ಬೆಂಗಳೂರು: 5 ಹಾಗೂ 8ನೇ ತರಗತಿ ವಿದ್ಯಾರ್ಥಿಗಳು (Students) ಈಗಾಗಲೇ ಪರೀಕ್ಷೆ ತಯಾರಿ (Exam Preparation ) ನಡೆಸುತ್ತಿದ್ದಾರೆ. ಅಧಿಕೃತವಾಗಿ ಪರೀಕ್ಷೆ ದಿನಾಂಕ (Exam Date) ಪ್ರಕಟವಾಗಿದೆ ಈ ವೇಳಾಪಟ್ಟಿ ಅನುಸಾರವಾಗಿಯೇ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಮತ್ತು ಪೋಷಕರೇ (Students Parents), ನಿಮಗೊಂದು ಮಹತ್ವದ ಸುದ್ದಿ ಇಲ್ಲಿದೆ. ಪರೀಕ್ಷೆಗಳ ಕುರಿತು ಶೈಕ್ಷಣಿಕ ಇಲಾಖೆ (Education Department) ಮಹತ್ವದ ಮಾಹಿತಿ ಪ್ರಕಟಿಸಿದೆ.
2023ರ ಮಾರ್ಚ್ 13ರಿಂದ ಮಾರ್ಚ್ 18ರವರೆಗೆ ಪರೀಕ್ಷೆ ನಡೆಯಲಿದೆ
5ನೇ ತರಗತಿ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಈಗಾಗಲೇ ಘೋಷಿಸಿದಂತೆ ವಾರ್ಷಿಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಅಲ್ಲದೇ, ವಾರ್ಷಿಕ ಪರೀಕ್ಷೆಗಳ ದಿನಾಂಕವನ್ನು ಇದೀಗ ಪ್ರಕಟಿಸಲಾಗಿದೆ. 2023ರ ಮಾರ್ಚ್ 13ರಿಂದ ಮಾರ್ಚ್ 18ರವರೆಗೆ 5ನೇ ತರಗತಿ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳು ನಡೆಸಲು ಶೈಕ್ಷಣಿಕ ಇಲಾಖೆ ನಿರ್ಧರಿಸಿದೆ.
ಈ ವಾರ್ಷಿಕ ಪರೀಕ್ಷೆಯು ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5ನೇ ತರಗತಿ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಯಲಿದೆ.
ಇದನ್ನೂ ಓದಿ: Weight Loss: ಸ್ನಾಯುವಿನ ತೂಕ ಕಳೆದುಕೊಳ್ಳದೆ ದೇಹದ ಬೊಜ್ಜು ಕಳೆದುಕೊಳ್ಳುವುದು ಹೇಗೆ? ಇಲ್ಲಿದೆ ಆರೋಗ್ಯಕರ ಮಾರ್ಗಗಳ ಮಾಹಿತಿ
5ನೇ ತರಗತಿ ಪರೀಕ್ಷೆ ವೇಳಾಪಟ್ಟಿ |
ಮಾ.15ರಂದು ತರಗತಿ ಪ್ರಥಮ ಭಾಷೆ |
ಮಾ.16ರಂದು ಗಣಿತ |
ಮಾ. 17ರಂದು ಪರಿಸರ ಅಧ್ಯಯನ |
ಮಾ.18ರಂದು ದ್ವಿತೀಯ ಭಾಷೆ |
8ನೇ ತರಗತಿ ವೇಳಾಪಟ್ಟಿ |
ಮಾ.13ರಂದು ಪ್ರಥಮ ಭಾಷೆ |
ಮಾ.14ರಂದು ದ್ವಿತೀಯ ಭಾಷೆ |
ಮಾ. 15ರಂದು ತೃತೀಯ ಭಾಷೆ |
ಮಾ. 16ರಂದು ಕೋರ್ ಭಾಷೆ (ಗಣಿತ) |
ಮಾ.17ರಂದು ವಿಜ್ಞಾನ |
ಮಾ. 18ರಂದು ಸಮಾಜ ವಿಜ್ಞಾನ |
40 ಅಂಕಗಳಿಗೆ ಜರುಗುವ ಪರೀಕ್ಷೆ |
ಮಾ.6ರಿಂದ 10ರವರೆಗೆ ಮೌಖಿಕ ಪರೀಕ್ಷೆ ಜರುಗಲಿದೆ |
2 ಗಂಟೆಯ ಈ ಪರೀಕ್ಷೆ 40 ಅಂಕಗಳಿಗೆ ನಡೆಯಲಿದೆ. 40 ಅಂಕ ಪರೀಕ್ಷೆಗೆ 2 ಗಂಟೆ ಅವಧಿ ನಿಗದಿ ಮಾಡಲಾಗಿದೆ. 8ನೇ ತರಗತಿ ಪ್ರಥಮ ಭಾಷೆ- ಇಂಗ್ಲೀಷ್ (ಎನ್ಸಿಇಆರ್ಟಿ) ಮತ್ತು ತೃತೀಯ ಭಾಷೆ - ಹಿಂದಿ (ಎನ್ಸಿಇಆರ್ಟಿ) ವಿಷಯಗಳು ಆದರ್ಶ ವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಮಂಡಳಿ ತಿಳಿಸಿದೆ.
ದಿನಾಂಕ 6ರಿಂದ 10ವರೆಗೂ ವಿದ್ಯಾರ್ಥಿಗಳಿಗೆ ಮೌಖಿಕ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿ ನಿರ್ವಹಿಸಲು ಸೂಚನೆ ನೀಡಲಾಗಿದೆ. ವಿಶೇಷ ಶಾಲೆಗಳ ವಿದ್ಯಾರ್ಥಿಗಳಿಗೆ ಮಂಡಳಿಯಿಂದ ಸರಬರಾಜು ಮಾಡುವ ಪ್ರಶ್ನೋತ್ತರ ಪತ್ರಿಕರಗಳನ್ನೇ ಬಳಸಿ ಶಾಲಾ ಹಂತದಲ್ಲಿ ಹಿಂದಿನ ಸಾಲುಗಳಲ್ಲಿ ನಡೆಸಿದಂತೆ ಮೌಲ್ಯಾಂಕನ ನಡೆಸಲು ನಿರ್ದೇಶನ ನೀಡಲಾಗಿದೆ.
ಇದನ್ನೂ ಓದಿ: HDK Letter: ಅಶ್ವತ್ಥ್ ನಾರಾಯಣ್ ವಿರುದ್ಧ ಸಮರ ಸಾರಿದ ಹೆಚ್ಡಿಕೆ; ಪ್ರಧಾನಿಗೆ ಪತ್ರ
ಉಳಿದಂತೆ ಮಂಡಳಿಯಿಂದ ಮೌಲ್ಯಾಂಕನ ನಡೆಸುವ ವಿಷಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಿಷಯಗಳಿಗೂ ಮಂಡಲಿಯಿಂದ ನಿಗದಿಪಡಿಸಿರುವ ದಿನಾಂಕಕ್ಕಿಂತ ಮೊದಲೇ ತಮ್ಮ ಶಾಲಾ ಹಂತದಲ್ಲಿಯೇ ಮೌಲ್ಯಾಂಕನ ನಡೆಸಲು ಸೂಚಿಸಲಾಗಿದೆ (ಉದಾ: ದೈಹಿಕ ಶಿಕ್ಷಣ, ಇತರೆ)
ಉಳಿದಂತೆ ಮಾರ್ಚ್ 9ರಿಂದ ದ್ವಿತೀಯ ಪಿಯು ಪರೀಕ್ಷೆಗಳು ಪ್ರಾರಂಭವಾಗುವ ಹಿನ್ನೆಯಲ್ಲಿ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಮೌಲ್ಯಾಂಕನ ಮತ್ತು ದ್ವಿತೀಯ ಪಿಯು ಪರೀಕ್ಷೆಗಳು ಒಂದೆ ದಿನ ನಡೆಯಬೇಕಾಗಿರುವುದರಿಂದ 5 ಮತ್ತು 8ನೇ ತರಗತಿಗಳ ಮೌಲ್ಯಾಂಕನವನ್ನು ಮಧ್ಯಾಹ್ನದ ಅವಧಿಯಲ್ಲಿ ನಡೆಸಲು ಮಂಡಳಿ ತೀರ್ಮಾನಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ