• Home
  • »
  • News
  • »
  • jobs
  • »
  • Kalaburagi: ಬಿಸಿ ಊಟದಲ್ಲಿ ಕಾಣಿಸಿಕೊಂಡ ಹುಳ! ಪಾಲಕರಿಂದ ಆಕ್ರೋಷ

Kalaburagi: ಬಿಸಿ ಊಟದಲ್ಲಿ ಕಾಣಿಸಿಕೊಂಡ ಹುಳ! ಪಾಲಕರಿಂದ ಆಕ್ರೋಷ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬಿಸಿ ಊಟ ತಯಾರಿಕೆಗೂ ಮುನ್ನ ಅಕ್ಕಿ ಅನ್ನ ಮಾಡಲು ಯೋಗ್ಯವಾಗಿದೆಯೇ ಎಂದು ಪರಿಶೀಲಿಸಬೇಕು. ಅಲ್ಲದೆ ಚೆನ್ನಾಗಿ ತೊಳೆದು ಅಕ್ಕಿಯನ್ನು ಶುಚಿಗೊಳಿಸಬೇಕು. ಆದರೆ ಕಲಬುರುಗಿಯಲ್ಲಿ ಊಟದಲ್ಲಿ ಹುಳ ಸಿಕ್ಕಿದೆ.

  • News18 Kannada
  • Last Updated :
  • Karnataka, India
  • Share this:

ಶಾಲಾ ಮಕ್ಕಳಿಗೆ (School Students) ಬಿಸಿಯೂಟ ನೀಡಲಾಗುತ್ತಿದ್ದು ಇದರಲ್ಲಿ ಹಲವು ಸಾಧಕ ಭಾದಕಗಳಿವೆ. ಅದರಂತೆ ಕಲಬುರಗಿಯಲ್ಲಿ ಒಂದು ಘಟನೆ ಜರುಗಿದೆ. ಬಿಸಿ ಊಟದಲ್ಲಿ ಹುಳ (Worm) ಸಿಕ್ಕಿದೆ. ಬಿಸಿ ಊಟ ತಯಾರು ಮಾಡುವಾಗ ತುಂಬಾ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಏಕೆಂದರೆ ಇದು ಹಲವು ಮಕ್ಕಳ (Children) ಆರೋಗ್ಯದ ಪ್ರಶ್ನೆಯಾಗಿರುತ್ತದೆ. ಆದರೂ ಕೆಲವೊಮ್ಮೆ ಇಂತಹ ಘಟನೆಗಳು ಜರುಗುತ್ತಲೇ ಇರುತ್ತದೆ. ಅಕ್ಕಿ ಹಾಗೂ ಬೇಳೆಗಳ ಸರಿಯಾದ ಪರಿಶೀಲನೆ ಮಾಡಿದ ಕಾರಣ ಹೀಗಾಗಿದೆ. ಈ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ. 


ಬಿಸಿ ಊಟ ತಯಾರಿಕೆಗೂ ಮುನ್ನ ಅಕ್ಕಿ ಅನ್ನ ಮಾಡಲು ಯೋಗ್ಯವಾಗಿದೆಯೇ ಎಂದು ಪರಿಶೀಲಿಸಬೇಕು. ಅಲ್ಲದೆ ಚೆನ್ನಾಗಿ ತೊಳೆದು ಅಕ್ಕಿಯನ್ನು ಶುಚಿಗೊಳಿ ನಂತರವೇ ಅಕ್ಕಿ ಬೇಯಲು ಇಡಬೇಕು. ಆದರೆ ಸಿಬ್ಬಂದಿಗಳು ಈ ಕೆಲಸ ಮಾಡದೆ ನೇರವಾಗಿ ಅಕ್ಕಿ ಬೇಯಿಸಿ ಅನ್ನ ಸಿದ್ಧಪಡಿಸಿದ್ದಾರೆ. ಬಹಳ ದಿನಗಳ ಹಿಂದೆ ಬಂದ ಅಕ್ಕಿಯನ್ನು ಮೂಲೆಯಲ್ಲಿ ಸಂಗ್ರಹಿಸಿ ಇಡಲಾಗಿತ್ತು ಎಂದು ತಿಳಿದುಬಂದಿದೆ.


ಪಾಲಕರಿಂದ ಆಕ್ರೋಷ
ಈ ಕುರಿತು ಮಕ್ಕಳ ಪೋಷಕರು ಕಿಡಿಕಾರಿದ್ದಾರೆ. ಮಕ್ಕಳಿಗೆ ಈ ರೀತಿ ಕಡಿಮೆ ಗುಣಮಟ್ಟದ ಆಹಾರ ನೀಡಿದರೆ ಅವರ ಆರೋಗ್ಯದ ಹೊಣೆ ಯಾರದ್ದು ಎಂಬ ಪ್ರಶ್ನೆ ಮಾಡಿದ್ದಾರೆ. ಶಾಲೆಯಲ್ಲಿ ಬಿಸಿ ಊಟದ ಉಸ್ತುವಾರಿ ಯಾರಿರುತ್ತಾರೋ ಅವರಾದರೂ ಈವ್ಯವಸ್ಥೆಗಳನ್ನು ಆಗಾಗ ಪರಿಶೀಲಿಸಿದರೆ ಇಂತಹ ಘಟನೆಗಳು ಜರುಗುತ್ತಿರಲಿಲ್ಲ. ಅದರ ಬದಲಾಗಿ ಎಷ್ಟೋ ದಿನಗಳಿಂದ ಶೇಖರಿಸಿಟ್ಟ ಹಳೆ ಅಕ್ಕಿಯನ್ನು ಪರಿಶೀಲಿಸದೆ ಮತ್ತು ಶುಚಿಗೊಳಿಸದೇ ಅಡಿಗೆ ಮಾಡಿರುವುದೇ ಇದಕ್ಕೆ ಕಾರಣ ಎಂದು ಹೇಳಿಲಾಗುತ್ತಿದೆ.


ಬಿಸಿ ಊಟದಲ್ಲಿ ಹುಳ
ಹುಳುಗಳು ಆಹಾರದಲ್ಲಿ ಬೆರೆತಿದ್ದು ಅಕ್ಕಿ ಬೇಯುವಾಗ ಹುಳಗಳು ಸಹ ಬೆಂದು ಹೋಗಿವೆ. ಅಷ್ಟೇ ಅಲ್ಲ ಕೆಲ ಮಕ್ಕಳು ಸ್ವಲ್ಪ ಊಟ ಕೂಡ ಮಾಡಿದ್ದಾರೆ. ಆ ನಂತರ ಸರಿಯಾಗಿ ಗಮನಿಸಿದಾಗ ಹುಳಳಿರುವುದು ತಿಳಿದುಬಂದಿದೆ. ಬೇಜವಾಭ್ದಾರಿಯಿಂದ ಈ ಘಟನೆ ನಡೆದಿದೆ.  ಮಕ್ಕಳಿಗಾಗಿ ತಯಾರಿಸಿದ ಬಿಸಿ ಊಟದಲ್ಲಿ ಅಪಾರ ಪ್ರಮಾಣದ ಹುಳುಗಳು  ಕಂಡು ಬಂದ ಹಿನ್ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳು ಸೇವಿಸಲು ತೆಗೆದುಕೊಂಡ ಅನ್ನ ಎಸೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿ‌ನ ಸನ್ನತಿ ಗ್ರಾಮದಲ್ಲಿ ನವೆಂಬರ್​ .21ರಂದು  ಮಧ್ಯಾಹ್ನ ನಡೆದಿದೆ.


ಇದನ್ನೂ ಓದಿ: KCET ಎರಡನೇ ಸುತ್ತಿನ ಸೀಟು ಹಂಚಿಕೆ ವಿವರ ಪ್ರಕಟ, ಇಲ್ಲಿದೆ ಮಾಹಿತಿ


ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ಸಂಭವಿಸಿದ್ದು ಹುಳುಗಳು ತುಂಬಿದ್ದ ಬಿಸಿ ಊಟ ಸೇವಿಸಿದ ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಆತಂಕ ಶುರುವಾಗಿದೆ. ಇನ್ನು ಮುಂದೆಯೂ ಸಹ ಈ ಘಟನೆ ಜರುಗಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಮಧ್ಯಾಹ್ನದ ವೇಳೆ ವಿದ್ಯಾರ್ಥಿಗಳು ಊಟ ಮಾಡುತ್ತಿದ್ದಾಗ ಕೆಲವರ ತಟ್ಟೆಯಲ್ಲಿ ಹುಳಗಳು ಕಾಣಿಸಿಕೊಂಡಿವೆ ಇದನ್ನು ಗಮನಿಸಿದ ವಿದ್ಯಾರ್ಥಿಗಳು ಅನ್ನ ಚೆಲ್ಲುವುದರ ಮೂಲಕ ಬಿಸಿ ಊಟ ತಯಾರಿಸುವ ಸಿಬ್ಬಂದಿಯ ನಿರ್ಲಕ್ಷದ ಕುರಿತು ಕಿಡಿಕಾರಿದ್ದಾರೆ.


ಇದೇರೀತಿಯ ಘಟನೆ ಮತ್ತೆ ಜರುಗಬಾದರು
ಇದೇರೀತಿಯ ಘಟನೆ ಹಿಂದೆ ಬೇರೆ ಬೇರೆ ಶಾಲೆಗಳಲ್ಲೂ ಸಹ ಜರುಗಿತ್ತು. ಸರ್ಕಾರ ಮಕ್ಕಳಿಗೆ ಸಹಕಾರವಾಗಲಿ ಎಂದು ನೀಡಿದ ಈ ಸೌಲಭ್ಯವನ್ನು ಶಾಲೆಗಳಲ್ಲಿ ಈ ರೀತಿಯ ತಪ್ಪು ಮಾಡಿ ಅದರ ಕುರಿತು ಕೆಟ್ಟ ಅಭಿಪ್ರಾಯ ಕೆಲವರಲ್ಲಿ ಮೂಡುವಂತಾಗಿದೆ. ಬಿಸಿ ಊಟದಿಂದಾಗಿಯೇ ಶಾಲಾ ನೇಮಕಾತಿ ಹೆಚ್ಚಿದ ಹಲವಾರು ಸಾಕ್ಷಿಗಳಿವೆ. ಬಿಸಿ ಊಟದೊಟ್ಟಿಗೆ ಮಕ್ಕಳಿಗೆ ಪ್ರಯೋಜನವಾಗಲಿ ಎಂದು ಹಲವಾರು ರೀತಿಯ ಪೌಷ್ಟಿಕ ಆಹಾರ ಪದಾರ್ಥಗಳನ್ನೂ ಸಹ ನೀಡಲಾಗುತ್ತಿತ್ತು.

First published: