ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ, NTA ಶೀಘ್ರದಲ್ಲೇ JEE ಮುಖ್ಯ ಫಲಿತಾಂಶ 2023 ಅನ್ನು NTA JEE ನ ಅಧಿಕೃತ ಸೈಟ್‌ನಲ್ಲಿ jeemain.nta.nic.in ನಲ್ಲಿ ಬಿಡುಗಡೆ ಮಾಡುತ್ತದೆ. ಇಂದೇ ಫಲಿತಾಂಶ ಪ್ರಕಟವಾಗಲಿದೆ. ಯಾರೆಲ್ಲಾ ಜೆಇಇ ಮುಖ್ಯ ಸೆಷನ್ 1 ಅಥವಾ ಸೆಷನ್ 2 ಪರೀಕ್ಷೆ ಬರೆದಿದ್ದಾರೋ ಅವರೆಲ್ಲರೂ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. JEE ಮುಖ್ಯ ವೆಬ್‌ಸೈಟ್ ಜೊತೆಗೆ nta.ac.in ನಲ್ಲಿ NTA ಯ ಅಧಿಕೃತ ಸೈಟ್‌ನಲ್ಲಿ ಫಲಿತಾಂಶ ನಿಮಗೆ ದೊರೆಯಲಿದೆ. ಅಧಿಕೃತ ಜಾಲತಾಣದ ಮಾಹಿತಿ ಈಗಾಗಲೇ ಬಿಡುಗಡೆಯಾಗಿದ್ದು ಇದನ್ನು ನೀವು ಫಲಿತಾಂಶ ಬಿಡುಗಡೆಯಾದ ನಂತರ ಪರಿಶೀಲಿಸಬಹುದು.
ಈ ವರ್ಷ ಸುಮಾರು 9 ಲಕ್ಷ ಅಭ್ಯರ್ಥಿಗಳು JEE ಮುಖ್ಯ ಸೆಷನ್ 2 ಪರೀಕ್ಷೆ 2023 ಗೆ ಹಾಜರಾಗಿದ್ದಾರೆ. ಫಲಿತಾಂಶಗಳ ಜೊತೆಗೆ, ಅಂತಿಮ ಉತ್ತರ ಕೀ, ಟಾಪರ್ಸ್ ಪಟ್ಟಿ, ಆಲ್ ಇಂಡಿಯಾ ರ್ಯಾಂಕ್ ಪಟ್ಟಿ, ಕಟ್ ಆಫ್, ಪರ್ಸೆಂಟೈಲ್ ಮತ್ತು ಇತರ ಮಾಹಿತಿಯನ್ನು ಸಹ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾಗುತ್ತದೆ. ಎನ್ಟಿಎ ಜೆಇಇ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ಕೂಡಾ ನಿಮಗೆ ಲಭ್ಯವಿರುತ್ತದೆ.
NTA ಏಪ್ರಿಲ್ 6, 8, 10, 11, 12, 13 ಮತ್ತು 15, 2023 ರಂದು JEE ಮುಖ್ಯ ಸೆಷನ್ 2 ಪರೀಕ್ಷೆಯನ್ನು ನಡೆಸಿತು ಈ ಪರೀಕ್ಷೆಗೆ ಸಂಬಂಧಿಸಿದಂತೆ ಫಲಿತಾಂಶವನ್ನು ಬಿಡುಗಡೆ ಮಾಡಲಾಗುತ್ತಿದೆ. ತಾತ್ಕಾಲಿಕ ಉತ್ತರ ಕೀಯನ್ನು ಏಪ್ರಿಲ್ 19 ರಂದು ಬಿಡುಗಡೆ ಮಾಡಲಾಯಿತು. ನಂತರ ಬಿಡುಗಡೆಯಾದ ಕೀ ಉತ್ತರಗಳಲ್ಲಿ ಆಕ್ಷೇಪಣೆಗಳಿದ್ದರೆ ಅದನ್ನು ತಿಳಿಸಲು ಅವಕಾಶ ನೀಡಲಾಗಿತ್ತು. ಕೊನೆಯ ದಿನಾಂಕ ಏಪ್ರಿಲ್ 21, 2023 ರವರೆಗೆ ನೀಡಲಾಗಿತ್ತು. ತಾತ್ಕಾಲಿಕ ಉತ್ತರ ಕೀಯನ್ನು ಏಪ್ರಿಲ್ 24, 2023 ರಂದು ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: Morarji Desai ಮೆರಿಟ್ ಪಟ್ಟಿ ಬಿಡುಗಡೆ; ಈ ಲಿಂಕ್ ಬಳಸಿ ಚೆಕ್ ಮಾಡಿ
ಈ ಎಲ್ಲಾ ಮಾಹಿತಿಯ ನಂತರ ಇದೀಗ ಪರೀಕ್ಷೆ ಫಲಿತಾಂಶ ಬಿಡುಗಡೆಯಾಗಲಿದೆ. ನೀವು ಅಧಿಕೃತ ಜಾಲತಾಣದಲ್ಲಿ ಹೇಗೆ ಫಲಿತಾಂಶವನ್ನು ತಿಳಿದುಕೊಳ್ಳುವುದು ಎಂಬ ಗೊಂದಲ ಹೊಂದಿದ್ದರೆ ಹಂತ ಹಂತವಾಗಿ ನಾವಿಲ್ಲಿ ವಿವರಿಸಿದ ರೀತಿ ಮಾಡುತ್ತಾ ಹೋಗಿ
ಹಂತ 1: ಮೊದಲು ನಾವು ಇಲ್ಲಿ ನೀಡಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ. ಭೇಟಿ ನೀಡಲು ಈ ಲಿಂಕ್ ಬಳಸಿ jeemain.nta.nic.in
ಹಂತ 2: ಅಧಿಕೃತ ಜಾಲತಾಣ ಈಗ ಓಪನ್ ಆಗಿರುತ್ತದೆ ನಂತರ ಅಲ್ಲಿ ಒಂದು ನೀಲಿ ಬಣ್ಣದ ಪಟ್ಟಿ ಕಾಣುತ್ತದೆ ಫಲಿತಾಂಶ ಸೆಷನ್ 2 ಫಲಿತಾಂಶ ಕ್ಲಿಕ್ ಮಾಡಿ
ಹಂತ 3: ಅಲ್ಲಿ ನಿಮಗೆ ರಿಸಲ್ಟ್ ಪರಿಶೀಲಿಸುವ ಸಲುವಾಗಿ ಕೆಲವು ದಾಖಲೆಗಳನ್ನು ಕೇಳಲಾಗುತ್ತದೆ. ಅವುಗಳನ್ನು ನೀಡಿ ರಿಸಲ್ಟ್ ಚೆಕ್ ಮಾಡಬಹುದು.
MET 2023: ಪ್ರವೇಶ ಪರೀಕ್ಷೆಗೆ ನೋಂದಣಿ ದಿನಾಂಕ ಪ್ರಕಟ
ಪ್ರವೇಶ ಪರೀಕ್ಷೆಯನ್ನು ವಿದ್ಯಾರ್ಥಿಗಳ ಸಾಮರ್ಥ್ಯ ಪರೀಕ್ಷೆ ಮಾಡುವ ಸಲುವಾಗಿ ಮಾಡಲಾಗುತ್ತದೆ. ಪ್ರತಿಯೊಂದು ಕಾಲೇಜು ಅದರದೇ ಆದ ಪ್ರವೇಶ ಪರೀಕ್ಷೆಯನ್ನು ಹೊಂದಿರುತ್ತದೆ. ಆ ಕಾರಣದಿಂದಾಗಿ ನೀವು ಯಾವ ಕಾಲೇಜ್ (College) ಸೇರಲು ಬಯಸುತ್ತೀರೋ ಆ ಕಾಲೇಜ್ನ ಪ್ರವೇಶ ಪರೀಕ್ಷೆಯಲ್ಲಿ ಪಾಸ್ ಆಗಬೇಕಾಗುತ್ತದೆ. ಉನ್ನತ ಶಿಕಲ್ಷಣ ಪಡೆಯಲು ನೀವು ಪ್ರತಿಷ್ಟಿತ ಕಾಲೇಜುಗಳಿಗೆ ಸೇರಿಕೊಳ್ಳಲು ಬಯಸಿದರೆ ಖಂಡಿತ ಪರೀಕ್ಷೆಯನ್ನು (Exam) ಬರೆಯಲೇ ಬೇಕಾಗುತ್ತದೆ. ನೀವು ಮಣಿಪಾಲ್ನಲ್ಲಿ ನಿಮ್ಮ ಶಿಕ್ಷಣವನ್ನು (Education) ಮುಂದುವರೆಸಲು ಬಯಸಿದರೆ ಖಂಡಿತ ಈ ಪರೀಕ್ಷೆ ಬರೆಯಲೇ ಬೇಕಾಗುತ್ತದೆ.
ನೀವು ಈ ಬಾರಿ ಹೊಸದಾಗಿ ಕಾಲೇಜಿಗೆ ಸೇರಿಕೊಳ್ಳಲು ಬಯಸುತ್ತಿದ್ದರೆ ಖಂಡಿತ ಇಲ್ಲಿ ಅಡ್ಮಿಷನ್ ಮಾಡಿಸಬಹುದು. ಆದಷ್ಟು ಬೇಗ ಅಪ್ಲೈ ಮಾಡಿ. MAHE ಆನ್‌ಲೈನ್‌ನಲ್ಲಿ ಮೂಲಕ ಪ್ರವೇಶಾತಿ ಆರಂಭಮಾಡಿದೆ. ನೀವೂ ಆನ್‌ಲೈನ್ ಮೂಲಕ ಇಲ್ಲಿ ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು MET 2023 ಹಂತ 2 ಕ್ಕೆ ಆನ್‌ಲೈನ್ ಮೋಡ್‌ನಲ್ಲಿ manipal.edu ನಲ್ಲಿ ನೋಂದಾಯಿಸಿಕೊಳ್ಳಬಹುದು. ಅಧಿಕೃತ ಜಾಲತಾಣದಲ್ಲಿ ಇನ್ನೂ ಹೆಚ್ಚಿನ ಮಾಹಿತಿ ನಿಮಗೆ ಲಭ್ಯವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ