ಜಗಳೂರು ನಾಲಂದ ಶಿಕ್ಷಣ (Education) ಸಂಸ್ಥೆಯಲ್ಲಿ ಜವಾನನಾಗಿದ್ದ ಶಾಸಕ ಚಿಕ್ಕಮ್ಮನಹಟ್ಟಿ ದೇವೆಂದ್ರಪ್ಪ ಇದೀಗ ಅಲ್ಲಿನ MLA ಆಗಿದ್ದಾರೆ. ಒಬ್ಬ ಮನುಷ್ಯನ (Human) ಅದೃಷ್ಟ ಅವನ ಪರಿಶ್ರಮ ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಎಂದು ಇವರನ್ನು ನೋಡಿದರೆ ತಿಳಿಯುತ್ತದೆ. 30 ವರ್ಷಗಳ ಕಾಲ ನಾಲಂದ ಶಿಕ್ಷಣ ಸಂಸ್ಥೆಯಲ್ಲಿ ಜವಾನ ಆಗಿ ಕೆಲಸ ಮಾಡಿದ್ದರು. ಆದರೆ ಇದೀಗ ಅವರು ಶಾಸಕರಾಗಿದ್ದಾರೆ. ದೇವೆಂದ್ರಪ್ಪ ಇದೀಗ ಮತ್ತೆ ತಾವು ಕೆಸಲ (Work) ಮಾಡುತ್ತಿದ್ದ ಶಾಲೆಗೆ ಮರಳಿ ಬಂದಿದ್ದಾರೆ. ಮರಳಿ ಬಂದು ಅವರೇನು ಮಾಡಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ವಿವರ.
ಹೌದು, ದೇವೆಂದ್ರಪ್ಪ ಶಾಸಕನಾಗಿ ಆಯ್ಕೆಯಾದ ನಂತರ ಹಳೆ ಶಿಕ್ಷಣ ಸಂಸ್ಥೆಯಲ್ಲಿ ಕಸ ಗುಡಿಸಿ, ಗಂಟೆ ಬಾರಿಸಿ ಮತ್ತೆ ತಾವು ಹಿಂದೆ ಮಾಡುತ್ತಿದ್ದ ಕಾಯಕವನ್ನು ನೆನಪಿಗೆ ತಂದುಕೊಂಡಿದ್ದಾರೆ. ತಮ್ಮ ಕೆಲಸದ ಮೇಲೆ ಇವರಿಗೆ ಎಷ್ಟು ಗೌರವ ಇತ್ತು ಎಂಬುದು ಇದರಲ್ಲೆ ತಿಳಿಯುತ್ತದೆ.
ಇಂದು ಕಾಲೇಜು ಆರಂಭವಾದ ಹಿನ್ನಲೆ ಕಾಲೇಜ್‌ನ ಪ್ರಾಂಶುಪಾಲರ ಕೊಠಡಿ ಸ್ವಚ್ಛಗೊಳಿಸಿ ಕಾರಿಡಾರ್ ಕಸ ಗೂಡಿಸಿದ ನೂತನ ಶಾಸಕ ತಮ್ಮ ಕೆಲಸದ ಮೇಲೆ ಎಷ್ಟು ಶ್ರದ್ಧೆ ಇತ್ತು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ತಮ್ಮ ಕಾಯಕದಲ್ಲಿ ಖುಚಿ ಕಂಡಿದ್ದಾರೆ.
ಇದನ್ನೂ ಓದಿ: UGC NET ಪರೀಕ್ಷಾ ದಿನಾಂಕ ಪ್ರಕಟ; ಜೂನ್ 13ರಿಂದ ಪರೀಕ್ಷೆ ಆರಂಭ
ತಮ್ಮ ಹಳೆ ಕೆಲಸ ಮಾಡಿ ವಿದ್ಯಾರ್ಥಿಗಳಿಗೆ ಶುಭ ಕೋರಿದ ಶಾಸಕ ದೇವೆಂದ್ರಪ್ಪ
ಜವಾನನಾಗಿದ್ದ ನನಗೆ ಕ್ಷೇತ್ರದ ಜನರು ಕೈ ಹಿಡಿದ್ರು ಎಂದು ತುಂಬಾ ಭಾವುಕರಾಗಿ ತಿಳಿಸಿದ್ದಾರೆ. ಕ್ಷೇತ್ರದ ಜನರಿಗೆ ತನ್ನ ವಂದನೆಗಳನ್ನು ತಿಳಿಸಿದ್ದಾರೆ. ಜನರು ನೀಡಿದ ಪ್ರೀತಿಯ ಬಗ್ಗೆ ಅವರು ಗೌರವ ಹೊಂದಿದ್ದಾರೆ. ನಾಲಂದ ಕಾಲೇಜ್ ನಲ್ಲಿ ನಾನು ಪ್ರೀನ್ಸಿಪಾಲ್ ಆಫೀಸ್ ನ ಕೆಲಸಗಾರನಾಗಿದ್ದೆ ಬೆಳಿಗ್ಗೆ 9-30 ವರೆಗೆ ಬಂದು ನಾನು ಆಫೀಸ್ ಶುಚಿ ಮಾಡಿ, ಪ್ರಾರ್ಥನೆಗೆ ಗಂಟೆ ಬಾರಿಸುತಿದ್ದೆ ಎಂದು ಹೇಳಿದ್ದಾರೆ.
ಇದೀಗ ಶಾಸಕನಾಗಿ ಇಲ್ಲಿಂದಲೆ ಕೆಲಸ ಆರಂಭಿಸುತಿದ್ದೇನೆ ಎಂದು ಜಗಳೂರಿನಲ್ಲಿ ನೂತನ ಶಾಸಕ ಚಿಕ್ಕಮ್ಮನಹಟ್ಟಿ ದೇವೆಂದ್ರಪ್ಪ ಹೇಳಿಕೆ ನೀಡಿದ್ದಾರೆ. ಅವರು ತಮ್ಮ ಶಾಲೆಯಿಂದಲೇ ಎಲ್ಲರಿಗೂ ಶುಭಕೋರುತ್ತಾ ಕೆಲಸ ಆರಂಭಿಸಿದ್ದಾರೆ. ಬಿ ದೇವೇಂದ್ರಪ್ಪ ಅವರು ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದಾರೆ.
ವರದಿ: ಸಂಜಯ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ