• ಹೋಂ
  • »
  • ನ್ಯೂಸ್
  • »
  • jobs
  • »
  • Bride In Exam: ಸೀರೆ ಮೇಲೆ ಲ್ಯಾಬ್​ ಕೋಟ್​, ಪರೀಕ್ಷೆ ಬರೆಯಲು ಬಂದ ಕೇರಳದ ಮದುಮಗಳು!

Bride In Exam: ಸೀರೆ ಮೇಲೆ ಲ್ಯಾಬ್​ ಕೋಟ್​, ಪರೀಕ್ಷೆ ಬರೆಯಲು ಬಂದ ಕೇರಳದ ಮದುಮಗಳು!

ಕೇರಳದ ಮದುಮಗಳು

ಕೇರಳದ ಮದುಮಗಳು

ಮದುವೆ ಸೀರೆಯ ಮೇಲೆ ಲ್ಯಾಬ್ ಕೋಟ್, ಸ್ಟೆತಸ್ಕೋಪ್ ಧರಿಸಿ ಸೀದಾ ಪರೀಕ್ಷೆ ನಡೆಯುವ ಸ್ಥಳಕ್ಕೆ ಹೋಗಿ ತನ್ನ ಗೆಳೆಯ ಗೆಳತಿಯರಿಗೆಲ್ಲಾ ಚಮಕ್​ ಕೊಟ್ಟ ಮದುಮಗಳು ವಿಡಿಯೋ ನೋಡಿ.

  • News18 Kannada
  • 3-MIN READ
  • Last Updated :
  • Kerala, India
  • Share this:

ಮದುವೆ ಮನೆಯಿಂದಾ ಸೀದಾ ಪರೀಕ್ಷೆಗೆ (Exam) ಬಂದು ಅದೇ ದುಬಾರಿ ಸೀರೆ ಹಾಗೂ ಕುರ್ತಾದಲ್ಲಿ ಪರೀಕ್ಷೆ ಬರೆದ ಎಷ್ಟೋ ಜನರ ಬಗ್ಗೆ ನೀವು ಆಗಾಗ ಕೇಳಿರ್ತೀರಾ ಅದೇ ರೀತಿ ಇಲ್ಲೂ ಒಂದು ಘಟನೆ ನಡೆದಿದೆ ನೋಡಿ. ಮೈತುಂಬಾ ಚಿನ್ನಾಭರಣ ಕಾರಿಂದ ಬಂದಿಳಿದ ಮದು ಮಗಳೇ ವಿದ್ಯಾರ್ಥಿನಿ (Student). ಉದ್ದನೆಯ ಜಡೆ ಕೂತೂಹಲದ ಕಣ್ಣುಗಳು (Eye) ಯಾರಿಗೂ ಇವಳು ಪರೀಕ್ಷೆ ಬರೀತಾಳೆ ಅಂತ ಅನಿಸೋಕು ಸಾಧ್ಯವಿಲ್ಲ. ಆದ್ರೆ ಈ ಮದುಮಗಳು (Bride) ಕಾರಿನಿಂದ ಇಳಿದ ತಕ್ಷಣ ನಡೆದಿದ್ದೇ ಬೇರೆ. ಏನಾಯ್ತು ಅನ್ನೋ ವಿವರ ಇಲ್ಲಿದೆ ನೋಡಿ. 


ಮದುವೆ ಸೀರೆಯ ಮೇಲೆ ಲ್ಯಾಬ್ ಕೋಟ್, ಸ್ಟೆತಸ್ಕೋಪ್ ಧರಿಸಿ ಸೀದಾ ಪರೀಕ್ಷೆ ನಡೆಯುವ ಸ್ಥಳಕ್ಕೆ ಹೋಗಿ ತನ್ನ ಗೆಳೆಯ ಗೆಳತಿಯರಿಗೆಲ್ಲಾ  ಒಮ್ಮೆ ಮಂದಹಾಸದ ನಗೆ ಬೀರಿ. ಕೈಯಲ್ಲಿ ಹಾಳೆ ಹಾಗೂ ಪೆನ್ನು ಹಿಡಿದು ಕೂತು ಬಿಟ್ಟಿದ್ದಾಳೆ.


ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲೂ ತುಂಬಾ ವೈರಲ್ ಆಗಿದೆ. ನೀವೂ ಕೂಡಾ ಈ ವಿಡಿಯೋ ನೋಡುವ ಕುತೂಹಲ ಇದ್ರೆ ಖಂಡಿತ ಇಲ್ಲಿ ನಾವು ನೀಡಿರುವ ವಿಡಿಯೋ ತುಣುಕನ್ನು ಗಮನಿಸಬಹುದು.


ಇದನ್ನೂ ಓದಿ: 7th Pay Commission: 5 ದಿನ ಶಾಲೆ, ಸಂಬಳ ಮಾತ್ರ ಡಬಲ್​! 7ನೇ ವೇತನ ಆಯೋಗಕ್ಕೆ ಶಿಕ್ಷಕರ ಮನವಿ


ಕಾರಲ್ಲಿ ಬರುತ್ತಲೇ ಓದುತ್ತಾ ಬಂದಿದ್ದಾಳೆ. ಪರೀಕ್ಷೆ ಹಾಲ್​ಗೆ ಅವಳು ಕಾಲಿಡುತ್ತಿದ್ದಂತೆಯೇ ಸ್ನೇಹಿತರೆಲ್ಲಾ ಖುಷಿಯಿಂದ ಕೂಗಿ ನಗುನಗುತ್ತಾ ಆಕೆಯನ್ನು ಸ್ವಾಗತಿಸಿದ್ದಾರೆ. ಪ್ರ್ಯಾಕ್ಟಿಕಲ್‌ ಎಕ್ಸಾಂಗೆ ಅವತ್ತು ನಡೆದಿತ್ತು. ತನ್ನ ವೈವಾಹಿಕ ಜೀವನಕ್ಕೆ ಎಷ್ಟು ಬದ್ಧಳಾಗಿದ್ದಾಳೋ ಅಷ್ಟೇ ಶೈಕ್ಷಣಕ್ಕೂ ಪ್ರಾಮುಖ್ಯತೆ ನೀಡಿದ್ದಾಳೆ ಎನ್ನುವುದು ಖುಷಿಯ ಸಂಗತಿ. ಎಷ್ಟೋ ಜನ ಮದುವೆ ಇದೆ ಎಂದರೆ ಪರೀಕ್ಷೆ ಬಿಟ್ಟು ಒಂದು ವರ್ಷ ಹಾಳು ಮಾಡಿಕೊಳ್ಳುತ್ತಾರೆ. ಅದಕ್ಕಿಂತ ಈ ರೀತಿ ಮಾಡುವುದು ಉತ್ತಮ ಎನ್ನೋದಕ್ಕೆ ಇವಳು ಉದಾಹರಣೆಯಾಗಿದ್ದಾಳೆ.




ಸಂತೋಷವಾಗಿ ಆಗಮಿಸಿ ಪರೀಕ್ಷೆ ಎದುರಿಸಿದ್ದಾಳೆ


ಈ ವಿಡಿಯೋದಲ್ಲಿ ಅವಳು ಎಷ್ಟು ಸಂತೋಷವಾಗಿ ಆಗಮಿಸಿ ಪರೀಕ್ಷೆ ಎದುರಿಸಿದ್ದಾಳೆ ಎನ್ನುವುದು ತಿಳಿಯುತ್ತದೆ. ನಿಜಕ್ಕೂ ಈ ಘಟನೆ ನಡೆದಿದ್ದು ಎಲ್ಲಿ ಎಂದು ನೀವು ಕೇಳೋದಾದರೆ ಇದು ನಡೆದಿರುವುದು. ಕೇರಳದ ಬೆಥನಿ ನವಜೀವನ್ ಕಾಲೇಜ್ ಆಫ್ ಫಿಸಿಯೋಥೆರಪಿಯಲ್ಲಿ ಇವಳು ಮೂಲತಃ ಕೇರಳದವಳು. ಈಕೆ ಮದುವೆ ಸೀರೆಯಲ್ಲೇ ಲ್ಯಾಬ್ ಕೋಟ್ ಹಾಗೂ ಸ್ಟೆತಸ್ಕೋಪ್ ಹಾಕಿರುವುದು ಮಜವಾಗಿದೆ.




ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ವೀಡಿಯೋದಲ್ಲಿ ಹಳದಿ ಸೀರೆಯನ್ನುಟ್ಟು, ಮದುವೆಯ ಆಭರಣ ಹಾಗೂ ಮೇಕಪ್ ಮಾಡಿಕೊಂಡೇ ಆಗಮಿಸಿದ್ದಾಳೆ. ಆಕೆ ಪರೀಕ್ಷೆ ಹಾಗೂ ಮದುವೆ ಒಂದೇ ದಿನದಲ್ಲಿ ಎಂಬ ಟೈಟಲ್ ಹಾಕಿ ಅವಳ ಸ್ನೇಹಿತರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಎಷ್ಟೋ ಜನ ಕಾಮೆಂಟ್​ನಲ್ಲಿ ವಧು ಪರೀಕ್ಷೆ ಬರೆದಿದ್ದಕ್ಕೆ ಶ್ಲಾಘಿಸಿದ್ದಾರೆ.


ಮಕ್ಕಳು ಹುಟ್ಟಿದ ನಂತರ ಎಷ್ಟೋ ಮಹಿಳೆಯರು ತಮ್ಮ ಶಿಕ್ಷಣ ಪಡೆಯುತ್ತಾರೆ


ಮದುವೆ ಮಾಡಿಕೊಂಡು ಮಕ್ಕಳು ಹುಟ್ಟಿದ ನಂತರ ಎಷ್ಟೋ ಮಹಿಳೆಯರು ತಮ್ಮ ಓದನ್ನು ಮುಂದುವರೆಸಿ ಪದವಿ ಪೂರ್ಣಗೊಳಿಸಿ ಕೆಲಸ ಗಿಟ್ಟಿಸಿರುವ ಉದಾಹರಣೆಗಳು ನಮ್ಮಲ್ಲಿ ಇವೆ ಅಂತ ಹೇಳಬಹುದು. ಅನೇಕ ಕಷ್ಟಗಳ ನಡುವೆ ಸಹ ತಮ್ಮ ಶಿಕ್ಷಣವನ್ನು ಪೂರ್ತಿ ಮಾಡಿ ಕೆಲಸ ಗಿಟ್ಟಿಸಿಕೊಂಡು ಸಾಧನೆ ಮಾಡಿರುವವರ ಉದಾಹರಣೆಗಳು ನಮ್ಮ ನಿಮ್ಮ ಮಧ್ಯೆ ತುಂಬಾನೇ ಇವೆ. ಹೀಗೆ ಇನ್ನೊಂದು ಉತ್ತಮ ಕಾರ್ಯಕ್ಕೆ ಈ ಮದುಮಗಳು ಸಾಕ್ಷಿಯಾಗಿದ್ದಾಳೆ.

First published: