ಬೆಂಗಳೂರು: ವಿಧಾನ ಪರಿಷತ್ ಕಲಾಪ ನಡೆಯುವ ವೇಳೆ ಹಲವಾರು ವಿಚಾರಗಳ ಚರ್ಚೆ ಆಯಿತು. ಅದೇ ರೀತಿ ಶಿಕ್ಷಣಕ್ಕೆ (Education) ಸಂಬಂಧಿಸಿದ ಕೆಲವು ವಿಚಾರಗಳನ್ನು ಚರ್ಚೆ ಮಾಡಲಾಯಿತು. ಕೆಲವೊಂದಿಷ್ಟು ಗಮನಾರ್ಹ ಮಾತುಗಳನ್ನ ಬಿ.ಸಿ ನಾಗೇಶ್ ಅವರು ಆಡಿದ್ದಾರೆ. ಆ ಕುರಿತು ಇನ್ನಷ್ಟು ಮಾಹಿತಿ (Information) ನೀಡಿದ್ದೇವೆ ನೋಡಿ. ಕೆ.ಎ ತಿಪ್ಪೇಸ್ವಾಮಿ ರಾಜ್ಯದ ಶಾಲೆಯ ಮಕ್ಕಳಿಗೆ ಮಧ್ಯಾಹ್ನ ಊಟದಲ್ಲಿ ಕೋಳಿ ಮೊಟ್ಟೆ ನೀಡಲು SSLC ಬೋರ್ಡ್ ಶಿಫಾರಸ್ಸು ಮಾಡಿರುವುದು ನಿಜವೇ ಎಂಬ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ನಾಗೇಶ್ (B.C Nagesh) ಅವರು ನೀಡಿದ ಉತ್ತರ ಇಲ್ಲಿದೆ ನೋಡಿ.
ಸರ್ಕಾರದ ನಿಲುವೇನು ಅಂತ ಕೇಳ್ತಿರೋದು ಬಹಳ ಆಶ್ಚರ್ಯ ವಾಗ್ತಿದೆ. ಎಲ್ಲಿ ಅಪೌಷ್ಟಿಕತೆ ಇದೆ ಅಲ್ಲಿ ಮೊಟ್ಟೆ ಕೊಟ್ಟಿದ್ದೇವೆ ಎಂದು ಬಿಸಿ ನಾಗೇಶ್ ಉತ್ತರಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೊಟ್ಟು ಡ್ರೈವ್ ಮಾಡಿದೋದು ನಮ್ಮ ಆಶಯ ಎಂದು ಹೇಳಿದ್ದಾರೆ. ಮೊಟ್ಟೆ ತಿಂದ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಾಗಿದೆ. ರಾಜ್ಯದ ಎಲ್ಲಾ ಶಾಲೆಯ ಮಕ್ಕಳಿಗೆ, ವರ್ಷದ 46 ದಿನ ಮೊಟ್ಟೆ ಕೊಡಲು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು, ಚಿಕ್ಕೆಯನ್ನು ಕೊಡುತ್ತಿದ್ದೇವೆ. ಆಹಾರದ ಆಯ್ಕೆ ಮಕ್ಕಳಿಗೆ ಬಿಟ್ಟದ್ದು ನಾವು ಮೊಟ್ಟೆ ತಿನ್ನುವಂತೆ ಯಾವ ಮಕ್ಕಳನ್ನು ಬಲವಂತ ಮಾಡಿಲ್ಲ ಮೊಟ್ಟೆ ಕೊಡಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಹೇಳಿದ್ದಾರೆ. ಹಾಗೇ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ. ಸಾತ್ವಿಕ ಆಹಾರದ ಚರ್ಚೆ ಸರ್ಕಾರದ ಮುಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Promotion: ಹೈಸ್ಕೂಲ್ ಸಹ ಶಿಕ್ಷಕರಿಗೂ ಸಿಗುತ್ತಾ ಪ್ರಮೋಷನ್? ಕಲಾಪದಲ್ಲಿ ಸಚಿವ ಬಿಸಿ ನಾಗೇಶ್ ಮಹತ್ವದ ಹೇಳಿಕೆ
ಶಾಲಾ ಶಿಕ್ಷಣದ ಹಂತದಲ್ಲಿ ನೈತಿಕ ಶಿಕ್ಷಣ ನೀಡಬೇಕು ಎಂಬ ಬಗ್ಗೆ ಎಲ್ಲರೂ ಸಲಹೆ ನೀಡಿದ್ದಾರೆ. ಅದನ್ನು ಮುಂದಿನ ವರ್ಷದಿಂದ ಜಾರಿಗೆ ತರಲು ಪಯತ್ನಗಳು ನಡೆದಿವೆ. ಆದ್ದರಿಂದ ಈ ಸನ್ನಿವೇಶದಲ್ಲಿ ನೈತಿಕ ಶಿಕ್ಷಣ ಮತ್ತು ಸಾತ್ವಿಕ ಆಹಾರವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಿ ನೋಡುವುದು ಸರಿಯಲ್ಲ ಎಂದು ಬಿಸಿ ನಾಗೇಶ್ ಹೇಳಿದ್ಧಾರೆ.
ದನಿಗೂಡಿಸಿದ ಪರಿಷತ್ ಸಭಾಪತಿ
ಇದಕ್ಕೆ ದನಿಗೂಡಿಸಿದ ಪರಿಷತ್ ಸಭಾಪತಿ ಅವರು, ಶಾಲೆಗಳಲ್ಲಿ ನೈತಿಕ ಶಿಕ್ಷಣ ಬೋಧಿಸುವ ಅವಶ್ಯಕತೆ ಇದೆ ತಾವೂ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗ ಮೊಟ್ಟೆ ನೀಡಬೇಕು ಎಂದು 2007ರಿಂದ ಚರ್ಚೆಯಾಗುತ್ತಾ ಇತ್ತು ಆದ್ರೆ ಅನುಷ್ಠಾನಕ್ಕೆ ಬರಲು ಕೆಲವು ವರ್ಷಗಳೇ ಬೇಕಾಯ್ತು. ಆಗಲೂ ಸಹ ಹಲವಾರು ಜನ ಇದನ್ನು ವಿರೋಧಿಸಿದ್ದರು ಅದ್ಯಾವುದನ್ನೂ ಸಹ ಲೆಕ್ಕಿಸದೇ ಮಕ್ಕಳ ಆರೋಗ್ಯ ಹಾಗೂ ಪೌಷ್ಟಿಕತೆಯನ್ನು ಮಾತ್ರ ಮನಗಂಡು ಮೊಟ್ಟೆಯನ್ನು ತರಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಾಯೋಗಿಕ ಪರೀಕ್ಷೆಗಾಗಿ ಕೆಲವೇ ಕಡೆ ಮೊದಲು ಮೊಟ್ಟೆ ನೀಡಲಾಗಿತ್ತು ಆದರೆ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಹ ಮೊಟ್ಟೆ ವಿತರಣೆ ಮಾಡಲಾಗುತ್ತದೆ. ಸದ್ಯ ವರ್ಷಕ್ಕೆ 46 ದಿನ ಮಾತ್ರ ಮೊಟ್ಟೆ ನೀಡಲಾಗುತ್ತಿದೆ ಎಂಬ ಬಗ್ಗೆ ಕೂಡಾ ಸವಿವರವಾಗಿ ತಿಳಿಸಿದ್ದಾರೆ. ಈ 46 ದಿನಗಳಲ್ಲಿ ನೀಡುತ್ತಿರುವ ಮೊಟ್ಟೆಯನ್ನು ಇನ್ನೂ ಹೆಚ್ಚಿನ ದಿನಗಳ ಕಾಲ ಮಕ್ಕಳಿಗೆ ನೀಡಲು ನಾವು ವ್ಯವಸ್ಥೆ ಮಾಡಲು ಸಿದ್ದರಿದ್ದೇವೆ ಎಂದೂ ಸಹ ಅವರು ಹೇಳಿದ್ದಾರೆ. ಹಾಗಾಗಿ ನೈತಿಕ ಶಿಕ್ಷಣದ ಜೊತೆ ಜೊತೆಗೆ ವಿದ್ಯಾರ್ಥಿಗಳಿಗೆ ಮೊಟ್ಟೆ ಭ್ಯಾಗ್ಯವೂ ಇದೆ ಎಂಬು ಸ್ಫಷ್ಟವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ