• Home
  • »
  • News
  • »
  • jobs
  • »
  • Tuition Class: ಶಾಲೆಯಷ್ಟೇ ಸಾಲೋದಿಲ್ಲ, ಮನೆಪಾಠವೂ ಬೇಕು! ಶಿಕ್ಷಣಕ್ಕೆ ಪರ್ಯಾವಾಗ್ತಿದೆ ಟ್ಯೂಶನ್ ಬ್ಯುಸಿನೆಸ್!

Tuition Class: ಶಾಲೆಯಷ್ಟೇ ಸಾಲೋದಿಲ್ಲ, ಮನೆಪಾಠವೂ ಬೇಕು! ಶಿಕ್ಷಣಕ್ಕೆ ಪರ್ಯಾವಾಗ್ತಿದೆ ಟ್ಯೂಶನ್ ಬ್ಯುಸಿನೆಸ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಮ್ಮ ಮಕ್ಕಳಿಗೆ ದೊರೆಯಬೇಕೆಂಬುದು ಈಗಿನ ಬಹುತೇಕ ಪಾಲಕರ ಒತ್ತಾಸೆಯಾಗಿದೆ. ಆದರೆ, ಇಂದು ಉನ್ನತ ಶಿಕ್ಷಣಗಳಾದಂತಹ ವೈದ್ಯಕೀಯ ಶಿಕ್ಷಣ, ಇಂಜಿನಿಯರಿಂಗ್ ಶಿಕ್ಷಣಗಳನ್ನು ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಿಂದ ಪಡೆದುಕೊಳ್ಳಬೇಕೆಂದರೆ ತೀವ್ರವಾದ ಸ್ಪರ್ಧೆ ಅಥವಾ ಪೈಪೋಟಿ ಎದುರಿಸಬೇಕು.

  • Trending Desk
  • 3-MIN READ
  • Last Updated :
  • Share this:

ಪ್ರಸ್ತುತ, ಭಾರತದಲ್ಲಿ ಶೈಕ್ಷಣಿಕ ತರಬೇತಿ ನೀಡುವಿಕೆಯ ಮಾರುಕಟ್ಟೆ ಮೌಲ್ಯವು 58,088 ಕೋಟಿ ರೂಪಾಯಿಗಳಾಗಿದ್ದು 2028ರವರೆಗೆ ಇದು 1,33,995 ಕೋಟಿ ರೂಪಾಯಿಗಳವರೆಗೆ ವಿಸ್ತರಿಸಲಿದೆ ಎಂದು ಅಂದಾಜಿಸಲಾಗಿದೆ. ಈಗ ಭಾರತದಲ್ಲಿ ಶಿಕ್ಷಣ ಎಂಬುದು ಹಿಂದೆಂದಿಗಿಂತಲೂ ಹೆಚ್ಚಿನ ಮಹತ್ವ ಪಡೆಯುತ್ತಿದೆ. ಅದರಲ್ಲೂ ಈ ಉನ್ನತ ಹಾಗೂ ಉತ್ತಮಭವಿಷ್ಯವನ್ನು ಖಾತರಿಪಡಿಸುವಂತಹ ಶೈಕ್ಷಣಿಕ ಪದವಿಗಳು ತಮ್ಮ ಮಕ್ಕಳಿಗೆ ದೊರೆಯಬೇಕೆಂಬುದು ಈಗಿನ ಬಹುತೇಕ ಪಾಲಕರ ಒತ್ತಾಸೆಯಾಗಿದೆ. ಆದರೆ, ಇಂದು ಉನ್ನತ ಶಿಕ್ಷಣಗಳಾದಂತಹ ವೈದ್ಯಕೀಯ ಶಿಕ್ಷಣ, ಇಂಜಿನಿಯರಿಂಗ್ ಶಿಕ್ಷಣಗಳನ್ನು ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಿಂದ ಪಡೆದುಕೊಳ್ಳಬೇಕೆಂದರೆ ತೀವ್ರವಾದ ಸ್ಪರ್ಧೆ ಅಥವಾ ಪೈಪೋಟಿ ಎದುರಿಸಬೇಕು. ಅದಕ್ಕಾಗಿ ಮುಂಚೆಯಿಂದಲೇ ಮಕ್ಕಳು (children) ಹೆಚ್ಚುವರಿಯಾಗಿ ಸಜ್ಜಾಗಬೇಕು. ಈ ನಿಟ್ಟಿನಲ್ಲಿ ಕೋಚಿಂಗ್ ಪ್ರಮುಖ ಹಾಗೂ ಆಕರ್ಷಕ ಆಯ್ಕೆಯಾಗಿದೆ. ಹಾಗಾಗಿ, ಶಾಲೆಯ ಶಿಕ್ಷಣ ಹೊರತು ಪಡಿಸಿ ಖಾಸಗಿಯಾಗಿ ನಡೆಸಲಾಗುವ ಕೋಚಿಂಗ್  ಸೆಂಟರ್ (Coaching Centre) ಗಳಿಗೆ ಮಕ್ಕಳನ್ನು ಕಳುಹಿಸಲಾಗುತ್ತದೆ.


ಇದರ ಫಲಶೃತಿಯಾಗಿ ಇಂದು ಭಾರತದಾದ್ಯಂತ ನಗರ ಪ್ರದೇಶಗಳಲ್ಲಿ ಮೂಲೆಗೊಂದರಂತೆ ಖಾಸಗಿ ಕೋಚಿಂಗ್ ಕೇಂದ್ರಗಳು ತಲೆ ಎತ್ತಿರುವುದನ್ನು ಕಾಣಬಹುದು. ರಾಹುಲ್ ಇನ್ನು ಐದು ವರ್ಷ ಪ್ರಾಯದ ಹುಡುಗ, ಎ, ಬಿ, ಸಿ,ಡಿ ಅನ್ನುವಾಗ ಕ್ಯೂ ಶಬ್ದದ ಉಚ್ಛಾರವನ್ನೂ ಸರಿಯಾಗಿ ಮಾಡಲು ಸಾಧ್ಯವಾಗದಂತಹ ಚಿಕ್ಕ ವಯಸ್ಸು ಅವನದು.


ಆದರೆ, ರಾಹುಲ್ ನ ಪೋಷಕರು ಅವನು ಮುಂದೆ ವೈದ್ಯನಾಗಬೇಕೆಂದು ನಿರ್ಧರಿಸಿ ಬಿಟ್ಟಿದ್ದಾರೆ. ಹಾಗಾಗಿ ರಾಹುಲ್ ನಿತ್ಯ, ತನ್ನ ಶಾಲೆಯ ಮುಗಿಸಿದ ಮೇಲೆ ಎರಡು ಗಂಟೆಗಳ ಕಾಲ ಕೋಚಿಂಗ್ ಕೇಂದ್ರಕ್ಕೆ ತೆರಳಬೇಕು. ಈ ರೂಢಿಯು ಅವನು ತನ್ನ ಹನ್ನೆರಡನೇ ತರಗತಿ ಮುಗಿಸುವವರೆಗೂ ಕಟ್ಟುನಿಟ್ಟಾಗಿ ಪಾಲಿಸಬೇಕು.


ಇದು ರಾಹುಲ್ ಒಬ್ಬನ ಕಥೆಯಲ್ಲ. ಹೀಗೆ ಅದೆಷ್ಟೋ ವಿದ್ಯಾರ್ಥಿಗಳು ಖಾಸಗಿಯಾಗಿ ನಡೆಯುವ ಟ್ಯೂಶನ್ ರಿಪಬ್ಲಿಕ್ ಎಂಬ ಉದ್ದಿಮೆಯಲ್ಲಿ ಸಿಲುಕಿದ್ದಾರೆ. ಪಾಲಕರ ಸಮರ್ಥಿಸಲಾಗದಂತಹ ಮಕ್ಕಳ ಮೇಲಿನ ನಿರೀಕ್ಷೆಗಳು, ಶಿಕ್ಷಣವ್ಯವಸ್ಥೆ ಹಾಗೂ ಉದ್ಯೋಗ ಮಾರುಕಟ್ಟೆಯಲ್ಲಿನ ವಿದ್ಯಮಾನಗಳಿಂದಾಗಿ ಈ ಒಂದು "ಟ್ಯೂಶನ್ ರಿಪಬ್ಲಿಕ್" ಎಂಬ ಉದ್ಯಮ ಕಳೆದ ಕೆಲ ಸಮಯದಿಂದ ತಲೆ ಎತ್ತುತ್ತಿದೆ.


ಮಧ್ಯ ಪ್ರದೇಶದಿಂದ ಬಿಹಾರದವರೆಗೆ, ಬಿಹಾರದಿಂದ ಕೇರಳದವರೆಗೆ ಈ ಟ್ಯೂಶನ್ ಉದ್ಯಮವು ಗತಿಯನ್ನು ಪಡೆದುಕೊಳ್ಳುತ್ತಿದ್ದು ಸಾಮಾಜಿಕ ಮಧ್ಯಾಮಗಳ ಮೂಲಕ, ಮೂನ್ಲೈಟಿಂಗ್ ಮೂಲಕ ಹಲವರು ತಮ್ಮನ್ನು ತಾವು ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರಲ್ಲದೆ ಡಿಜಿಟಲೀಕರಣದ ಪ್ರಯೋಜನಗಳನ್ನೂ ಸಹ ಪಡೆದುಕೊಳ್ಳುತ್ತಿದ್ದಾರೆ.


ಕಳೆದ ಎರಡುವರೆ ವರ್ಷಗಳು ಕೋವಿಡ್ ನಿಂದಾಗಿ ಸಾಕಷ್ಟು ಕಷ್ಟದಾಯಕವಾಗಿದ್ದವು. ಈ ಸಮಯದಲ್ಲಿ ಆನ್ಲೈನ್ ಮೂಲಕ ಶಿಕ್ಷಣ ಸರಳವಾಗಿ ಪಡೆಯಬಹುದೆಂದು ಸಾರ್ವತ್ರಿಕವಾಗಿ ಎಲ್ಲರ ಗಮನಸೆಳೆಯುವಂತಾಯಿತು. ಆ ಒಂದು ಬಿಕ್ಕಟ್ಟಿನ ಅವಧಿಯಿಂದಾಗಿಯೇ ಇದೀಗ ಕೋಚಿಂಗ್ ಧಂಧೆ ಎನ್ನುವುದು ಅತಿ ವಿಶಾಲವಾದ ಬಾಹುಗಳನ್ನು ಚಾಚುವಂತಾಗಿದೆ.


ನ್ಯಾಷನಲ್ ಸ್ಯಾಂಪಲ್ ಸರ್ವೇ ನಡೆಸಿರುವ ಸಮೀಕ್ಷೆಯ ಪ್ರಕಾರ, 2016 ರಲ್ಲಿ ಟ್ಯೂಶನ್ ಗಾಗಿ ನೋಂದಾಯಿಸಿಕೊಂಡಿದ್ದ ವಿದ್ಯಾರ್ಥಿಗಳ ಸಂಖ್ಯೆ 7.1 ಕೋಟಿ ಆಗಿತ್ತು. ನಿಶ್ಚಿತವಾಗಿ ಆ ಪ್ರಮಾಣ ಇದೀಗ ಹೆಚ್ಚಳವೇ ಆಗಿರಬಹುದು.


ಅಷ್ಟಕ್ಕೂ, ಈ ರೀತಿಯ ತರಬೇತಿಗಳು ಮಕ್ಕಳ ಮೇಲೆ ಒತ್ತಡ, ಮಾನಸಿಕ ಸ್ಥಿತಿಗಳಂತಹ ಪರಿಣಾಮ ಉಂಟು ಮಾಡದು ಎನ್ನಲಾಗುವುದಿಲ್ಲ. ಅಲ್ಲದೆ, ಆಟವಾಡಬೇಕಾದಂತಹ ಸಮಯದಲ್ಲಿ ಹೆಚ್ಚುವರಿ ಶಿಕ್ಷಣ ಪಡೆಯುವುದರಿಂದ ಮಕ್ಕಳ ಆರೋಗ್ಯದ ಮೇಲೆ ಏನೆಲ್ಲ ಪರಿಣಾಮಗಳು ಉಂಟಗಬಹುದು ಎಂಬ ಬಗ್ಗೆ ವೈದ್ಯರು ಈಗಾಗಲೇ ಅಧ್ಯಯನವನ್ನೂ ನಡೆಸುತ್ತಿದ್ದಾರೆ.


ಮಕ್ಕಳ ಮನೋವೈದ್ಯರಾದ ಡಾ. ನಿಮೇಶ್ ದೇಸಾಯಿ ಹೇಳುವಂತೆ, "ಹಿಂದೊಮ್ಮೆ ಕೋಚಿಂಗ್ ಎಂಬುದು ತಾತ್ಕಾಲಿಕವಾದ ಪರಿಹಾರ ಸೂತ್ರವಾಗಿತ್ತು, ಆದರೆ ಇಂದಿನ ದಿನಮಾನಗಳಲ್ಲಿ ಇದು ಜೀವನಶೈಲಿಯ ಭಾಗವಾಗಿದೆ. ಐದರ ಪ್ರಾಯದಲ್ಲಿರುವಾಗ ಇದು ಪ್ರಾರಂಭವಾಗಿ ಮುಂದೆ ಎರಡು ದಶಕಗಳ ಕಾಲ ಮಗುವಿನ ಜೀವನದಲ್ಲಿ ಮುಂದೆವರೆಯುತ್ತದೆ. ತದನಂತರ ಈ ಮಕ್ಕಳು ಪಾಲಕರಾದ ಮೇಲೆ ಅವರೂ ಸಹ ತಮ್ಮ ಮಕ್ಕಳನ್ನು ಈ ರೀತಿಯ ವ್ಯವಸ್ಥೆಗೆ ದೂಡುತ್ತಾರೆ".


ಇದನ್ನೂ ಓದಿ: ಭಾರತೀಯ ವಿದ್ಯಾರ್ಥಿಗಳಿಗೆ NFT ಆದಾಯ ಗಳಿಸುವ ವೇದಿಕೆಯೇ? ಇಲ್ಲಿದೆ ವಿವರ


ಬಹಳಷ್ಟು ಪೋಷಕರಿಗೆ ಶ್ರೀಮಂತಿಕೆ ಇಲ್ಲದಿದ್ದರೆ ಉನ್ನತ ಪದವಿ, ಅದಕ್ಕಾಗಿ ಉನ್ನತ ಕೋಚಿಂಗ್ ಕೊಡಿಸುವುದೇ ಸಮಾಜದಲ್ಲಿ ಗೌರವ ಹಾಗೂ ಪ್ರತಿಷ್ಠೆಯ ವಿಚಾರವಾಗಿದೆ ಎಂದು ತಿಳಿದುಬರುತ್ತದೆ. ಕಾನಿಷ್ಕನ ತಾಯಿ ಪ್ರಿಯಾಂಕಾ 28ರ ಪ್ರಾಯದವರಾಗಿದ್ದು ಅವರ ಪ್ರಕಾರ, "ಇಂದು ಜಗತ್ತು ಸ್ಪರ್ಧಾತ್ಮಕವಾಗಿದೆ. ನನ್ನ ಮಗ ಮುಂದೆ ಯಶಸ್ಸುಗಳಿಸಬೇಕೆಂದರೆ ಅವನ ತರಬೇತಿ ಚಿಕ್ಕವನಾಗಿದ್ದಾಗಿನಿಂದಲೇ ಪ್ರಾರಂಭವಾಗಬೇಕು. ತದನಂತರ ಅವನು ಇದಕ್ಕೆ ಹೊಂದಿಕೊಂಡು ಮುಂದೆ ಉನ್ನತ ಪದವಿ ಹಾಗೂ ಸ್ಥಾನಗಳಿಸಬಹುದು" ಎನ್ನುತ್ತಾರೆ.


ರಾಷ್ಟ್ರೀಯ ಶಿಕ್ಷಣ ನೀತಿ


ಈಗಾಗಲೇ ಸರ್ಕಾರವು ಖಾಸಗಿ ಟ್ಯೂಶನ್ ಮೇಲೆ ಅವಲಂಬನೆ ಕಡಿಮೆಯಾಗಬೇಕು ಹಾಗೂ ಇಂದಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರಬೇಕು ಎಂಬ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆಯಾದರೂ ಅದರಿಂದ ಪ್ರಸ್ತುತ ಟ್ಯೂಶನ್ ತೆಗೆದುಕೊಳ್ಳುವಿಕೆಯ ಪ್ರಮಾಣದ ಮೇಲೆ ಯಾವುದೇ ಬಲವಾದ ವ್ಯತ್ಯಾಸ ಉಂಟಾಗಿಯೇ ಇಲ್ಲ.


ವ್ಯತಿರಿಕ್ತವಾಗಿ ಈ ರೀತಿಯ ಮತ್ತೊಂದು ಶೈಕ್ಷಣಿಕ ವಲಯವಾಗಿ ಈ ಉದ್ದಿಮೆ ತನ್ನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳುತ್ತಿದೆ ಎನ್ನಬಹುದು. ಶೈಕ್ಷಣಿಅ ಸಚಿವಾಲಯದ ಅಧಿಕಾರಿಯೊಬ್ಬರು ಇದಕ್ಕೆ ಸಂಬಂಧಿಸಿದಂತೆ, "ಇದು ನಮ್ಮ ಶಿಕ್ಷಣ ವ್ಯವಸ್ಥೆಯ ಸಂಪೂರ್ಣ ವೈಫಲ್ಯವಾಗಿದೆ, ನಾವು ಕಾನಿಷ್ಕನ ತಾಯಿಗೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವನನ್ನು ಟ್ಯೂಶನ್ ಗೆ ಕಳುಹಿಸಬೇಡಿ ಎನ್ನಲಾಗುವುದಿಲ್ಲ" ಎಂದು ಅಸಮಾಧಾನ ತೋಡಿಕೊಳ್ಳುತ್ತಾರೆ.


ಶಿಕ್ಷಣ ಸಚಿವಾಲಯವು 2015 ರಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಿ ಟ್ಯೂಶನ್ ವ್ಯವಹಾರದ ಬಗ್ಗೆ ಪರಿಶೀಲಿಸಲು ಆದೇಶಿಸಿತ್ತು. ಅದರಂತೆ ಸಮಿತಿ ನೀಡಿದ ವರದಿಯ ಪ್ರಕಾರ, ಆ ಸಮಯದಲ್ಲೇ ಟ್ಯೂಶನ್ ಉದ್ದಿಮೆಯ ಮಾರುಕಟ್ಟೆ ಮೌಲ್ಯ ಅಥವಾ ವ್ಯವಹಾರವು 24,000 ಕೋಟಿ ರೂಪಾಯಿಗಳೆಂದು ಅಂದಾಜಿಸಿತ್ತು.


ಇನ್ನು, ಇನ್ಫಿನಿಯಮ್ ಗ್ಲೋಬಲ್ ರಿಸರ್ಚ್ ಕೇಂದ್ರದ ಸಂಶೋಧನೆಯ ಪ್ರಕಾರ, ಪ್ರಸ್ತುತ, ಭಾರತದಲ್ಲಿ ಶೈಕ್ಷಣಿಕ ತರಬೇತಿ ನೀಡುವಿಕೆಯ ಮಾರುಕಟ್ಟೆ ಮೌಲ್ಯವು 58,088 ಕೋಟಿ ರೂಪಾಯಿಗಳಾಗಿದ್ದು 2028ರವರೆಗೆ ಇದು 1,33,995 ಕೋಟಿ ರೂಪಾಯಿಗಳವರೆಗೆ ವಿಸ್ತರಿಸಲಿದೆ ಎಂದು ಅಂದಾಜಿಸಿದೆ.


Coaching culture is an epidemic now, Its growth is projected to reach Rs 1,33,995 crore rupees by 2028, Madhya Pradesh to Maharashtra, Bihar to Kerala, kannada news, karnataka news, ಕನ್ನಡ ನ್ಯೂಸ್, ಕರ್ನಾಟಕ ನ್ಯೂಸ್, ಮನೆಪಾಠವೂ ಬೇಕಾ, ಟ್ಯೂಷನ್​ಕಿಂತ ಮನೆ ಪಾಠ ಬೇಕಾ
ಸಾಂದರ್ಭಿಕ ಚಿತ್ರ


ಕಾನಿಷ್ಕ್ ಕೋಚಿಂಗ್ ಗಾಗಿ ಹೋಗುವ ಕೇಂದ್ರದ ಶಿಕ್ಷಕ ಹೇಳುವಂತೆ ಕಾನಿಷ್ಕ್ ಪಾಠ ಅರಿಯಲು ಇನ್ನು ಹೆಚ್ಚುವರಿ ಅಭ್ಯಾಸ ಅಂದರೆ ಟ್ಯೂಶನ್ ಬೇಕಾಗಿರುವಂತಹ ದುರ್ಬಲ ವಿದ್ಯಾರ್ಥಿಯಲ್ಲ. ಆದಾಗ್ಯೂ ಅವನು ಪ್ರತಿನಿತ್ಯ ಟ್ಯೂಶನ್ ಗೆ ಬರುತ್ತಾನೆ. ಕೊಟ್ಟ ಹೋಮ್ ವರ್ಕ್ ಮಾಡಿ ಮತ್ತೆ ಅದರ ಮನನ ಮಾಡುತ್ತಾನೆ. ಮನೆಗೆ ಮತ್ತೇ ಹೋಮ್ ವರ್ಕ್ ಒಯ್ಯುತ್ತಾನೆ. ಈ ರೀತಿ ಅವನು ಮುಂದಿನ 15-20 ವರ್ಷಗಳ ಕಾಲ ಮಾಡಲೇ ಬೇಕು. ತದನಂತರ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಮುಂದೆ ಮತ್ತೆ ಅಧ್ಯಯನ ಮಾಡಲೇಬೇಕು.


ಜೀವನಶೈಲಿ


ಕಾನಿಷ್ಕ್ ನ ದಿನಚರಿ ಹೇಗಿದೆ ಎಂದರೆ ಒಂದೊಮ್ಮೆ ಶಾಲೆ ಬಿಡುವ ಬೆಲ್ ಆದರೆ ಸಾಕು, ಎಲ್ಲ ವಿದ್ಯಾರ್ಥಿಗಳ ಜೊತೆ ಕಾನಿಷ್ಕ್ ಸಹ ಬ್ಯಾಗೊಂದನ್ನು ನೇತು ಹಾಕಿಕೊಂಡು ಟ್ಯೂಶನ್ ತರಗತಿಗೆ ತೆರಳುತ್ತಾನೆ. ಕೆಲವರು ಅಲ್ಪ ವಿಶ್ರಾಂತಿ ಅಥವಾ ಉಪಹಾರಕ್ಕೆಂದು ಮನೆಗೆ ತೆರಳಿದರೆ ಹಲವರು ನೇರವಾಗಿ ಟ್ಯೂಶನ್ ಗೆ ತೆರಳುತ್ತಾರೆ. ಕೇವಲ ಕಾನಿಷ್ಕ್ ಮಾತ್ರವಲ್ಲ ಅವನ ಸ್ನೇಹಿತರು, ಕಸಿನ್ ಗಳು ಇದೇ ಶೈಲಿಯನ್ನು ಅನುಸರಿಸುತ್ತಾರೆ.


ಪ್ರತಿ ವಿದ್ಯಾರ್ಥಿಗಳು ಈ ರೀತಿಯಾಗಿ ದಿನಚರಿ ನಿಭಾಯಿಸುತ್ತ, ಲಭ್ಯ ವಿರುವ ಅಲ್ಪ ಪ್ರಮಾಣದ ಇಂಜಿನಿಯರಿಂಗ್ ಸೀಟುಗಳು, ವೈದ್ಯಕೀಯ ಸೀಟುಗಳು ಅಥವಾ ಇತರೆ ನಾಗರಿಕ ಸೇವೆಗಳ ಪರೀಕ್ಷೆಗಳಿಗಾಗಿ ಸ್ಪರ್ಧೆಯಲ್ಲಿ ತೊಡಗಿದ್ದಾರೆ.


ಈ ಬಾರಿಯ ಯುಪಿಎಸ್‍ಸಿ ಪರೀಕ್ಷೆಯ ಮೂಲಕ ಲಭ್ಯವಿರುವ 1,011 ಸೀಟುಗಳಿಗೆ 11 ಲಕ್ಷ ಅಭ್ಯರ್ಥಿಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. ಹಾಗೂ ನೀಟ್ ಪರೀಕ್ಷೆಯ ಮೂಲಕ 612 ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಲಭ್ಯವಿರುವ ಒಟ್ಟು 91,927 ವೈದ್ಯಕೀಯ ಸೀಟುಗಳಿಗಾಗಿ 18 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.


ಇನ್ನು, ಈ ಪರ್ಯಾ ಟ್ಯೂಶನ್ ಎಂಬ ಶೈಕ್ಷಣಿಕ ಉದ್ದಿಮೆಯು ಬಹಳಷ್ಟು ಖಾಸಗಿ ತರಬೇತಿದಾರರಿಗೆ ಕೆಲಸಕ್ಕಿಂತಲೂ ಹೆಚ್ಚಿನ ಸಂಭಾವನೆಗಳಿಸಿಕೊಡುವ ಅವಕಾಶವಾಗಿ ಪಾರ್ಪಾಡಾಗಿದೆ. ಕಾನಿಷ್ಕನ್ ಟ್ಯೂಶನ್ ಟೀಚರ್ ಆಗಿರುವ ತರ್ವಾನ್ ಅವರು ಹಲವು ಶೈಕ್ಷಣಿಕ ಪದವಿಗಳನ್ನು ಹೊಂದಿದ್ದು ಕಳೆದ ಹತ್ತು ವರ್ಷಗಳಿಂದ ಈ ತರಬೇತಿ ನೀಡುವಿಕೆಯಲ್ಲಿ ನಿರತರಾಗಿದ್ದಾರೆ. ಅವರು ಇಂದು ಚಿಕ್ಕ ಮಕ್ಕಳಿಗೂ ಸಹ ಟ್ಯೂಶನ್ ತೆಗೆದುಕೊಳ್ಳುತ್ತಿದ್ದು ಅವರೇ ಹೇಳುವಂತೆ ಅವರು ತಮ್ಮ ಹನ್ನೆರಡನೇ ತರಗತಿಗೆ ಮಾತ್ರವೇ ಟ್ಯೂಶನ್ ಪಡೆದಿದ್ದರೆನ್ನುತ್ತಾರೆ.


2010-12 ಅಥವಾ ಅದಕ್ಕಿಂತ ಇನ್ನೂ ಹಿಂದೆ ಕೇವಲ ವಿಜ್ಞಾನ ಹಾಗೂ ಕಾಮರ್ಸ್ ವಿಷಯವನ್ನು ಆರಿಸಿಕೊಳ್ಳುವವರು ಟ್ಯೂಶನ್ ಪಡೆಯುತ್ತಿದ್ದರು. ಆದರೆ, ಇಂದು ಕಾಲ ಬದಲಾಗಿದೆ. ವಿಷಯ ಯಾವುದೇ ಇರಲಿ ಟ್ಯೂಶನ್ ಎಲ್ಲದರಲ್ಲೂ ಲಭ್ಯವಿದೆ ಹಾಗೂ ವಿದ್ಯಾರ್ಥಿಗಳು ಅದನ್ನು ಪಡೆಯಲು ಸಹ ಮುಂದೆ ಬರುತ್ತಿದ್ದಾರೆ.


ಹೆಚ್ಚುತ್ತಿರುವ ಬೇಡಿಕೆ


ಇಂದು ಜಗತ್ತು ಸಾಕಷ್ಟು ತೀವ್ರವಾದ ಸ್ಪರ್ಧೆ ಒಡ್ಡುತ್ತಿದೆ. ಇಂದಿನ ಪೋಷಕರು ಕೇವಲ ಟ್ಯೂಶನ್ ಮೂಲಕವೇ ಅವರ ಮಕ್ಕಳು ಸಮಗ್ರ ರೀತಿಯಲ್ಲಿ ಸಜ್ಜಾಗಿ ಮುಂದಿರುವ ಕಠಿಣ ಸವಾಲನ್ನು ನಿಭಾಯಿಸುವ ಮೂಲಕ ಆದ್ಯತೆಯ ಗುರಿಯಾದ ಉನ್ನತ ಶಿಕ್ಷಣ ಹಾಗೂ ಆ ನಂತರ ಉದ್ಯೋಗ ಪಡೆಯುತ್ತಾರೆಂದು ಬಲವಾಗಿ ನಂಬಿದ್ದಾರೆ.


ಹಾಗಾಗಿಯೇ, ಈಗ ಎಲ್ಲೆಡೆ ಟ್ಯೂಶನ್ ಗಾಗಿ ಬೇಡಿಕೆ ಹೆಚ್ಚಿರುವುದನ್ನು ಗಮನಿಸಬಹುದು. ಟ್ಯೂಶನ್ ಹೇಳುವ ಶಿಕ್ಷಕರ ಪ್ರಕಾರ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಿಗದೆ ಹೋದಲ್ಲಿ ಟ್ಯೂಶನ್ ತೆಗೆದುಕೊಳ್ಳುವುದು ಬಲು ಸಫಲದಾಯಕವಾದ ಆಯ್ಕೆ. ಇದು ನಿರ್ದಿಷ್ಟ ಉದ್ಯೋಗಕ್ಕಿಂತ ಹೆಚ್ಚಿನ ಸಂಭಾವನೆ ದೊರೆಯುವಂತೆ ಮಾಡುತ್ತದೆ.


ಕೋಚಿಂಗ್ ನೀಡುವ ಶೈಕ್ಷಣಿಕ ಉದ್ದಿಮೆಗಳು


ಇನ್ನು ಭಾರತದಲ್ಲಿ ಬೈಜು, ಅಲನ್ ಕರಿಯರ್ ಗಳಂತಹ ಮಂಚೂಣಿಯಲ್ಲಿರುವ ಶೈಕ್ಷಣಿಕ ಕೋಚಿಂಗ್ ಕೇಂದ್ರಗಳಿದ್ದು ಎಲ್ಲೆಡೆ ಇವುಗಳ ಶಾಖೆಗಳನ್ನು ನೋಡಬಹುದು. ಮಧ್ಯಮ ವರ್ಗ, ಮೇಲ್ಮಧ್ಯಮ ವರ್ಗದ ಪೋಷಕರು ಇಂತಹ ಕೇಂದ್ರಗಳಲ್ಲಿ ತಮ್ಮ ಮಕ್ಕಳು ಕೋಚಿಂಗ್ ಪಡೆಯಬೇಕೆಂದು ಬಯಸುತ್ತಿರುತ್ತಾರೆ.


ಹಿಂದೆ ಟ್ಯೂಶನ್ ಎಂಬ ಪೆಡಂಭೂತದಿಂದಾಗಿ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಂತಹ ಘಟನೆಗಳು ನಡೆದಿವೆ. ಕೋಟಾದಲ್ಲಿ ಇಂತಹ ಘಟನೆಗಳು ವರದಿಯಾಗಿದ್ದ ಸಂದರ್ಭದಲ್ಲಿ ರಾಜಸ್ಥಾನದ ಸರ್ಕಾರವು ಈ ಟ್ಯೂಶನ್ ಧಂಧೆಯ ಮೇಲೆ ನಿಗಾ ಇರಿಸುವಿಕೆ ಹಾಗೂ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಕಾನೂನೊಂದನ್ನು ತರಲು ಯೋಜಿಸಿತು. ಅದರಂತೆ ಒಂದು ಕಮಿಟಿ ರಚಿಸಿ ಅದಕ್ಕೆ ಕರಡುಪ್ರತಿ ಸಿದ್ಧಪಡಿಸಲು ಸೂಚಿಸಲಾಯಿತು. ಸಮಿತಿ ಸದ್ಯ ಪ್ರಸ್ತಾವವೊಂದನ್ನು ಮುಂದಿಟ್ಟಿದೆಯಾದರೂ ಇನ್ನು ವರೆಗೆ ಯಾವುದೇ ಕಾನೂನು ಜಾರಿಗೆ ಬಂದಿಲ್ಲ.

First published: