ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ (2nd PUC Result) ಕಾದು ಕೂತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಸಂತಸದ ಸುದ್ದಿ. ಮೊದಲೇ ಘೋಷಿಸಿರುವಂತೆ ಇಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ. ಏಪ್ರೀಲ್ 21 ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ (Students) ಮೊದಲೇ ಮಾಹಿತಿ ನೀಡಲಾಗಿತ್ತು. ಈ ಮಾಹಿತಿಯಂತೆ ಇದೀಗ ಫಲಿತಾಂಶ ಪ್ರಕಟವಾಗಿದೆ. ನೀವೂ ನಾವಿಲ್ಲಿ ನೀಡಿರುವ ಅಧಿಕೃತ ಜಾಲತಾಣದ (Official Website) ಮೂಲಕ ನಿಮ್ಮ ರಿಸಲ್ಟ್ ಚೆಕ್ ಮಾಡಬಹುದು.
ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ಸುದ್ದಿಗೊಷ್ಠಿ ನಡೆಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮಂಡಳಿ ಅಧ್ಯಕ್ಷ ರಾಮಚಂದ್ರ, ಕರ್ನಾಟಕ ಶಾಲಾ ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಸಿಂಗ್ ಭಾಗಿಯಾಗಿದ್ದಾರೆ. ಸುದ್ದಿಗೊಷ್ಠಿ ಬಳಿಕ ಇಲಾಖೆ ವೆಬ್ ಸೈಟ್ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದೆ.
ಇಂದು ಬೆಳಗ್ಗೆ 10 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಸುದ್ದಿಗೋಷ್ಠಿ ನಡೆಸಿದೆ. ಅದರಂತೆ ನೀವು www.karresults.nic.in ಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಫಲಿತಾಂಶವನ್ನು ಚೆಕ್ ಮಾಡಬಹುದು. ಅಥವಾ https://kseab.karnataka.gov.in/ಗೆ ಭೇಟಿ ನೀಡುವ ಮೂಲಕ ಚೆಕ್ ಮಾಡಬಹುದು. ಈ ಕೂಡಲೇ ನಿಮ್ಮ ಫಲಿತಾಂಶ ಚೆಕ್ ಮಾಡಿ.
ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ :-ಶೇಕಡಾ 88.02
ಉಡುಪಿ ಜಿಲ್ಲೆ ದ್ವೀತಿಯ ಸ್ಥಾನ:- ಶೇಕಡಾ 86.38
ಇದನ್ನೂ ಓದಿ: Karnataka 2nd PUC Result 2023 Live Updates: ಪಿಯು ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ
ಪರೀಕ್ಷೆಗೆ ನೊಂದಾಯಿಸಿದ ಒಟ್ಟು ವಿದ್ಯಾರ್ಥಿಗಳು:- 7,27,923
ಎಲ್ಲಾ ವಿಷಯಗಳಿಗೆ ಗೈರಾದ ವಿಧ್ಯಾರ್ಥಿಗಳು: 23,754
ಉತ್ತೀರ್ಣರಾದವರು: 5,24,209
ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ತಬಸುಂ ಶೇಖ್ , 593 ಅಂಕಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ( ಕಲಾವಿಭಾಗದಲ್ಲಿ) ಜಯನಗರ, ಬೆಂಗಳೂರು.
ಹೆಚ್ಚಿನ ಅಂಕ
ಕಲಾ ವಿಭಾಗ
1.ತಬಸುಂ ಶೇಕ್
ಅಂಕ : 593
ವಾಣಿಜ್ಯ ವಿಭಾಗ
1.ಅನನ್ಯ ಕೆಎ
ಅಂಕ: 600 ಕ್ಕೆ 600
ವಿಜ್ಞಾನ ವಿಭಾಗ
1. ಎಸ್.ಎಂ.ಕೌಶಿಕ್
ಅಂಕ :596
2. ಸುರಭಿ
ಅಂಕ :596
ಕೊಡಗು ಜಿಲ್ಲೆಗೆ ಮೂರನೇ ಸ್ಥಾನ
ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ