ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಸುದ್ದಿಗೋಷ್ಠಿ ನಡೆಯದ್ದು, ಬೆಳಗ್ಗೆ 11 ಗಂಟೆಗೆ ವೆಬ್ ಸೈಟ್ನಲ್ಲಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ವಿದ್ಯಾರ್ಥಿಗಳು www.karresults.nic.in ವೆಬ್ ಸೈಟ್‌ಗೆ ಭೇಟಿ ನೀಡಿ ಫಲಿತಾಂಶ ವೀಕ್ಷಿಸಬಹುದಾಗಿದೆ.
ಬಾರ್ಕೂರು ನ್ಯಾಶನಲ್ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಭಾಗ್ಯಶ್ರೀ ಹಾಗೂ ಕುಂದಾಪುರ ಜ್ಯೂನಿಯರ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸ್ನೇಹಾ ಇವರಿಬ್ಬರೂ ಸಹ 600ಕ್ಕೆ 511 ಅಂಕ ಪಡೆದುಕೊಂಡಿದ್ದಾರೆ. ಪಾಲಕರು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಇಬ್ಬರು ವಿದ್ಯಾರ್ಥಿನಿಯರೂ ಸಹ ಕೊರಗ ಸಮುದಾಯದರಾಗಿದ್ದಾರೆ.
ವಿಜಯಪುರ ಜಿಲ್ಲೆಯ ವಿದ್ಯಾರ್ಥಿ ಪಿಯುಸಿಯಲ್ಲಿ ಟಾಪರ್ ಆಗಿದ್ದಾನೆ. ಕಲಾ ವಿಭಾಗದಲ್ಲಿ 592 ಅಂಕ ಪಡೆದು ರಾಹುಲ್ ರಾಠೋಡ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ರಾಹುಲ್ ರಾಠೋಡ್ ಮೂಲತಃ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮನನಾಯಕ್ ತಾಂಡಾದ ನಿವಾಸಿ. ಮನೆಯಲ್ಲಿ ಬಡತನವಿದ್ದರೂ ಈ ವಿದ್ಯಾರ್ಥಿ ಸಾಧನೆ ಮಾಡಿದ್ದಾನೆ. ಮಹಾರಾಷ್ಟ್ರಕ್ಕೆ ಕೂಲಿಗೆಂದು ವಲಸೆ ಹೋದ ತಂದೆ ಮೋತಿಲಾಲ್,ತಾಯಿ ಸವಿತಾ ಇದೀಗ ಮಹಾರಾಷ್ಟ್ರದಲ್ಲಿ ತಮ್ಮ ಪುಟ್ಟ ಗುಡಿಸಲಿನಲ್ಲಿ ಮಗನಿಗೆ ಸಿಹಿ ತಿನ್ನಿಸಿದ್ದಾರೆ.
ಲಿಂಗಸುಗೂರು ನಗರದ ಶ್ರೀ ಉಮಾ ಮಹೇಶ್ವರಿ ಪಿಯು ಕಾಲೇಜು ವಿದ್ಯಾರ್ಥಿನಿ ಕುಮಾರಿ ವರ್ಷಾ 588 (98%) ಅಂಕ ಪಡೆದು ರಾಯಚೂರು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಯಲ್ಲಿ ಸತತ ಮೂರು ವರ್ಷಗಳಿಂದ ಪ್ರಥಮ ಸ್ಥಾನ. ಪ್ರಸಕ್ತ 2023 ನೇ ಸಾಲಿನಲ್ಲೂ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದೆ. ವಿದ್ಯಾರ್ಥಿನಿಯ ಸಾಧನೆಗೆ ಸಂಸ್ಥೆ ಅಧ್ಯಕ್ಷರು, ಆಡಳಿತಾಧಿಕಾರಿಗಳು, ಉಪನ್ಯಾಸಕರು, ಸಿಬ್ಬಂದಿ ವರ್ಗದಿಂದ ಅಭಿನಂದನೆ ಸಲ್ಲಿಸಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಚಾಮರಾಜನಗರದ ನೇಣಿಗೆ ಶರಣಾಗಿದ್ದಾಳೆ. ನಗರದ ಜೆಎಸ್ಎಸ್ ಪಿಯು ಕಾಲೇಜಿನ ವಿಜಯಲಕ್ಷ್ಮಿ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಗುಂಡ್ಲುಪೇಟೆ ತಾಲ್ಲೂಕಿನ ಮೂಡಗೂರು ಗ್ರಾಮದ ವಿಜಯಲಕ್ಷ್ಮಿ ಜೆಎಸ್‌ಎಸ್ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಎರಡು ಮತ್ತು ಇಪ್ಪತ್ತನೇ ಸ್ಥಾನ ಶಿವಮೊಗ್ಗದ ಪಾಲಾಗಿದೆ. ಶಿವಮೊಗ್ಗ ವಿಕಾಸ ಕಾಲೇಜಿನ ವಿದ್ಯಾರ್ಥಿನಿ ಅನ್ವಿತ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದರೆ, ವಿದ್ಯಾಭಾರತಿ ಪಿಯು ಕಾಲೇಜಿನ ವಿದ್ಯಾರ್ಥಿನಿ ನೇಹಶ್ರೀ ಗೆ 20ನೇ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಅನ್ವಿತಾಗೆ 596 ಅಂಕಗಳು ಹಾಗೂ ನೇಹಶ್ರೀ ವಾಣಿಜ್ಯ ವಿಭಾಗದಲ್ಲಿ 595 ಅಂಕಗಳನ್ನು ಗಳಿಸಿದ್ದಾರೆ.
ಪಿಯುಸಿ (PUC) ಅನ್ನೋದು ವಿದ್ಯಾರ್ಥಿಗಳ ಜೀವನದಲ್ಲಿ ತುಂಬಾನೇ ಪ್ರಮುಖವಾದ ಘಟ್ಟ. ಹಾಗಂತ ಪಿಯುಸಿಯಲ್ಲಿ ಫೇಲಾದರೆ ಅಥವಾ ಕಡಿಮೆ ಅಂಕಗಳನ್ನು (PU Results 2023) ಗಳಿಸಿದರೆ ಮುಂದೆ ಬದುಕೇ ಇಲ್ಲ ಅಂತ ಮಾತ್ರ ತಿಳಿದುಕೊಂಡು ಹತಾಶರಾಗಬೇಡಿ. ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದವರಿಗೆ ಮತ್ತು ಸಿಇಟಿ ಪರೀಕ್ಷೆಯಲ್ಲಿ (CET Exam) ಉತ್ತಮ ಅಂಕಗಳನ್ನು ಗಳಿಸಿದವರಿಗೆ ಎಂಜಿನಿಯರ್ ಅಥವಾ ವೈದ್ಯರಾಗುವ ಅವಕಾಶಗಳು ತುಂಬಾನೇ ಇರುತ್ತವೆ.
ಈ ಕುರಿತಾದ ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ: ಪಿಯುಸಿ ಫೇಲ್ ಆಗಿದ್ದರೆ ಈ ವೃತ್ತಿ ಆಯ್ಕೆಗಳಲ್ಲಿ ಒಂದನ್ನು ಆರಿಸಿಕೊಳ್ಳಿ, ಮುಂದಿನ ಜೀವನ ಸೂಪರ್ ಆಗಿ ಇರುತ್ತೆ.
ಉಡುಪಿ ಎಂಜಿಎಂ ಕಾಲೇಜಿನ ಸಾತ್ವಿಕ್ಗೆ 595 ಅಂಕಗಳು, 2ನೇ ಸ್ಥಾನ
ಪೂರ್ಣ ಪ್ರಜ್ಞಾ ಕಾಲೇಜಿನ ಜೆಸ್ವಿತಾ ಡಾಯಸ್ 595 ಅಂಕಗಳನ್ನು ಗಳಿಸಿ 2ನೇ ಸ್ಥಾನ ಪಡೆದಿದ್ದಾರೆ.
ವೆಂಕಟರಮಣ ಕಾಲೇಜು ಕುಂದಾಪುರದ ಸ್ನೇಹಾ ಐ ರಾವ್ 594 ಅಂಕಗಳೊಂದಿಗೆ 3ನೇ ಸ್ಥಾನ ಪಡೆದಿದ್ದಾರೆ.
ಕಾರ್ಕಳ ಜ್ಞಾನ ಸುಧಾ ಕಾಲೇಜಿನ ಸ್ಮಯಾ ಸದಾನಂದ ಮುಬೇನ್ 594 ಅಂಕ ಗಳಿಸಿ 3 ನೇ ಸ್ಥಾನ ಪಡೆದಿದ್ದಾರೆ.
ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದಿದ್ದಾರೆ. ಅದೇ ರೀತಿ ಜಿಲ್ಲಾವಾರು ನೋಡುವುದಾದರೆ ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದೆ. ದ್ವಿತೀಯ ಸ್ಥಾನವನ್ನು ಉಡುಪಿ ಜಿಲ್ಲೆ ಪಡೆದುಕೊಂಡಿದೆ.
ಯಾವೆಲ್ಲಾ ಜಿಲ್ಲೆ ಯಾವ ಸ್ಥಾನದಲ್ಲಿದೆ? ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಜಿಲ್ಲಾವಾರು ಪಟ್ಟಿ
ರಾಜ್ಯದ ಟಾಪರ್ ಲೀಸ್ಟ್ ನಲ್ಲಿ ವಿಜಯನಗರ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ವಿಜಯನಗರ ಜಿಲ್ಲೆಯ ಕೊಟ್ಟೂರು ಇಂದು ಪಿಯು ಕಾಲೇಜಿನ ಇಬ್ಬರು, ಹರಪನಹಳ್ಳಿಯ SUJM ಪಿಯು ಕಾಲೇಜಿನ ಒಬ್ಬ ವಿದ್ಯಾರ್ಥಿ ಟಾಪರ್ ಆಗಿದ್ದಾರೆ.
ಕೊಟ್ಟೂರು ಇಂದು ಪಿಯು ಕಾಲೇಜ್ ನ ಕುಶಾನಾಯ್ಕ್ , ದಡ್ಡಿ ಕರಿಬಸಮ್ಮ, ಕಲಾ ವಿಭಾಗದಲ್ಲಿ 592 ಅಂಕ ಪಡೆದಿದ್ದು, ಹರಪನಹಳ್ಳಿ SUJM ಕಾಲೇಜಿನ ಮುತ್ತೂರು ಮಲ್ಲಮ್ಮ ಕೂಡಾ ಕಲಾ ವಿಭಾಗದಲ್ಲಿ 592 ಅಂಕ ಪಡೆದಿದ್ದಾಳೆ. ಪ್ರತಿ ಬಾರಿ ಕೊಟ್ಟೂರು ಇಂದು ಪಿಯು ಕಾಲೇಜ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುತ್ತದೆ.
ಇನ್ನು ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಇಬ್ಬರು ಹಂಚಿಕೊಂಡಿದ್ದಾರೆ. ಕೋಲಾರದ ಶ್ರೀನಿವಾಸಪುರದ ಗಂಗೋತ್ರಿ ಪಿಯು ಕಾಲೇಜಿನ ವಿದ್ಯಾರ್ಥಿ ಎಸ್.ಎಂ.ಕೌಶಿಕ್ ಹಾಗೂ ಬೆಂಗಳೂರಿನ ಜಯನಗರದ ಆರ್. ವಿ. ಪಿಯು ಕಾಲೇಜಿನ ವಿದ್ಯಾರ್ಥಿನಿ ಸುರಭಿ ಎಸ್ ಇಬ್ಬರೂ 596 ಅಂಕಗಳನ್ನು ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.
ಮೂಡುಬಿದಿರೆಯ ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಅನನ್ಯ ಕೆಎ ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇವರು 600 ಕ್ಕೆ 600 ಅಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನಕ್ಕೇರಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಕಲಾ ವಿಭಾಗದಲ್ಲಿ ಬೆಂಗಳೂರಿನ ತಬಸುಂ ಶೇಖ್, 593 ಅಂಕಪಡೆದು ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದಾರೆ.
ಉನ್ನತ ಶ್ರೇಣಿ ಪಡೆದವರು(ಶೇ 85 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಪಡೆದವರು :-1,09,509
ಪ್ರಥಮ ದರ್ಜೆ (ಶೇ 85ಕ್ಕಿಂತ ಕಡಿಮೆ ಹಾಗೂ ಶೇ 60ಕ್ಕಿಂತ ಹೆಚ್ಚು) :-2,47,315
ದ್ವೀತಿಯ ದರ್ಜೆ ಶೇ 60ಕ್ಕಿಂತ ಕಡಿಮೆ ಹಾಗೂ 50ಕ್ಕಿಂತ ಹೆಚ್ಚು ಅಂಕ:-90,014
ತೃತೀಯ ದರ್ಜೆ (ಶೇ 50 ಕ್ಕಿಂತ ಕಡಿಮೆ ಅಂಕ):-77,371
ಪರೀಕ್ಷೆಗೆ ನೊಂದಾಯಿಸಿದ ಒಟ್ಟು ವಿದ್ಯಾರ್ಥಿಗಳು:- 7,27,923
ಎಲ್ಲಾ ವಿಷಯಗಳಿಗೆ ಗೈರಾದ ವಿಧ್ಯಾರ್ಥಿಗಳು: 23,754
ಉತ್ತೀರ್ಣರಾದವರು: 5,24,209
ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆ ಶೇಕಡಾ 88.02 ರ ಜೊತೆ ಪ್ರಥಮ ಸ್ಥಾನ ಪಡೆದಿದ್ದು, ಉಡುಪಿ ಜಿಲ್ಲೆ ಶೇಕಡಾ 86.38 ರೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಕೊಡಗು ಜಿಲ್ಲೆಗೆ ಮೂರನೇ ಸ್ಥಾನ ಹಾಗೂ ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ ಪಡೆದಿದೆ.
ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ಸುದ್ದಿಗೋಷ್ಠಿ ಆರಂಭವಾಗಿದೆ. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮಂಡಳಿ ಅಧ್ಯಕ್ಷ ರಾಮಚಂದ್ರ, ಕರ್ನಾಟಕ ಶಾಲಾ ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಸಿಂಗ್ ಭಾಗಿಯಾಗಿದ್ದಾರೆ. ಸುದ್ದಿಗೋಷ್ಠಿ ಬಳಿಕ ಇಲಾಖೆ ವೆಬ್ ಸೈಟ್ ದ್ವಿತೀಯ ಪಿಯು ಫಲಿತಾಂಶ ಪ್ರಕಟ.
* ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ www.karresults.nic.in ಅಥವಾ https://kseab.karnataka.gov.in/ಗೆ ಭೇಟಿ ನೀಡಿ.
* ಇಲ್ಲಿ 2nd ಪಿಯುಸಿ ಫಲಿತಾಂಶವಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಹೊಸದೊಂದು ಪುಟ ತೆರೆದುಕೊಳ್ಳುತ್ತದೆ.
* ಈ ಪೇಜ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ನಮೂದಿಸಿ, ‘Submit’ ಬಟನ್ ಕ್ಲಿಕ್ ಮಾಡಿ.
* ಇಲ್ಲಿ ನಿಮ್ಮ ಫಲಿತಾಂಶ ಕಾಣಿಸಿಕೊಳ್ಳುತ್ತದೆ. ಬಳಿಕ ಇದನ್ನು ನೀವು ಪ್ರಿಂಟ್ ಕೂಡಾ ಮಾಡಬಹುದು.
ಇಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಸುದ್ದಿಗೋಷ್ಠಿ ಆಯೋಜಿಸಿದೆ. ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಈ ಬಾರಿ ಶಿಕ್ಷಣ ಸಚಿವರು ಫಲಿತಾಂಶ ಪ್ರಕಟ ಮಾಡುವುದಿಲ್ಲ ಎಂಬುವುದು ಗಮನಾರ್ಹ ವಿಚಾರ.