• ಹೋಂ
  • »
  • ನ್ಯೂಸ್
  • »
  • Jobs
  • »
  • School Admission: ಈ ವರ್ಷ ನಿಮ್ಮ ಮಗುವನ್ನು ಶಾಲೆಗೆ ಸೇರಿಸುತ್ತಿದ್ದೀರಾ? ಹಾಗಾದ್ರೆ ನೀವು ಈ ಸುದ್ದಿ ಓದ್ಲೇಬೇಕು!

School Admission: ಈ ವರ್ಷ ನಿಮ್ಮ ಮಗುವನ್ನು ಶಾಲೆಗೆ ಸೇರಿಸುತ್ತಿದ್ದೀರಾ? ಹಾಗಾದ್ರೆ ನೀವು ಈ ಸುದ್ದಿ ಓದ್ಲೇಬೇಕು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈಗ ಜೂನ್​ ತಿಂಗಳಿನಲ್ಲಿ ಆರಂಭವಾಗುವ ಶೈಕ್ಷಣಿಕ ವರ್ಷದಲ್ಲೇ ವಿದ್ಯಾರ್ಥಿಗಳಿಗೆ ಈ ನಿಮಯ ಜಾರಿಯಾಗಲಿದೆ. ಪಾಲಕರು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗುತ್ತದೆ.  ಕರ್ನಾಟಕ ಸರ್ಕಾರವು 1 ನೇ ತರಗತಿಯ ಪ್ರವೇಶಕ್ಕಾಗಿ 5+ ವರ್ಷಗಳ ವಯಸ್ಸಿನ ಮಾನದಂಡವನ್ನು ಅನುಸರಿಸುತ್ತಿದೆ.

  • Share this:

ಈ ಶೈಕ್ಷಣಿಕ ವರ್ಷದಿಂದ ಹಲವಾರು ರೀತಿಯ ಬದಲಾವಣೆಗಳು ಆಗುತ್ತಲೇ ಬಂದಿದೆ. ಅದರಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ (Education) ಸೇರಿಸಲು ಎಷ್ಟು ವಯಸ್ಸಾಗಿರಬೇಕು ಎಂಬುದನ್ನು ಈ ವರ್ಷದಿಂದ ನಿಗದಿ ಮಾಡಲಾಗಿದೆ. ಈ ನಿಯಮದ ಅನುಸಾರ ಪಾಲಕರು ತಮ್ಮ ಮಕ್ಕಳನ್ನು (Students) ಶಾಲೆಗೆ ಸೇರಿಸುವಂತೆ ಸೂಚನೆ ನೀಡಲಾಗಿದೆ.  ಹೆಚ್ಚಿನ ಕೇಂದ್ರೀಯ ಮಂಡಳಿ ಶಾಲೆಗಳು ಮತ್ತು ಕೇಂದ್ರೀಯ ವಿದ್ಯಾಲಯ ಶಾಲೆಗಳು (School) ಈಗಾಗಲೇ 2023-24 ಶೈಕ್ಷಣಿಕ ವರ್ಷದಿಂದ ನಿಯಮವನ್ನು ಜಾರಿಗೆ ತಂದಿವೆ. ಎರಡು ವರ್ಷಗಳ ಕಾಲ ಸಡಿಲಿಕೆ ನೀಡುವ ಕರ್ನಾಟಕ ಸರ್ಕಾರದ ಆದೇಶದ ಹೊರತಾಗಿಯೂ, ಶಾಲಾ ಶಿಕ್ಷಣ (Education) ಮತ್ತು ಸಾಕ್ಷರತಾ ಇಲಾಖೆ (ಡಿಎಸ್ಇಎಲ್) 2024-25 ನೇ ಶೈಕ್ಷಣಿಕ ವರ್ಷದಿಂದ 1 ನೇ ತರಗತಿಗೆ ಪ್ರವೇಶಕ್ಕಾಗಿ ಜೂನ್ 1 ರೊಳಗೆ ಆರು ವರ್ಷಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸುವ ನಿಯಮವನ್ನು ಜಾರಿಗೆ ತರಲು ನಿರ್ಧರಿಸಿದೆ.


ಈಗ ಜೂನ್​ ತಿಂಗಳಿನಲ್ಲಿ ಆರಂಭವಾಗುವ ಶೈಕ್ಷಣಿಕ ವರ್ಷದಲ್ಲೇ ವಿದ್ಯಾರ್ಥಿಗಳಿಗೆ ಈ ನಿಮಯ ಜಾರಿಯಾಗಲಿದೆ. ಪಾಲಕರು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗುತ್ತದೆ.  ಕರ್ನಾಟಕ ಸರ್ಕಾರವು 1 ನೇ ತರಗತಿಯ ಪ್ರವೇಶಕ್ಕಾಗಿ 5+ ವರ್ಷಗಳ ವಯಸ್ಸಿನ ಮಾನದಂಡವನ್ನು ಅನುಸರಿಸುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ (NEP-2020) ಭಾಗವಾಗಿ, ಕೇಂದ್ರ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅಡ್ಮಿಷನ್​ ಮಾಡಿಸುವಾಗ ವಿದ್ಯಾರ್ಥಿಗಳಿಗೆ 6 ವರ್ಷ ಆಗಿರಲೇ ಬೇಕು ಎಂದು ಹೇಳಲಾಗುತ್ತಿದೆ.


ಜುಲೈ 26, 2022 ರಂದು, DSEL 2023-24 ಶೈಕ್ಷಣಿಕ ವರ್ಷದಿಂದ ಅದನ್ನು ಕಡ್ಡಾಯಗೊಳಿಸುವ ಆದೇಶವನ್ನು ಹೊರಡಿಸಿದೆ. ಇದು ಪೋಷಕರಲ್ಲಿ ಸಾಕಷ್ಟು ಗೊಂದಲ ಮತ್ತು ಆತಂಕವನ್ನು ಸೃಷ್ಟಿಸಿತ್ತು. ನಂತರ ಕರ್ನಾಟಕ ಸರ್ಕಾರವು ಎರಡು ಶೈಕ್ಷಣಿಕ ವರ್ಷಗಳವರೆಗೆ ಸಡಿಲಿಕೆಯನ್ನು ನೀಡಿತು. ನವೆಂಬರ್ 15, 2022 ರಂದು DSEL ಹೊರಡಿಸಿದ ಆದೇಶದಲ್ಲಿ 6 ವರ್ಷ ವಯಸ್ಸಿನ ಪೂರ್ಣಗೊಳಿಸುವ ನಿಯಮವನ್ನು 2025-26 ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲಾಗುವುದು ಎಂದು ಹೇಳಿದೆ.


ಇದನ್ನೂ ಓದಿ: 10th Class Results: ಮೇ 2ನೇ ವಾರದಲ್ಲಿ 10ನೇ ತರಗತಿ ಫಲಿತಾಂಶ ಪ್ರಕಟ


ಈಗ ಡಿಎಸ್‌ಇಎಲ್ ಆದೇಶವನ್ನು ಒಂದು ವರ್ಷ ಮುಂಚಿತವಾಗಿ ಜಾರಿಗೆ ತರಲು ನಿರ್ಧರಿಸಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿಶಾಲ್ ಆರ್  ತಿಳಿಸಿದ್ದಾರೆ. “ಈ ಆದೇಶವನ್ನು 2024-25ರ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲು ಸಚಿವರು ಮತ್ತು ಇಲಾಖೆಯ ಕಾರ್ಯದರ್ಶಿ ಈಗಾಗಲೇ ನಿರ್ಧರಿಸಿದ್ದಾರೆ. ಈಗಾಗಲೇ 2022-23 ರಲ್ಲಿ LKG ಗೆ ಸೇರಿದ ಮಕ್ಕಳು 2024-25 ರ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ಪ್ರವೇಶಿಸಲು ಅರ್ಹರಾಗಿರುತ್ತಾರೆ ಆದರೆ ನರ್ಸರಿ ವಿದ್ಯಾರ್ಥಿಗಳಲ್ಲ.




2023-24ರ ಶೈಕ್ಷಣಿಕ ವರ್ಷದಿಂದ ಕಡ್ಡಾಯ


ಫೆಬ್ರವರಿ 2023 ರಲ್ಲಿ, ಕೇಂದ್ರ ಶಿಕ್ಷಣ ಸಚಿವಾಲಯವು ಮತ್ತೊಮ್ಮೆ ಇದನ್ನು ತಿಳಿಸಿತ್ತು ಮತ್ತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಂದನೇ ತರಗತಿ ಪ್ರವೇಶಕ್ಕೆ ಕನಿಷ್ಠ 6 ವರ್ಷ ವಯಸ್ಸನ್ನು ಮಾಡುವಂತೆ ನಿರ್ದೇಶಿಸಿತ್ತು. ಆದರೂ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಕೆವಿಗಳು ಮತ್ತು ಸಿಬಿಎಸ್‌ಇ ಮತ್ತು ಐಸಿಎಸ್‌ಇಯಂತಹ ಹೆಚ್ಚಿನ ಕೇಂದ್ರೀಯ ಮಂಡಳಿ ಶಾಲೆಗಳು ಎರಡು ವರ್ಷಗಳ ಸಡಿಲಿಕೆಯ ರಾಜ್ಯ ಸರ್ಕಾರದ ಆದೇಶವನ್ನು ಬದಿಗಿಟ್ಟು 2023-24ರ ಶೈಕ್ಷಣಿಕ ವರ್ಷದಿಂದ ಕಡ್ಡಾಯಗೊಳಿಸಿವೆ.

top videos


    ಬೆಂಗಳೂರಿನ ಆಕ್ಸ್‌ಫರ್ಡ್ ಸಂಸ್ಥೆಯ ಕಾರ್ಯದರ್ಶಿ ಸುಪ್ರಿತ್, “ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ಸಿಬಿಎಸ್‌ಇ ಆದೇಶವನ್ನು ಕಳುಹಿಸಿದ್ದು, 2023-24ರ ಶೈಕ್ಷಣಿಕ ವರ್ಷದಿಂದ 1ನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಠ 6 ವರ್ಷ ವಯಸ್ಸನ್ನು ಕಡ್ಡಾಯಗೊಳಿಸಿದೆ. ಆದ್ದರಿಂದ, ನಾವು ಈ ಆದೇಶವನ್ನು ಅನುಸರಿಸುತ್ತೇವೆ ಮತ್ತು ಈ ವರ್ಷ 1 ನೇ ತರಗತಿಗೆ 6 ವರ್ಷಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ಒದಗಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

    First published: