ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ (2nd PUC Result) ಕಾದು ಕೂತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಸಂತಸದ ಸುದ್ದಿ. ಮೊದಲೇ ಘೋಷಿಸಿರುವಂತೆ ಇಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ. ಏಪ್ರೀಲ್ 21 ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ (Students) ಮೊದಲೇ ಮಾಹಿತಿ ನೀಡಲಾಗಿತ್ತು. ಈ ಮಾಹಿತಿಯಂತೆ ಇದೀಗ ಫಲಿತಾಂಶ ಪ್ರಕಟವಾಗಿದೆ. ನೀವೂ ನಾವಿಲ್ಲಿ ನೀಡಿರುವ ಅಧಿಕೃತ ಜಾಲತಾಣದ (Official Website) ಮೂಲಕ ನಿಮ್ಮ ರಿಸಲ್ಟ್ ಚೆಕ್ ಮಾಡಬಹುದು.
ವಿಜಯನಗರ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಬಗ್ಗೆ ನಾವು ಇಲ್ಲಿ ಗಮನಿಸಲೇ ಬೇಕು. ಏಕೆಂದರೆ ಪ್ರತಿ ವರ್ಷವೂ ಕಲಾ ವಿಭಾಗದಲ್ಲಿ ಈ ಕಾಲೇಜಿನ ವಿದ್ಯಾರ್ಥಿಗಳೇ ಹೆಚ್ಚಿನ ಅಂಕಗಳನ್ನು ಪಡೆಯುತ್ತಾರೆ. ರಾಜ್ಯದ ಮೊದಲ ಎಲ್ಲಾ ಸ್ಥಾನಗಳನ್ನು ಕಲಾ ವಿಭಾಗದಲ್ಲಿ ಈ ವಿದ್ಯಾರ್ಥಿಗಳೇ ಪಡೆದುಕೊಳ್ಳುತ್ತಾರೆ. ಅದರಂತೆ ಈ ವರ್ಷವೂ ವಿಜಯನಗರದ ಇಂದು ಕಾಲೇಜು ತನ್ನ ಸಾಧನೆಯ ಸಾಲಿಗೆ ಇನ್ನೊಂದು ಗರಿ ಪಡೆದುಕೊಂಡಿದೆ.
ಮೊದಲ ನಾಲ್ಕು ಸ್ಥಾನಗಳನ್ನು ಹಂಚಿಕೊಂಡಿರುವ 11 ವಿದ್ಯಾರ್ಥಿಗಳು ಉತ್ತರ ಕರ್ನಾಟಕದವರು, ಅವರಲ್ಲಿ ಎಂಟು ಮಂದಿ ವಿಜಯನಗರ ಜಿಲ್ಲೆಯವರು ಎಂದು ತಿಳಿದು ಬಂದಿದೆ. ಅವರಲ್ಲಿ ಆರು ಮಂದಿ ಒಂದೇ ಕಾಲೇಜಿನವರು ಅದು ಕೂಡಾ ವಿಜಯನಗರದ ಇಂದು ಕಾಲೇಜ್ ವಿದ್ಯಾರ್ಥಿಗಳು.
ಈ ಕಾಲೇಜಿನ ವಿದ್ಯಾರ್ಥಿಗಳು ಪ್ರತಿ ವರ್ಷ ಕಲಾ ವಿಭಾಗದಲ್ಲಿ ಉತ್ತಮ ಸಾಧನೆ ಮಾಡುತ್ತಾ ಬಂದಿದ್ದಾರೆ. ಶಿಕ್ಷಕರು ಹಾಗೂ ಪಾಲಕರು ವಿದ್ಯಾರ್ಥಿಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಕುಶಾನಿಕ್ - 592 ಅಂಕಗಳು, ಬಳ್ಳಾರಿಯ ಇಂದು ಇನೋವೇಟಿವ್ ಕಾಲೇಜಿನಿ ವಿದ್ಯಾರ್ಥಿ.
ಡಡ್ಡಿ ಕರಿಬಸಮ್ಮ- 592 ಅಂಕಗಳು, ಬಳ್ಳಾರಿಯ ಇಂದು ಪಿಯು ಕಾಲೇಜಿನಿ ವಿದ್ಯಾರ್ಥಿನಿ.
ಬಳ್ಳಾರಿಯ ಮುತ್ತೂರು ಮಲ್ಲಮ್ಮ, ಬೆಳಗಾವಿಯ ಪ್ರಿಯಾಂಕಾ ಕುಲಕರ್ಣಿ, ವಿಜಯಪುರದ ರಾಹುಲ್ ಕೂಡ 592 ಅಂಕಗಳನ್ನು ಗಳಿಸುವ ಮೂಲಕ 2ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ಒಟ್ಟು 5 ವಿದ್ಯಾರ್ಥಿಗಳು 2ನೇ ಶ್ರೇಣಿಗೆ ಅರ್ಹರಾಗಿದ್ದಾರೆ. ಬೆಳಗಾವಿಯ ಸಹನಾ 591 ಅಂಕಗಳ ಮೂಲಕ 3ನೇ ರ್ಯಾಂಕ್ ಪಡೆದು ಟಾಪರ್ ಎನಿಸಿಕೊಂಡಿದ್ದಾರೆ.
ಈ ವರ್ಷ ಕೂಡಾ ವಿದ್ಯಾರ್ಥಿನಿಯರದ್ದೇ ಮೇಲುಗೈ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರೇ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಎಲ್ಲಾ ವಿಭಾಗದಲ್ಲೂ ವಿದ್ಯಾರ್ಥಿನಿಯರು ತಮ್ಮ ಸ್ಥಾನವನ್ನು ಕಾಪಾಡಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ