ನವದೆಹಲಿ : ಒಟ್ಟು 8.6 ಲಕ್ಷ ಅಭ್ಯರ್ಥಿಗಳು 2023 ರ ಜನವರಿ ಅವಧಿಯ ಜೆಇಇ ಮುಖ್ಯ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ, 2022 ರ ಜುಲೈ ಅವಧಿಯ ಪರೀಕ್ಷೆಗೆ ಹೋಲಿಸಿದರೆ 6,000 ಕ್ಕೂ ಹೆಚ್ಚು ಆಕಾಂಕ್ಷಿಗಳು ಈ ಬಾರಿ ಹೆಚ್ಚಾಗಿದ್ದಾರೆ. ಪುರುಷ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ (Number) ನೋಂದಾಯಿಸಿದ್ದು, ನೋಂದಾಯಿತ ಅಭ್ಯರ್ಥಿಗಳಲ್ಲಿ 6 ಲಕ್ಷ ಅಥವಾ ಸುಮಾರು 70% ರಷ್ಟಿದ್ದಾರೆ. ಮೊದಲ ಬಾರಿಗೆ ಜೆಇಇ (JEE) ಮುಖ್ಯ ಪರೀಕ್ಷೆಗೆ ಶೇ 30% ಕ್ಕಿಂತ ಹೆಚ್ಚು ಮಹಿಳಾ ಅಭ್ಯರ್ಥಿಗಳು (Candidates) ನೋಂದಾಯಿಸಿದ್ದಾರೆ. ಆದರೂ ಸಂಪೂರ್ಣ ಸಂಖ್ಯೆಯಲ್ಲಿನ ಹೆಚ್ಚಳವು 2022 ಕ್ಕೆ ಹೋಲಿಸಿದರೆ ಅತ್ಯಲ್ಪವಾಗಿದ್ದು, ಉದಾ: , 2.5 ಲಕ್ಷದಿಂದ 2.6 ಲಕ್ಷವಷ್ಟೇ ಏರಿಕೆಯಾಗಿದೆ.
ಸಾಮಾನ್ಯ ಅಭ್ಯರ್ಥಿಗಳ ಶೇಕಡಾವಾರು, ಕಳೆದ ವರ್ಷಕ್ಕಿಂತ ಈ ಬಾರಿ 41.8% ರಿಂದ 38.3% ಕ್ಕೆ ಇಳಿದಿದೆ. ಮತ್ತೊಂದೆಡೆ, ಅಭ್ಯರ್ಥಿಗಳ ಶೇಕಡಾವಾರು ಹಿಂದುಳಿದ ವರ್ಗ(OBC) ವು 35.7% ರಿಂದ 37.1% ಕ್ಕೆ ಮತ್ತು ಸಾಮಾನ್ಯ-ಆರ್ಥಿಕವಾಗಿ ದುರ್ಬಲ ವರ್ಗವು (GEN-EWS) 9% ರಿಂದ 11.6% ವರೆಗೆ ಹೆಚ್ಚಿದೆ. ರಾಜ್ಯವಾರು ನೋಡಿದರೆ ಮಹಾರಾಷ್ಟ್ರದಿಂದ ಅತಿ ಹೆಚ್ಚು ಅಭ್ಯರ್ಥಿಗಳು ನೋಂದಾಯಿಸಿದ್ದು ಒಟ್ಟು ನೋಂದಣಿಯಲ್ಲಿ 1,03,039 ಅಥವಾ ಸುಮಾರು 12% ರಷ್ಟು ನೋಂದಾಯಿತರಾಗಿದ್ದಾರೆ.
ನಂತರದ ಸ್ಥಾನದಲ್ಲಿ ಉತ್ತರ ಪ್ರದೇಶ- 99,714 (11.6%) ಮತ್ತು ಆಂಧ್ರಪ್ರದೇಶ 91,799 (10.6%) ರಾಜ್ಯಗಳಿವೆ. ಇದರ ನಂತರದ ಸ್ಥಾನಗಳಲ್ಲಿ ಇತರ ಎರಡು ರಾಜ್ಯಗಳಿದ್ದು, ತೆಲಂಗಾಣ (86,840) ಮತ್ತು ರಾಜಸ್ಥಾನದಿಂದ (59,641) - 50,000 ಕ್ಕಿಂತ ಹೆಚ್ಚು ಅಭ್ಯರ್ಥಿಗಳು ನೋಂದಾಯಿಸಿದ್ದಾರೆ. ನಗರಗಳ ಪೈಕಿ ದೆಹಲಿಯಿಂದ 36,530 ಅಭ್ಯರ್ಥಿಗಳಿದ್ದು, ಹೈದರಾಬಾದ್/ಸಿಕಂದರಾಬಾದ್ (32,246) ಮತ್ತು ಕೋಟಾ (24,253) ನಂತರದ ಸ್ಥಾನದಲ್ಲಿದೆ.
ಇದನ್ನೂ ಓದಿ: Vijayapura: ಶಾಲೆಗೆ ಕುಡಿದು ಬಂದ ಶಿಕ್ಷಕ, ವಿಜಯಪುರದಲ್ಲಿ ಶಾಕಿಂಗ್ ಘಟನೆ
ಎನ್ಐಟಿಎಸ್ ಮತ್ತು ಐಐಐಟಿಗಳಂತಹ ಕೇಂದ್ರೀಯ ಅನುದಾನಿತ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್, ಆರ್ಕಿಟೆಕ್ಚರ್ ಮತ್ತು ಪದವಿಪೂರ್ವ ಕೋರ್ಸ್ಗಳ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆ ಮತ್ತು ಐಐಟಿಗಳಿಗೆ ಪ್ರವೇಶಕ್ಕಾಗಿ ಜೆಇಇ (ಅಡ್ವಾನ್ಸ್ಡ್) ಅರ್ಹತಾ ಪರೀಕ್ಷೆ ಮಂಗಳವಾರದಿಂದ ಪ್ರಾರಂಭವಾಗುತ್ತಿದೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) ತನ್ನ ಡಿಸೆಂಬರ್ ಅಧಿಸೂಚನೆಯಲ್ಲಿ ಜನವರಿ 31 ರಂದು ಕೊನೆಯ ಪರೀಕ್ಷೆ ನಡೆಯಲಿದೆ ಎಂದು ಹೇಳಿತ್ತು, ಶನಿವಾರ ಹೊರಡಿಸಿದ ಇತ್ತೀಚಿನ ಅಧಿಸೂಚನೆಯು ಜನವರಿಯಲ್ಲಿ ಯಾವುದೇ ಪರೀಕ್ಷೆ ಇರುವುದಿಲ್ಲ ಎಂದು ಹೇಳಿದೆ. ಜನವರಿ 27 ಮತ್ತು ಫೆಬ್ರವರಿ 1 ರಂದು ಪೇಪರ್ 1 ಪರೀಕ್ಷೆ(ಬಿಟೆಕ್ / ಬಿಇ ಕೋರ್ಸ್ಗಳಿಗೆ) ಇರುತ್ತದೆ.
ಎನ್ಟಿಎ ಪ್ರಕಾರ, ವಾಷಿಂಗ್ಟನ್ ಡಿಸಿ, ಮಾಸ್ಕೋ, ಹಾಂಗ್ ಕಾಂಗ್, ಸಿಂಗಾಪುರ್ ಮತ್ತು ದುಬೈ ಸೇರಿದಂತೆ ದೇಶದ 290 ನಗರಗಳಲ್ಲಿ ಮತ್ತು ಭಾರತದ ಹೊರಗಿನ 18 ನಗರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಪರೀಕ್ಷೆಯನ್ನು 13 ಭಾಷೆಗಳಲ್ಲಿ ನಡೆಸಲಾಗುತ್ತಿದ್ದು, ಇಂಗ್ಲೀಷ್, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳು ಸೇರಿವೆ.
ಕಂಪ್ಯೂಟರ್ ಆಧಾರಿತ ಬಹು ಆಯ್ಕೆ ಪ್ರಶ್ನೆಗಳು
ಕಂಪ್ಯೂಟರ್ ಆಧಾರಿತ ಬಹು ಆಯ್ಕೆಯ ಪರೀಕ್ಷೆಯನ್ನು (ಪೇಪರ್ 3 ಹೊರತುಪಡಿಸಿ) ಪ್ರತಿದಿನ ಎರಡು ಅವಧಿಗಳಲ್ಲಿ ನಡೆಸಲಾಗುತ್ತದೆ. ಪೇಪರ್ 1 ಪರೀಕ್ಷೆ ಬಿಟೆಕ್/ಬಿಇ ಕೋರ್ಸ್ ಗಳಿಗೆ ನಡೆದರೆ, ಪೇಪರ್ 2 ಪರೀಕ್ಷೆ ಆರ್ಕಿಟೆಕ್ಚರ್ ಕೋರ್ಸ್ ಗೆ ನಡೆಯಲಿದೆ. ಪೇಪರ್ 3 ಪರೀಕ್ಷೆ ಬ್ಯಾಚುಲರ್ಸ್ ಇನ್ ಪ್ಲಾನಿಂಗ್ ವಿದ್ಯಾರ್ಥಿಗಳಿಗೆ ನಡೆಯಲಿದೆ. ನೋಂದಾಯಿಸಿದ ಅಭ್ಯರ್ಥಿಗಳಲ್ಲಿ, 21,551 ವಿದ್ಯಾರ್ಥಿಗಳು ಪೇಪರ್ 1 ಮತ್ತು ಪೇಪರ್ 2 ಎರಡಕ್ಕೂ ನೋಂದಾಯಿಸಿದ್ದಾರೆ. ಅಲ್ಲದೆ 16,780 ಅಭ್ಯರ್ಥಿಗಳು ಎಲ್ಲಾ ಮೂರು ಪತ್ರಿಕೆಗಳಿಗೆ ನೋಂದಾಯಿಸಿದ್ದಾರೆ.
8.2 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪೇಪರ್ 1 ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಜೆಇಇ (ಮುಖ್ಯ) ಎರಡನೇ ಅವಧಿಯ ಪರೀಕ್ಷೆಯು ಏಪ್ರಿಲ್ 6 ರಿಂದ 12, 2023 ರವರೆಗೆ ನಡೆಸಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ