ಶಿಕ್ಷಣವು ( Education) ನಮ್ಮ ಜೀವನವನ್ನು ರೂಪಿಸಲು ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಂಡಿದ್ದರೂ, ನಮ್ಮ ದೇಶದಲ್ಲಿ ಇದು ಒಂದು ಪ್ರಮುಖ ಸಮಸ್ಯೆಯಾಗಿದೆ. ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ (National Education Policy) ಹಲವಾರು ಸಮಸ್ಯೆಗಳಿವೆ. ಅಸ್ತಿತ್ವದಲ್ಲಿರುವ ಶಿಕ್ಷಣ ಮಾದರಿಯನ್ನು ಸುಧಾರಿಸಲು ಭಾರತ ಸರ್ಕಾರ ಮತ್ತು ಸಂಸ್ಥೆಗಳು ಕೆಲಸ ಮಾಡುತ್ತಿವೆ.
ಹಣವಂತನಿಗಿಂತ ಗುಣವಂತನಿಗೆ ಅಂದು ಹೆಚ್ಚಿನ ಗೌರವವು ಲಭ್ಯವಾಗುತ್ತಿತ್ತು. ಆಗ ಮಹಾಜ್ಞಾನಿಗಳು, ವಿರಾಗಿಗಳು, ಪರೋಪಕಾರಿಗಳು ನಮ್ಮ ಆದರ್ಶಪುರುಷರಾಗಿದ್ದರು. ಅಂದಿನ ಶಿಕ್ಷಣಪದ್ಧತಿಯು ಕೇವಲ ವಿಚಾರಗಳನ್ನು ತಲೆಗೆ ತುಂಬದೇ, ಜ್ಞಾನದ ಜೊತೆಯಲ್ಲಿಯೇ ನೈತಿಕ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದವು.
ಬೆಂಗಳೂರಿನ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಮೂರರಿಂದ ಎಂಟು ವರ್ಷದೊಳಗಿನ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ (NEP) ಯ ಅನುಸಾರವಾಗಿ ಫೌಂಡೇಶನಲ್ ಹಂತಕ್ಕಾಗಿ ಕರ್ನಾಟಕ ರಾಜ್ಯ ಪಠ್ಯಕ್ರಮ ಚೌಕಟ್ಟಿನ ಡ್ರಾಫ್ಟ್ ಅನ್ನು ಬಿಡುಗಡೆ ಮಾಡಿದೆ.
3-8 ವರ್ಷದ ಮಕ್ಕಳಿಗೆ ಹೊಸ ಶಿಕ್ಷಣ ಯೋಜನೆ
ರಾಜ್ಯವು 10+ 2+ 3 ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಆದ್ದರಿಂದ 1 ಮತ್ತು 10 ವರ್ಷಗಳ ಶಾಲಾ ಶಿಕ್ಷಣದ ನಡುವೆ, ಶಾಲಾಪೂರ್ವ ಶಿಕ್ಷಣವು 2 ವರ್ಷಗಳು ಮತ್ತು ಪದವಿ ಶಿಕ್ಷಣವು ಕನಿಷ್ಠ 3 ವರ್ಷಗಳು. ಪ್ರಿ-ಯೂನಿವರ್ಸಿಟಿ ವ್ಯವಸ್ಥೆಯಲ್ಲಿ ಎರಡು ಭಾಷಾ ವಿಷಯಗಳು ಮತ್ತು ನಾಲ್ಕು ಐಚ್ಛಿಕ ವಿಷಯಗಳನ್ನು ಅಧ್ಯಯನ ಮಾಡಬಹುದು.
3-8 ವರ್ಷದ ಮಕ್ಕಳಿಗೆ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ಅಕ್ಟೋಬರ್ 2022 ರಲ್ಲಿ ಪ್ರಕಟಿಸಿತ್ತು. ಆದರೆ ಅದನ್ನು 2023-24ರ ಶೈಕ್ಷಣಿಕ ವರ್ಷದಲ್ಲಿ ಅಂತಿಮಗೊಳಿಸಿದೆ ಹಾಗೂ ಈ ವರ್ಷದಿಂದಲೆ ಅದನ್ನು ಅಳವಡಿಸಿಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಈ ಚೌಕಟ್ಟನ್ನು ಸಿದ್ಧಪಡಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ.
ಅಂಗನವಾಡಿಗಳಲ್ಲಿ 1-3 ನೇ ತರಗತಿಯ ವಿದ್ಯಾರ್ಥಿಗಳಿಗೆ ಅಸ್ತಿತ್ವದಲ್ಲಿರುವ 'ಚಿಲಿ ಪಿಲಿ' ಮತ್ತು 'ನಲಿ ಕಲಿ' ಅಭ್ಯಾಸದ ಅವಧಿಗೆ ಬದಲಾವಣೆಗಳ ಕುರಿತು ಈ ಚೌಕಟ್ಟಿನಲ್ಲಿ ಪ್ರಸ್ತಾಪಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.
ಈ ರೀತಿಯ ಯೋಜನೆಯನ್ನು ಇನ್ನೂ ಇತರೆ ವಯೋಮಾನದವರ ಪಠ್ಯಕ್ರಮದಲ್ಲಿ ರೂಪಿಸಲಾಗುವುದು ಎಂದು ರಾಜ್ಯದಲ್ಲಿ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣದ (ಇಸಿಸಿಇ) ಪರಿಷ್ಕರಣೆಯು ಪ್ರಕಟಿಸಿದೆ. ಇತರ ವಯೋಮಾನದವರ ಯೊಜನೆ ವರದಿಗಳನ್ನೂ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಹೊಸ ಚೌಕಟ್ಟಿನ ಯಶಸ್ವಿ ಅನುಷ್ಠಾನದಿಂದ ಕರ್ನಾಟಕದಲ್ಲಿ 3-8 ವರ್ಷದೊಳಗಿನ ಮಕ್ಕಳು ಗುಣಮಟ್ಟದ ಶಿಕ್ಷಣ ಮತ್ತು ಸೇವೆಗಳನ್ನು ಪಡೆಯುತ್ತಾರೆ ಎಂಬುದನ್ನು ಖಾತ್ರಿಪಡಿಸುತ್ತದೆ ಎಂದು ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕಿ ವೆನಿತಾ ಕೌಲ್, ಶಿಕ್ಷಣ ತಜ್ಞೆ ಲತಾ ಮೆನನ್ ಮತ್ತು ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಮೊಹಮ್ಮದ್ ಬೇಗ್ ಅವರು ಹೊಸ ಚೌಕಟ್ಟನ್ನು ರೂಪಿಸಿದ ಸಮಿತಿಯ ಸದಸ್ಯರಾಗಿದ್ದರೆ. ಮಕ್ಕಳಿಗೆ ಗಿಳಿಪಾಠವನ್ನಷ್ಟೇ ಮಾಡದೇ, ನೀತಿ, ಪ್ರಾಮಾಣಿಕತೆಗಳ ಮಹತ್ವವನ್ನರಿತು ಅವುಗಳನ್ನು ಸ್ವತಃ ಪಾಲಿಸಿ, ಮಕ್ಕಳಿಗೆ ಆದರ್ಶಪ್ರಾಯರಾಗಿ ಪ್ರೀತಿಯಿಂದ ಬೋಧಿಸುವ ಶಾಲೆಗಳಿಗೆ ಸೇರಿಸಬೇಕು.
ಇದನ್ನೂ ಓದಿ: NEP: 9 ರಿಂದ 12ನೇ ತರಗತಿ ಶಿಕ್ಷಣ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ! ಇಲ್ಲಿದೆ ಸಂಪೂರ್ಣ ಮಾಹಿತಿ
ಇಂದಿನ ದಿನಗಳಲ್ಲಿ ಪಾಲಕರು ಮಕ್ಕಳಿಗೆ ಕಷ್ಟಪಟ್ಟು ಓದಬೇಕೆಂದು ಒತ್ತಡ ಹಾಕುತ್ತಾರೆ, ಇದರಿಂದ ಮಕ್ಕಳು ಖಿನ್ನತೆಗೆ ಒಳಗಾಗುತ್ತಾರೆ. ಮಕ್ಕಳನ್ನು ಹೊರಗೆ ಆಟವಾಡಲು ಬಿಡುವುದಿಲ್ಲ, ಅವರನ್ನು ಯಾವಾಗಲೂ ಕೊಠಡಿಯಲ್ಲಿ ಕುಡಿಹಾಕಿ ಓದಲು ಬಲವಂತಪಡಿಸುಸುತ್ತಾರೆ.
ಮಕ್ಕಳು ಶಾಲೆಗೆ ಹೋದರೂ ಸಹ ಅವರು ಶಿಕ್ಷಣದ ಮೇಲೆ ಮಾತ್ರ ಗಮನಹರಿಸುತ್ತಾರೆ, ಏಕೆಂದರೆ ಇಲ್ಲಿನ ಶಾಲಿಗಳಿಗೆ ಉತ್ತಮ ಫಲಿತಾಂಶ ಮಾತ್ರ ಬೇಕಾಗಿರುತ್ತದೆ. ಶಾಲೆಗಳು ಮಕ್ಕಳ ದೈಹಿಕ ಚಟುವಟಿಕೆಗಳ ಕುರಿತು ಕಾಳಜಿ ವಹಿಸುವುದನ್ನು ಮರೆತೆಬಿಟ್ಟಿವೆ. ಈ ಹೋಸ ಪದ್ಧತಿಯಿಂದ ಮಕ್ಕಳ ಓದುವಿಕೆಯು ಸುಲಭವಾಗುವುದು ಹಾಗೂ ಅವರ ಮನಸು, ದೇಹ ಚೆನ್ನಾಗಿರುತ್ತದೆ ಎಂಬುವುದು ಸರ್ಕಾರದ ನಂಬಿಕೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ