ಹಿಂದುಗಳು ಸಾಮಾನ್ಯವಾಗಿ ಸಂಸ್ಕೃತ ಶಿಕ್ಷಣ ಪಡೆಯಲು ಆಸಕ್ತಿ ತೋರಿಸಯತ್ತಾರೆ. ಈ ಕ್ಷೇತ್ರದಲ್ಲೇ ಮುಂದುವರೆಯಲು ಬಯಸುವವರು ಹಲವರಿದ್ದಾರೆ. ಆದರೆ ಇಲ್ಲೊಬ್ಬ ಮುಸ್ಲಿಂ ಯುವಕ ಸಂಸ್ಕೃತ ಕಲಿತು ಸಂಸ್ಕೃತ ಕ್ಷೇತ್ರದಲ್ಲೇ ತನ್ನ ವೃತ್ತಿ ಜೀವನ ಮಾಡಲು ಆಸಕ್ತಿ ತೋರುತ್ತಿರುವುದು ಕೊಂಚ ವಿಶೇಷ ಎನಿಸಿದೆ. ಹೌದು 12ನೇ ತರಗತಿ ಪರೀಕ್ಷೆಯಲ್ಲಿ ಸಂಸ್ಕೃತ ವಿಷಯದಲ್ಲಿ ಉಳಿದೆಲ್ಲಾ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಅಂಕವನ್ನು ಪಡೆದುಕೊಂಡು ಈ ವಿದ್ಯಾರ್ಥಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಈ ಕುರಿತು ಆತನ ಪಾಲಕರೂ ಸಂತೋಷಪಟ್ಟಿದ್ದಾರೆ.
ಉತ್ತರ ಪ್ರದೇಶ ಮಾಧ್ಯಮಿಕ ಸಂಸ್ಕೃತ ಶಿಕ್ಷಾ ಪರಿಷತ್ ಮಂಡಳಿಯ (12ನೇ ತರಗತಿ) ಪರೀಕ್ಷೆಯಲ್ಲಿ ತಮ್ಮ ಮಗ ಇರ್ಫಾನ್ ಅಗ್ರಸ್ಥಾನ ಪಡೆದಿರುವುದಕ್ಕೆ ಸಲಾವುದ್ದೀನ್ ಹರ್ಷ ವ್ಯಕ್ತಪಡಿಸಿದ್ದಾರೆ. 17 ವರ್ಷದ ಬಾಲಕ ಶೇ.82.71 ಅಂಕ ಗಳಿಸಿ, ಶೇ.80.57 ಅಂಕ ಪಡೆದಿದ್ದ ಗಂಗೋತ್ರಿ ದೇವಿ ಅವರನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದಿದ್ದಾನೆ.
ಸಂಸ್ಕೃತ ಶಿಕ್ಷಕರಾಗಲು ಬಯಸುವ ಇರ್ಫಾನ್ 10 ಮತ್ತು 12 ನೇ ತರಗತಿ ಪರೀಕ್ಷೆಗಳಲ್ಲಿ ಟಾಪ್ 20 ಅಂಕಗಳ ಪೈಕಿ ಏಕೈಕ ಮುಸ್ಲಿಂ . ಅವರು 12 ನೇ ತರಗತಿ ಪರೀಕ್ಷೆಗೆ ಕುಳಿತಿದ್ದ 13,738 ವಿದ್ಯಾರ್ಥಿಗಳನ್ನು ಹಿಮ್ಮೆಟ್ಟಿ ಎಲ್ಲರಿಗಿಂತ ಹೆಚ್ಚಿನ ಅಂಕ ಪಡೆದಿದ್ದಾರೆ. 10ನೇ ತರಗತಿ ಪರೀಕ್ಷೆಯಲ್ಲಿ (ಪೂರ್ವ ಮಾಧ್ಯಮ-II), ಬಲ್ಲಿಯಾ ಜಿಲ್ಲೆಯ ಆದಿತ್ಯ ಶೇ.92.50 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇರ್ಫಾನ್ ಸಂಸ್ಕೃತವನ್ನು ಅಧ್ಯಯನ ಮಾಡಲು ಆಯ್ಕೆ ಮಾಡಿದ ನಂತರ ಯಾವುದೇ ಸಮಸ್ಯೆಗಳಿವೆಯೇ ಎಂದು ಕೇಳಿದಾಗ, ಸಲಾವುದ್ದೀನ್ ಅಂದರೆ ಅವರ ತಂದೆ ನಮಗೆ ಇದರ ಬಗ್ಗೆ ಸಂತೋಷ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: AP SSC 10th Result 2023: ಶೇಕಡಾ 100ರಷ್ಟು ಅಂಕಗಳಿಸಿದ ಶಾಲೆಗಳಿಗೆ ಸರ್ಕಾರದಿಂದ ವಿಶೇಷ ಕೊಡುಗೆ!
“ಇಲ್ಲ, ಏನೂ ಇಲ್ಲ. ಅವನು ಬೇರೆ ಬೇರೆ ವಿಷಯವನ್ನು ಅಧ್ಯಯನಕ್ಕೆ ಆರಿಸಿಕೊಂಡಿದ್ದರಿಂದ ನನಗೆ ಸಂತೋಷವಾಯಿತು ನಾನು ಕೂಡಾ ಅವನನ್ನು ಪ್ರೋತ್ಸಾಹಿಸಿದೆ ಎಂದು ಹೇಳಿದ್ದಾರೆ. ನಾವು ಮುಸ್ಲಿಮರಾಗಿರುವುದರಿಂದ ಇದು ವಿಭಿನ್ನ ಆಯ್ಕೆಯಾಗಿತ್ತು, ಆದರೆ ಅವನು ಅದರಲ್ಲಿ ಆಸಕ್ತಿ ಹೊಂದಿದ್ದನು ಅವನನ್ನು ತಡೆಯಲಿಲ್ಲ. ಅವನಪಾಡಿಗೆ ಅವನು ಆವಿಷಯದಲ್ಲಿ ಹಿಡಿತ ಸಾಧಿಸಿದ್ದ ಎಂದು ಹೇಳಿದ್ದಾರೆ.
ಈ ವಿಷಯಗಳು ನಮಗೆ ಮುಖ್ಯವಲ್ಲ. ಹಿಂದೂಗಳು ಮಾತ್ರ ಸಂಸ್ಕೃತವನ್ನು ಕಲಿಯಬೇಕು ಮತ್ತು ಮುಸ್ಲಿಮರು ಮಾತ್ರ ಉರ್ದುವನ್ನು ಕಲಿಯಬೇಕು ಎಂಬ ಈ ಚಿಂತನೆಗೆ ನಾವು ಸೀಮಿತವಾಗುವುದಿಲ್ಲ ಎಂದು ಹೇಳಿದ್ದಾರೆ. ಅವನು ಸಂಸ್ಕೃತ ಕಲಿಯುವದರಲ್ಲಿ ತಪ್ಪೇನು? ನನಗೆ ಯಾವ ತಪ್ಪೂ ಕಾಣಿಸುತ್ತಿಲ್ಲ ಎಂದು ತಂದೆ ಹರ್ಷ ವ್ಯಕ್ತಪಡಿಸಿದರು. ”
ಇದನ್ನೂ ಓದಿ: AP SSC 10th Result 2023: ಶೇಕಡಾ 100ರಷ್ಟು ಅಂಕಗಳಿಸಿದ ಶಾಲೆಗಳಿಗೆ ಸರ್ಕಾರದಿಂದ ವಿಶೇಷ ಕೊಡುಗೆ!
ಮಂಡಳಿಯ 10 ನೇ ತರಗತಿ ಮತ್ತು 12 ನೇ ತರಗತಿಯ ಪರೀಕ್ಷೆಗಳ ಫಲಿತಾಂಶಗಳನ್ನು ಲಕ್ನೋದಲ್ಲಿ ಬುಧವಾರ ಪ್ರಕಟಿಸಲಾಯಿತು. ಫೆಬ್ರವರಿ 23 ರಿಂದ ಮಾರ್ಚ್ 20 ರವರೆಗೆ ಪರೀಕ್ಷೆಗಳು ನಡೆದಿದ್ದವು. ಇದೇ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಆತ ಸಾಧನೆ ಮಾಡಿದ್ದಾನೆ.
ಒಬ್ಬನೇ ಮಗನಾದ ಇರ್ಫಾನ್, ಸಕಲ್ದಿಹಾ ತಹಸಿಲ್ ವ್ಯಾಪ್ತಿಯ ಚಂದೌಲಿ ಜಿಲ್ಲೆಯ ಜಿಂದಾಸ್‌ಪುರ ಗ್ರಾಮದವನು. ಬಿಎ ಮುಗಿಸಿರುವ ಸಲಾವುದ್ದೀನ್ ಅವರದ್ದು ಕೃಷಿ ಕಾರ್ಮಿಕ ಕುಟುಂಬ. ಇರ್ಫಾನ್ ಸಂಸ್ಕೃತದಲ್ಲಿ ಹೇಗೆ ಆಸಕ್ತಿಯನ್ನು ಬೆಳೆಸಿಕೊಂಡರು ಎಂಬುದನ್ನು ವಿವರಿಸಿದ ಸಲಾವುದ್ದೀನ್ ಪ್ರಾಥಮಿಕ ಶಾಲೆಯಲ್ಲಿ ಕೂಡಾ ಸಂಸ್ಕೃತವನ್ನು ಕಲಿತಿದ್ದರೆ ಇನ್ನು ಹೆಚ್ಚಿನ ಅಂಕ ಗಳಿಸುತ್ತಿದ್ದರು ಎಂದು ಹೇಳಲಾಗಿದೆ.
ಮುಂದಿನ ದಿನಗಳಲ್ಲಿ ತಾವು ಇದೇ ಕ್ಷೇತ್ರದಲ್ಲಿ ಬೆಳೆಯಬೇಕು ಸಂಸ್ಕೃತ ಶಿಕ್ಷಕರಾಗಿ ತಮ್ಮ ವೃತ್ತಿ ಮುಂದುವರೆಸ ಬೇಕು ಎಂದು ಅವರು ಬಯಸುತ್ತುದ್ದಾರೆ ಎಂದು ಅವರೇ ಹೇಳಿದ್ದಾರೆ. ಅವರ ಅಂಕಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಉತ್ತಮ ಅಂಕಗಳಿಸಿದ್ದು 80ಕ್ಕೂ ಹೆಚ್ಚಿನ ಅಂಕವನ್ನು ಅವರು ಗಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ