• Home
  • »
  • News
  • »
  • jobs
  • »
  • School Teacher: ಶಾಲಾ ಶಿಕ್ಷಕರನ್ನು ಇನ್ಮೇಲೆ ಸರ್​, ಮೇಡಂ ಅನ್ನೋ ಹಾಗಿಲ್ಲ!

School Teacher: ಶಾಲಾ ಶಿಕ್ಷಕರನ್ನು ಇನ್ಮೇಲೆ ಸರ್​, ಮೇಡಂ ಅನ್ನೋ ಹಾಗಿಲ್ಲ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಶಿಕ್ಷಕರನ್ನು ಲಿಂಗದ ಆಧಾರದ ಮೇಲೆ ಸಂಬೋಧನೆ ಮಾಡಬಾರದು ಆ ಕಾರಣದಿಂದ ಸರ್​ ಅಥವಾ ಮೇಡಂ ಎನ್ನುವ ಬದಲು ವಿದ್ಯಾರ್ಥಿಗಳು ಟೀಚರ್​ ಎಂದು ಕರೆಯಬೇಕು ಎಂದು ಸೂಚಿಸಲಾಗಿದೆ.

  • Share this:

ಕೇರಳದ ಶಾಲೆ ಒಂದು ಹೊಸ ಸೂಚನೆಯನ್ನು ಹೊರಡಿಸಿದೆ ಇದರ ಪ್ರಕಾರ ವಿದ್ಯಾರ್ಥಿಗಳು (Students) ತಮ್ಮ ಶಿಕ್ಷಕರನ್ನು ಟೀಚರ್ (Teacher) ಅಥವಾ ಮೇಡಂ ಎಂದು ಕರೆಯುವ ಹಾಗಿಲ್ವಂತೆ. ಇದರ ಬದಲಿಗೆ ಟೀಚರ್​ ಎಂದೇ ಸಂಬೋಧಿಸಬೇಕು ಎಂವ ನಿಯಮ ಅಲ್ಲಿ ಜಾರಿಯಾಗಿದೆ. ಇನ್ನು ಮುಂದಿನ ದಿನಗಳಲ್ಲಿ (Days) ಎಲ್ಲಾ ವಿದ್ಯಾರ್ಥಿಗಳು ಈ ನಿಯಮವನ್ನು ಪಾಲಿಸುವಂತೆ ಸೂಚಿಸಲಾಗಿದೆ. ಈ ರೀತಿ ನಿರ್ಧಾರಕ್ಕೆ ಬರಲು ಕಾರಣ (Reason) ಏನು? ಇದನ್ನು ಜಾರಿಗೊಳಿಸಲು ಕಾರಣ ಏನು? ಎಂಬುದನ್ನು ಇಲ್ಲಿ ತಿಳಿಸಿದ್ದೇವೆ ನೋಡಿ.


ಕೇರಳದ ತಿರುವನಂತಪುರಂ ನಲ್ಲಿ ಈ ರೀತಿಯಾದ ನಿಯಮವನ್ನು ಜಾರಿಗೊಳಿಸಲಾಗಿದೆ. ರಾಜ್ಯದ ಎಲ್ಲಾ ಶಾಲೆಗಳಿಗೆ ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಿರ್ದೇಶಿಸಿದೆ. ʼಸರ್‌ʼ, ʼಮೇಡಂʼ ಎನ್ನುವುದಕ್ಕಿಂತ ʼಟೀಚರ್‌ʼ ಅನ್ನುವ ಪದ ʼಲಿಂಗ ತಟಸ್ಥʼವಾಗಿರುವುದರಿಂದ ಈ ಪದವನ್ನೇ ಬಳಕೆ ಮಾಡಬೇಕು. ಶಿಕ್ಷಕರನ್ನು ಲಿಂಗದ ಆಧಾರದ ಮೇಲೆ ಸಂಬೋಧನೆ ಮಾಡಬಾರದು ಎಂದು ಸೂಚಿಸಲಾಗಿದೆ.


ಸರ್​ ಎಂದರೆ ಪುರುಷರು ಮೇಡಂ ಎಂದರೆ ಮಹಿಳೆಯರು ಎಂಬ ಭಾವ ಅಲ್ಲಿ ಉಲ್ಲೇಖವಾಗುತ್ತದೆ  ಆದ್ದರಿಂದ ನೀವು ಈ ರೀತಿ ಕರೆಯಬಾರದು ಎಂದು ಹೇಳಲಾಗಿದೆ.


ಇದನ್ನೂ ಓದಿ: Success Story: ಅಂದು 12ನೇ ತರಗತಿ ಫೇಲ್​, ಈಗ IPS ಅಧಿಕಾರಿ! UPSC ಟಾಪರ್ ಆಗಲು ಗೆಳತಿಯೇ ಸ್ಪೂರ್ತಿ


ಸಮಿತಿಯ ಅಧ್ಯಕ್ಷ ಕೆ.ವಿ.ಮನೋಜ್ ಕುಮಾರ್ ಮತ್ತು ಸದಸ್ಯ ಸಿ.ವಿಜಯಕುಮಾರ್ ಅವರನ್ನೊಳಗೊಂಡ ಪೀಠ ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಟೀಚರ್‌’ ಪದವನ್ನು ಬಳಸಲು ಸೂಚನೆಗಳನ್ನು ನೀಡುವಂತೆ ಸಾಮಾನ್ಯ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿರುವುದಾಗಿ ತಿಳಿದು ಬಂದಿದೆ. ಸರ್ ಅಥವಾ ಮೇಡಂ ಎಂದು ಕರೆಯುವ ಬದಲು ಟೀಚರ್ ಎಂದು ಕರೆದರೆ ಎಲ್ಲ ಶಾಲೆಗಳ ಮಕ್ಕಳಲ್ಲಿ ಸಮಾನತೆ ಕಾಪಾಡಲು ಸಹಕಾರಿಯಾಗುತ್ತದೆ. ಶಿಕ್ಷಕರೊಂದಿಗೆ ಅವರ ಬಾಂಧವ್ಯ ಹೆಚ್ಚುತ್ತದೆ ಎಂದು ಮಕ್ಕಳ ಹಕ್ಕು ಆಯೋಗ ತಿಳಿಸಿದೆ.


ಸರ್​ ಮತ್ತು ಮೇಡಂ ಎಂದು ಕರೆಯುವುದು ಸ್ವಲ್ಪ ಮಟ್ಟಿನ ತಾರತಮ್ಯವನ್ನು ಸೂಚಿಸುತ್ತದೆ. ಹಾಗಾಗಿ ಇನ್ನು ಮುಂದೆ ಆರೀತಿಯಾಗಿ ಕರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ.




ಶಿಕ್ಷಕರೂ ಸಹ ಒಬ್ಬರನ್ನೊಬ್ಬರು ಕರೆದುಕೊಳ್ಳುವಾಗ ಸರ್​ ಮೇಡಂ ಎಂದು ಕರೆಯಬಾರದು ಅವರೂ ಸಹ ಪರಸ್ಪರ ಟೀಚರ್​ ಎಂದೇ ಕರೆಯಬೇಕು ಎಂದು ಹೇಳಲಾಗಿದೆ. ಈ ರೀತಿ ಮಾಡುವುದರಿಂದ ಸಮಾನತೆ ಮತ್ತು ಇನ್ನೂ ಹೆಚ್ಚಿನ ಭಾಂದವ್ಯ ಬೆಳೆಯುತ್ತದೆ ಎಂದು ಹೇಳಲಾಗಿದೆ.




ಕೇರಳದಲ್ಲಿ ವಲಸೆ ಮಕ್ಕಳಿಗೆ ಶಾಲೆ ನಿರ್ಮಾಣ 
ಶಿಕ್ಷಣ ಪೂರ್ಣಗೊಳಿಸಲಾಗದ ವಲಸೆ ಮಕ್ಕಳಿಗೆ ಕೇರಳದಲ್ಲಿ ಶಾಲೆ ಸ್ಥಾಪನೆ ಮಾಡಲಾಗ್ತಿದೆ. ಅವರ ಕಳಪೆ ಆರ್ಥಿಕ ಪರಿಸ್ಥಿತಿಯಿಂದಾಗಿ, ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುವ ಹೆಚ್ಚಿನ ವಲಸೆ ಕಾರ್ಮಿಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಪೋಷಕರು ತಮ್ಮ ಕೆಲಸದಲ್ಲಿ ಸಹಾಯಕ್ಕಾಗಿ ಈ ಮಕ್ಕಳನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಶೋಚನೀಯ.


ಎಸಿಪಿ ಸಾರಂಗಪಾಣಿ ಮತ್ತು ಸಿಐ ಪ್ರದೀಪ್ ಕುಮಾರ್ ಅವರೊಂದಿಗೆ ಡಿಸಿಪಿ ಅವರು ವಲಸೆ ಕಾರ್ಮಿಕರು ಮತ್ತು ಇಟ್ಟಿಗೆ ಗೂಡುಗಳ ಮಾಲೀಕರೊಂದಿಗೆ ಹಲವಾರು ಸುತ್ತಿನ ಸಭೆಗಳನ್ನು ನಡೆಸಿದರು ಮತ್ತು ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ನೀಡಲು ಪೊಲೀಸರು ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತಾರೆ ಎಂದು ಭರವಸೆಯನ್ನು ಸಹ ನೀಡಿದರು. ಈ ಮೂಲಕ ಕೇರಳದಲ್ಲಿ ಈಗ ಹೊಸ ಶಾಲೆ ನಿರ್ಮಾಣ  ಮಾಡಲಾಗುತ್ತಿದೆ.

First published: