• ಹೋಂ
 • »
 • ನ್ಯೂಸ್
 • »
 • Jobs
 • »
 • ಇಂದು 2nd PUC ಫಲಿತಾಂಶ: 7,26,195 ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ, ರಿಸಲ್ಟ್​ ಹೀಗೆ ಚೆಕ್ ಮಾಡಿ!

ಇಂದು 2nd PUC ಫಲಿತಾಂಶ: 7,26,195 ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ, ರಿಸಲ್ಟ್​ ಹೀಗೆ ಚೆಕ್ ಮಾಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಂದು ಬೆಳಗ್ಗೆ 10 ಗಂಟೆಗೆ ಕರ್ನಾಟಕ‌ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಸುದ್ದಿಗೋಷ್ಠಿ ನಡೆಯಲಿದೆ. ಅಲ್ಲದೇ ಬೆಳಗ್ಗೆ 11 ಗಂಟೆಗೆ ವೆಬ್ ಸೈಟ್​ನಲ್ಲಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ.

 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

2022-23ನೇ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶ (Karnataka Second PUC Results) ಇಂದು ಪ್ರಕಟವಾಗಲಿದೆ. ಫಲಿತಾಂಶ ಪ್ರಕಟವಾದ ಬಳಿಕ ವಿದ್ಯಾರ್ಥಿಗಳು ಕರ್ನಾಟಕ‌ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಅಧಿಕೃತ (Karnataka Pre University Education Department ) ವೆಬ್‌ಸೈಟ್‌ಗೆ ಭೇಟಿ ನೀಡಿ ರಿಸಲ್ಟ್​ ಪಡೆಯಬಹುದಾಗಿದೆ. ಇನ್ನು ಈ ನಿಟ್ಟಿನಲ್ಲಿ ಇಂದು ಕರ್ನಾಟಕ‌ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಸುದ್ದಿಗೋಷ್ಠಿ ಆಯೋಜಿಸಿದೆ. ಚುನಾವಣೆ ನೀತಿಸಂಹಿತೆ (Election Code of Conduct) ಜಾರಿಯಲ್ಲಿರುವುದರಿಂದ ಈ ಬಾರಿ ಶಿಕ್ಷಣ ಸಚಿವರು (Education Minister) ಫಲಿತಾಂಶ ಪ್ರಕಟ ಮಾಡುವುದಿಲ್ಲ ಎಂಬುವುದು ಗಮನಾರ್ಹ ವಿಚಾರ.


ಇಂದು ಬೆಳಗ್ಗೆ 10 ಗಂಟೆಗೆ ಕರ್ನಾಟಕ‌ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಸುದ್ದಿಗೋಷ್ಠಿ ನಡೆಯಲಿದೆ. ಅಲ್ಲದೇ ಬೆಳಗ್ಗೆ 11 ಗಂಟೆಗೆ ವೆಬ್ ಸೈಟ್​ನಲ್ಲಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ವಿದ್ಯಾರ್ಥಿಗಳು www.karresults.nic.in ವೆಬ್ ಸೈಟ್‌ಗೆ ಭೇಟಿ ನೀಡಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಈ ಬಾರಿಯ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ 20 ಅಂಕಗಳಿಗೆ ಬಹು ಆಯ್ಕೆ ನೀಡಲಾಗಿತ್ತು.


ಇದನ್ನೂ ಓದಿ: 2nd PUC Result 2023: ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ವಿದ್ಯಾರ್ಥಿಗಳೇ ಹೀಗೆ ನೋಡಿ ನಿಮ್ಮ ರಿಸಲ್ಟ್


ದ್ವಿತೀಯ ಪಿಯುಸಿ ಫಲಿತಾಂಶ ಚೆಕ್ ಮಾಡುವುದು ಹೇಗೆ? ಇಲ್ಲಿದೆ ವಿವರ


* ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ www.karresults.nic.in ಅಥವಾ https://kseab.karnataka.gov.in/ ಗೆ ಭೇಟಿ ನೀಡಿ.
* ಇಲ್ಲಿ 2nd ಪಿಯುಸಿ ಫಲಿತಾಂಶವಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ. ಇಲ್ಲಿ ಹೊಸದೊಂದು ಪುಟ ತೆರೆದುಕೊಳ್ಳುತ್ತದೆ.
* ಈ ಪೇಜ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್​ ನಂಬರ್‌ ನಮೂದಿಸಿ, 'Submit' ಬಟನ್ ಕ್ಲಿಕ್ ಮಾಡಿ.
* ಇಲ್ಲಿ ನಿಮ್ಮ ಫಲಿತಾಂಶ ಕಾಣಿಸಿಕೊಳ್ಳುತ್ತದೆ. ಬಳಿಕ ಇದನ್ನು ನೀವು ಪ್ರಿಂಟ್​ ಕೂಡಾ ಮಾಡಬಹುದು.


top videos  ಇನ್ನು ಮಾರ್ಚ್ 09 ರಿಂದ ಮಾರ್ಚ್ 29ರವರೆಗೆ ನಡೆದ ಪಿಯುಸಿ ಪರೀಕ್ಷೆಯಲ್ಲಿ ಎಷ್ಟು ವಿದ್ಯಾರ್ಥಿಗಳು ಹಾಜರಿದ್ದರು ಎಂದು ನೋಡುವುದಾದರೆ

  ವಿದ್ಯಾರ್ಥಿಗಳು3,63,698
  ವಿದ್ಯಾರ್ಥಿನಿಯರು3,62,497
  ಒಟ್ಟು7,26,195
  ಹೊಸಬರು6.29 ಲಕ್ಷ ವಿದ್ಯಾರ್ಥಿಗಳು
  ಖಾಸಗಿ25,847 ವಿದ್ಯಾರ್ಥಿಗಳು
  ಪುನರಾವರ್ತಿತ70,589 ವಿದ್ಯಾರ್ಥಿಗಳು
  ಕಲಾ ವಿಭಾಗ2,34,815 ವಿದ್ಯಾರ್ಥಿಗಳು
  ವಾಣಿಜ್ಯ ವಿಭಾಗ2,47,260 ವಿದ್ಯಾರ್ಥಿಗಳು
  ವಿಜ್ಞಾನ ವಿಭಾಗ2,44,120 ಅಭ್ಯರ್ಥಿಗಳು

  First published: