• ಹೋಂ
  • »
  • ನ್ಯೂಸ್
  • »
  • Jobs
  • »
  • CA Exam ದಿನಾಂಕ ಮುಂದೂಡಿಕೆ; ಇಲ್ಲಿದೆ ಪರೀಕ್ಷೆ ಬಗ್ಗೆ ಮಾಹಿತಿ

CA Exam ದಿನಾಂಕ ಮುಂದೂಡಿಕೆ; ಇಲ್ಲಿದೆ ಪರೀಕ್ಷೆ ಬಗ್ಗೆ ಮಾಹಿತಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಮೇ 10, 2023 ರಂದು ನಿಗದಿಯಾಗಿದ್ದ ಪರೀಕ್ಷೆಯು ಈಗ ಮೇ 20, 2023 ರಂದು (ಶನಿವಾರ) ಅದೇ ಸಮಯದಲ್ಲಿ  ಅಂದರೆ ಮಧ್ಯಾಹ್ನ 2 ರಿಂದ 5 ರವರೆಗೆ ನಡೆಸಲಾಗುತ್ತದೆ.

  • Share this:
  • published by :

ಈ ವರ್ಷ ಕರ್ನಾಟಕದಲ್ಲಿ CA ಪರೀಕ್ಷೆ ಯಾವಾಗ ನಡೆಯಲಿದೆ ಎಂಬ ಕಾತುರತೆ ನಿಮಗಿದ್ದರೆ ಈ ಅಂಶವನ್ನು ಗಮನಿಸಿ. ಮುಂದಿನ ತಿಂಗಳು ಅಂದರೆ ಮೇ ಅಲ್ಲಿ ಪರೀಕ್ಷೆ ನಡೆಯಲಿದೆ. ಕರ್ನಾಟಕ ರಾಜ್ಯದಲ್ಲಿ (Karnataka State) ಮೇ 10 ಕ್ಕೆ 2023 ರ ICAI CA ಮೇ ಪರೀಕ್ಷೆಯನ್ನು ಮುಂದೂಡಲಾಗಿದೆ. ಈ ಹಿಂದೆ ಬೇರೆ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಆದರೆ ಕೆಲ ಕಾರಣದಿಂದ ಇದನ್ನು ಮುಂದೂಡಲಾಗಿದೆ. ಈ ಬಾರಿ CA ಪರೀಕ್ಷೆ (Exam) ಬರೆಯಲಿರುವ ಅಭ್ಯರ್ಥಿಗಳನ್ನು ಗಮನಿಸಿ. 


ಅಭ್ಯರ್ಥಿಗಳು ಅಧಿಕೃತ ಸೂಚನೆಯನ್ನು ಪರಿಶೀಲಿಸಬಹುದು. ಪರಿಶೀಲಿಸಲು ಬೇಕಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.  ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಕರ್ನಾಟಕದಲ್ಲಿ ಮೇ 10, 2023 ರಂದು ನಡೆಯಬೇಕಿದ್ದ ICAI CA ಮೇ ಪರೀಕ್ಷೆ 2023 ಅನ್ನು ಮುಂದೂಡಿದೆ. ಮುಂದೂಡಿಕೆ ಕುರಿತು ಅಧಿಕೃತ ಸೂಚನೆಯನ್ನು ಅಭ್ಯರ್ಥಿಗಳು icai.org ನಲ್ಲಿ ICAI ನ ಅಧಿಕೃತ ಸೈಟ್‌ನಲ್ಲಿ ಪರಿಶೀಲಿಸಬಹುದು.


ಇದನ್ನೂ ಓದಿ: School Holidays: ಹತ್ತನೇ ತರಗತಿ ಪರೀಕ್ಷೆ ನಡೆಯುವ ಶಾಲೆಗಳಲ್ಲಿ ಇತರ ವಿದ್ಯಾರ್ಥಿಗಳಿಗೆ ಸಿಕ್ಕಿದೆ ರಜೆ


ನಾವಿಲ್ಲಿ ನೀಡಲಾದ ಅಧಿಕೃತ  ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ನೀವು ಇನ್ನಷ್ಟು ಮಾಹಿತಿ ಪಡೆಯಬಹುದು. ಆದಷ್ಟು ಬೇಗ ಪರೀಕ್ಷಾ ಸಿದ್ಧತೆ ನಡೆಸಿ. ಈ ಬಾರಿ ಹೆಚ್ಚಿನ ಅಂಕ ಗಳಿಸಿ ನಿಮ್ಮ ಗುರಿ ಸಾಧಿಸಿಕೊಳ್ಳಿ.


ಮೇ 10, 2023 ರಂದು ನಿಗದಿಯಾಗಿದ್ದ ಪರೀಕ್ಷೆಯು ಈಗ ಮೇ 20, 2023 ರಂದು (ಶನಿವಾರ) ಅದೇ ಸಮಯದಲ್ಲಿ  ಅಂದರೆ ಮಧ್ಯಾಹ್ನ 2 ರಿಂದ 5 ರವರೆಗೆ ಮತ್ತು ಅದೇ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ನೀಡಿರುವ ಅಡ್ಮಿಟ್ ಕಾರ್ಡ್ ಪರಿಷ್ಕೃತ ದಿನಾಂಕಕ್ಕೆ ಮಾನ್ಯವಾಗಿರುತ್ತದೆ.




ಇದಲ್ಲದೆ, ಎಲ್ಲಾ ಇತರ ನಗರಗಳು ಮತ್ತು ದಿನಾಂಕಗಳಿಗೆ ಸಂಬಂಧಿಸಿದಂತೆ ಪರೀಕ್ಷೆಯ ವೇಳಾಪಟ್ಟಿಯು ಬದಲಾಗದೆ ಉಳಿಯುತ್ತದೆ ಎಂದು ಸಂಸ್ಥೆ ಹೇಳಿದೆ. ಹೆಚ್ಚಿನ ಸಂಬಂಧಿತ ವಿವರಗಳಿಗಾಗಿ ಅಭ್ಯರ್ಥಿಗಳು ICAI ನ ಅಧಿಕೃತ ಸೈಟ್ ಅನ್ನು ಪರಿಶೀಲಿಸಬಹುದು.


ಹಿಂದಿನ ಬಾರಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ರಮ್ಯಶ್ರೀ ರಾವ್
ಕಳೆದ ಆರು ವರ್ಷಗಳಿಂದ ಸಿಎ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ರಮ್ಯಶ್ರೀ ರಾವ್, ಮೊದಲ ಪ್ರಯತ್ನದಲ್ಲಿ ಎಐಆರ್ ದ್ವಿತೀಯ ಶ್ರೇಣಿಯೊಂದಿಗೆ ಪರೀಕ್ಷೆಯಲ್ಲಿ  ಉತ್ತೀರ್ಣರಾಗಿದ್ದು, 800 ಕ್ಕೆ 617 ಅಂಕಗಳನ್ನು ಗಳಿಸಿದ್ದಾರೆ. ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ಐಸಿಎಐ) ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಅಖಿಲ ಭಾರತ  ಶ್ರೇಣಿಯಲ್ಲಿ (ಎಐಆರ್) ದ್ವಿತೀಯ ಸ್ಥಾನ  ಗಳಿಸಲು ಕಠಿಣ ಪರಿಶ್ರಮ, ಸ್ಥಿರತೆ ಮತ್ತು ಸಮರ್ಪಣಾ ಮನೋಭಾವನೆ ಸಹಕಾರಿಯಾಗಿದೆ ಎಂದು ಸುರತ್ಕಲ್ ನಿವಾಸಿ ರಮ್ಯಾಶ್ರೀ ರಾವ್ ಹೇಳಿದ್ದಾರೆ.


ಅವರು ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಗಳಲ್ಲಿಯೂ ಉತ್ತಮ ಸಾಧನೆ ಮಾಡಿದ್ದರು. ಖಾಸಗಿ ಸಂಸ್ಥೆಯ ಮೂಲಕ ಸಿಎ ಕಾಮನ್ ಪ್ರೊಫಿಷಿಯನ್ಸಿ ಟೆಸ್ಟ್ (ಸಿಪಿಟಿ) ಮತ್ತು ಮಧ್ಯಂತರ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ರಮೇಶ್ ರಾವ್ ಮತ್ತು ಮೀರಾ ಎಂ ದಂಪತಿಯ ಪುತ್ರಿಯಾದ ಇವರ ತಂದೆ ತಾಯಿ ಇಬ್ಬರೂ ವಿಮಾ ಕಂಪನಿಗಳಲ್ಲಿ ಕೆಲಸ ಮಾಡುತ್ತಾರೆ.

top videos


    ಪಿಯು ಓದುತ್ತಿರುವಾಗಲೇ ನೇರವಾಗಿ ಸಿಎ ಪರೀಕ್ಷೆಗೆ ಓದಲು ಆರಂಭಿಸಿದರು
    ಬುಧವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ರಾವ್, ಸಿಎ ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ 16 ಎಐಆರ್ ಗಳಿಸಿದ್ದಾರೆ. ಅದರ ನಂತರ, ಅವರು ಮಂಗಳೂರಿನ ಕಾಮತ್ ಮತ್ತು ರಾವು ಚಾರ್ಟರ್ಡ್ ಅಕೌಂಟೆಂಟ್‌ಗಳಲ್ಲಿ ತಮ್ಮ ಅಭ್ಯಾಸ ಮುಂದುವರೆಸಿದರು. ಸಾಮಾನ್ಯವಾಗಿ ಮಂಗಳೂರಿನ ಸಿಎ ಆಕಾಂಕ್ಷಿಗಳು ತಮ್ಮ ಬಿಕಾಂ ಕೋರ್ಸ್ ಅನ್ನು ಮುಂದುವರಿಸುವಾಗ ತರಬೇತಿಗೆ ಪಡೆಯುತ್ತಾರೆ ಎಂದು ರಮ್ಯಶ್ರೀ ರಾವ್ ಹೇಳಿದರು. ಆದರೆ, ಪಿಯು ಓದುತ್ತಿರುವಾಗಲೇ ನೇರವಾಗಿ ಸಿಎ ಪರೀಕ್ಷೆಗೆ ಓದಲು ಆರಂಭಿಸಿದವರು ಇವರು.

    First published: