ಯಾವುದೇ ರಾಜ್ಯ ಸರ್ಕಾರಕ್ಕೆ ಆಯಾ ರಾಜ್ಯದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಎಷ್ಟು ಮಹತ್ವದ್ದಾಗಿರುತ್ತದೆಯೋ, ಅಷ್ಟೇ ಮುಖ್ಯ ಅಲ್ಲಿನ ಜನರಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು (Education) ನೀಡುವುದು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇಂತಹದೇ ಗುರಿಯನ್ನು ಇಟ್ಟುಕೊಂಡು ಕೆಲಸ (Work) ಮಾಡುತ್ತಿದೆ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸರ್ಕಾರ. ಇಲ್ಲಿಯವರೆಗೆ ದೆಹಲಿ ಸರ್ಕಾರದ ಪ್ರತಿ ಬಜೆಟ್ ನಂತೆ ಶಿಕ್ಷಣಕ್ಕೆ ಅತಿ ಹೆಚ್ಚು ಶೇಕಡಾವಾರು ಹಂಚಿಕೆ ಮಾಡಲಾಗಿದೆ. 78,800 ಕೋಟಿ ರೂಪಾಯಿಗಳಲ್ಲಿ 21 ಪ್ರತಿಶತದಷ್ಟು ಭಾಗವನ್ನು ಶಿಕ್ಷಣ ವ್ಯವಸ್ಥೆ ಸುಧಾರಣೆಗೆ (Improvmet) ಮೀಸಲಿಟ್ಟಿದ್ದಾರೆ.
ಪಠ್ಯಕ್ರಮದಲ್ಲಿ ವಿದೇಶಿ ಭಾಷೆಗಳನ್ನು ಸೇರಿಸಲಿದೆಯಂತೆ ದೆಹಲಿ ಸರ್ಕಾರ
ಆಮ್ ಆದ್ಮಿ ಪಾರ್ಟಿ (ಎಎಪಿ) ಸರ್ಕಾರದ ಪ್ರಮುಖ ಯೋಜನೆಗಳಾಗಿ ಪರಿಗಣಿಸಲಾದ ವಿಶೇಷ ಉತ್ಕೃಷ್ಟತೆಯ ಶಾಲೆಗಳನ್ನು ರಚಿಸುವತ್ತ ಗಮನ ಹರಿಸಿರುವ ಸರ್ಕಾರ, ಈಗ ಫ್ರೆಂಚ್, ಜರ್ಮನ್, ಜಪಾನೀಸ್ ಮತ್ತು ಸ್ಪ್ಯಾನಿಷ್ ನಂತಹ ವಿದೇಶಿ ಭಾಷೆಗಳನ್ನು ಪಠ್ಯಕ್ರಮದ ಭಾಗವಾಗಿ ಸೇರಿಸಲಿದೆಯಂತೆ.
ಈ ಶಾಲೆಗಳು ಎಲ್ಲಾ ಸರ್ಕಾರಿ ಶಾಲೆಗಳಿಗಿಂತ ಉತ್ತಮ ಮೂಲಸೌಕರ್ಯವನ್ನು ಹೊಂದಿವೆಯಂತೆ. ಈ ಪ್ರವೇಶ ಪರೀಕ್ಷೆಯ ನಂತರ ವಿದ್ಯಾರ್ಥಿಗಳು ಒಂಬತ್ತನೇ ತರಗತಿಗೆ ಪ್ರವೇಶ ಪಡೆಯಬಹುದು.
ಇವರೆಲ್ಲರೂ ನವದೆಹಲಿ ಬೋರ್ಡ್ ಆಫ್ ಸ್ಕೂಲ್ ಎಜುಕೇಷನ್ (ಡಿಬಿಎಸ್ಇ) ಗೆ ಸಂಯೋಜಿತರಾಗುತ್ತಾರೆ. ಈ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಸ್ಟೆಮ್, ಪ್ರದರ್ಶನ ಕಲೆಗಳು, ಮಾನವಿಕಗಳು, ಉದ್ಯಮಶೀಲತೆ ಮತ್ತು ಸಶಸ್ತ್ರ ಪಡೆಗಳ ತಯಾರಿಯಂತಹ ತಮ್ಮ ಆಯ್ಕೆಯ ಅಧ್ಯಯನ ಕ್ಷೇತ್ರಗಳಲ್ಲಿ ಪರಿಣತಿ ಪಡೆಯಲು ಸಹಾಯ ಮಾಡಲಿದೆ.
ಇದನ್ನೂ ಓದಿ: Students: ರಂಗಾಯಣ ಬೇಸಿಗೆ ಶಿಬಿರಕ್ಕೆ ನಿಮ್ಮ ಮಕ್ಕಳನ್ನು ಕಳಿಸಬೇಕಾ? ಹಾಗಾದ್ರೆ ಹೀಗೆ ಮಾಡಿ
ಈ ಯೋಜನೆ ಬಗ್ಗೆ ಏನ್ ಹೇಳ್ತಾರೆ ನೋಡಿ ಹಣಕಾಸು ಸಚಿವ?
"ಎಸ್ಒಎಸ್ಇಯಲ್ಲಿನ ವಿಶೇಷತೆಗಳನ್ನು ಜಾಗತಿಕ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿರುವುದರಿಂದ, ನಾವು ಮಕ್ಕಳಿಗೆ ಫ್ರೆಂಚ್, ಜರ್ಮನ್, ಜಪಾನೀಸ್ ಮತ್ತು ಸ್ಪ್ಯಾನಿಷ್ ಭಾಷೆಗಳನ್ನು ಸಹ ಕಲಿಸುತ್ತಿದ್ದೇವೆ.
ಈ ಪ್ರಾಯೋಗಿಕ ಯೋಜನೆಯಿಂದ ಕಲಿತ ಕಲಿಕೆಯ ಆಧಾರದ ಮೇಲೆ, ಮುಂಬರುವ ವರ್ಷಗಳಲ್ಲಿ ಇದನ್ನು ಎಲ್ಲಾ ಶಾಲೆಗಳಿಗೆ ವಿಸ್ತರಿಸುವುದನ್ನು ನಾವು ಪರಿಗಣಿಸುತ್ತೇವೆ" ಎಂದು ಹಣಕಾಸು ಸಚಿವ ಕೈಲಾಶ್ ಗೆಹ್ಲೋಟ್ ಬುಧವಾರ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು.
ಹಲವು ವರ್ಷಗಳಿಂದ, ಕೆಲವು ದೆಹಲಿ ಸರ್ಕಾರಿ ಶಾಲೆಗಳು, ಸಾಂಪ್ರದಾಯಿಕವಾಗಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಗೆ ಸಂಯೋಜಿತವಾಗಿದ್ದರೂ, ಈ ಹಿಂದೆ ತಮ್ಮದೇ ಆದ ಉಪಕ್ರಮದಿಂದ ವಿದೇಶಿ ಭಾಷೆಗಳನ್ನು ಕಲಿಸಿವೆ. ನೀತಿಯಲ್ಲಿನ ಬದಲಾವಣೆಯು ಈಗ ಎಲ್ಲಾ ವಿಶೇಷ ಶಾಲೆಗಳಲ್ಲಿ ಇದನ್ನು ಸಕ್ರಿಯಗೊಳಿಸುತ್ತದೆ.
ಈ ವರ್ಷ ಈ ಸಂಖ್ಯೆ 37ಕ್ಕೆ ಏರುತ್ತದೆ
2021ರಲ್ಲಿ ನಗರದಲ್ಲಿ 20 ವಿಶೇಷ ಶಾಲೆಗಳಿವೆ, ಈ ವರ್ಷ ಈ ಸಂಖ್ಯೆ 37ಕ್ಕೆ ಏರುತ್ತದೆ ಎಂದು ಗೆಹ್ಲೋಟ್ ಹೇಳಿದರು. "ವಿಶೇಷ ಪ್ರತಿಭೆಯನ್ನು ಹೊಂದಿರುವ ದೆಹಲಿಯ ಪ್ರತಿಯೊಂದು ಮಗುವೂ ತನ್ನ ಮನೆಗೆ ಹತ್ತಿರವಿರುವ ಎಸ್ಒಎಸ್ಇಯಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗಬೇಕು ಅನ್ನೋದು ನಮ್ಮ ಗುರಿಯಾಗಿದೆ.
ಎಸ್ಒಎಸ್ಇ ಅಡಿಯಲ್ಲಿ ಸ್ಟೆಮ್ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ವಿಶೇಷತೆಯ ಮೊದಲ ಬ್ಯಾಚ್ ನ 676 ಮಕ್ಕಳು ಡಿಬಿಎಸ್ಇ ನಡೆಸುವ 12ನೇ ಬೋರ್ಡ್ ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ.
ಈ ಮಕ್ಕಳಲ್ಲಿ, ಜೆಇಇ ಮೇನ್ಸ್ ಗೆ ಹಾಜರಾದ 253 ಮಕ್ಕಳಲ್ಲಿ ಅರ್ಧದಷ್ಟು ಮಕ್ಕಳು ಜೆಇಇ ಅಡ್ವಾನ್ಸ್ಡ್ ಗೆ ಈಗಾಗಲೇ ಅರ್ಹತೆ ಪಡೆದಿದ್ದಾರೆ" ಎಂದು ಅವರು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ದೆಹಲಿ ಸರ್ಕಾರ ಮಾಡಿರುವ ಮತ್ತೊಂದು ಬದಲಾವಣೆ ನೋಡಿ..
ದೆಹಲಿ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಮತ್ತೊಂದು ದೊಡ್ಡ ಘೋಷಣೆಯೆಂದರೆ ಅದು ಉದ್ಯಮ ಮತ್ತು ಶಾಲೆಗಳ ನಡುವಿನ ಸಹಯೋಗ ಅಂತಾನೆ ಹೇಳಬಹುದು.
ಮಕ್ಕಳ ಉತ್ತಮ ಭವಿಷ್ಯವನ್ನು ನಿರ್ಮಿಸಲು ಕೇಜ್ರಿವಾಲ್ ಸರ್ಕಾರ ಕೈಗೊಂಡ ಹೊಸ ನಿಯಮ
"ಮಕ್ಕಳ ಉತ್ತಮ ಭವಿಷ್ಯವನ್ನು ನಿರ್ಮಿಸಲು ಕೇಜ್ರಿವಾಲ್ ಸರ್ಕಾರವು 12 ಹೊಸ ಅನ್ವಯಿಕ ಕಲಿಕೆಯ ಶಾಲೆಗಳನ್ನು ಪ್ರಾರಂಭಿಸಿದೆ. ಸಾಂಪ್ರದಾಯಿಕ ವಿಷಯಗಳನ್ನು ಹೊರತುಪಡಿಸಿ, ಈ ಶಾಲೆಗಳು ವಿದ್ಯಾರ್ಥಿಗಳಿಗೆ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಮಾನ್ಯತೆಯನ್ನು ಒದಗಿಸಲು ವೃತ್ತಿಪರ ಕೈಗಾರಿಕಾ ವ್ಯವಸ್ಥೆಯನ್ನು ಹೊಂದಿರುತ್ತವೆ.
ಈ ಅನ್ವಯಿಕ ಕಲಿಕೆಯ ಶಾಲೆಗಳು ಡಿಬಿಎಸ್ಇಗೆ ಸಂಯೋಜಿಸಲ್ಪಡುತ್ತವೆ. 9ನೇ ತರಗತಿಯಿಂದ ಈ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಕೌಶಲ್ಯ ವಿಷಯಗಳನ್ನು ಕಡ್ಡಾಯವಾಗಿ ಪರಿಚಯಿಸಲಾಗುವುದು.
ಪ್ರತಿ ವಿದ್ಯಾರ್ಥಿಗಳು 9 ಮತ್ತು 10ನೇ ತರಗತಿಯಲ್ಲಿ ತಲಾ ಮೂರು ಕೌಶಲ್ಯ ವಿಷಯಗಳನ್ನು ಮತ್ತು 11 ಮತ್ತು 12ನೇ ತರಗತಿಯಲ್ಲಿ ತಲಾ ಒಂದು ಕೌಶಲ್ಯ ವಿಷಯವನ್ನು ಅಧ್ಯಯನ ಮಾಡುತ್ತಾರೆ.
ಸಾಂಪ್ರದಾಯಿಕ ವಿಷಯಗಳ ಜೊತೆಗೆ, ಪ್ರತಿ ಮಗುವೂ ಅಂತಹ ಕೌಶಲ್ಯಗಳನ್ನು ಕಲಿಯಬೇಕು, ಅದು ಅವರನ್ನು ಹೊಸ ಯುಗದ ಉದ್ಯೋಗಗಳಿಗೆ ಸಿದ್ಧಪಡಿಸುತ್ತದೆ" ಎಂದು ಸಚಿವರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ