ಈಗಂತೂ ಒಂದೊಂದು ಏರಿಯಾಗೂ ಒಂದೊಂದು ಶಾಲೆ ಇರುವುದನ್ನು ನಾವು ನೋಡುತ್ತೇವೆ. ಅದರಲ್ಲೂ ಈ ಚಿಕ್ಕ ಮಕ್ಕಳ (Students) ಶಾಲೆಗಳಂತೂ ಒಂದೊಂದು ಏರಿಯಾದಲ್ಲೂ ಒಂದಕ್ಕಿಂತ ಹೆಚ್ಚು ಶಾಲೆಗಳು ಶುರುವಾಗಿರುವುದು ದೊಡ್ಡ ದೊಡ್ಡ ನಗರಗಳಲ್ಲಿ ನಾವು ನೋಡುತ್ತೇವೆ. ಆದರೆ ಈ ಎಲ್ಲಾ ಶಾಲೆಗಳು ಶಿಕ್ಷಣ ಇಲಾಖೆ ರೂಪಿಸಿದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ, ರಾಜ್ಯ ಶಿಕ್ಷಣ (Education) ಇಲಾಖೆಯವರು ಅಂತಹ ಶಾಲೆಯನ್ನು (School) ಅನಧಿಕೃತ ಶಾಲೆಗಳ ಪಟ್ಟಿಗೆ ಅದನ್ನು ಸೇರಿಸಿ, ಆ ಶಾಲೆಯ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತಾರೆ.
ಎಂದರೆ ಉದಾಹರಣೆಗೆ ಈ ದೊಡ್ಡ ದೊಡ್ಡ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ, ಹೆಚ್ಚುವರಿ ಎಂದರೆ ಒಂದೊಂದು ತರಗತಿಯಲ್ಲಿ ನಿಯಮ ಮೀರಿ ವಿಭಾಗಗಳನ್ನು ಶುರು ಮಾಡಿದ್ದಾರೆ. ಇಂತಹ ಶಾಲೆಗಳನ್ನು ಅನಧಿಕೃತ ಶಾಲೆಗಳ ಪಟ್ಟಿಗೆ ಶಿಕ್ಷಣ ಇಲಾಖೆ ಸೇರಿಸುತ್ತಿದೆ.
ಇತ್ತೀಚೆಗೆ 1,600 ಶಾಲೆಗಳನ್ನು ಅನಧಿಕೃತವೆಂದು ಪಟ್ಟಿ ಮಾಡಿದ ಶಿಕ್ಷಣ ಇಲಾಖೆ
ಇದರ ಬಗ್ಗೆ ಈಗೇಕೆ ಮಾತು ಅಂತೀರಾ? ರಾಜ್ಯ ಶಿಕ್ಷಣ ಇಲಾಖೆಯು ಇತ್ತೀಚೆಗೆ 1,600 ಶಾಲೆಗಳನ್ನು ಅನಧಿಕೃತವೆಂದು ಪಟ್ಟಿ ಮಾಡಿದೆ, ಅವುಗಳಲ್ಲಿ 600 ಕ್ಕೂ ಹೆಚ್ಚು ಶಾಲೆಗಳನ್ನು ಇಲಾಖೆಯ ಅನುಮೋದನೆ ಪಡೆಯದೆ ಹೆಚ್ಚುವರಿ ವಿಭಾಗಗಳನ್ನು ನಡೆಸುತ್ತಿದ್ದರು ಅಂತ ಹೇಳಲಾಗಿದೆ.
ಶಾಲಾ ಆಡಳಿತ ಮಂಡಳಿಗಳ ಪ್ರಕಾರ, ಮಾರ್ಚ್ 2006 ರಲ್ಲಿ ಹೊರಡಿಸಿದ ಸರ್ಕಾರಿ ಆದೇಶಕ್ಕೆ ಅನುಗುಣವಾಗಿ ಅವರು ಈ ಹೆಚ್ಚುವರಿ ವಿಭಾಗಗಳನ್ನು ತೆರೆದಿದ್ದಾರೆ, ಅದನ್ನು ಹಿಂತೆಗೆದುಕೊಳ್ಳಲಾಗಿಲ್ಲ.
ಈಗ ಖಾಸಗಿ ಅನುದಾನರಹಿತ ಶಾಲೆಗಳು ರಾಜ್ಯ ಶಾಲಾ ಶಿಕ್ಷಣ ಇಲಾಖೆಯು ಅನಧಿಕೃತ ಶಾಲೆಗಳ ಪಟ್ಟಿಯಿಂದ 'ಹೆಚ್ಚುವರಿ ವಿಭಾಗ' ಹೊಂದಿರುವ ಶಿಕ್ಷಣ ಸಂಸ್ಥೆಗಳ ಹೆಸರುಗಳನ್ನು ಕೈಬಿಡಬೇಕು ಅಂತ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Physical Science ವಿಷಯವನ್ನೇ ಹೆಚ್ಚಿನ ವಿದ್ಯಾರ್ಥಿಗಳು ಯಾಕೆ ಆಯ್ಕೆ ಮಾಡ್ತಾರೆ ಗೊತ್ತಾ? ಇಲ್ಲಿದೆ ಉತ್ತರ
ನ್ಯಾಯಾಲಯದ ಮೆಟ್ಟಿಲೇರುವಂತೆ ಬೆದರಿಕೆ
ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿದ ಮನವಿಯಲ್ಲಿ, ಕರ್ನಾಟಕದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಸಂಘದ ಬೇಡಿಕೆಯನ್ನು ಪರಿಗಣಿಸದಿದ್ದರೆ ಈ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಎಚ್ಚರಿಸಿದೆ.
ಸಂಘದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ “ಅನಧಿಕೃತ ವಿಭಾಗದಡಿ ಹೆಚ್ಚುವರಿ ವಿಭಾಗಗಳನ್ನು ಹೊಂದಿರುವ ಶಾಲೆಗಳನ್ನು ಪಟ್ಟಿ ಮಾಡುವಾಗ, ಇಲಾಖೆಯು ತನ್ನದೇ ಆದ ಆದೇಶವನ್ನು ಉಲ್ಲೇಖಿಸಬೇಕಾಗಿತ್ತು, ಆ ಆದೇಶದಲ್ಲಿ ಖಾಸಗಿ ಅನುದಾನರಹಿತ ಶಾಲೆಗಳಿಗೆ ಹೆಚ್ಚುವರಿ ವಿಭಾಗಗಳನ್ನು ಪ್ರಾರಂಭಿಸಲು ಅನುವು ಮಾಡಿಕೊಟ್ಟಿತ್ತು ಮತ್ತು ಮಾನ್ಯತೆ ನವೀಕರಣ ಪ್ರಕ್ರಿಯೆಯ ಸಮಯದಲ್ಲಿ ಅದನ್ನು ಪರಿಶೀಲಿಸಬಹುದು” ಎಂದು ಹೇಳಿದ್ದಾರೆ.
"ನಮಗೆ ತಿಳಿದಿರುವಂತೆ, ಹೆಚ್ಚುವರಿ ವಿಭಾಗಗಳನ್ನು ತೆರೆಯುವುದರಿಂದ ಇಲಾಖೆಯು ಸುಮಾರು 620 ಶಾಲೆಗಳನ್ನು ಅನಧಿಕೃತವೆಂದು ಪಟ್ಟಿ ಮಾಡಿದೆ, ಇದು ಶಾಲಾ ಪ್ರವೇಶ ಶುರುವಾಗುವ ಸಂದರ್ಭದಲ್ಲಿ ಪೋಷಕರು ಮತ್ತು ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ನೀಡುತ್ತದೆ. ಅನಧಿಕೃತ ಶಾಲೆಗಳ ಪಟ್ಟಿಯಿಂದ 620 ಶಾಲೆಗಳನ್ನು ಕೈಬಿಡುವಂತೆ ನಾವು ಇಲಾಖೆಗೆ ವಿನಂತಿಸಿದ್ದೇವೆ, ಇಲ್ಲದಿದ್ದರೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ" ಎಂದು ಕುಮಾರ್ ಹೇಳಿದರು.
ಈ ವಿಷಯದ ಬಗ್ಗೆ ಶಾಸಗಿ ಶಾಲಾ ಆಡಳಿತ ಮಂಡಳಿಯವರು ಹೇಳುವುದೇನು?
ಖಾಸಗಿ ಶಾಲಾ ಆಡಳಿತ ಮಂಡಳಿಯ ಪ್ರತಿನಿಧಿಗಳ ಪ್ರಕಾರ, ಹೆಚ್ಚುವರಿ ವಿಭಾಗಗಳನ್ನು ತೆರೆಯಲು ಅನಧಿಕೃತವೆಂದು ಪಟ್ಟಿ ಮಾಡಲಾದ ಎಲ್ಲಾ 620 ಶಾಲೆಗಳು ಶಿಕ್ಷಣ ಹಕ್ಕು ಕೋಟಾದಡಿ ಇಲಾಖೆಯಿಂದ ಪ್ರವೇಶವನ್ನು ಪಡೆದಿವೆ ಮತ್ತು ಮರುಪಾವತಿಯನ್ನು ಸಹ ನೀಡಲಾಗಿದೆ.
"ಅನಧಿಕೃತ ಎಂದು ಪಟ್ಟಿ ಮಾಡಲಾದ ಇತರ ಯಾವುದೇ ವರ್ಗದ ಶಾಲೆಗಳ ಬಗ್ಗೆ ನಮಗೆ ಯಾವುದೇ ಆಕ್ಷೇಪವಿಲ್ಲ. ಹೆಚ್ಚುವರಿ ವಿಭಾಗಗಳ ಕಾರಣದಿಂದಾಗಿ ಅನಧಿಕೃತವೆಂದು ಪಟ್ಟಿ ಮಾಡಲಾದವುಗಳನ್ನು ಇಲಾಖೆ ಕೈಬಿಡಬೇಕೆಂದು ನಾವು ಬಯಸುತ್ತೇವೆ " ಎಂದು ಸಂಘದ ಮತ್ತೊಬ್ಬ ಸದಸ್ಯ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ