• Home
  • »
  • News
  • »
  • jobs
  • »
  • TET Key Answers: ಬಿಎಡ್​ ವಿದ್ಯಾರ್ಥಿಗಳ ಗಮನಕ್ಕೆ, ಶಿಕ್ಷಕರ ಅರ್ಹತಾ ಪರೀಕ್ಷೆ ಅಂತಿಮ ಕೀ ಉತ್ತರ ಪ್ರಕಟ

TET Key Answers: ಬಿಎಡ್​ ವಿದ್ಯಾರ್ಥಿಗಳ ಗಮನಕ್ಕೆ, ಶಿಕ್ಷಕರ ಅರ್ಹತಾ ಪರೀಕ್ಷೆ ಅಂತಿಮ ಕೀ ಉತ್ತರ ಪ್ರಕಟ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

2022ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಅಂತಿಮ ಕೀ ಉತ್ತರಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.

  • News18 Kannada
  • Last Updated :
  • Karnataka, India
  • Share this:

2022ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ (Karnataka Teacher Eligibility Test exams 2022) ಅಂತಿಮ ಕೀ ಉತ್ತರಗಳನ್ನು (Final key Answer) ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ (Released) ಮಾಡಿದೆ. ಟಿಇಟಿ 2022 ಕೀ ಉತ್ತರ ಪರಿಶೀಲಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ. ಈ ಮಾಹಿತಿ ಅನುಸಾರ ನೀವು ನಿಮ್ಮ ಉತ್ತರವನ್ನು ಪರೀಕ್ಷಿಸಿಕೊಳ್ಳಬಹುದು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಟ್ವೀಟ್​ ಕೂಡ ಮಾಡಿದ್ದಾರೆ.


ನವೆಂಬರ್ 06ರಂದು 35 ಶೈಕ್ಷಣಿಕ ಜಿಲ್ಲೆಗಳ 589 ಪರೀಕ್ಷಾ ಕೇಂದ್ರಗಳಲ್ಲಿ ಪತ್ರಿಕೆ-1 ಮತ್ತು 781 ಪರೀಕ್ಷಾ ಕೇಂದ್ರಗಳಲ್ಲಿ ಪತ್ರಿಕೆ-2 ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗಳು ನಡೆದಿತ್ತು. ಅದಾದ ನಂತರ ನವೆಂಬರ್ 11ರಂದು ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಿ ಆಕ್ಷೇಪಣೆಗಳಿದ್ದಲ್ಲಿ ಅದಕ್ಕೆ ಅವಕಾಶ ನೀಡಲಾಗಿತ್ತು. ಆದ್ರೆ, ಇದೀಗ ಟಿಇಟಿ ಪರೀಕ್ಷೆಯ ಪತ್ರಿಕೆ 1 ಮತ್ತು ಪತ್ರಿಕೆ 2ರ ಫೈನಲ್ ಕೀ ಉತ್ತರಗಳನ್ನು ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ ನಲ್ಲಿ ಕೀ ಉತ್ತರಗಳನ್ನು ನೋಡಬಹುದಾಗಿದೆ. ನೋಡಲು ಇಲ್ಲಿ ಕ್ಲಿಕ್ ಮಾಡಿ.


ಪರೀಕ್ಷೆ ವಿವರ
ರಾಜ್ಯಾದ್ಯಂತ ಶಿಕ್ಷಕರ ಅರ್ಹತಾ ಪರೀಕ್ಷೆ ನವೆಂಬರ್ 6ರಂದು ನಡೆದಿದ್ದವು. ಒಟ್ಟು 3, 32,913 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇಟಿಟಿ ಪರೀಕ್ಷೆ ಪತ್ರಿಕೆ 1ಕ್ಕೆ 1,54,929 ಅರ್ಜಿಗಳ ಪೈಕಿ 1,40,801 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ರೆ, ಪ್ರತಿಕ್ರೆ-2ಕ್ಕೆ ಬಂದ 2,06,455 ಅರ್ಜಿಗಳಲ್ಲಿ 1,92,112 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇನ್ನು ಅರ್ಜಿ ಹಾಕಿದ್ದ ಒಟ್ಟು 28,471 ಅಭ್ಯರ್ಥಿಗಳು ಕಾರಣಾಂತರಗಳಿಂದ ಪರೀಕ್ಷೆಗೆ ಗೈರಾಗಿದ್ದರು.


ಇದನ್ನೂ ಓದಿ: ಶಿಕ್ಷಕರ ಅರ್ಹತಾ ಪರೀಕ್ಷೆ ಕುರಿತು ಇಲ್ಲಿದೆ ಲೇಟೆಸ್ಟ್ ಅಪ್​ಡೇಟ್ಸ್​​


ಅಧಿಕೃತ ಜಾಲತಾಣದಲ್ಲಿ ಕೀ ಉತ್ತರ ಹುಡುಕುವುದು ಹೇಗೆ?
ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ
ಹಂತ 2: ಮುಖಪುಟದಲ್ಲಿ, 'CA ಸೆಲ್' ಟ್ಯಾಬ್ ಮೇಲೆ ಕ್ಲಿಕ್ ಮಾಡಿ.


ಹಂತ 3: ನಂತರ, 'KARTET 2022 ಉತ್ತರ ಕೀ' ಓದುವ ಲಿಂಕ್ ಅನ್ನು ಕ್ಲಿಕ್ ಮಾಡಿ.


ಹಂತ 4: ಅಲ್ಲಿ ಕಾಣಿಸುತ್ತಿರುವ ಫೋಟೋ ಮೇಲೆ ಕ್ಲಿಕ್ ಮಾಡಿ ಆ ಲಿಂಕ್ ಕ್ಲಿಕ್ ಮಾಡಿದ ತಕ್ಷಣ ಲಿಂಕ್ ಓಪನ್ ಆಗುತ್ತದೆ ಮತ್ತು ಉತ್ತರಗಳು ಕಾಣಿಸುತ್ತದೆ.


ಹಂತ 5: ಕೀ ಉತ್ತರಗಳನ್ನು ವೀಕ್ಷಿಸಿ, ನಿಮ್ಮ ತಾತ್ಕಾಲಿಕ ಸ್ಕೋರ್ ಅನ್ನು ಲೆಕ್ಕಾಚಾರ ಮಾಡಿ ಮತ್ತು ನೀವು ಮುಂದೆ ನೋಡ ಬೇಕೆಂದರೆ ಸೇವ್​ ಮಾಡಿ ಅಷ್ಟೇ ಅಲ್ಲ ನೀವು ಇದನ್ನು ಡವ್ನಲೋಡ್​ ಕೂಡ ಮಾಡಬಹುದು.


ಕರ್ನಾಟಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ಘೋಷಣೆ ಮಾಡಿದ್ದಾರೆ.


ಟ್ವೀಟ್  ಹೀಗಿದೆ



ಈ ಕೀ ಉತ್ತರಗಳನ್ನು ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳೂ ಸಹ ತಮ್ಮ ಉತ್ತರವನ್ನು ಇಲ್ಲಿ ಪರಿಶೀಲಿಸಿಕೊಳ್ಳಬಹುದು. ಇದರಿಂದ ಫಲಿತಾಂಶಕ್ಕೂ ಮುನ್ನ ತಮ್ಮ ಅಂಕಗಳ ಅಂದಾಜು ಅಭ್ಯರ್ಥಿಗಳಿಗಾಗುತ್ತದೆ. ಈ ಎಲ್ಲಾ ಕಾಣಗಳಿಂದ ಕೀ ಉತ್ತರ ತುಂಬಾ ಉಪಯೋಹವಾಗಲಿದೆ. ನೀವು ಇದನ್ನು ಡವ್ನಲೋಡ್​ ಕೂಡಾ ಮಾಡಲು ಸಾಧ್ಯವಿರುವುದರಿಂದ ಇನ್ನೂ ಉಪಯುಕ್ತವಾಗಲಿದೆ. ಅಧಿಕೃತ ವೆಬ್​ಸೈಟ್ಗೆ ಇಂದೆ ಭೇಟಿ ನೀಡಿ ನಿಮ್ಮ ಉತ್ತರಗಳನ್ನು ಪರಿಶೀಲಿಸಿಕೊಳ್ಳಿ. ಇತರರಿಗೂ ಈ ಮಾಹಿತಿ ಹಂಚಿ.

First published: