• Home
  • »
  • News
  • »
  • jobs
  • »
  • Education: ಮಹಿಳಾ ಶಿಕ್ಷಣ ಕ್ಷೇತ್ರಕ್ಕೆ ಮಹಾತ್ಮ ಜ್ಯೋತಿಬಾ ಫುಲೆ ಕೊಡುಗೆ, ಸುಧಾರಣೆಗಳೇನು?

Education: ಮಹಿಳಾ ಶಿಕ್ಷಣ ಕ್ಷೇತ್ರಕ್ಕೆ ಮಹಾತ್ಮ ಜ್ಯೋತಿಬಾ ಫುಲೆ ಕೊಡುಗೆ, ಸುಧಾರಣೆಗಳೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Trending Desk
  • 3-MIN READ
  • Last Updated :
  • Bangalore [Bangalore], India
  • Share this:

    ಮಹಾತ್ಮ ಜ್ಯೋತಿಬಾ ಫುಲೆ (Jyotirao Phule) ಎಂದು ಖ್ಯಾತರಾಗಿರುವ ಜ್ಯೋತಿರಾವ್ ಗೋವಿಂದರಾವ್ ಫುಲೆ ಅವರು ಮಹಿಳಾ ಶಿಕ್ಷಣ (Women's Education) ಕ್ಷೇತ್ರದಲ್ಲಿ ಬಹು ದೊಡ್ಡ ಸುಧಾರಕರಾಗಿದ್ದಾರೆ. ಅವರನ್ನು ಮಾನವತಾವಾದಿ, ಲೇಖಕ, ದಾರ್ಶನಿಕ ಮತ್ತು ಕ್ರಾಂತಿಕಾರಿ (Activist) ಎಂದು ಬಣ್ಣಿಸಬಹುದಾಗಿದೆ. ಅವರು ದೀರ್ಘಕಾಲದವರೆಗೆ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಿದ ದಿಟ್ಟ ಸಮಾಜ ಸುಧಾರಕ (Social Reformer). ಏಪ್ರಿಲ್ 11, 1827 ರಂದು ಮಹಾರಾಷ್ಟ್ರದಲ್ಲಿ ಜನಿಸಿದ ಅವರು, ಜಾತಿ ಅಸಮಾನತೆಯ ವಿರುದ್ಧ ಧ್ವನಿ ಎತ್ತಿದ ಧೀಮಂತ ವ್ಯಕ್ತಿಯಾಗಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮಹಿಳೆಯರ ಸಬಲೀಕರಣಕ್ಕೆ ಅವರ ಕೊಡುಗೆ ಬಹಳ ಅಪಾರ ಎಂದೇ ಹೇಳಬಹುದು.


    ಜ್ಯೋತಿಬಾ ಫುಲೆಯವರು ನವೆಂಬರ್ 28, 1890 ರಂದು ನಿಧನರಾದರು. ಅವರು ಅಸ್ಪೃಶ್ಯತೆ ಮತ್ತು ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಲು ಮತ್ತು ಮಹಿಳೆಯರ ವಿಮೋಚನೆಗಾಗಿ ಶ್ರಮಿಸಿದರು. ಫುಲೆಯವರು ಮಹಿಳೆಯರು ಮತ್ತು ಕೆಳ ಜಾತಿಯ ಜನರಿಗೆ ಶಿಕ್ಷಣ ನೀಡುವ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ.


    ಇದನ್ನೂ ಓದಿ: ಪಾಠ ಮಾಡುವ ಶಿಕ್ಷಕರಿಗೂ ಬೇಕು ಈ ವಿಷಯಗಳ ಮೇಲೆ ಗಮನ


    ಜ್ಯೋತಿಬಾ ಪುಲೆ ಅವರ ಕೊಡುಗೆಗಳು ಮತ್ತು ಸುಧಾರಣೆಗಳು


    ಜ್ಯೋತಿಬಾ ಫುಲೆ ಅವರು 1847 ರಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಅವರು 1840 ರಲ್ಲಿ ಸಾವಿತ್ರಿ ಬಾಯಿ ಅವರನ್ನು ವಿವಾಹವಾದರು. ಈ ದಂಪತಿಗಳು ಮಹಿಳಾ ಶಿಕ್ಷಣಕ್ಕೆ ಅಪಾರವಾದ ಕೊಡುಗೆ ನೀಡಿ ಭಾರತದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರವರ್ತಕರಾಗಿದ್ದಾರೆ. ಜ್ಯೋತಿಬಾ ಫುಲೆ ಅವರು ತಮ್ಮ ಪತ್ನಿಗೆ ಶಿಕ್ಷಣ ನೀಡಿ ಹೆಣ್ಣು ಮಕ್ಕಳಿಗೆ ಕಲಿಸುವಂತೆ ಸಲಹೆ ನೀಡಿದರು. ಅವರ ಪ್ರೋತ್ಸಾಹದಿಂದಾಗಿ ಸಾವಿತ್ರಿ ಬಾಯಿ ದೇಶದ ಮೊದಲ ಮಹಿಳಾ ಶಿಕ್ಷಕಿ ಆದರು.


    ಜ್ಯೋತಿಬಾ ಫುಲೆ ಅವರು ಆಗಸ್ಟ್ 1848 ರಲ್ಲಿ, ಭಾರತದಲ್ಲಿ ಬಾಲಕಿಯರಿಗಾಗಿ ಶಾಲೆಯನ್ನು ಆರಂಭಿಸಿದರು. ಇದು ಬಾಲಕಿಯರ ಪ್ರಪ್ರಥಮ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಂತರ ಮಹಾರ್ ಮತ್ತು ಮಾಂಗ್ ದಲಿತ ವರ್ಗದ ಮಕ್ಕಳಿಗಾಗಿ ಶಾಲೆಗಳನ್ನು ಸ್ಥಾಪಿಸಿದರು. 1873 ರಲ್ಲಿ, ಫುಲೆ ಮತ್ತು ಅವರ ಅನುಯಾಯಿಗಳು ಸತ್ಯಶೋಧಕ್ ಸಮಾಜವನ್ನು ಸ್ಥಾಪಿಸಿದರು. ಈ ಸಮಾಜದ ಸಿದ್ದಾಂತಗಳೆಂದರೆ, ಸತ್ಯವನ್ನು ಹುಡುಕುವುದು, ಬಡವರು ಮತ್ತು ಕೆಳ ಜಾತಿಗಳ ಜನರಿಗೆ ಸಮಾನ ಹಕ್ಕುಗಳನ್ನು ನೀಡುವುದು ಆಗಿತ್ತು.


    ವಿಧವೆಯರ ಮರುವಿವಾಹ ಪ್ರತಿಪಾದಿಸಿದ ಮಹಾತ್ಮ


    ಜ್ಯೋತಿಬಾ ಫುಲೆ ವಿಧವೆಯರ ಮರುವಿವಾಹವನ್ನು ಪ್ರತಿಪಾದಿಸಿದರು ಮತ್ತು 1854 ರಲ್ಲಿ ಕೆಳ ಮತ್ತು ಮೇಲ್ಜಾತಿಯ ವಿಧವೆಯರಿಗಾಗಿ ಒಂದು ಮನೆಯನ್ನು ಸ್ಥಾಪಿಸಿದರು. ಅವರು ಹೆಣ್ಣು ಶಿಶುಹತ್ಯೆಯನ್ನು ಎದುರಿಸಲು ನವಜಾತ ಶಿಶುಗಳಿಗೆ ಆಶ್ರಯ ತಾಣಗಳನ್ನು ಆರಂಭಿಸಿದರು. ಕೆಳ ಜಾತಿಯ ಜನರಿಗೆ ತಮ್ಮ ಮನೆಯ ನೀರನ್ನು ಬಳಸಲು ಅವಕಾಶ ನೀಡುವ ಮೂಲಕ, ಜ್ಯೋತಿಬಾ ಫುಲೆ ಕೆಳ ಜಾತಿಗಳನ್ನು ಸುತ್ತುವರೆದಿರುವ ಸಾಮಾಜಿಕ ಅಸ್ಪೃಶ್ಯತೆಯ ಕಳಂಕವನ್ನು ತೆಗೆದುಹಾಕಲು ಪ್ರಯತ್ನಿಸಿದರು.


    ಇದನ್ನೂ ಓದಿ: Viral News: ಸ್ನಾನ ಮಾಡಿದ್ದಕ್ಕೆ ಸತ್ತ ವ್ಯಕ್ತಿ? 60 ವರ್ಷ ಕೊಳಕಾಗಿ ನೆಮ್ಮದಿಯಾಗೇ ಇದ್ದ, ಪಾಪ!


    ಇವರು ಜುಲೈ 1888 ರಲ್ಲಿ ಪ್ಯಾರಲೈಟಿಕ್‌ ಸ್ಟ್ರೋಕ್‌ಗೆ ಒಳಗಾಗಿ ಕೆಲವು ತಿಂಗಳುಗಳಲ್ಲಿ ನಿಧನರಾದರು. ಇವರು ಮಹಿಳಾ ಶಿಕ್ಷಣಕ್ಕೆ ನೀಡಿದ ಅಪಾರವಾದ ಕೊಡುಗೆಯಿಂದ ಇವರನ್ನು ಭಾರತವು ಸದಾ ಸ್ಮರಿಸುತ್ತಲೇ ಇರುತ್ತದೆ.

    Published by:Precilla Olivia Dias
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು