ಪರೀಕ್ಷಾ ಮಂಡಳಿಯು ಕರ್ನಾಟಕ SSLC ಪರೀಕ್ಷೆಗಳನ್ನು 2023 ಮಾರ್ಚ್ 31 ರಿಂದ ಏಪ್ರಿಲ್ 15ರ ವರೆಗೆ ನಡೆಸಿದೆ. ಕರ್ನಾಟಕ ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಕ್ತಾಯವಾಗಿದೆ. ಫಲಿತಾಂಶ ಇನ್ನೇನು ಕೆಲವೇ ಗಂಟೆಗಳಲ್ಲಿ ಬಿಡುಗಡೆಯಾಗಲಿದೆ.
ಯಶಸ್ ಗೌಡ – ಬಾಲಗಂಗಾಧರನಾಥ ಹೈಸ್ಕೂಲ್ ವಿದ್ಯಾರ್ಥಿಯಾದ ಯಶಸ್ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದುಕೊಂಡಿದ್ದಾನೆ. ಈತನ ಸಾಧನೆಗೆ ಶಾಲೆ ಶಿಕ್ಷಕರು ಹಾಗೂ ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.
ಭೀಮನ ಗೌಡ ಈತ ಕೂಡಾ 625ಕ್ಕೆ 625 ಅಂಕ ಪಡೆದುಕೊಂಡಿದ್ದಾನೆ. ಒಟ್ಟು ನಾಲ್ಕು ಜನ ಮಾತ್ರ ಈ ಬಾರಿ ಔಟ್ ಆಫ್ ಔಟ್ ಪಡೆದಿದ್ದು ಈ ವಿದ್ಯಾರ್ಥಿಯೂ ಸಾಧನೆ ಮಾಡಿದ್ದಾನೆ. ಭೀಮನಗೌಡ ಹನುಮಂತಗೌಡ ಪಾಟೀಲ್ – ಆಕ್ಸ್ ಫರ್ಡ್ ಇಂಗ್ಲೀಷ್ ಶಾಲೆ, ಮುದ್ದೇಬಿಹಾಳದ ವಿದ್ಯಾರ್ಥಿಯಾಗಿದ್ದಾನೆ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸವದತ್ತಿಯ ಅನುಪಮಾ ಶ್ರೀಶೈಲ ಹಿರೇಹೊಳಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅನುಪಮಾ ಹಿರೇಹೊಳಿ ಬೆಳಗಾವಿ ಜಿಲ್ಲೆ ಸವದತ್ತಿಯ ಕುಮಾರೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ. ಒಂದು ವರ್ಷದ ಹಿಂದೆ ಅನಾರೋಗ್ಯದಿಂದ ಅನುಪಮಾ ತಂದೆ ಶ್ರೀಶೈಲ್ ಮೃತಪಟ್ಟಿದ್ದಾರೆ. ತಾಯಿ ರಾಜಶ್ರೀ ಸವದತ್ತಿಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಭೂಮಿಕಾ ಆರ್ ಪೈ – 625 ಅಂಕ ಪಡೆದ ವಿದ್ಯಾರ್ಥಿನಿ ಈಕೆ
ಮೆಕಾಲೆ ಖಾಸಗಿ ಶಾಲೆಯ ವಿದ್ಯಾರ್ಥಿನಿಯಾಗಿದ್ದು ಬೆಂಗಳೂರಿನ ವಿದ್ಯಾರ್ಥಿನಿಯಾಗಿದ್ದಾಳೆ. ಪ್ರತಿ ವಿಷಯದಲ್ಲೂ ನೂರಕ್ಕೆ ನೂರು ಅಂಕ ಗಳಿಸಿದ್ದಾಳೆ.
ಈ ಬಾರಿ 7 ಲಕ್ಷದ 619 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಸಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ – 7,00,619
SSLC ಪರೀಕ್ಷೆಯಲ್ಲಿ ಪಾಸಾದ ಬಾಲಕಿಯರ ಸಂಖ್ಯೆ- 3,59,511.
SSLC ಪರೀಕ್ಷೆಯಲ್ಲಿ ಪಾಸಾದ ಬಾಲಕರ ಸಂಖ್ಯೆ – 3,41,108
ಒಟ್ಟು 8 ಲಕ್ಷ ವಿದ್ಯಾರ್ಥಿಗಳಲ್ಲಿ ಇಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ
ಹಿಂದಿನ ಬಾರಿ ಪರೀಕ್ಷೆಯಲ್ಲಿ ಒಟ್ಟು 145 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದುಕೊಂಡಿದ್ದರು ಆದರೆ ಈ ಬಾರಿ 4 ಜನ ವಿದ್ಯಾರ್ಥಿಗಳು ಮಾತ್ರ 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ.
ಭೂಮಿಕಾ ಆರ್ ಪೈ
ಯಶಸ್ ಗೌಡ
ಭೀಮನ ಗೌಡ
ಅನುಪಮಾ
ಈ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಿದ್ದಾರೆ
ನೀವು ಅಂದುಕೊಂಡಷ್ಟು ಅಂಕ ಬಂದಿಲ್ಲ ಎಂದು ಬೇಸರ ಬೇಡ. ನಿಮಗೆ ಮತ್ತೊಂದು ಅವಕಾಶ ಇದೆ. ಯಾವುದೇ ಲೋಪ ದೋಷಗಳಿಂದಾಗಿ ಅಂಕ ಕಡಿಮೆಯಾಗಿದ್ದರೆ ಅದನ್ನು ಸರಿ ಪಡಿಸಲಾಗುತ್ತದೆ. ನೀವು ಮರು ಮೌಲ್ಯಮಾಪನಕ್ಕೆ ಅಪ್ಲೈ ಮಾಡಬಹುದು. ಅಪ್ಲೈ ಮಾಡುವುದಾದರೆ 15-5-2023-21-05-2023ರ ಒಳಗೆ ಅಪ್ಲೈ ಮಾಡಬೇಕಾಗುತ್ತದೆ. ನಿಮ್ಮ ಉತ್ತರ ಪ್ರತಿಯ ಕಾಪಿ ಬೇಕಾದರೂ ತರಿಸಿಕೊಳ್ಳಬಹುದು. ೦8-5-2023-14-05-2023 ಉತ್ತರ ಪ್ರತಿ ಛಾಯಾಚಿತ್ರ ಸಿಗುತ್ತದೆ.
ಅನುತ್ತೀರ್ಣರಾದ ವಿದ್ಯಾರ್ಥಿಗಳು ಚಿಂತೆ ಮಾಡಬೇಕಾಗಿಲ್ಲ. ನಿಮಗೆ ಪಾಸ್ ಆಗಲು ಮತ್ತೊಂದು ಅವಕಾಶ ಇದೆ ಎಂಬುದನ್ನು ನೆನಪಿನಲ್ಲಿಡಿ. ನೀವು ಯಾವ ವಿಷಯದಲ್ಲಿ ಫೇಲ್ ಆಗಿದ್ದೀರೋ ಆ ವಿಷಯಕ್ಕೆ ಸಂಬಂಧಿಸಿದಂತೆ ಪೂರಕ ಪರೀಕ್ಷೆ ನಡೆಸಲಾಗುತ್ತದೆ. ಆ ಅವಕಾಶ ಬಳಸಿಕೊಂಡು ನೀವು ಪಾಸ್ ಆಗಬಹುದು.
SSLC ಫಲಿತಾಂಶದಲ್ಲಿ ಬೆಂಗಳೂರು ಉತ್ತರ 32ನೇ ಸ್ಥಾನ
ಬೆಂಗಳೂರು ದಕ್ಷಿಣ 33ನೇ ಸ್ಥಾನ
ಬೆಂಗಳೂರು ಗ್ರಾಮಾಂತರ 4ನೇ ಸ್ಥಾನ ಪಡೆದುಕೊಂಡಿದೆ
ದಕ್ಷಿಣ ಕನ್ನಡ 14 ಸ್ಥಾನದಲ್ಲಿದೆ
ಯಾದಗಿರಿ ಕೊನೆ ಸ್ಥಾನ ಪಡೆದುಕೊಂಡಿದೆ.
A ಗ್ರೇಟ್ ನಲ್ಲಿ ಉತ್ತೀರ್ಣ ಜಿಲ್ಲೆಗಳು 23
B ಗ್ರೇಡ್ ನಲ್ಲಿ ಉತ್ತೀರ್ಣರಾದ ಜಿಲ್ಲೆಗಳು 12
ನಗರದ ಬಾಗದ ವಿದ್ಯಾರ್ಥಿಗಳು ಫಲಿತಾಂಶ ಶೇ 79.62ರಷ್ಟು ದಾಖಲಾಗಿದೆ. ಇದಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚಿನ ಜನ ಉತ್ತೀರ್ಣರಾಗಿದ್ದಾರೆ. ಅಂಕಿ ಅಂಶಗಳ ಪ್ರಕಾರಶೇ,87.00 ರಷ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಿಂದ ನಗರ ಭಾಗದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ವಿಭಾಗದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ. ಒಟ್ಟು 34 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ.
ಈ ಬಾರಿಯೂ ಫಲಿತಾಂಶ ದಲ್ಲಿ ಹೆಣ್ಣು ಮಕ್ಕಳೇ ಮೇಲುಗೈ ಆದರೆ ಈ ಬಾರಿ ಯಾವ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ನಾವು ನೋಡುವುದಾದರೆ ಎಲ್ಲಾ ಸಲದ ದಾಖಲೆ ಮುರಿದು ಈ ಬಾರಿ ಚಿತ್ರದುರ್ಗ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಹೆಣ್ಣು ಮಕ್ಕಳು ಶೇ ,87.87 ರಷ್ಟ ಫಲಿತಾಂಶ
ಗಂಡು ಮಕ್ಕಳು ಶೇ 80.08 ಉತ್ತೀರ್ಣ ಪಡೆದು ಉತ್ತೀರ್ಣರಾಗಿದ್ದಾರೆ.
ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಪರೀಕ್ಷೆ ಫಲಿತಾಂಶ ಬಿಡುಗಡೆ
ಬೆಂಗಳೂರಿನ ಮಲ್ಲೇಶ್ವರಂನಲ್ಲಿರೋ ಮೌಲ್ಯ ನಿರ್ಣಯ ಮಂಡಳಿ ಈ ಕುರಿತು ಮಾಹಿತಿ ಹಂಚಿಕೊಂಡಿದೆ. ಫಲಿತಾಂಶ ಬಿಡುಗಡೆ ಮಾಡಲಿರೋ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರು ಕೆಲಹೊತ್ತಿನಲ್ಲೇ 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಫಲಿತಾಂಶ ಬಿಡುಗಡೆಯಾಗಲಿದೆ ಎಂಬ ಮಾಹಿತಿ ನೀಡಿದ್ದಾರೆ.
ಫಲಿತಾಂಶ ಬಿಡುಗಡೆಗೆ ಸನ್ನದ್ಧ ವಾಗಿರೋ ಮಂಡಳಿ ಈ ಕುರಿತು ಮಾಹಿತಿ ಹಂಚಿಕೊಂಡಿದೆ
ವಿದ್ಯಾರ್ಥಿಗಳು ಫಲಿತಾಂಶ ಚೆಕ್ ಮಾಡಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ವಿದ್ಯಾರ್ಥಿಗಳು ಯಾವ ಸಮಯಕ್ಕೆ ಫಲಿತಾಂಶ ಪ್ರಕಟವಾಗಲಿದೆ ಎಂದು ಕಾಯುತ್ತಿದ್ದಾರೆ. ಆ ಎಲ್ಲಾ ವಿದ್ಯಾರ್ಥಿಗಳಿಗೂ ಇಂದು 11 ಗಂಟೆಗೆ ಸರಿಯಾಗಿ ಫಲಿತಾಂಶ ಚೆಕ್ ಮಾಡಬಹುದು.
ಚೆಕ್ ಮಾಡಲು ನಿಮ್ಮ ಹಾಲ್ಟಿಕೆಟ್ ನಂಬರ್ ಹಾಗೂ ಡೇಟ್ ಆಫ್ ಬರ್ತ್ ಮಾಹಿತಿಯನ್ನು ಸಿದ್ಧಪಡಿಸಿಕೊಳ್ಳಿ
ಮಾರ್ಚ್ 31 ರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭವಾಗಿತ್ತು. ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ವಿವರ ಹೀಗಿತ್ತು. -ಶಾಲಾ ವಿದ್ಯಾರ್ಥಿಗಳು 7,94,611, ಪುನರಾವರ್ತಿತ ವಿದ್ಯಾರ್ಥಿಗಳು, 20,750, ಖಾಸಗಿ ಅಭ್ಯರ್ಥಿಗಳು 18,272, ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು 8,859 ಪರೀಕ್ಷೆ ಬರೆದಿದ್ದರು. ಒಟ್ಟು ರಾಜ್ಯಾದ್ಯಂತ 8 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅವರೆಲ್ಲರ ಭವಿಷ್ಯವೂ ಇಂದೇ ನಿರ್ಧಾರವಾಗಲಿದೆ.
1). ನಿಮಗೆಲ್ಲ ಮೊದಲೇ ತಿಳಿದಿರುವಂತೆ ಇಂದು SSLC ಫಲಿತಾಂಶ ಬಿಡುಗಡೆಯಾಗಲಿದೆ. ಕಾತರದಿಂದ ಕಾದ ವಿದ್ಯಾರ್ಥಿಗಳಿಗೆ ಇಂದು ಫಲಿತಾಂಶದ ಸಿಹಿ ಸಿಗಲಿದೆ.
2).ನಿಮ್ಮ ಫಲಿತಾಂಶ ಚೆಕ್ ಮಾಡಲು ನೀವು kseab.karnataka.gov.in ಅಥವಾ karresults.nic.in ಗೆ ಭೇಟಿ ನೀಡಿ ಫಲಿತಾಂಶ ಪರೀಕ್ಷಿಸಿ.