• ಹೋಂ
  • »
  • ನ್ಯೂಸ್
  • »
  • Jobs
  • »
  • 2nd PUC Result 2023 Toppers: ಆರ್ಟ್ಸ್ ತಬಸುಂ, ವಾಣಿಜ್ಯ ಅನನ್ಯಾ, ವಿಜ್ಞಾನದಲ್ಲಿ ಕೌಶಿಕ್-ಸುರಭಿಗೆ ಪ್ರಥಮ ಸ್ಥಾನ

2nd PUC Result 2023 Toppers: ಆರ್ಟ್ಸ್ ತಬಸುಂ, ವಾಣಿಜ್ಯ ಅನನ್ಯಾ, ವಿಜ್ಞಾನದಲ್ಲಿ ಕೌಶಿಕ್-ಸುರಭಿಗೆ ಪ್ರಥಮ ಸ್ಥಾನ

ಪಿಯು ಟಾಪರ್ಸ್​

ಪಿಯು ಟಾಪರ್ಸ್​

ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಯುವತಿಯರೇ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಮಾತ್ರ ಕೌಶಿಕ್ ಪ್ರಥಮ ಸ್ಥಾನವನ್ನು ವಿದ್ಯಾರ್ಥಿನಿಯ ಜೊತೆ ಹಂಚಿಕೊಂಡಿದ್ದಾರೆ.

  • Share this:

ಕರ್ನಾಟಕ ದ್ವಿತೀಯ ಪಿಯು ಫಲಿತಾಂಶ (2nd PUC Result 2023) ಪ್ರಕಟಕೊಂಡಿದೆ. ತಬಸುಂ ಶೇಖ್ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ 593 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ತಬಸುಂ ಶೇಖ್ ಬೆಂಗಳೂರಿನ ಜಯನಗರ ಕಾಲೇಜಿನ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ವಾಣಿಜ್ಯ ವಿಭಾಗ ಅನನ್ಯಾ ಕೆಎ 600ಕ್ಕೆ 600 ಅಂಕಗಳನ್ನು ಗಳಿಸುವ ಮೂಲಕ ಟಾಪರ್​ ಎನಿಸಿಕೊಂಡಿದ್ದಾರೆ.


ವಿಜ್ಞಾನ ವಿಭಾಗದಲ್ಲಿ  ಎಸ್.ಎಂ.ಕೌಶಿಕ್ ಹಾಗೂ ಸುರಭಿ ಇಬ್ಬರೂ 596 ಅಂಕಗಳನ್ನು ಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಯುವತಿಯರೇ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಮಾತ್ರ ಕೌಶಿಕ್ ಪ್ರಥಮ ಸ್ಥಾನವನ್ನು ವಿದ್ಯಾರ್ಥಿನಿಯ ಜೊತೆ ಹಂಚಿಕೊಂಡಿದ್ದಾರೆ.


ಕಲಾ ವಿಭಾಗದ ಟಾಪರ್ಸ್​


1) ತಬಸುಂ ಶೇಕ್​ - 593 ಅಂಕಗಳು, ಬೆಂಗಳೂರಿನ ಜಯನಗರದಲ್ಲಿರುವ MNKRV ಕಾಲೇಜಿನ ವಿದ್ಯಾರ್ಥಿನಿ.


2) ಕುಶಾನಿಕ್​ - 592 ಅಂಕಗಳು, ಬಳ್ಳಾರಿಯ ಹಿಂದೂ ಇನೋವೇಟಿವ್​ ಕಾಲೇಜಿನಿ ವಿದ್ಯಾರ್ಥಿ.


3) ಡಡ್ಡಿ ಕರಿಬಸಮ್ಮ- 592 ಅಂಕಗಳು, ಬಳ್ಳಾರಿಯ ಹಿಂದೂ ಪಿಯು ಕಾಲೇಜಿನಿ ವಿದ್ಯಾರ್ಥಿನಿ.


ಬಳ್ಳಾರಿಯ ಮುತ್ತೂರು ಮಲ್ಲಮ್ಮ, ಬೆಳಗಾವಿಯ ಪ್ರಿಯಾಂಕಾ ಕುಲಕರ್ಣಿ, ವಿಜಯಪುರದ ರಾಹುಲ್​ ಕೂಡ 592 ಅಂಕಗಳನ್ನು ಗಳಿಸುವ ಮೂಲಕ 2ನೇ ರ್ಯಾಂಕ್​ ಪಡೆದುಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ಒಟ್ಟು 5 ವಿದ್ಯಾರ್ಥಿಗಳು 2ನೇ ಶ್ರೇಣಿಗೆ ಅರ್ಹರಾಗಿದ್ದಾರೆ. ಬೆಳಗಾವಿಯ ಸಹನಾ 591 ಅಂಕಗಳ ಮೂಲಕ 3ನೇ ರ್ಯಾಂಕ್ ಪಡೆದು ಟಾಪರ್​ ಎನಿಸಿಕೊಂಡಿದ್ದಾರೆ.


ಇದನ್ನೂ ಓದಿ: Karnataka 2nd PUC Result 2023: ಈ ಬಾರಿ 74.67 % ವಿದ್ಯಾರ್ಥಿಗಳು ಪಾಸ್- ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ


ಕಾಮರ್ಸ್​ ವಿಭಾಗದ ಟಾಪರ್ಸ್​ 


1) ಅನನ್ಯಾ ಕೆ.ಎ - 600 ಅಂಕಗಳು - ದಕ್ಷಿಣ ಕನ್ನಡದ ಆಳ್ವಾ ಕಾಲೇಜಿನ ವಿದ್ಯಾರ್ಥಿನಿ.


2) ವಾಣಿಜ್ಯ ವಿಭಾಗದಲ್ಲಿ 596 ಅಂಕಗಳನ್ನು 9 ವಿದ್ಯಾರ್ಥಿಗಳು ಪಡೆಯುವ ಮೂಲಕ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಶಿವಮೊಗ್ಗದ ಅನ್ವಿತಾ ಡಿ.ಎ, ಬೆಂಗಳೂರಿನ ರವಿ ಕುಮಾರ್​, ಮಂಗಳೂರಿನ ಖುಷಿ, ಮಂಗಳೂರಿನ ಸ್ವಾತಿ, ಬೆಂಗಳೂರಿನ ಧನ್ಯಶ್ರೀ, ಬೆಂಗಳೂರಿನ ವರ್ಷಾ, ಆಳ್ವಾಸ್ ಕಾಲೇಜಿನ ದಿಶಾ ರಾವ್​ , ಬೆಂಗಳೂರಿನ ಇಂಚರಾ ಹಾಗೂ ಗಾನಾ 2ನೇ ರ್ಯಾಂಕ್​ ಪಡೆದಿದ್ದಾರೆ.




ವಿಜ್ಞಾನ ವಿಭಾಗದ ಟಾಪರ್ಸ್​ 


1) ಸುರಭಿ - 596 ಅಂಕಗಳು - ಬೆಂಗಳೂರಿನ ಆರ್​ ವಿ ಕಾಲೇಜಿನ ವಿದ್ಯಾರ್ಥಿನಿ


ಕೌಶಿಕ್​ - 596 ಅಂಕಗಳು - ಕೋಲಾರದ ಗಂಗೋತ್ರಿ ಪಿಯು ಕಾಲೇಜಿನ ವಿದ್ಯಾರ್ಥಿ.

top videos


    2)ಒಟ್ಟು ಮೂವರು ವಿದ್ಯಾರ್ಥಿಗಳು 3ನೇ ರ್ಯಾಂಕ್​ ಗಳಿಸಿದ್ದಾರೆ.  ಬೆಂಗಳೂರಿನ ಆರ್​ ವಿ ಕಾಲೇಜಿನಿ ಜೈಸ್ವಿಕಾ, ಉಡುಪಿಯ ಮಹಾತ್ಮ ಗಾಂಧಿ ಕಾಲೇಜಿನ ಸಾತ್ವಿಕ್​ ಹಾಗೂ ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜಿನ ಜಸ್ವಿತಾ 595 ಅಂಕಗಳನ್ನು ಗಳಿಸುವ ಮೂಲಕ 2ನೇ ರ್ಯಾಂಕ್​ ಪಡೆದಿದ್ದಾರೆ.

    First published: