ಹಿಂದೆಲ್ಲಾ ಮಕ್ಕಳಿಗೆ ಶಿಕ್ಷಕರು (Teacher) ಬೈದು ಹೊಡೆದೇ ಬುದ್ಧಿ ಹೇಳುತ್ತಿದ್ದರು ಆದರೆ ಈಗ ಸ್ವಲ್ಪ ದಿನಗಳ ಹಿಂದೆ ಮಕ್ಕಳಿಗೆ ಬೈದು ಹೊಡೆದು ಮಾಡುವ ಹಾಗಿಲ್ಲ ಅದು ತಪ್ಪು ಎಂಬ ಅಭಿಪ್ರಾಯಗಳಿತ್ತು. ಮಕ್ಕಳಿಗೆ (Students) ಬೇಸರವಾದರೆ ಅವರು ತಮ್ಮ ಜೀವನ್ನೇ ಕಳೆದುಕೊಳ್ಳುವ ಎಷ್ಟೋ ಪ್ರಸಂಗಗಳೇ ಜರುಗಿದೆ. ಆದರೆ ಈಗ ಆ ವಿಷಯವಾಗಿ (Subject) ಕೋರ್ಟಿನಲ್ಲಿ ತೀರ್ಪೊಂದು ಬಿಡುಗಡೆಯಾಗಿದೆ. ಅದೇನೆಂದು ತಿಳಿಯಲು ನೀವು ಆಸಕ್ತರಾಗಿದ್ದರೆ ಈ ಸುದ್ದಿ (News) ಓದಿ.
ಶಾಲೆಯಲ್ಲಿ ಮಗುವನ್ನು ಸರಿದಾರಿಗೆ ತರುವ ಉದ್ದೇಶದಿಂದ ಶಾಲಾ ಶಿಕ್ಷಕರೊಬ್ಬರ ಕೃತ್ಯ ಅಪರಾಧವಲ್ಲ ಎಂದು ಗೋವಾದ ಬಾಂಬೆ ಹೈಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ಈ ತೀರ್ಪು 2003 ರಲ್ಲಿ ಗೋವಾ ಮಕ್ಕಳ ಕಾಯಿದೆಯನ್ನು ಅಂಗೀಕರಿಸಿದ ನಂತರ ಮಕ್ಕಳನ್ನು ಶಿಸ್ತುಬದ್ಧಗೊಳಿಸುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಶಿಕ್ಷಕರ ಮೇಲಿನ ಕಾನೂನಿನಲ್ಲಿ ಈಗ ಮಕ್ಕಳಿಗೆ ಸರಿಯಾದ ಕಾರಣವಿದ್ದರೆ ಮಾತ್ರ ಬೈದು ಹೊಡೆದು ಮಾಡಬಹುದು ಎಂದು ತಿಳಿಸಿದೆ. ಕೆಲವು ಶಿಕ್ಷಕರು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷೆಯನ್ನು ವಿಧಿಸಿದ ಆರೋಪದ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸಿದ್ದಾರೆ. ಆ ರೀತಿ ದಂಡಿಸದಿದ್ದರೂ ಸ್ವಲ್ಪ ಮಟ್ಟಿಗೆ ಗದರುವುದು ಬೈಯ್ಯುವುದು ಮಾಡಬಹುದು ಎಂಬ ತೀರ್ಪನ್ನು ನೀಡಿದೆ.
ಇದನ್ನೂ ಓದಿ: SSP Scholarship ಅಪ್ಲೈ ಮಾಡಲು ಮರೆತಿದ್ದರೆ ಈ ಲಿಂಕ್ ಬಳಸಿ ಈಗಲೇ ಅಪ್ಲೈ ಮಾಡಿ
ಮಕ್ಕಳನ್ನು ಸರಿದಾರಿಗೆ ತರಲು ಇಷ್ಟೂ ಮಾಡಬಾರದು ಎಂದರೆ ತುಂಬಾ ಕಷ್ಟವಾಗುತ್ತದೆ ಎಂದು ಶಿಕ್ಷಕರು ಆಗಾಗ ದೂರುತ್ತಿದ್ದರು. ಮಕ್ಕಳನ್ನು ನಿಯಂತ್ರಣಕ್ಕೆ ತರಲು ತುಂಬಾ ಕಷ್ಟವಾಗುತ್ತದೆ. ತರಗತಿಯಲ್ಲಿ ಗಲಾಟೆ ಮಾಡುವುದು, ಅವರರವರ ನಡುವೆ ಹೊಡೆದಾಡುವುದು ಹೀಗೆ ಮಕ್ಕಳು ಕೆಲವೊಮ್ಮೆ ಅತಿಯಾಗಿ ನಿಯಂತ್ರಣ ಮೀರಿ ವರ್ತಿಸುತ್ತಾರೆ ಎಂದು ಹೇಳಿದ್ದಾರೆ.
ಶಿಕ್ಷಣವನ್ನು ನೀಡುವ ಮತ್ತು ನಿರ್ದಿಷ್ಟವಾಗಿ ಶಿಸ್ತನ್ನು ಕಾಪಾಡಿಕೊಳ್ಳಲು ಶಾಲೆಗಳನ್ನು ನಡೆಸುವುದು ಕೂಡಾ ಕಷ್ಟಕರವಾಗಿರುತ್ತದೆ. ಎಂದು ನ್ಯಾಯಮೂರ್ತಿ ಭರತ್ ಪಿ ದೇಶಪಾಂಡೆ ಹೇಳಿದರು.ಈ ಪ್ರಕರಣದಲ್ಲಿ, ರೇಖಾ ಫಲ್ದೇಸಾಯಿ ಎಂಬ ಶಿಕ್ಷಕಿಯನ್ನು 2019 ರಲ್ಲಿ ಗೋವಾ ಮಕ್ಕಳ ನ್ಯಾಯಾಲಯವು ಐಪಿಸಿಯ ಸೆಕ್ಷನ್ 324 ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕಾಗಿ ಶಿಕ್ಷೆ ವಿಧಿಸಿತ್ತು. ಗೋವಾ ಮಕ್ಕಳ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆಕೆಯನ್ನು ಅಪರಾಧಿ ಎಂದು ಪರಿಗಣಿಸಲಾಗಿದೆ. ಮಕ್ಕಳ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಶಿಕ್ಷೆಯನ್ನು ಕಡಿತಗೊಳಿಸಿದ ನ್ಯಾಯಾಲಯ
ಅವರಿಗೆ ನೀಡಿದ ಶಿಕ್ಷೆಯನ್ನು ಕಡಿತಗೊಳಿಸಿ ಇನ್ನು ಮಂದೆ ವಿದ್ಯಾರ್ಥಿಗಳಿಗೆ ಸರಿಯಾದ ಕಾರಣವಿದ್ದರೆ ಗದರಬಹುದು ಮಕ್ಕಳಿಗೆ ಶಿಕ್ಷೆ ನೀಡಬಹುದು ಎಂಬ ತೀರ್ಪು ನೀಡಲಾಗಿದೆ. ತಪ್ಪು ಮಾಡುವ ಅಥವಾ ಶಿಸ್ತು ಕಾಪಾಡದ ವಿದ್ಯಾರ್ಥಿಯನ್ನು ತಿದ್ದುವ ಅಧಿಕಾರ ಶಿಕ್ಷಕಿಯಾಗಿ ಆಕೆಗಿದೆ ಎಂದು ಫಲ್ದೇಸಾಯಿ ಪರ ವಕೀಲ ಅರುಣ್ ಬ್ರಾಸ್ ಡಿ ಸಾ ವಾದಿಸಿದರು. ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ನಡೆದುಕೊಳ್ಳುವುದನ್ನು ಐಪಿಸಿ ಅಥವಾ ಗೋವಾ ಮಕ್ಕಳ ಕಾಯಿದೆಯಡಿ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಲಾಗಿದೆ.
ಶಿಕ್ಷಕಿ ವಿದ್ಯಾರ್ಥಿಗೆ ಹೇಳಿದ್ದೇನು?
ಈ ಶಿಕ್ಷಕಿ ಹೇಳಿರುವುದಿಷ್ಟೇ ಒಬ್ಬ ವಿದ್ಯಾರ್ಥಿ ಇನ್ನೊಬ್ಬವಿದ್ಯಾರ್ಥಿಯ ನೀರಿನ ಬಾಟಲಿಯಿಂದ ನೀರು ಕುಡಿದಿದ್ದಾನೆ. ನಂತರ ಶಿಕ್ಷಕಿ ಆ ರೀತಿ ಮಾಡಬಾರದು ತಮ್ಮ ತಮ್ಮ ನೀರಿನ ಬಾಟಲಿಯಿಂದ ನೀರು ಕುಡಿಯಬೇಕು ಎಂದು ಹೇಳಿದ್ದಾರೆ. ಆಕೆ ದೈಹಿಕ ಬಲ ಉಪಯೋಗಿಸಿದ್ದರೂ ಸಹ ಅದು ಕೇವಲ ಆ ಮಗುವಿನ ಒಳಿತಿಗಾಗಿ ಮಾತ್ರ ಎಂದು ವಕೀಲರು ವಾದಿಸಿದ್ದಾರೆ. ಒಬ್ಬ ಶಿಕ್ಷಕಿಗೆ ತನ್ನ ವಿದ್ಯಾರ್ಥಿಗೆ ಬುದ್ದಿ ಹೇಳುವ ಅಧಿಕಾರವೂ ಇಲ್ಲ ಎಂದಾದರೆ ಅವಳೇನು ಮಾಡಬೇಕು? ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ