• Home
  • »
  • News
  • »
  • jobs
  • »
  • KCET ಎರಡನೇ ಸುತ್ತಿನ ಸೀಟು ಹಂಚಿಕೆ ವಿವರ ಪ್ರಕಟ, ಇಲ್ಲಿದೆ ಮಾಹಿತಿ

KCET ಎರಡನೇ ಸುತ್ತಿನ ಸೀಟು ಹಂಚಿಕೆ ವಿವರ ಪ್ರಕಟ, ಇಲ್ಲಿದೆ ಮಾಹಿತಿ

KCET

KCET

ಎಲ್ಲಾ ದಿನಾಂಕಗಳನ್ನು ಆಧರಿಸಿ ನಿಮಗೆ ಯಾವುದು ಅನುಕೂಲ ಮತ್ತು ಯಾವುದು ಅಗತ್ಯ ಎಂಬುದನ್ನು ಗಮನಿಸಿ ಆಯ್ಕೆ ಮಾಡಿ. ಹಾಗೂ ವಿವರಗಳನ್ನು ತಿಳಿಯಲು ಮುಂದೆ ಓದಿ.

  • News18 Kannada
  • Last Updated :
  • Karnataka, India
  • Share this:

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪದವಿಪೂರ್ವ ಕೋರ್ಸ್‌ಗಳಿಗೆ ಕೆಸಿಇಟಿ ಸುತ್ತಿನ 2 ಸೀಟು ಹಂಚಿಕೆ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ತಮ್ಮ CET ಸಂಖ್ಯೆಯನ್ನು ಬಳಸಿಕೊಂಡು ಅಧಿಕೃತ ವೆಬ್‌ಸೈಟ್ ನಲ್ಲಿ ತಮ್ಮ KCET ಹಂಚಿಕೆ ಫಲಿತಾಂಶಗಳನ್ನು ಪರಿಶೀಲಿಸಬಹುದು. ಈ ಕುರಿತು ಇನ್ನಷ್ಟು ಮಾಹಿತಿ ಇಲ್ಲಿ ನೀಡಲಾಗಿದೆ ಗಮನಿಸಿ ಮತ್ತು ನಿಮಗೆ ಹಂಚಿಕೆಯಾದ ಸೀಟ್​ನ ವಿವರ ಪಡೆಯಿರಿ. 


ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ಫಾರ್ಮಸಿ, ನ್ಯಾಚುರೋಪತಿ ಮತ್ತು ಯೋಗ ಮುಂತಾದ ಕೋರ್ಸ್‌ಗಳ ಪ್ರವೇಶಕ್ಕಾಗಿ, ಎರಡನೇ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾದ್ದು ಕೆಸಿಇಟಿ ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಸೀಟುಗಳನ್ನು ಹಂಚಿಕೆ ಮಾಡಿದ ಅಭ್ಯರ್ಥಿಗಳು ನವೆಂಬರ್ 24 (ರಾತ್ರಿ 11.59) ವರೆಗೆ ಆಯ್ಕೆಗಳನ್ನು ಚಲಾಯಿಸಲು ಮತ್ತು ನವೆಂಬರ್ 23-25 ​​ರಿಂದ ಶುಲ್ಕವನ್ನು ಪಾವತಿಸಲು ಸಾಧ್ಯವಾಗುತ್ತದೆ. ಆಯ್ಕೆ 1 ಅಭ್ಯರ್ಥಿಗಳು ಕಾಲೇಜುಗಳಲ್ಲಿ ವರದಿ ಮಾಡಲು ನವೆಂಬರ್ 26 ಕೊನೆಯ ದಿನವಾಗಿದೆ.


KCET ಸೀಟು ಹಂಚಿಕೆ ಫಲಿತಾಂಶ 2022 ಪರಿಶೀಲಿಸಲು ಕ್ರಮಗಳು:
1. ಅಧಿಕೃತ ವೆಬ್‌ಸೈಟ್ cetonline.karnataka.gov.in/kea/ ಗೆ ಭೇಟಿ ನೀಡಿ.
2. ಮುಖಪುಟದಲ್ಲಿ, ಎರಡನೇ ಸುತ್ತಿನ ಸೀಟ್ ಹಂಚಿಕೆ ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ.
3. ನಿಮ್ಮ ಸಿಇಟಿ ಸಂಖ್ಯೆಯನ್ನು ನಮೂದಿಸಿ.
4. ಕೆಸಿಇಟಿ 2ನೇ ಸುತ್ತಿನ ಸೀಟು ಹಂಚಿಕೆ ತೆರೆಯ ಮೇಲೆ ಕಾಣಿಸುತ್ತದೆ.
5. ಡೌನ್‌ಲೋಡ್ ಮಾಡಿ ಮತ್ತು ಪರಿಶೀಲಿಸಿ.
6. ಕೆಸಿಇಟಿ ಎರಡನೇ ಸುತ್ತಿನ ಸೀಟು ಹಂಚಿಕೆಯನ್ನು ಪರಿಶೀಲಿಸಲು ನೇರ ಲಿಂಕ್ ಇಲ್ಲಿದೆ.


ಇದನ್ನೂ ಓದಿ: ವಿದ್ಯಾಸಿರಿ ಸ್ಕಾಲರ್​ ಶಿಪ್​ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ, ಈ ದಿನಾಂಕದೊಳಗೆ ಅಪ್ಲೈ ಮಾಡಿ


ಪ್ರಕಟಣೆ ಕುರಿತು ಇಲ್ಲಿದೆ ವಿವರ
1. ಚಾಯ್ಸ್ -1 ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಕಾಲೇಜಿನಲ್ಲಿ ಪ್ರವೇಶ ಪಡೆಯಲು ಕೊನೆಯ ದಿನಾಂಕ - 26-11-2022 ಆಗಿರುತ್ತದೆ.
2. ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳುವುದು, ಚಾಯ್ಸ್ -1 ನ್ನು ಆಯ್ಕೆ ಮಾಡಿಕೊಂಡು ಅಭ್ಯರ್ಥಿಗಳು ಮಾತ್ರ - 23-11-2022 ರಿಂದ 25-11-2022 ರ ವರೆಗೆ ಅವಕಾಶವಿರುತ್ತದೆ.
3. ಸೀಟ್‌ ಮ್ಯಾಟ್ರಿಕ್ಸ್ ಪ್ರಕಟಣೆ - 17-11-2022ರ 4 ಗಂಟೆಯ ನಂತರ ಲಭ್ಯವಾಗುತ್ತದೆ.
4. ಅರ್ಹ ಅಭ್ಯರ್ಥಿಗಳು ಆಯ್ಕೆಗಳನ್ನು ಬದಲಾಯಿಸಲು ಅವಕಾಶ - 17-11-2022 ರಿಂದ 19-11-2022ರ ವರೆಗೆ ಇರುತ್ತದೆ.
5. ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟಣೆ ದಿನಾಂಕ - 21-11-2022ರ 4 ಗಂಟೆಯ ನಂತರ ಇರುತ್ತದೆ.
6. ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಚಾಯ್ಸ್‌ ಅನ್ನು ಆಯ್ಕೆ ಮಾಡಲು - 22-11-2022 ರಿಂದ 24-11-2022 ರವರೆಗೆ ಮಾತ್ರ.
7. ಶುಲ್ಕ ಪಾವತಿ ಚಾಯ್ಸ್ -1 ಅಥವಾ ಚಾಯ್ಸ್- 2 ನ್ನು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳಿಗೆ ಮಾತ್ರ - 23-11-2022 ರಿಂದ 25-11-2022 ರವರೆಗೆ ಲಭ್ಯ.


ಇದನ್ನೂ ಓದಿ: ಅತ್ಯುತ್ತಮ ಶಿಕ್ಷಣ ನೀಡುವ ವಿಶ್ವದ ಐದು ಅಗ್ರ ದೇಶಗಳ ಪಟ್ಟಿ ಇಲ್ಲಿದೆ!


ಸೀಟ್‌ ಮ್ಯಾಟ್ರಿಕ್ಸ್‌ನಲ್ಲಿ ಸೀಟುಗಳ ಲಭ್ಯತೆಯನ್ನು ತೋರಿಸದಿದ್ದರು ಸಹ ಅಭ್ಯರ್ಥಿಗಳು ಆದ್ಯತೆಗಳನ್ನು ಬದಲಾಯಿಸಲು ಅಥವಾ ಮಾರ್ಪಡಿಸಲು ಸಲಹೆ ನೀಡಲಾಗಿದೆ. ಸೀಟು ಹಂಚಿಕೆ ಕಾರ್ಯದಲ್ಲಿ ಉದ್ಭವಿಸುವ ಸೀಟುಗಳನ್ನು ಸಹ ಹಂಚಿಕೆ ಮಾಡುವುದರಿಂದ ಅಭ್ಯರ್ಥಿಗಳು ಆಯ್ಕೆಗಳನ್ನು ನಮೂದಿಸಿದ್ದಲ್ಲಿ ಅಂತಹ ಸೀಟುಗಳನ್ನು ಪಡೆಯಬಹುದಾಗಿದೆ ಎಂದು ತಿಳಿದುಬಂದಿದೆ.


ಅಧಿಕೃತ ಜಾಲತಾಣದಲ್ಲಿ ಮಾಹಿತಿ ಲಭ್ಯ
ಈ ಎಲ್ಲಾ ದಿನಾಂಕಗಳನ್ನು ಆಧರಿಸಿ ನಿಮಗೆ ಯಾವುದು ಅನುಕೂಲ ಮತ್ತು ಯಾವುದು ಅಗತ್ಯ ಎಂಬುದನ್ನು ಗಮನಿಸಿ ಆಯ್ಕೆ ಮಾಡಿ. ಹಾಗೂ ವಿವರಗಳನ್ನು ಅಧಿಕೃತ ವೆಬ್​ಸೈಟ್​ನಲ್ಲಿ ಪರಿಶೀಲಿಸಿ. ಇಲ್ಲಿ ನಿಖರವಾದ ಮಾಹಿತಿ ಲಭ್ಯವಾಗುತ್ತದೆ. ಅಷ್ಟೇ ಅಲ್ಲ ಈ ಮಾಹಿತಿಯ ಕುರಿತು ಪಿಡಿಎಪ್​ ಕೂಡ ಲಭ್ಯವಿದೆ ಅದನ್ನೂ ಸಹ ನೀವು ಒಮ್ಮೆ ಚೆಕ್​ ಮಾಡಬಹದು.

First published: