• ಹೋಂ
 • »
 • ನ್ಯೂಸ್
 • »
 • Jobs
 • »
 • Karnataka SSLC Result 2023: ಈ ಬಾರಿ ಎಸ್​ಎಸ್​ಎಲ್​ಸಿ ರಿಸಲ್ಟ್​ನಲ್ಲಿ ಕುಸಿತ; 34 ಶಾಲೆಗಳಲ್ಲಿ ಶೂನ್ಯ ಫಲಿತಾಂಶ

Karnataka SSLC Result 2023: ಈ ಬಾರಿ ಎಸ್​ಎಸ್​ಎಲ್​ಸಿ ರಿಸಲ್ಟ್​ನಲ್ಲಿ ಕುಸಿತ; 34 ಶಾಲೆಗಳಲ್ಲಿ ಶೂನ್ಯ ಫಲಿತಾಂಶ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಳೆದ ವರ್ಷಕ್ಕಿಂತ ಈ ಬಾರಿ ಫಲಿತಾಂಶ ಕುಸಿತ ಕಂಡಿದೆ. ಕಳೆದ ವರ್ಷ ಶೇ 85.13 ಫಲಿತಾಂಶ ಬಂದಿತ್ತು. ಇನ್ನು ಒಟ್ಟು 34 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿರುವುದು ನಿರಾಶಾದಾಯಕವಾಗಿದೆ.

 • News18 Kannada
 • 3-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು ಎದುರು ನೋಡುತ್ತಿದ್ದ 10ನೇ ತರಗತಿ ಬೋರ್ಡ್​ ಎಕ್ಸಾಂ ರಿಸಲ್ಟ್​ (10th Board Result 2023) ಹೊರಬಿದ್ದಿದೆ. ರಾಜ್ಯದ ಪಾಲಿಗೆ ಈ ಫಲಿತಾಂಶ ಹಿನ್ನಡೆಯಾಗಿದೆ. ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಫಲಿತಾಂಶ ಬಿಡುಗಡೆಯಾಗಿದ್ದು, ಈ ಬಾರಿ ಶೇ 83.89 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಫಲಿತಾಂಶ ಕುಸಿತ ಕಂಡಿದೆ. ಕಳೆದ ವರ್ಷ ಶೇ 85.13 ಫಲಿತಾಂಶ ಬಂದಿತ್ತು.


ಕೇವಲ 4 ವಿದ್ಯಾರ್ಥಿಗಳು ಮಾತ್ರ 625ಕ್ಕೆ 625 ಅಂಕ! 


ಈ ವರ್ಷ ಕೇವಲ 4 ವಿದ್ಯಾರ್ಥಿಗಳು 625/625 ಅಂಕಗಳನ್ನು ಗಳಿಸಿದ್ದಾರೆ, ಇದು ಕಳೆದ ವರ್ಷದ ಅಂಕಿಅಂಶಗಳಿಗಿಂತ ಭಾರೀ ಕುಸಿತವಾಗಿದೆ. 2022ರಲ್ಲಿ 145 ವಿದ್ಯಾರ್ಥಿಗಳು ಪರಿಪೂರ್ಣ ಅಂಕ ಗಳಿಸಿದ್ದರು.


34 ಶಾಲೆಗಳಲ್ಲಿ ಶೂನ್ಯ ಫಲಿತಾಂಶ


ಇನ್ನು ಒಟ್ಟು 34 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿರುವುದು ನಿರಾಶಾದಾಯಕವಾಗಿದೆ. ಇದರ ಮಧ್ಯೆ ಸಮಾಧಾನಕರ ಸುದ್ದಿ ಎಂದರೆ ಯಾವುದೇ ಸರ್ಕಾರಿ ಶಾಲೆಗಳು ಶೂನ್ಯ ಶೇಕಡಾ ಫಲಿತಾಂಶವನ್ನು ಪಡೆದಿಲ್ಲ. ಇನ್ನು ಈ ಬಾರಿಯೂ ಫಲಿತಾಂಶ ದಲ್ಲಿ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ.  ಶೇ ,87.87 ರಷ್ಟು ಹೆಣ್ಣು ಮಕ್ಕಳು ಪಾಸ್​​ ಆಗಿದ್ದರೆ,  ಶೇ. 80.08 ರಷ್ಟು ಗಂಡು ಮಕ್ಕಳು ಉತ್ತೀರ್ಣರಾಗಿದ್ದಾರೆ.


ಇದನ್ನೂ ಓದಿ: Karnataka SSLC Results 2023 Live Updates: ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ, ಹೀಗಿದೆ ಫಲಿತಾಂಶ


ಗ್ರಾಮೀಣ-ನಗರ ವಿದ್ಯಾರ್ಥಿಗಳ ಫಲಿತಾಂಶ 


ಶೇ 87.00 ರಷ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ನಗರದ ಭಾಗದ ವಿದ್ಯಾರ್ಥಿಗಳು ಫಲಿತಾಂಶ ಶೇ 79.62ರಷ್ಟಿದೆ. ಒಟ್ಟಾರೆ  ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 7,00,619 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 3,41,108 ಬಾಲಕರು ಹಾಗೂ  3,59,511 ಬಾಲಕಿಯರು ಈ ವರ್ಷ 10ನೇ ಕ್ಲಾಸ್​ ಬೋರ್ಡ್​ ಎಕ್ಸಾಮ್​ ನಲ್ಲಿ ಉತ್ತೀರ್ಣಾಗಿದ್ದಾರೆ.


ಯಾದಗಿರಿ ಲಾಸ್ಟ್​, ಚಿತ್ರದುರ್ಗ ಫಸ್ಟ್​ 


ರಾಜ್ಯಕ್ಕೇ ಯಾದಗಿರಿ ಜಿಲ್ಲೆ ಶೇ.75.49ರಷ್ಟು ಫಲಿತಾಂಶದೊಂದಿಗೆ ಕೊನೆಯ ಸ್ಥಾನ ಪಡೆದಿದೆ. SSLC ಪರೀಕ್ಷೆ ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆ ಶೇಕಡಾ 96.08ರಷ್ಟು ಫಲಿತಾಂಶ ಪಡೆದು ಪ್ರಥಮ ಸ್ಥಾನದಲ್ಲಿದೆ.

top videos
  First published: