• ಹೋಂ
 • »
 • ನ್ಯೂಸ್
 • »
 • Jobs
 • »
 • Karnataka 2nd PUC Supplementary Exam 2023: ಫೇಲ್ ಆದ ವಿದ್ಯಾರ್ಥಿಗಳೇ ಗಮನಿಸಿ- ಇಲ್ಲಿದೆ ಮಹತ್ವದ ಅಪ್ಡೇಟ್

Karnataka 2nd PUC Supplementary Exam 2023: ಫೇಲ್ ಆದ ವಿದ್ಯಾರ್ಥಿಗಳೇ ಗಮನಿಸಿ- ಇಲ್ಲಿದೆ ಮಹತ್ವದ ಅಪ್ಡೇಟ್

ಮತ್ತೊಂದೆಡೆ, ಅನುತ್ತೀರ್ಣ/ ಫೇಲ್ (Fail) ಆಗಿರುವ ವಿದ್ಯಾರ್ಥಿಗಳಿಗೆ ಒಂದು ಮಹತ್ವದ ಅಪ್​ಡೇಟ್ ಇಲ್ಲಿದೆ. ಹೌದು, 2023ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ (Karnataka 2nd PUC Supplementary Exam 2023) ನಡೆಯಲಿದೆ.

 • News18 Kannada
 • 2-MIN READ
 • Last Updated :
 • Karnataka, India
 • Share this:

Karnataka PUC 2nd Results 2023: ಇವತ್ತು 2023ನೇ ಸಾಲಿನ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ (Karnataka 2nd PUC Result) ಪ್ರಕಟವಾಗಿದೆ. ಈ ವರ್ಷ ಶೇ. 74.67ರಷ್ಟು ವಿದ್ಯಾರ್ಥಿಗಳು (Students) ಉತ್ತೀರ್ಣರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಮೇಲುಗೈ ಸಾಧಿಸಿದ್ದರೆ, ಯಾದಗಿರಿ ಕೊನೆಯ ಸ್ಥಾನ ಪಡೆದುಕೊಂಡಿದೆ. ಪ್ರಥಮ ಸ್ಥಾನ ಗಳಿಸಿರುವ ವಿದ್ಯಾರ್ಥಿಗಳು ಸಂಭ್ರಮಾಚರಣೆಯಲ್ಲಿದ್ದಾರೆ. ಇದೆಲ್ಲಾ ಒಂದೆಡೆಯಾದರೆ, ಮತ್ತೊಂದೆಡೆ, ಅನುತ್ತೀರ್ಣ/ ಫೇಲ್ (Fail) ಆಗಿರುವ ವಿದ್ಯಾರ್ಥಿಗಳಿಗೆ ಒಂದು ಮಹತ್ವದ ಅಪ್​ಡೇಟ್ ಇಲ್ಲಿದೆ. ಹೌದು, 2023ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ (Karnataka 2nd PUC Supplementary Exam 2023) ನಡೆಯಲಿದೆ. ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಪುನರಾವರ್ತಿತ ವಿದ್ಯಾರ್ಥಿಗಳು ಪಾವತಿಸಬೇಕಾದ ಪರೀಕ್ಷಾ ಶುಲ್ಕ ಹೀಗಿದೆ:

ಒಂದು ವಿಷಯಕ್ಕೆ - 140 ರೂ.
2 ವಿಷಯಕ್ಕೆ - 270 ರೂ.
3 ಅಥವಾ ಹೆಚ್ಚಿನ ವಿಷಯಗಳಿಗೆ- 400 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ & ಪ್ರವರ್ಗ-1ರ ಅಭ್ಯರ್ಥಿಗಳಿಗೆ ಈ ಶುಲ್ಕ ಅನ್ವಯವಾಗುವುದಿಲ್ಲ.

ಆದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ & ಪ್ರವರ್ಗ-1ರ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಂದ ಕಡ್ಡಾಯವಾಗಿ 50 ರೂ. ಅಂಕಪಟ್ಟಿ ಶುಲ್ಕವನ್ನು ಪಡೆಯಲಾಗುತ್ತದೆ.

ಫಲಿತಾಂಶ ರಿಜೆಕ್ಟ್ ಮಾಡಿದ ವಿದ್ಯಾರ್ಥಿಗಳು ಪಾವತಿಸಬೇಕಾದ ಶುಲ್ಕ ಹೀಗಿದೆ:

ಪ್ರಥಮ ಬಾರಿಗೆ ಒಂದು ವಿಷಯಕ್ಕೆ- 175 ರೂ.
ದ್ವಿತೀಯ & ಅಂತಿಮ ಬಾರಿಗೆ ಒಂದು ವಿಷಯಕ್ಕೆ- 350 ರೂ.

ಫಲಿತಾಂಶ ಪ್ರಕಟಗೊಂಡ ದಿನಾಂಕದಿಂದ ಅಂದರೆ ಏಪ್ರಿಲ್ 21ರಿಂದ 26 ರೊಳಗೆ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಕಟ್ಟಬೇಕು. ಒಂದು ವೇಳೆ ಈ ದಿನಾಂಕ ಮೀರಿದರೆ, ಒಂದು ದಿನಕ್ಕೆ 50 ರೂ.ನಂತೆ ದಂಡ ಹಾಕಲಾಗುತ್ತದೆ. ಏಪ್ರಿಲ್ 27ರಿಂದ ಮೇ 2ರವರೆಗೆ ದಂಡದ ಜೊತೆಗೆ ಪರೀಕ್ಷಾ ಶುಲ್ಕ ಕಟ್ಟಬೇಕಾಗುತ್ತದೆ.

ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ: supplementary exam-2023

ದ್ವಿತೀಯ ಪಿಯು ಪೂರಕ ಪರೀಕ್ಷೆಯು ಆಗಸ್ಟ್ ತಿಂಗಳಿನಲ್ಲಿ ನಡೆಯು  ಸಾಧ್ಯತೆ ಇದೆ. ಆಗಸ್ಟ್​ 12ರಿಂದ 25 ರವರೆಗೆ ಸಪ್ಲಿಮೆಂಟರಿ ಪರೀಕ್ಷೆಯು ನಡೆಯಬಹುದು. ಫೇಲ್ ಆದ ವಿದ್ಯಾರ್ಥಿಗಳು ಒತ್ತಡಕ್ಕೊಳಗಾಗದೆ ಈ ಸಪ್ಲಿಮೆಂಟರಿ ಪರೀಕ್ಷೆಯನ್ನು ಬರೆಯಿರಿ.

top videos
  First published: