• Home
  • »
  • News
  • »
  • jobs
  • »
  • Anganwadi Recruitment: ಅಂಗನವಾಡಿ ನೇಮಕಾತಿಗೆ ಹೊಸ ನಿಯಮ, 10, 12ನೇ ತರಗತಿ ಪಾಸ್​ ಆದ್ರೆ ಮಾತ್ರ ಕೆಲಸ

Anganwadi Recruitment: ಅಂಗನವಾಡಿ ನೇಮಕಾತಿಗೆ ಹೊಸ ನಿಯಮ, 10, 12ನೇ ತರಗತಿ ಪಾಸ್​ ಆದ್ರೆ ಮಾತ್ರ ಕೆಲಸ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಹಿಂದೆ ಕಾರ್ಯಕರ್ತೆಯರ ಹುದ್ದೆಗೆ ಎಸ್ಸೆಸ್ಸೆಲ್ಸಿ, ಸಹಾಯಕಿಯರಿಗೆ 7ನೇ ಕ್ಲಾಸ್‌ ಮಾನದಂಡವಿತ್ತು. ಆದರೆ ಈಗ ಹತ್ತು ಹಾಗೂ ಹನ್ನೆರಡನೇ ತರಗತಿ ಪಾಸ್ ಆಗಿದ್ರೆ ಮಾತ್ರ ಕೆಲಸ ಪಡೆಯಬಹುದು. ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

  • Share this:

ಹೊಸ ಶಿಕ್ಷಣ ನೀತಿ ಪ್ರಕಾರ ಅಂಗನವಾಡಿ (Anganwadi) ಕಾರ್ಯಕರ್ತೆಯರ ಶೈಕ್ಷಣಿಕ ಅರ್ಹತೆಯಲ್ಲಿ ಕೆಲವು ಬದಲಾವಣೆ ತರಲಾಗಿದೆ. ಸರಕಾರವು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರ ಹುದ್ದೆಗಳಿಗೆ ಪಿಯು, ಎಸ್ಸೆಸ್ಸೆಲ್ಸಿ (SSLC) ಕಡ್ಡಾಯಗೊಳಿಸುತ್ತಿದೆ. ಈ ಹಿಂದೆ ಕಾರ್ಯಕರ್ತೆಯರ ಹುದ್ದೆಗೆ ಎಸ್ಸೆಸ್ಸೆಲ್ಸಿ, ಸಹಾಯಕಿಯರಿಗೆ 7ನೇ ಕ್ಲಾಸ್‌ ಮಾನದಂಡವಿತ್ತು. ಎನ್​ ಇ ಪಿ ಕಾರಣದಿಂದಾಗಿ ಇವರ ಶೈಕ್ಷಣಿಕ (Education Qualification) ಅರ್ಹತೆಯನ್ನು ಹೆಚ್ಚು ಮಾಡಲಾಗಿದೆ ಎಂದು ಹೇಳಿದ್ದಾರೆ. 


ಇದಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಗೆ ಸಿದ್ಧವಾಗುತ್ತಿರುವ . ​ಎನ್‌ಇಪಿ ದೃಷ್ಟಿಯಿಂದ ಹೆಚ್ಚಿನ ಶೈಕ್ಷಣಿಕ ಅರ್ಹತೆ ನಿಗದಿಪಡಿಸಲಾಗಿದೆ. ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಬಡ್ತಿಗೂ ನಿಯಮಗಳನ್ನು ಬದಲಿಸಲಾಗಿದೆ. ಹೊಸ ಕಾರ್ಯಕರ್ತೆಯರ ಆಯ್ಕೆ ಮಾಡಲು ಅಂಗನವಾಡಿ ಚಟುವಟಿಕೆ ಸಂಬಂಧಿತ ಶೈಕ್ಷಣಿಕ ಕೋರ್ಸ್‌ ಪೂರೈಸಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ.


ನೇಮಕಾತಿ ಆರಂಭವಾಗಲಿದೆ


ಈಗ ಹೊಸದಾಗಿ ನೇಮಕಾತಿ ಆರಂಭಿಸುವಾಗಲೂ ಸಹ ಇದೇ ಮಾನದಂಡವನ್ನು ಆಧರಿಸಿ ಶಿಕ್ಷಕರ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ನೇಮಕಾತಿಗೊಂಡವರಿಗೆ ಕೆಲಸ ಕಳೆದು ಕೊಳ್ಳುವ ಭಯವಿಲ್ಲ ಯಾಕೆಂದರೆ ಅವರಿಗೆ ಈ ನಿಯಮ ಅನ್ವಹಿಸುವುದಿಲ್ಲ. ಆದರೆ ಅವರ ಕೆಸದ ಬಡ್ತಿಗೆ ಇದು ಅನ್ವಯವಾಗುತ್ತದೆ.


ಇದನ್ನೂ ಓದಿ: Vidyanidhi: 11 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಸ್ಕಾಲರ್​ ಶಿಪ್​: ಸಿಎಂ ಬೊಮ್ಮಾಯಿ ಮಹತ್ವದ ಘೋಷಣೆ


ಕೆಲಸದ ಬಡ್ತಿ ಹೆಚ್ಚಿಸುವ ಸಂದರ್ಭದಲ್ಲಿ ಇವರ ಶೈಕ್ಷಣಿಕ ಮಾನದಂಡಗಳನ್ನು ಪರಿಗಣಿಸಲಾಗುತ್ತದೆ. ಮತ್ತು ಇನ್ನು ಬೇರೆ ಅಭ್ಯರ್ಥಿಕಳ ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಹತ್ತನೇ ತರಗತಿ ಅಥವಾ ಪಿಯುಸಿ ಮಾಡುವುದು ಕಡ್ಡಾಯವಾಗಿರುತ್ತದೆ. ಆದ್ದರಿಂದ ಇನ್ನು ಮುಂದೆ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಈ ಕುರಿತು ಗಮನಹರಿಸ ಬೇಕಾಗುತ್ತದೆ. ಈ ಅರ್ಹತೆ ಹೊಂದಿದ್ದವರು ಮಾತ್ರ ಅಪ್ಲೈ ಮಾಡಬಹುದು.


ಈ ಹಿಂದೆ ಯಾವ ರೀತಿ ಮಾನದಂಡವಿತ್ತು?


ಈ ಹಿಂದೆ ಕಾರ್ಯಕರ್ತೆಯರ ಹುದ್ದೆಗೆ ಎಸ್ಸೆಸ್ಸೆಲ್ಸಿ, ಸಹಾಯಕಿಯರಿಗೆ 7ನೇ ಕ್ಲಾಸ್‌ ಮಾನದಂಡವಿತ್ತು. ಎನ್‌ಇಪಿ ದೃಷ್ಟಿಯಿಂದ ಹೆಚ್ಚಿನ ಶೈಕ್ಷಣಿಕ ಅರ್ಹತೆ ನಿಗದಿಪಡಿಸಲಾಗಿದೆ. ಸರಕಾರದ ಅಂಗೀಕೃತ ಸಂಸ್ಥೆಗಳಲ್ಲಿ ಅಂಗನವಾಡಿ ಚಟುವಟಿಕೆಗೆ ಸಂಬಂಧಿಸಿದ ಇಸಿಸಿಇ ಡಿಪ್ಲೊಮಾ, ಜೆಒಸಿ, ಎನ್‌ಟಿಟಿ, ಡಿಪೊ್ಲೕಮಾ ಇನ್‌ ನ್ಯೂಟ್ರೀಷಿಯನ್‌, ಹೋಂ ಸೈನ್ಸ್‌ ಸರ್ಟಿಫಿಕೇಟ್‌ ಕೋರ್ಸ್‌ ಸೇರಿದಂತೆ ಇನ್ಯಾವುದೇ ಶೈಕ್ಷಣಿಕ ತರಬೇತಿ ಪ್ರಮಾಣ ಪತ್ರವುಳ್ಳ ಕೋರ್ಸ್​ ಮಾಡಿದವರಿಗೆ ನೇಮಕಾತಿ.


ಏನಿದರ ಉದ್ದೇಶ?


ಇದರ ಉದ್ದೇಶ ಏನೆಂದರೆ ಪ್ರಾಥಮಿಕ ಹಂತದಲ್ಲೇ ಮಕ್ಕಳ ಕಲಿಗೆಯ ಗುಣಮಟ್ಟವನ್ನು ಹೆಚ್ಚಿಸುವುದಾಗಿದೆ. ಕಲಿಕೆಗೆ ಗುಣಮಟ್ಟ ಕಾಯ್ದುಕೊಳ್ಳುವ ಏಕೈಕ ಉದ್ದೇಶದಿಂದ ಈ ರೀತಿ ನಿರ್ಧಾರವನ್ನು ಕೈಗೊಳ್ಳಲಾಗಿದೆ. ರಾಜ್ಯದಲ್ಲಿನ 62500 ಅಂಗನವಾಡಿಗಳಲ್ಲಿ ನಿವೃತ್ತಿ ಹೊಂದುವವರಿದ್ದಾರೆ, ಜಿಲ್ಲೆಗಳಿಗೆ ಸ್ಥಳಾಂತರ ಹಾಗೂ ಇನ್ನಿತರ ಕಾರಣಕ್ಕೆ ಖಾಲಿಯಾದ ಸ್ಥಾನಗಳಿಗೆ ನೇಮಕ ಪ್ರಕ್ರಿಯೆಗೆ ಈ ಪರಿಷ್ಕರಣೆ ಅನ್ವಯವಾಗಲಿದೆ. ಖಾಲಿ ಹುದ್ದೆಗಳ ನೇಮಕಾತಿಯ 1 ತಿಂಗಳಿಗೂ ಮುನ್ನ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗುತ್ತದೆ.


ಶೇ.15ರಷ್ಟು ಮಂದಿ ಮಾತ್ರ ಎಸ್ಸೆಸ್ಸೆಲ್ಸಿವರೆಗೆ ವ್ಯಾಸಂಗ ಮಾಡಿರುವ ಸಾಧ್ಯತೆ ಇದೆ


ಸರಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಪಿಯು ವಿದ್ಯಾರ್ಹತೆ ನಿಗದಿಗೊಳಿಸಿರುವುದು ಸ್ವಾಗತಾರ್ಹ. ಆದರೆ, ರಾಜ್ಯದ 61,000 ಸಹಾಯಕಿಯರ ಪದೋನ್ನತಿಗೆ ವಿದ್ಯಾರ್ಹತೆ ಪರಿಗಣಿಸುವುದು ಸರಿಯಲ್ಲ ಎಂಬ ಮಾತುಗಳು ಕೇಳಿಬರ್ತಿವೆ. ಈ ಯೋಜನೆಯಿಂದ ಹಲವಾರು ಜನರಿಗೆ ಅನುಕೂಲವಾದರೆ ಇನ್ನು ಹಲವರಿಗೆ ಅನಾನುಕೂಲವೂ ಇದೆ. ಸಹಾಯಕಿಯರಲ್ಲಿ ಶೇ.15ರಷ್ಟು ಮಂದಿ ಮಾತ್ರ ಎಸ್ಸೆಸ್ಸೆಲ್ಸಿವರೆಗೆ ವ್ಯಾಸಂಗ ಮಾಡಿರುವ ಸಾಧ್ಯತೆಯಿದ್ದು, ಉಳಿದವರು ಪದೋನ್ನತಿಯಿಂದ ವಂಚಿತರಾಗಲಿದ್ದಾರೆ. ಆ ಕಾರಣದಿಂದ ಕೆಲವರಿಗೆ ಈ ಕುರಿತು ಅಸಮಾಧಾನವಿದೆ ಎಂಬುದು ತಿಳಿದುಬರುತ್ತದೆ.

First published: