ಶಿವಮೊಗ್ಗ: ಮುಳುಗುತ್ತಿದ್ದ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ (Education Institute) ಚೇತನ ನೀಡುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಈ ಹೇಳಿಕೆಗೆ ಅನುದಾನಿತ ಸಂಸ್ಥೆಗಳು ಸ್ವಾಗತ (Welcome)ಜೊತೆ ಅನುಮಾನ ಕೂಡ ವ್ಯಕ್ತಪಡಿಸುತ್ತಿದ್ದಾರೆ. ಅನುದಾನಿತ ಕಾಲೇಜುಗಳ ಫೀ ವಿಚಾರದಲ್ಲಿ ಹೊಸ ರೂಲ್ಸ್ ತರಲು ಹೊರಟಿದೇಯಾ ಸರ್ಕಾರ? ಉನ್ನತ ಶಿಕ್ಷಣ ಸಚಿವರ ಈ ಒಂದು ಹೇಳಿಕೆ ಬಗ್ಗೆ ಶಿಕ್ಷಣ ಸಂಸ್ಥಗಳು ಹೇಳ್ತಿರೋದು ಏನು? ಸರ್ಕಾರದ ಹೊಸ ರೂಲ್ಸ್ ಗೆ ಸ್ವಾಗತದ ಜೊತೆ, ಶಿಕ್ಷಣ (Education) ಸಂಸ್ಥೆಗಳ ಭಯ ಏನು? 100% ಫೀ ರಿಯಾಯತಿ ನಿಂದ ಚೇತರಿಸಿಕೋಳ್ಳುತಾವ ಅನುದಾನಿತ ಶಾಲಾ ಕಾಲೇಜುಗಳು ಎಂಬ ಪ್ರಶ್ನೆಗೆ (Question) ಉತ್ತರ ಇಲ್ಲಿದೆ ನೋಡಿ.
ಹೌದು ಸರ್ಕಾರಿ ಶಾಲಾ-ಕಾಲೇಜು ಒಂದು ಕಡೆ ಅನುದಾನಗಳ ಕೊರತೆಯಿಂದಾಗಿ ಮರುಗುತ್ತಿವೆ. ಸರಿಯಾದ ಕಟ್ಟಡ, ಬೋಧಕ ವರ್ಗ ಇಲ್ಲದೆ, ವಿದ್ಯಾರ್ಥಿಗಳು ಖಾಸಗಿ ಸಂಸ್ಥೆಗಳತ್ತ ಮುಖ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಅನುದಾನಿತ ಶಾಲಾ-ಕಾಲೇಜುಗಳ ಗೋಳು ಹೇಳಾ ತೀರದು. ಸರ್ಕಾದದ ದಿನಕೊಂದು ಸುತ್ತೋಲೆಗಳಿಂದ ಶಾಲೆಗಳನ್ನು ನಡೆಸುವುದೇ ಕಷ್ಟಕರವಾಗಿದೆ. ಇದರಿಂದ ಅನುದಾನಿತ ಸಂಸ್ಥಗಳು, ಅನುದಾನ ರಹಿತ ಸಂಸ್ಥೆಗಳಾಗಲು ಮುಂದಾಗುತ್ತಿದ್ದಾವೆ. ಇದರ ಮಧ್ಯೆ ಅನುದಾನಿತ ಸಂಸ್ಥೆಗಳಿಗೆ ಉನ್ನತ ಶಿಕ್ಷಣ ಸಚಿವ ಆಶ್ವಥ್ ನಾರಾಯಣ್ ತೀರ್ಥಹಳ್ಳಿಯಲ್ಲಿ ನೀಡಿದ ಒಂದು ಹೇಳಿಕೆ, ಒಂದು ರೀತಿಯಲ್ಲಿ ಟಾನಿಕ್ ನೀಡಿದಂತಾಗಿದೆ.
ಇದನ್ನೂ ಓದಿ: Mother Tongue: ಶಿಕ್ಷಣವನ್ನು ಮಾತೃಭಾಷೆಯಲ್ಲೇ ಬೋಧನೆ ಮಾಡುವುದರಿಂದ ಏನೆಲ್ಲಾ ಪ್ರಯೋಜನ ಇದೆ ಗಮನಿಸಿ
ಶುಲ್ಕ ನಿಯಮಗಳನ್ನು ಸಡಿಸಲು ಹೊರಟಿದ್ದು, 100% ಶುಲ್ಕವನ್ನು ಸಂಸ್ಥೆಯೇ ಬಳಸಿಕೊಳ್ಳುವ ಯೋಜನೆ ರೂಪಿಸುತ್ತೇವೆ ಎಂದಿದ್ದರು. ಕರೋನಾದಿಂದ ಮೊದಲೇ ಅನುದಾನಿತ ಸಂಸ್ಥೆಗಳಿಗೆ ಶಿಕ್ಷಕರ ಹಾಗೂ ಹಣಕಾಸಿನ ಕೊರತೆಯಿಂದ ಕುಂಟುತ್ತಿದ್ದ ಶಿಕ್ಷಣ ಸಂಸ್ಥೆಗಳಿಗೆ, ಸರ್ಕಾರದ ಈ ನಿರ್ಧಾರ ಚೇತನ ನೀಡುವಂತಾಗಿದೆ.
ಅನುದಾನಿತ ಶಿಕ್ಷಣ ಸಂಸ್ಥೆಗಳಿಂದ ಸ್ವಾಗತ
ಶಿಕ್ಷಣ ಸಂಸ್ಥೆಗಳು ವಸೂಲಿಯಾದ ಶುಲ್ಕದಲ್ಲಿ 100% ಹಣವನ್ನು ಸರ್ಕಾರಕ್ಕೆ ನೀಡಬೇಕಿತ್ತು, ಇದರಿಂದ ಸಂಸ್ಥೆಗಳಿಗೆ ಅಧಿಕ ಆರ್ಥಿಕ ಹೊರೆಯಾಗಿತ್ತು. ಇದಾದ 2018 ಬಳಿಕ 50 % ಇಳಿಸಿತ್ತು ಸರ್ಕಾರ. ಈಗ 100% ಶುಲ್ಕವನ್ನು ಶಿಕ್ಷಣ ಸಂಸ್ಥೆಗಳೇ ಬಳಸುವ ಕಾನೂನನ್ನು ತರಲು ಮುಂದಾಗಿದೆ. ಶಿಕ್ಷಣ ಸಚಿವರ ಈ ಹೇಳಿಕೆಯನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳು ಸ್ವಾಗತ ಮಾಡಿದ್ದು, ತಮಗಾಗುತ್ತಿದ್ದ ಆರ್ಥಿಕ ಹೊರೆಗೆ ಸ್ವಲ್ಪಮಟ್ಟಿಗೆ ತಗ್ಗಲಿವೆ ಎಂದು ಹೇಳುತ್ತಿದ್ದಾರೆ. ಆದರೆ ಈಗ ಇರುವ ಶುಲ್ಕದಿಂದ ಶಾಲಾ - ಕಾಲೇಜುಗಳನ್ನು ನಡೆಸಲು ಆಗುತ್ತಿಲ್ಲ, ಮುಂಬರುವ ದಿನಗಳಲ್ಲಿ ಶುಲ್ಕ ಹೆಚ್ಚಿಸ ಬೇಕು ಎಂಬ ಒತ್ತಾಯ ಕೂಡ ಮಾಡುತ್ತಿದ್ದಾರೆ.
ಮುಂಬರುವ ದಿನಗಳಲ್ಲಿ ಶುಲ್ಕ ಹೆಚ್ಚಿಸ ಬೇಕು
ಮುಂಬರುವ ದಿನಗಳಲ್ಲಿ ಶಾಲಾ ಶುಲ್ಕ ಏರಿಕೆ ಮಾಡಿದರೆ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಹೊರೆಯಾಗುತ್ತದೆ. ಆದ್ದರಿಂದ ಶುಲ್ಕ ಹೆಚ್ಚಳಕ್ಕೆ ವಿರೋಧ ವ್ಯಕ್ತವಾಗಬಹುದು.
ಹೂವೇಗೌಡ, ರಾಷ್ಟ್ರೀಯ ಶಿಕ್ಷಣ ಸಂಸ್ಥೆ ರಿಜಿಸ್ಟರ್ ಶಿವಮೊಗ್ಗ
ಒಟ್ಟಿನಲ್ಲಿ, ಡಾ. ಅಶಥ್ ನಾರಾಯಣ್ ಹೇಳಿಕೆಯಿಂದ ನಲುಗಿ ಹೋಗಿದ್ದ ಶಿಕ್ಷಣ ಸಂಸ್ಥೆಗಳಿದೆ ಹೊಸ ಹುಮ್ಮಸ್ಸು ತಂದಿದೆ. ಆದರೆ ಇದರ ಜೊತೆಗೆ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ, ಶಿಕ್ಷಕರ ನಿವೃತ್ತಿ ವೇತನ ಹಾಗೂ ಸಂಬಳ ಶಿಕ್ಷಣ ಸಂಸ್ಥೆಗಳೇ ಭರಿಸುವ ಕಾನೂನ ಸರ್ಕಾರ ತರುತ್ತದೆ ಎಂಬ ಭಯ ಹಾಗೂ ಅನುಮಾನ ಹುಟ್ಟಿಕೊಂಡಿದ್ದು ಸುಳ್ಳಲ್ಲ
ವರದಿ: ವಿನಯ್ ಪುರದಾಳು ನ್ಯೂಸ್ 18 ಶಿವಮೊಗ್ಗ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ