ಭಾರತವು (India) ವಿಶ್ವದಲ್ಲಿ ಎರಡನೇ ಅತಿ ದೊಡ್ಡ ಶಾಲಾ (School) ವ್ಯವಸ್ಥೆಯನ್ನು ಹೊಂದಿದೆ. ವಿಶ್ವದ ಅತಿದೊಡ್ಡ ಶಾಲೆ (School) "ಸಿಟಿ ಮಾಂಟೆಸ್ಸರಿ ಶಾಲೆ". ಇದು ಭಾರತದ ಲಕ್ನೋದಲ್ಲಿದೆ. ಈ ಶಾಲೆ ಒಂದು ಖಾಸಗಿ ಶಾಲೆಯಾಗಿದ್ದು ಹಲವಾರು ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ಈ ಶಾಲೆಯ ವಿಷಯಕ್ಕೆ ಬಂದರೆ, 55,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 4,500 ಸಿಬ್ಬಂದಿ 18 ವಿವಿಧ ಕ್ಯಾಂಪಸ್ಗಳಲ್ಲಿ (Campus) ಕೆಲಸ ಮಾಡುತ್ತಾರೆ. ಇದು ಶಾಂತಿ ಶಿಕ್ಷಣಕ್ಕಾಗಿ 2002 ಯುನೆಸ್ಕೋ ಪ್ರಶಸ್ತಿಯನ್ನು ಸಹ ಪಡೆದಿದೆ. ಜನ (People) ಸಂಖ್ಯೆ ಹೆಚ್ಚಿದ್ದಷ್ಟು ಶಾಲೆಗಳ ಸಂಖ್ಯೆ ಕೂಡ ಹೆಚ್ಚುತ್ತದೆ. ಯಾಕೆಂದರೆ ಅಷ್ಟೂ ಮಕ್ಕಳಿಗೂ ಶಿಕ್ಷಣ ಒದಗಿಸುವ ಅವಶ್ಯಕತೆ ಇರುತ್ತದೆ.
ವಾಸ್ತವವಾಗಿ ಸುಮಾರು 1.4 ಶತಕೋಟಿ ಭಾರತೀಯರು ಶಾಲಾ ಕೊರತೆಯನ್ನು ಎದುರಿಸುತ್ತಿದ್ದಾರಂತೆ ಇದೊಂದು ಬೇಸರದ ಸಂಗತಿಯಾಗಿದೆ. ಶಿಕ್ಷಣವು ಯಾವುದೇ ದೇಶದ ಭವಿಷ್ಯಕ್ಕೆ ಆಧಾರಸ್ತಂಭವಾಗಿರುತ್ತದೆ. ಹೀಗಿರುವಾಗ ಇಷ್ಟೊಂದು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವುದು ಸರಿಯಲ್ಲ. 2011 ರಿಂದ 2015 ರವರೆಗೆ ಭಾರತವು ಶಿಕ್ಷಣದ ಮೇಲಿನ ತನ್ನ ವೆಚ್ಚವನ್ನು ಶೇಕಡಾ 80 ರಷ್ಟು ಹೆಚ್ಚಿಸಿದೆ. ಅಲ್ಲದೆ ಇಂಗ್ಲಿಷ್ ಭಾಷೆಯನ್ನು ಹೆಚ್ಚು ಹೆಚ್ಚು ಬಳಸಲಾಗಿದ್ದು ವಿದೇಶಿ ವಿದ್ಯಾರ್ಥಿಗಳಿಗೆ ಮತ್ತು ಭಾರತೀಯರಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತಿದೆ.
ಭಾರತದಲ್ಲಿ ವಿಶ್ವ ದರ್ಜೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುತ್ತಿದೆ ಮತ್ತು ಇದನ್ನು ಮಾಡಲು $58 ಮಿಲಿಯನ್ ಹೂಡಿಕೆ ಮಾಡಲಾಗಿದೆಯಂತೆ. ಅಷ್ಟೇ ಅಲ್ಲ ಭಾರತದಲ್ಲಿ ಉನ್ನತ ಶಿಕ್ಷಣವು ವ್ಯಾಪಕವಾಗಿ ಸವಲತ್ತು ಹೊಂದಿದೆ. ಭಾರತದಲ್ಲಿ ಪ್ರಿಸ್ಕೂಲ್ ಮತ್ತು ಗ್ರಾಮೀಣ ಪ್ರದೇಶಗಳು ಹೆಚ್ಚಾಗಿ ಕಡಿಮೆ ಅನುದಾನವನ್ನು ಹೊಂದಿದ್ದರೂ ಸಹ ಸರ್ಕಾರವು ಉನ್ನತ ಶಿಕ್ಷಣಕ್ಕೆ ಒತ್ತು ನೀಡುತ್ತದೆ.
ಇದನ್ನೂ ಓದಿ: ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕಾಲೇಜು; ಗುರುಕುಲ ಸ್ಥಾಪನೆಗೆ ಆಗ್ರಹಿಸಿದ ಹಿಂದೂ ಸಂಘಟನೆಗಳು
ಬಜೆಟ್ನ 30 ಪ್ರತಿಶತವನ್ನು ಉನ್ನತ ಶಿಕ್ಷಣಕ್ಕೆ ಮೀಸಲಿಡಲಾಗುತ್ತದೆ
ಬಜೆಟ್ನ 30 ಪ್ರತಿಶತವನ್ನು ಉನ್ನತ ಶಿಕ್ಷಣಕ್ಕೆ ಮೀಸಲಿಡಲಾಗಿದೆ ಮತ್ತು ದೇಶದ ಉನ್ನತ ಶಿಕ್ಷಣವನ್ನು ವಿಶ್ವದ ಅತ್ಯುತ್ತಮ ಶಿಕ್ಷಣವನ್ನಾಗಿ ಪರಿವರ್ತಿಸಲು ಸರ್ಕಾರ ಬಯಸುತ್ತಿದೆ. ಭಾರತದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಇಂದಿನ ಪೀಳಿಗೆಯ ಮಕ್ಕಳ ಮೇಲೆ ಮುಂದಿನ ಭವಿಷ್ಯದ ನಂಬಿಕೆ ಇಟ್ಟಿದೆ.
ಎದ್ದು ತೋರುವ ಶಿಕ್ಷಕರ ಕೊರತೆ
ದುರದೃಷ್ಟವಶಾತ್ ಭಾರತದಲ್ಲಿ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಕರ ಕೊರತೆ ಇದೆ. ಇದು ಮ್ಕಕಳ ಶಿಕ್ಷಣದ ಮೇಲೆ ಪೆಟ್ಟು ಬೀಳುತ್ತದೆ. ಕೆಲವೊಮ್ಮೆ ಏಕೈಕ ಶಿಕ್ಷಕ ಇಡೀ ಶಾಲೆಯ ಉಸ್ತುವಾರಿ ನೋಡಿಕೊಳ್ಳುವ ಮತ್ತು ಪಾಠ ಮಾಡುವ ಜವಾಬ್ದಾರಿಯನ್ನು ಹೊಂದಬೇಕಾಗುತ್ತದೆ. ಪಾಠ ಮಾಡದೆ ಸಂಬಳ ಪಡೆಯುವ ಭ್ರಷ್ಟ ಶಿಕ್ಷರೂ ಸಹ ಇದ್ದಾರಂತೆ.
ಖಾಸಗಿ ಶಾಲೆಗಳ ಮೇಲೆ ಒಲವು
ಭಾರತದ ಜನರು ಯಾವಾಗಲೂ ಖಾಸಗಿ ಶಾಲೆಗಳನ್ನು ಸಾರ್ವಜನಿಕ ಶಾಲೆಗಳಿಗಿಂತ ಹೆಚ್ಚು ಪರಿಣಾಮಕಾರಿ ಎಂದು ಪರಿಗಣಿಸುತ್ತಾರೆ. ಮತ್ತು ತಮ್ಮ ಮಕ್ಕಳನ್ನು ಸಾಧ್ಯವಾದಷ್ಟು ಖಾಸಗಿ ಶಾಲೆಗಳಿಗೇ ಕಳಿಸುತ್ತಾರೆ, ಸರ್ಕಾರಿ ಶಾಲೆ ಎಂದರೆ ಬಡವರ ಮಕ್ಕಳು ಮಾತ್ರ ಕಲಿಯುವ ಶಾಲೆ ಎಂದು ಪರಿಗಣಿಸುತ್ತಾರೆ. ಏಕೆಂದರೆ ಖಾಸಗಿ ಶಾಲೆಗಳ ಉಪಕರಣಗಳು ಮತ್ತು ಸೌಲಭ್ಯಗಳು ಉತ್ತಮವಾಗಿವೆ. ಮಕ್ಕಳಿಗೆ ತಕ್ಕ ಶಿಕ್ಷಕರ ಅನುಪಾತವಿದೆ.
ದುಃಖಕರ ಸಂಗತಿ ಅನಕ್ಷರತೆ
ದುಃಖಕರವೆಂದರೆ, ಭಾರತದಲ್ಲಿ 268 ಮಿಲಿಯನ್ ಅನಕ್ಷರಸ್ಥ ಜನರಿದ್ದಾರೆ. ಇದರರ್ಥ ಅವರು ಪ್ರಪಂಚದ ಒಟ್ಟು ಅನಕ್ಷರಸ್ಥರ ಮೂರನೇ ಒಂದು ಭಾಗದಷ್ಟಿದೆ!. ಇದು ದೊಡ್ಡ ಸಮಸ್ಯೆಯಾಗಿದೆ ಏಕೆಂದರೆ ಈ ಜನರಿಗೆ ಓದಲು ಅಥವಾ ಬರೆಯಲು ಬರುವುದಿಲ್ಲ. ಇವಿಷ್ಟು ಭಾರತದ ಶಿಕ್ಷಣ ವ್ಯವಸ್ಥೆಯ ಪಕ್ಷಿನೋಟ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ