ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) 2023 ರ ಪ್ರವೇಶ ಪತ್ರವನ್ನು ಇಂದು ಬಿಡುಗಡೆ ಮಾಡುತ್ತದೆ. ನೋಂದಾಯಿಸಿದ ಅಭ್ಯರ್ಥಿಗಳು ತಮ್ಮ ಹಾಲ್ ಟಿಕೆಟ್‌ಗಳನ್ನು ಅಧಿಕೃತ ವೆಬ್‌ಸೈಟ್- kea.kar.nic.in ಅಥವಾ cetonline.karnataka.gov.in ನಿಂದ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ನೀವೂ ಈ ಬಾರಿ ಪ್ರವೇಶ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿದ್ದರೆ ಈ ಪರೀಕ್ಷೆ ಹಾಲ್ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಿ. ಅಡ್ಮಿಟ್ ಕಾರ್ಡ್ ಬಿಡುಗಡೆಯಾದ ನಂತರ ನೀವು ಈ ಮೇಲೆ ನಾವು ನೀಡಿರುವ ಲಿಂಕ್ ಬಳಸಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ನೀವು ಡೌನ್‌ಲೋಡ್ ಮಾಡಿಕೊಳ್ಳಲು ಏನು ಮಾಡಬೇಕಾಗುತ್ತದೆ ಎಂಬ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ. ಆದಷ್ಟು ಬೇಗ ಈ ಹಂತಗಳನ್ನು ಪಾಲಿಸಿ ಡೌನ್‌ಲೋಡ್ ಮಾಡಿ. ಪ್ರವೇಶ ಪತ್ರಗಳನ್ನು ಬೆಳಗ್ಗೆ 11 ಗಂಟೆಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿತ್ತು. KCET 2023 ಅನ್ನು ಮೇ 20 ಮತ್ತು 21 ರಂದು ನಡೆಸಲಾಗುವುದು ಎಂದು ತಿಳಿಸಲಾಗಿದೆ. ಈ ದಿನಾಂಕದಂದೇ ಪರೀಕ್ಷೆಗಳು ನಡೆಯುತ್ತವೆ. ಮತ್ತು ಜೂನ್ 12 ರಂದು ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ.
ಒಮ್ಮೆ ಬಿಡುಗಡೆಯಾದ ನಂತರ, ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಹಾಲ್ ಟಿಕೆಟ್‌ಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಪ್ರವೇಶ ಕಾರ್ಡ್‌ನಲ್ಲಿ ನಮೂದಿಸಲಾದ ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು ಮತ್ತು ಯಾವುದೇ ಕಾಗುಣಿತ ತಪ್ಪುಗಳು ಅಥವಾ ಇನ್ನಿತರ ದೋಷಗಳು ಏನಾದರೂ ಇದೆಯೋ? ಇಲ್ಲವೋ ಎಂಬುದನ್ನು ನೀವು ಗಮನಿಸಬೇಕಾಗುತ್ತದೆ.
ಇದನ್ನೂ ಓದಿ: LKGಗೆ ಮಕ್ಕಳನ್ನು ಸೇರಿಸುವ ಪೋಷಕರೆ ಇಲ್ಲಿ ಗಮನಿಸಿ; ಇಷ್ಟು ವರ್ಷ ಆಗಿದ್ರೆ ಮಾತ್ರ ಅಡ್ಮಿಷನ್ ಮಾಡಿ
ವಿವಿಧ ಸರ್ಕಾರಿ, ಖಾಸಗಿ ಮತ್ತು ಖಾಸಗಿ ಅನುದಾನರಹಿತ ಸಂಸ್ಥೆಗಳಲ್ಲಿ ನೀಡಲಾಗುವ ಪದವಿಪೂರ್ವ ಕೋರ್ಸ್ಗಳಿಗೆ ಪ್ರವೇಶಕ್ಕಾಗಿ ರಾಜ್ಯ ಮಟ್ಟದ ಪರೀಕ್ಷೆಯನ್ನು ವಾರ್ಷಿಕವಾಗಿ ನಡೆಸಲಾಗುತ್ತದೆ. ಇದರಲ್ಲಿ ಹಲವಾರು ವಿದ್ಯಾರ್ಥಿಗಳು ಭಾಗಿಯಾಗುತ್ತಾರೆ.
ಅರ್ಜಿ ಸಲ್ಲಿಸಲು ಈ ಹಂತಗಳನ್ನು ಫಾಲೋಮಾಡಿ
ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ — kea.kar.nic.in.
ಹಂತ 2: ಮುಖಪುಟದಲ್ಲಿ, ಪ್ರವೇಶ ಕಾರ್ಡ್‌ಗಾಗಿ ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ 3: ಲಾಗಿನ್ ಮಾಡಲು ಮತ್ತು ಪ್ರವೇಶ ಕಾರ್ಡ್‌ಗಳನ್ನು ಪ್ರವೇಶಿಸಲು ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
ಹಂತ 4: ನೀವು ಹಾಲ್ಟಿಕೆಟ್ ಅನ್ನು ನೋಡಲು ಸಾಧ್ಯವಾಗುತ್ತದೆ.
ಹಂತ 5: ಭವಿಷ್ಯದ ಉಲ್ಲೇಖಕ್ಕಾಗಿ ಡೌನ್‌ಲೋಡ್ ಮಾಡಿ ಮತ್ತು ಸೇವ್ ಮಾಡಿ.
PUC ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಮಾಹಿತಿ
2nd PUCಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಹೊಸದೊಂದು ಅವಕಾಶ ಕಲ್ಪಿಸಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ವಿದ್ಯಾರ್ಥಿಗಳಿಗೆ ಒಂದು ಎರಡನೇ ಅವಕಾಶ ನೀಡಲಾಗಿದೆ. ಪೂರಕ ಪರೀಕ್ಷೆ ನಡೆಸುವ ಮೂಲಕ ಯಾರೆಲ್ಲಾ ಫೇಲ್ ಆಗಿದ್ದಾರೋ ಅವರೆಲ್ಲರಿಗೂ ಇನ್ನೊಮ್ಮೆ ಪರೀಕ್ಷೆ ನಡೆಸಿ ಅವರಿಗೆ ಪಾಸ್ ಆಗಲು ಅನುವುಮಾಡಿಕೊಡಲಾಗಿದೆ. ಈ ಹಿಂದೆ ಶುಲ್ಕ ಪಾವತಿಸುವ ದಿನಾಂಕವನ್ನು 2 ಮೇ 2023ರಂದು ನಿಗದಿಪಡಿಸಲಾಗಿತ್ತು. ಆದರೆ 6 ಮೇ 2023ರ ವರೆಗೆ ವಿಸ್ತರಿಸಲಾಗಿದೆ. ಯಾರೆಲ್ಲಾ ಇನ್ನೂ ಶುಲ್ಕ ಪಾವತಿಸಿಲ್ಲವೋ ಅವರಿಗೆ ಈಗ ಅವಕಾಶ ಇದೆ.
ಪುನರಾವರ್ತಿತ ವಿದ್ಯಾರ್ಥಿಗಳು ಪಾವತಿಸಬೇಕಾದ ಪರೀಕ್ಷಾ ಶುಲ್ಕ ಹೀಗಿದೆ 3 ಅಥವಾ ಹೆಚ್ಚಿನ ವಿಷಯಗಳಿಗೆ- 400 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಪೂರಕ ಪರೀಕ್ಷೆಯ ವೇಳಾಪಟ್ಟಿ ಅಧಿಕೃತ ವೆಬ್‌ಸೈಟ್ www.Kseab.karnataka.gov.in ನಲ್ಲೂ ವೇಳಾಪಟ್ಟಿ ಪ್ರಕಟಗೊಂಡಿದೆ. ವಿದ್ಯಾರ್ಥಿಗಳು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಶೀಲಿಸಬಹುದು.ನೀವು ನಿಗದಿತ ದಿನಾಂಕದೊಳಗೆ ಪರೀಕ್ಷಾ ಶುಲ್ಕವನ್ನು ಕಟ್ಟಿಲ್ಲ ಎಂದಾದರೆ ದಿನಕ್ಕೆ 50 ರೂ ದಂಡ ವಿಧಿಸುತ್ತಾ ಹೋಗಲಾಗುತ್ತದೆ. ಮೇ 8 2023ರ ನಂತರ ಯಾರಿಗೂ ಶುಲ್ಕ ಕಟ್ಟಲು ಅವಕಾಶ ಇರುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ