ಇಂದು ದ್ವಿತೀಯ ಪಿಯುಸಿ (2nd PUC) ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ. ವಿದ್ಯಾರ್ಥಿಗಳ ಸಾಧನೆಯಿಂದ ಪಾಲಕರು ತುಂಬಾ ಸಂತೋಷದಿಂದಿದ್ದಾರೆ. ಹಲವಾರು ಬಡ ಮಕ್ಕಳು ಕಷ್ಟಪಟ್ಟು ಓದಿ ತಮ್ಮ ಶಾಲೆಗೆ (School) ಹಾಗೂ ಶಿಕ್ಷಕರಿಗೆ ಹೆಮ್ಮೆ ತಂದಿದ್ದಾರೆ. ಅಂತಹ ಒಂದು ಉದಾಹರಣೆ ಇಲ್ಲಿದೆ ನೋಡಿ. ಎಂದಿನಂತೆ ಈ ವರ್ಷವೂ ಕೂಡಾ ಅಂಕ ಗಳಿಕೆಯಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈ. ಕೊರವ ಸಮುದಾಯದ ಈ ವಿದ್ಯಾರ್ಥಿನಿಯರು ಮಾಡಿದ ಸಾಧನೆ (Success) ನೋಡಿ. ಮನೆಯಲ್ಲಿ ಕಷ್ಟ ಹಾಗೂ ಬಡತನ ಇದ್ದರೂ ಈ ವಿದ್ಯಾರ್ಥಿನಿಯರು ಎಷ್ಟು ಅಂಕ ಗಳಿಸಿದ್ದಾರೆ ನೋಡಿ.
ಸ್ವಂತ ಜಮೀನಿಲ್ಲದೇ ಕೂಲಿ ಮಾಡಿ ಜೀವನ ಸಾಗಿಸುವ ಎಷ್ಟೋ ಜನ ಇರುತ್ತಾರೆ. ತಮ್ಮ ಮಕ್ಕಳು ಮುಂದೆ ನಮ್ಮ ರೀತಿ ಕಷ್ಟ ಪಡಬಾರದು ಎಂದು ಪಾಲಕರು ಬಯಸುತ್ತಾರೆ. ಅದರಂತೆ ವಿದ್ಯಾರ್ಥಿ ಜೀವನದಲ್ಲಿ ತಮ್ಮ ಮಕ್ಕಳ ಯಶಸ್ಸಿಗಾಗಿ ಹಲವಾರು ರೀತಿಯ ಸಹಾಯ ಮಾಡುತ್ತಾರೆ.
ಕುಂದಾಪುರ ಜ್ಯೂನಿಯರ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ, ಪಡುಕೋಣೆ ನಿವಾಸಿ ಸ್ನೇಹಾ 511 ಅಂಕ ಪಡೆದಿದ್ದು ಕನ್ನಡದಲ್ಲಿ 93, ಇಂಗ್ಲೀಷ್‌ನಲ್ಲಿ 75, ಎಕನಾಮಿಕ್ಸ್ 75, ಬಿಸಿನೆಸ್ ಸ್ಟಡೀಸ್ 89, ಅಕೌಂಟೆನ್ಸಿ 85, ಕಂಪ್ಯೂಟರ್ ಸೈನ್ಸ್‌ನಲ್ಲಿ 64 ಅಂಕ ಪಡೆದಿದ್ದಾರೆ. ಸ್ನೇಹಾ ಪಡುಕೋಣೆ ನಿವಾಸಿ ದಿವಂಗತ ಸುಧೀರ್, ಹಾಗೂ ಕೂಲಿ ಮಾಡುವ ಮಮತಾ ಅವರ ಇಬ್ಬರು ಪುತ್ರಿಯರ ಪೈಕಿ ಕಿರಿಯವಳು. ಮುಂದೆ ಬ್ಯಾಂಕಿಗ್ ಕ್ಷೇತ್ರದಲ್ಲಿ ಮುಂದುವರಿಯುವ ಆಸೆಯನ್ನು ಸ್ನೇಹಾ ಹೊಂದಿದ್ದಾಳೆ.
ಬಾರ್ಕೂರು ನೇಶನಲ್ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ, ಬಾರ್ಕೂರು ನಿವಾಸಿ ಭಾಗ್ಯಶ್ರೀ 511 ಅಂಕ ಪಡೆದಿದ್ದು ಕನ್ನಡದಲ್ಲಿ 97, ಇಂಗ್ಲೀಷ್ 60, ಹಿಸ್ಟರಿ 92, ಎಕನಾಮಿಕ್ಸ್ 77, ಸೋಶಿಯಾಲಜಿ 92, ಪೊಲಿಟಿಕಲ್ ಸೈನ್ಸ್‌ನಲ್ಲಿ 93 ಅಂಕ ಪಡೆದಿದ್ದಾರೆ. ಭಾಗ್ಯಶ್ರೀ ತಂದೆ ರಾಜು ಪೌರಕಾರ್ಮಿಕ. ತಾಯಿ ಸುಗುಣಾ ಗೃಹಿಣಿಯಾಗಿದ್ದಾರೆ. ಮುಂದೆ ಬಿಎ ಮಾಡುವ ಕನಸನ್ನು ಭಾಗ್ಯಾ ಹೊಂದಿದ್ದಾಳೆ.
ಉಳಿದ ವಿದ್ಯಾರ್ಥಿಗಳಿಗೆ ಇವರೇ ಸ್ಪೂರ್ತಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ