚಾರ್ಟರ್ಡ್ ಅಕೌಂಟೆಂಟ್‌ಗಳಲ್ಲಿ ತಮ್ಮ ಅಭ್ಯಾಸ ಮುಂದುವರೆಸಿದರು. ಸಾಮಾನ್ಯವಾಗಿ ಮಂಗಳೂರಿನ ಸಿಎ ಆಕಾಂಕ್ಷಿಗಳು ತಮ್ಮ ಬಿಕಾಂ ಕೋರ್ಸ್ ಅನ್ನು ಮುಂದುವರಿಸುವಾಗ ತರಬೇತಿಗೆ ಪಡೆಯುತ್ತಾರೆ ಎಂದು ರಮ್ಯಶ್ರೀ ರಾವ್ ಹೇಳಿದರು. ಆದರೆ, ಪಿಯು ಓದುತ್ತಿರುವಾಗಲೇ ನೇರವಾಗಿ ಸಿಎ ಪರೀಕ್ಷೆಗೆ ಓದಲು ಆರಂಭಿಸಿದವರು ಇವರು.


ಇದನ್ನೂ ಓದಿ: CA Rank: ಸಿಎ ಪರೀಕ್ಷೆಯಲ್ಲಿ ದೇಶಕ್ಕೇ 2ನೇ ಸ್ಥಾನ ಗಳಿಸಿದ ಮಂಗಳೂರಿನ ರಮ್ಯಶ್ರೀ


ಪಿಯು ಫಲಿತಾಂಶದ ಎರಡು ತಿಂಗಳ ನಂತರ ಸಿಎ ಸಿಪಿಟಿ ಬರೆದಿದ್ದಾರೆ. ಎಲ್ಲರೂ ಸಹ ತಮ್ಮ ಡಿಗ್ರಿ ಸಮಯದಲ್ಲಿ ಪರೀಕ್ಷೆ ತಯಾರಿ ಆರಂಭಿಸುತ್ತಾರೆ. ಆದರೆ ಇವರು ಹಾಗೆ ಮಾಡಲಿಲ್ಲ ತಮ್ಮ ಪಿಯು ಅವಧಿಯಲ್ಲೇ ಹೆಚ್ಚಾಗಿ ಸಿಎ ಪರೀಕ್ಷೆ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದ್ದರು. ಹಾಗಾಗಿಯೇ ಇವತ್ತು ಈ ಸಾಧನೆಗೆ ಕಾರಣವಾಗಿದೆ. ನೀವೂ ಸಹ ಇದೇ ಕ್ರಮವನ್ನು ಅನುಸರಿಸಿದರೆ ಬಹಳ ಬೇಗ ಪಾಸ್​​ ಆಗಬಹುದು.


ಇವರು ಸಿಎ ಪರೀಕ್ಷೆಯನ್ನು ಬರೆಯಲು ಇವರ ತಾಯಿಯೇ ಪ್ರೇರಣೆ


ಇವರು ಸಿಎ ಪರೀಕ್ಷೆಯನ್ನು ಬರೆಯಲು ಇವರ ತಾಯಿಯೇ ಪ್ರೇರಣೆ ಎಂದು ರಮ್ಯಶ್ರೀ ರಾವ್ ಹೇಳಿದ್ದಾರೆ. ನನ್ನ ತಾಯಿ ಯಾವಾಗಲೂ ಸಿಎ ಆಗಬೇಕೆಂದು ಬಯಸಿದ್ದರು, ಆದರೆ ಅವರ ಕನಸು ಎಂದಿಗೂ ನನಸಾಗಲಿಲ್ಲ. ಹಾಗಾಗಿ ಅವಳ ಕನಸನ್ನು ನನಸು ಮಾಡುತ್ತಿದ್ದೇನೆ ಎಂದು ಇವರು ಹೇಳಿದ್ದಾರೆ. ಅದಲ್ಲದೆ, ನನ್ನ ಕುಟುಂಬ, ವಿಶೇಷವಾಗಿ ನನ್ನ ಪೋಷಕರು, ಮೊದಲ ದಿನದಿಂದ ಇಂದಿನವರೆಗೆ ಆಧಾರ ಸ್ತಂಭವಾಗಿದ್ದಾರೆ. ಪರೀಕ್ಷೆಯ ಮೊದಲು ಮತ್ತು ನಂತರ ನಾನು ಆತಂಕ, ಒತ್ತಡ, ಮತ್ತು ಚಿಂತೆಗೀಡಾದಾಗ ಇವರೇ ನನ್ನನ್ನು ಸಮಾಧಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.


ಪೋಷಕರ ಪಾತ್ರವೇ ಮುಖ್ಯ


ನನ್ನನ್ನು ಹುರಿದುಂಬಿಸಲು ನನ್ನ ಪೋಷಕರು ಹಲವಾರು ರೀತಿಯಲ್ಲಿ ಸಹಾಯಮಾಡಿದ್ದಾರೆ. ಅದರಿಂದಲೇ ನಾನು ಧೈರ್ಯವಾಗಿ ಈ ಪರೀಕ್ಷೆ ಎದುರಿಸಿದೆ ಎಂದು ಅವರು ಹೇಳಿದ್ದಾರೆ. ಇನ್ನು ಮುಂದಿನ ಜೀವನದಲ್ಲಿ ಯಾವುದಾದರೂ ಒಂದು ಖಾಸಗಿ ಕಂಪನಿಯಲ್ಲಿ ತಾನು ಕೆಲಸ ಮಾಡುತ್ತೇನೆ ಎಂಬುದಾಗಿ ಅವರು ಹೇಳಿದ್ದಾರೆ. ಪದವಿ ಅಧ್ಯಯನದಲ್ಲಿ ಹೂಡಿಕೆ ಮಾಡುವ ಮೂಲಕ ನಾನು ಮೂರು ವರ್ಷಗಳನ್ನು ವ್ಯರ್ಥ ಮಾಡುತ್ತಿದ್ದೇನೆ ಎಂಬುದಾಗಿ ಅವರ ಭಾವನೆ ಇದೆಯಂತೆ. ಇದನ್ನು ತಪ್ಪಿಸಲು ಅವರು ಇಗ್ನೌದಲ್ಲಿ ತಮ್ಮ ಅಭ್ಯಾಸ ಆರಂಭಿಸಿದರು.


ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ಇಗ್ನೌ) ಮೂಲಕ ಪದವಿ


ದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ಇಗ್ನೌ) ಮೂಲಕ ಬಿಕಾಮ್ ಪದವಿಗೆ ಅಪ್ಲೈ ಮಾಡಿದರು. ಈ ಕೋರ್ಸ್‌ಗೆ ದಾಖಲಾದ ಅಭ್ಯರ್ಥಿಗಳು ಪ್ರಾಜೆಕ್ಟ್ ಸಲ್ಲಿಸಿದ ನಂತರ ಪರೀಕ್ಷೆ ಬರೆದು ಪದವಿ ಪಡೆಯಬಹುದು. ಅಂತಿಮ ಪದವಿ ಪಡೆಯುವ ಮೊದಲು ಎರಡು ವರ್ಷಗಳ ಆರ್ಟಿಕಲ್ಶಿಪ್ ಅನ್ನು ಪೂರ್ಣಗೊಳಿಸಬೇಕು ಮತ್ತು ಒಂದು ವರ್ಷದ ಉದ್ಯಮದ ಅನುಭವವನ್ನು ಪಡೆಯಬೇಕಾಗುತ್ತದೆ. ICAI ಅಧ್ಯಯನ ಮಾಡಲೂ ಸಹ ಇದೇ ಸಹಾಯವಾಯಿತು ಎಂದು ಅವರು ಹೇಳಿದ್ದಾರೆ.

First published: