ಕಳೆದ ಮೂರು ವರ್ಷಗಳ ಉನ್ನತ ಶಿಕ್ಷಣದ (Higher Education) ಮೇಲಿನ ಅಖಿಲ ಭಾರತ ಸಮೀಕ್ಷೆ (ಎಐಎಸ್‌ಹೆಚ್‌ಇ) ವರದಿಯನ್ನು ಬಹಿರಂಗಪಡಿಸುವ ಮೂಲಕ ವಿಜ್ಞಾನ ಸ್ಟ್ರೀಮ್ ಪದವಿ ಕೋರ್ಸ್‌ಗಳನ್ನು ಅನುಸರಿಸುವ ಮಹಿಳೆಯರ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಏರಿಕೆ ಕಂಡಿದೆ. ಉನ್ನತ ಶಿಕ್ಷಣದಲ್ಲಿ (Education) ಭಾರತೀಯ (INdian) ಯುವಕರ ಪ್ರಗತಿಯನ್ನು ನಿರ್ಣಯಿಸಲು ಶಿಕ್ಷಣ ಸಚಿವಾಲಯವು ಪ್ರತಿ ವರ್ಷ ವರದಿಯನ್ನು (Report) ಬಿಡುಗಡೆ ಮಾಡುತ್ತದೆ.
2018-19ರಲ್ಲಿ ವಿಜ್ಞಾನ ಪದವಿ ಓದುತ್ತಿರುವ 47.13 ಲಕ್ಷ ಅಭ್ಯರ್ಥಿಗಳ ಪೈಕಿ ಶೇ.51ರಷ್ಟು ಮಹಿಳೆಯರು ಎಂದು ಒಂದು ವಿಶ್ಲೇಷಣೆ ತಿಳಿಸಿದೆ. 2019-20 ರಲ್ಲಿ, 47.55 ಲಕ್ಷದಲ್ಲಿ ಒಟ್ಟು 51.7 ಶೇಕಡಾ ಮಹಿಳಾ ವಿದ್ಯಾರ್ಥಿಗಳು. ಇತ್ತೀಚಿನ ವರದಿಯಲ್ಲಿ ಈ ಸಂಖ್ಯೆ ಶೇ.52ಕ್ಕೆ ಏರಿಕೆಯಾಗಿದೆ. ವರದಿಯ ಪ್ರಕಾರ, 2020-21ರಲ್ಲಿ 48,17,826 ವಿದ್ಯಾರ್ಥಿಗಳು ವಿಜ್ಞಾನ ಪದವಿಪೂರ್ವ ಕೋರ್ಸ್‌ಗಳಿಗೆ ದಾಖಲಾಗಿದ್ದಾರೆ ಮತ್ತು 52 ಪ್ರತಿಶತ ಮಹಿಳಾ ಅಭ್ಯರ್ಥಿಗಳು. ವಿಜ್ಞಾನ ಸ್ನಾತಕೋತ್ತರ ಕೋರ್ಸ್‌ಗಳಿಗೆ ಒಟ್ಟು 6,79,178 ವಿದ್ಯಾರ್ಥಿಗಳು ದಾಖಲಾಗಿದ್ದು, ಅದರಲ್ಲಿ ಶೇ.61.3 ಮಹಿಳೆಯರು.
ಪಿಜಿಯಲ್ಲಿ, 1,53,635 ವಿದ್ಯಾರ್ಥಿಗಳೊಂದಿಗೆ ರಸಾಯನಶಾಸ್ತ್ರಕ್ಕೆ ಹೆಚ್ಚಿನ ದಾಖಲಾತಿಯಾಗಿದೆ. ಅದರಲ್ಲಿ 52.3 ಪ್ರತಿಶತದಷ್ಟು ಮಹಿಳೆಯರು ಮತ್ತು ಗಣಿತಶಾಸ್ತ್ರದಲ್ಲಿ ಒಟ್ಟು 1,04,269 ರಷ್ಟು ದಾಖಲಾತಿ ಹೊಂದಿದ್ದು, 60 ಪ್ರತಿಶತದಷ್ಟು ಮಹಿಳೆಯರು ಅಡ್ಮಿಷನ್ ಮಾಡಿಸಿದ್ದಾರೆ.
ಇದನ್ನೂ ಓದಿ: NEET 2023ರ ಪರೀಕ್ಷಾ ಮಾದರಿ ಹಾಗೂ ಇನ್ನಿತರ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬಿಎಸ್ಸಿ ಮಹಿಳಾ ಅಭ್ಯರ್ಥಿಗಳಲ್ಲಿ ಜನಪ್ರಿಯವಾಗಿದೆ. ಬಿಎ ಹೊರತುಪಡಿಸಿ, ಬಿಎಸ್ಸಿ ವಿದ್ಯಾರ್ಥಿಗಳಲ್ಲಿ ಎರಡನೇ ಅತ್ಯಂತ ಜನಪ್ರಿಯ ಕೋರ್ಸ್ ಆಗಿ ಉಳಿದಿದೆ. AISHE 2020-21 ವರದಿಯು 49.12 ಲಕ್ಷ ವಿದ್ಯಾರ್ಥಿಗಳು ಬಿಎಸ್ಸಿ ಕೊರ್ಸ್ಗೆ ದಾಖಲಾಗಿದ್ದಾರೆ. ಅವರಲ್ಲಿ 52.3 ಪ್ರತಿಶತ ಮಹಿಳೆಯರು. 2019-20ರಲ್ಲಿ ಒಟ್ಟು 47.07 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಮತ್ತು ಅವರಲ್ಲಿ 52.3 ಪ್ರತಿಶತ ಮಹಿಳಾ ವಿದ್ಯಾರ್ಥಿಗಳಾಗಿದ್ದರೆ. 2018-19 ರಲ್ಲಿ 46.80 ಲಕ್ಷ ವಿದ್ಯಾರ್ಥಿಗಳು ಬಿಎಸ್‌ಸಿ ಕೋರ್ಸ್‌ಗಳಿಗೆ ದಾಖಲಾಗಿದ್ದಾರೆ ಅವರಲ್ಲಿ 51.7 ಪ್ರತಿಶತ ವಿದ್ಯಾರ್ಥಿನಿಯರು.
ಪಿಎಚ್‌ಡಿ ಕೋರ್ಸ್ನಲ್ಲಿ ಕಡಿಮೆ ಮಹಿಳೆಯರಿರುತ್ತಾರೆ
ಪಿಎಚ್‌ಡಿ ಕೋರ್ಸ್ನಲ್ಲಿ ಕಡಿಮೆ ಮಹಿಳೆಯರಿರುತ್ತಾರೆ. ವಿಜ್ಞಾನದಲ್ಲಿ ಮಹಿಳಾ ಅಭ್ಯರ್ಥಿಗಳ ಹೆಚ್ಚಿನ ದಾಖಲಾತಿ ಹೊರತಾಗಿಯೂ, ಸ್ಟ್ರೀಮ್‌ನಲ್ಲಿ ಸಂಶೋಧನಾ ಪದವಿಯನ್ನು ಪಡೆಯುವ ಮಹಿಳಾ ವಿದ್ಯಾರ್ಥಿಗಳ ಸಂಖ್ಯೆ ತುಲನಾತ್ಮಕವಾಗಿ ಕಡಿಮೆಯಾಗಿದೆ. ಪಿಎಚ್‌ಡಿಯಲ್ಲಿ ದಾಖಲಾದ 48,600 ವಿದ್ಯಾರ್ಥಿಗಳ ಪೈಕಿ 23,716 ವಿದ್ಯಾರ್ಥಿಗಳು ಮಹಿಳೆಯರು ಮತ್ತು 24,883 ಪುರುಷರು. ವಿಜ್ಞಾನದಲ್ಲಿ, ರಸಾಯನಶಾಸ್ತ್ರವು 9,863 ವಿದ್ಯಾರ್ಥಿಗಳೊಂದಿಗೆ ಅತಿ ಹೆಚ್ಚು ದಾಖಲಾತಿಯನ್ನು ಹೊಂದಿದೆ. ಅದರಲ್ಲಿ 4428 ಮಹಿಳಾ ವಿದ್ಯಾರ್ಥಿಗಳು ಮತ್ತು 5,435 ಪುರುಷರು.
ರಸಾಯನಶಾಸ್ತ್ರದಲ್ಲಿ ಎಷ್ಟು ವಿದ್ಯಾರ್ಥಿನಿಯರಿದ್ದಾರೆ
2019-20 ರಲ್ಲಿಯೂ ಸಹ, ರಸಾಯನಶಾಸ್ತ್ರವು 5554 ಪುರುಷರು ಮತ್ತು 3972 ಮಹಿಳೆಯರೊಂದಿಗೆ ಅತಿ ಹೆಚ್ಚು ಪಿಎಚ್‌ಡಿ ವಿದ್ಯಾರ್ಥಿಗಳನ್ನು ನೋಂದಾಯಿಸಿದೆ (9526). ಇದೇ ಮಾದರಿಯನ್ನು 2018-19 ರಲ್ಲಿ ಗಮನಿಸಿದಾಗ ರಸಾಯನಶಾಸ್ತ್ರದಲ್ಲಿ 8036 ಪಿಎಚ್‌ಡಿ ವಿದ್ಯಾರ್ಥಿಗಳ ಪೈಕಿ 4553 ಪುರುಷರು ಮತ್ತು 3483 ಮಹಿಳೆಯರು ಸೇರಿಕೊಂಡಿದ್ದಾರೆ. ಆದರೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಈ ಕೊರ್ಸ್ಗಳಿಗೆ ಸೇರಿಕೊಳ್ಳುತ್ತಿರುವುದು ಖುಷಿಯ ಸಂಗತಿ.
CSIR ಯುವ ವಿಜ್ಞಾನಿ ಪ್ರಶಸ್ತಿ ಪಡಿಯೋಕೆ ಈ ರೀತಿ ಮಾಡಿ
ಪ್ರತಿಯೊಬ್ಬ ಅಭ್ಯರ್ಥಿಯೂ ತನ್ನ ಸಂಶೋಧನಾ ಪ್ರಬಂಧವನ್ನು ಮಂಡಿಸಬೇಕಾಗುತ್ತದೆ. ಅವರು ಮಂಡಿಸಿದ ಸಂಶೋಧನಾ ಪ್ರಬಂಧದ ಮೇಲೆ ಪ್ರಶ್ನೆ ಕೇಳಲಾಗುತ್ತದೆ. ಆ ನಂತರ 5 ನಿಮಿಷಗಳ ಪ್ರಶ್ನೋತ್ತರ ಅವಧಿ ಕಳೆದ ನಂತರ ಚರ್ಚೆ ನಡೆಸಬಹುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿ ಏನಾದರು ಗೈರಾಗಿದ್ದರೆ ಅವರನ್ನು ಪರಿಗಣಸಲಾಗುವುದಿಲ್ಲ. ಪ್ರಾಥಮಿಕವಾಗಿ ಭಾರತದಲ್ಲಿ ಮಾಡಿದ ಕೆಲಸಗಳ ಕುರಿತು ಯುವ CSIR ವಿಜ್ಞಾನಿಗಳು ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಇವಿಷ್ಟು ಅರ್ಹತೆಗಳು ಹಾಗೂ ಬಹುಮಾನ ಮೊತ್ತವನ್ನು ಯುವ ವಿಜ್ಞಾನಿ ಪ್ರಶಸ್ತಿ ಗೆದ್ದ ಅಭ್ಯರ್ಥಿಗೆ ನೀಡಲಾಗುತ್ತದೆ. ಇದರಲ್ಲಿ ಸೌಲಭ್ಯ ಹೆಚ್ಚಿರುವುದರಿಂದ ನೀವೂ ಕೂಡಾ ಸಾಧನೆ ಮಾಡಿ ಈ ಪ್ರಶಸ್ತಿ ಪಡೆದುಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ