ಪರೀಕ್ಷೆಯಲ್ಲಿ (Exam) ನಕಲು ಮಾಡೋದು ಪ್ರಶ್ನೆ ಪತ್ರಿಕೆ ಲೀಕ್ ಮಾಡೋದು ಇದೆಲ್ಲಾ ವಿದ್ಯಾರ್ಥಿಗಳು ಮಾಡುವ ತಪ್ಪಾದರೆ. ಕಾರವಾರದ ಕಾಲೇಜೊಂದರಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಪಾಸ್ (Pass) ಮಾಡಬೇಕು ಎಂದಾದರೆ ಹಣ ಕೊಡಿ ಎಂದು ಕೇಳಿದ್ದಾರೆ. ಜಿಲ್ಲೆಯಲ್ಲಿರುವ ಏಕೈಕ ಸರ್ಕಾರಿ ಮೆಡಿಕಲ್ ಕಾಲೇಜು (Medical College) ಎಂಬ ಹೆಗ್ಗಳಿಕೆ ಹೊಂದಿರುವ ಕೀಮ್ಸ್ನಲ್ಲಿ (KIMS) ಇದೀಗ ಅವ್ಯವಸ್ಥೆ ತಾಂಡವವಾಡುತ್ತಿದೆ. ಇದನ್ನು ಸಾಕ್ಷಿ ಸಮೇತವಾಗಿ ಗಂಭೀರ ಆರೋಪ ಮಾಡಿದ್ದಾರೆ. ಹಾಗಾದ್ರೆ ಇಲ್ಲಿ ಆಗಿದ್ದೇನು ಎಂಬ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ರಿಮ್ಸ್ನಿಂದ ಹೊರಬಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಇವರು ಪ್ರತಿಭಟನೆ ನಡೆಸಲು ಕಾರಣ ಏನೆಂದರೆ ವಿದ್ಯಾರ್ಥಿಗಳನ್ನು ತೆರ್ಗಡೆ ಮಾಡಲು ಪೀಡಿಯಾಟ್ರಿಕ್ ವಿಭಾಗದ ಸಹಾಯಕ ಪ್ರಾಧ್ಯಾಪಕರು ಪರೀಕ್ಷೆ ಪಾಸ್ ಮಾಡುವುದಕ್ಕೆ ಹಣ ಕೇಳಿದ್ದರು ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.
ಒಬ್ಬ ವಿದ್ಯಾರ್ಥಿಯನ್ನು ಪಾಸ್ ಮಾಡಬೇಕು ಎಂದರೆ 34 ಸಾವಿರ ರೂ ನೀಡುವಂತೆ ಕೇಳಿದ್ದಾರೆ. ಅಲ್ಲದೆ ಈ ಬಗ್ಗೆ ಪ್ರಶ್ನೆ ಮಾಡಿದ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಪ್ರಾಯೋಗಿಕ ಪರೀಕ್ಷೆಗಳಲ್ಲಿ ಫೇಲ್ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಇದನ್ನೂ ಓದಿ: Study Tour: ವಿಶ್ವವಿದ್ಯಾಲಯಗಳಿಗೆ ಮಹತ್ವದ ಸೂಚನೆ ನೀಡಿದ UGC, ವಿದ್ಯಾರ್ಥಿಗಳಿಗೆ ಪ್ರವಾಸ ಭಾಗ್ಯ!
ಕ್ರಿಮ್ಸ್ ಹಾಸ್ಟೆಲ್‌ಗಳಲ್ಲಿ ಊಟದ ಟೆಂಡರ್ ಬದಲಿಸದೇ ಕಳಪೆ ಮಟ್ಟದ ಊಟ ನೀಡಲಾಗುತ್ತಿದೆ. ರಾತ್ರಿ ತುರ್ತು ಚಿಕಿತ್ಸೆಗೆ ತೆರಳಲು ಅವಕಾಶ ನೀಡುತ್ತಿಲ್ಲ. ಪುಸ್ತಕ ಖರೀದಿಗೆ ಆನ್ಲೈನ್ ಟೆಂಡರ್ ಕರೆಯುವ ನಿಯಮವಿದ್ದರೂ, ಕಾನೂನು ಬಾಹೀರವಾಗಿ 40 ಲಕ್ಷ ರೂ. ವೆಚ್ಚದ ಪುಸ್ತಕ ಖರೀದಿ ಮಾಡಲಾಗಿದೆ ಎಂದೂ ಸಹ ವಿದ್ಯಾರ್ಥಿಗಳು ದೂರಿದ್ದಾರೆ.
ಡಾ.ಕೆ. ಸುಧಾಕರ್ ಅವರು ಕಾಲೇಜಿಗೆ ಭೇಟಿ ನೀಡಿದಾಗ ವಿದ್ಯಾರ್ಥಿಗಳ ಮನವಿ
ಹಿಂದೊಮ್ಮೆ ಡಾ.ಕೆ. ಸುಧಾಕರ್ ಅವರು ಕಾಲೇಜಿಗೆ ಭೇಟಿ ನೀಡಿದಾಗ ವಿದ್ಯಾರ್ಥಿಗಳೆಲ್ಲಾ ಸ್ವ ಇಚ್ಚೆಯಿಂದ ಸಹಿ ಮಾಡಿದ ದೂರು ಪತ್ರವನ್ನು ನೀಡಿದ್ದರು ಆದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ವಿದ್ಯಾರ್ಥಿಗಳು ಬೇಸರಗೊಂಡಿದ್ದಾರೆ. ಮಾನವ ಹಕ್ಕು ಆಯೋಗ, ಜಿಲ್ಲಾಧಿಕಾರಿ, ಆರೋಗ್ಯ ಸಚಿವರು ಯಾರೇ ಬಂದರು ಯಾರಿಗೆ ದೂರು ಸಲ್ಲಿಸಿದರೂ ಸಮಸ್ಯೆಗೆ ಮಾತ್ರ ಪರಿಹಾರ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.
ಯಾರಿಗೆ ಎನೇ ದೂರು ನೀಡಿದರು ಪ್ರಯೋಜನವಿಲ್ಲ
ಯಾರಿಗೆ ಎನೇ ದೂರು ನೀಡಿದರು ಯಾವ ಪ್ರಯೋಜನವೂ ಆಗಿಲ್ಲ. ಇದನ್ನು ಹೊರತು ಪಡಿಸಿ ಇಲ್ಲಿ ಯಾವುದೇ ಮೂಲಭೂತ ಸೌಕರ್ಯವೂ ಇಲ್ಲಾ ಎಂದು ದೂರಿದ್ದಾರೆ. ಆಸ್ಪತ್ರಗೆಂದು ಬಂದ ಎಷ್ಟೋ ಜನ ಸರಿಯಾದ ಚಿಕಿತ್ಸೆ ಸಿಗದೆ ಪ್ರಾಣ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಜಿಲ್ಲೆಯಲ್ಲಿರುವ ಏಕೈಕ ಸರ್ಕಾರಿ ಮೆಡಿಕಲ್ ಕಾಲೇಜು ಎಂಬ ಹೆಗ್ಗಳಿಕೆಯೊಂದಿಗೆ ಕಳೆದ 6 ವರ್ಷಗಳಿಂದ ವೈದ್ಯಕೀಯ ಶಿಕ್ಷಣ ನೀಡುತ್ತದೆ ಆದರೂ ಸರಿಯಾದ ವ್ಯವಸ್ಥೆ ಕಲ್ಪಿಸಲಿಲ್ಲ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಕ್ರಿಮ್ಸ್ನಿಂದ ಹೊರ ಬಂದು ಮುಖ್ಯದ್ವಾರದ ಬಳಿ ಪ್ರತಿಭಟನೆ
ಈ ಸಮಸ್ಯೆಗಳನ್ನು ಸರಿಪಡಿಸುವಂತೆ ಕೋರಿ ಪ್ರತಿಭಟನೆ ಮಾಡುತ್ತಿದ್ದಾರೆ. ಕ್ರಿಮ್ಸ್ ಆಡಳಿತ ಅವ್ಯವಸ್ಥೆ ವಿರುದ್ಧ ಹಾಗೂ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ವಿದ್ಯಾರ್ಥಿಗಳು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ. ಈಗಾಗಲೇ ಒಂದು ಬ್ಯಾಚ್ ಹೊರ ಬಿದ್ದಿದ್ದು ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕ್ರಿಮ್ಸ್ನಿಂದ ಹೊರ ಬಂದು ಮುಖ್ಯದ್ವಾರದ ಬಳಿ ಜಮಾವಣೆಗೊಂಡ 50 ಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ