• ಹೋಂ
 • »
 • ನ್ಯೂಸ್
 • »
 • jobs
 • »
 • Study Abroad: 2022ರಲ್ಲಿ ವಿದ್ಯಾಭ್ಯಾಸಕ್ಕಾಗಿ ವಿದೇಶಗಳಿಗೆ ಪ್ರಯಾಣಿಸುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ

Study Abroad: 2022ರಲ್ಲಿ ವಿದ್ಯಾಭ್ಯಾಸಕ್ಕಾಗಿ ವಿದೇಶಗಳಿಗೆ ಪ್ರಯಾಣಿಸುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಒಟ್ಟಾರೆಯಾಗಿ, 2021 ಕ್ಕೆ ಹೋಲಿಸಿದರೆ ವಿದೇಶಕ್ಕೆ ಹೋಗುವ ಭಾರತೀಯರ ಸಂಖ್ಯೆ 137% ಕ್ಕಿಂತ ಹೆಚ್ಚಾಗಿದೆ. 2019 ರಲ್ಲಿ, ಇತರ ದೇಶಗಳಿಗೆ ಭೇಟಿ ನೀಡಿದ ಒಟ್ಟು ಭಾರತೀಯರ ಸಂಖ್ಯೆ 2.52 ಕೋಟಿಯಾಗಿದ್ದು, ಅದರಲ್ಲಿ 63.80 ಲಕ್ಷ ಪ್ರವಾಸಿ ವೀಸಾಗಳಲ್ಲಿ ಪ್ರಯಾಣಿಸಿದ್ದಾರೆ.

 • News18 Kannada
 • 2-MIN READ
 • Last Updated :
 • New Delhi, India
 • Share this:

ವೃತ್ತಿರಂಗದಲ್ಲಿ ಯಶಸ್ಸು ಸಾಧಿಸಲು ಇಂದು ವಿದ್ಯಾರ್ಥಿಗಳು ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಂಟರ್ನ್‌ಶಿಪ್, ವೃತ್ತಿನಿರತ ಕೋರ್ಸ್‌ಗಳು, ತರಬೇತಿ ಇದೇ ರೀತಿ ವಿದೇಶದಲ್ಲಿ (Foreign) ಕಲಿಕೆ ಕೂಡ ಉತ್ತಮ ಹಾಗೂ ಉನ್ನತ ಉದ್ಯೋಗವನ್ನು ಪಡೆಯಲು ವೇದಿಕೆ ಎಂದೆನಿಸಿದೆ. ಇದೀಗ ವಿದೇಶದಲ್ಲಿ ಶಿಕ್ಷಣ (Education) ಮುಂದುವರಿಸುವುದಕ್ಕಾಗಿ ವಿದ್ಯಾರ್ಥಿ (Students) ವೀಸಾದಲ್ಲಿ ವಿದೇಶಗಳಿಗೆ ಪ್ರಯಾಣಿಸುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.


ವಿದೇಶಕ್ಕೆ ಪ್ರಯಾಣಿಸುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ


ವಿದ್ಯಾರ್ಥಿ ವೀಸಾದಲ್ಲಿ ವಿದೇಶಕ್ಕೆ ಪ್ರಯಾಣಿಸುವ ವಿದ್ಯಾರ್ಥಿಗಳ ಸಂಖ್ಯೆಯು ಏರಿಕೆಯಾಗಿದ್ದು, 2022 ರಲ್ಲಿ ಸುಮಾರು 6.5 ಲಕ್ಷ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಇತರ ದೇಶಗಳಿಗೆ ಪ್ರಯಾಣಿಸಿದ್ದಾರೆ ಎಂಬುದು ತಿಳಿದುಬಂದಿದೆ. ಈ ಪ್ರಮಾಣವು ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ ದಾಖಲಾಗಿರುವ ಸಂಖ್ಯೆಯನ್ನು ಮೀರಿದೆ ಎಂದು ಬ್ಯೂರೋ ಆಫ್ ಇಮಿಗ್ರೇಷನ್ (BoI) ವರದಿ ಮಾಡಿದೆ.


ಅಂಕಿಅಂಶ ಬಿಡುಗಡೆ ಮಾಡಿದ BoI


ಗೃಹ ವ್ಯವಹಾರಗಳ ಸಚಿವಾಲಯದ (MHA) ಅಡಿಯಲ್ಲಿ ಕಾರ್ಯನಿರ್ವಹಿಸುವ BoI (ಬ್ಯೂರೋ ಆಫ್ ಇಮಿಗ್ರೇಷನ್) , ಪ್ರಯಾಣಿಕರ ಮೌಖಿಕ ಬಹಿರಂಗಪಡಿಸುವಿಕೆ ಅಥವಾ ಇಮಿಗ್ರೇಶನ್ ಕ್ಲಿಯರೆನ್ಸ್ ಸಮಯದಲ್ಲಿ ಅವರು ಹಾಜರುಪಡಿಸಿದ ನಿರ್ದಿಷ್ಟ ಸ್ಥಳದ ವೀಸಾದ ಪ್ರಕಾರವನ್ನು ಆಧರಿಸಿ ವಿದೇಶಕ್ಕೆ ಪ್ರಯಾಣಿಸುವ ಭಾರತೀಯರ ಡೇಟಾವನ್ನು ನಿರ್ವಹಿಸುತ್ತದೆ. ಅಂಕಿಅಂಶಗಳ ಪ್ರಕಾರ, ನವೆಂಬರ್ 30 ರವರೆಗೆ ಸುಮಾರು 6,48,678 ವಿದ್ಯಾರ್ಥಿಗಳು ವಿದ್ಯಾರ್ಥಿ ವೀಸಾದಲ್ಲಿ ವಿದೇಶಕ್ಕೆ ಪ್ರಯಾಣಿಸಿದ್ದಾರೆ ಎಂಬುದು ತಿಳಿದು ಬಂದಿದ್ದು, ಇದು ಐದು ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ವರದಿಯಾಗಿದೆ.


ಇತರ ಉದ್ದೇಶಗಳ ಪ್ರಯಾಣ ಪ್ರಮಾಣದಲ್ಲಿ ಇಳಿಕೆ


ಆದಾಗ್ಯೂ, ವ್ಯಾಪಾರ, ಉದ್ಯೋಗ, ವೈದ್ಯಕೀಯ, ತೀರ್ಥಯಾತ್ರೆ ಮತ್ತು ಇತರ ಉದ್ದೇಶಗಳಿಗಾಗಿ ಭಾರತೀಯರಲ್ಲಿ ಅಂತರರಾಷ್ಟ್ರೀಯ ಪ್ರಯಾಣವು ಸಾಂಕ್ರಾಮಿಕ ಪೂರ್ವದ ಮಟ್ಟಕ್ಕಿಂತ ಕಡಿಮೆಯಾಗಿದೆ ಎಂದು ಅಂಕಿಅಂಶಗಳು ಬಹಿರಂಗಪಡಿಸಿವೆ. ವಿದ್ಯಾರ್ಥಿ ವೀಸಾಗಳಲ್ಲದೆ, ವಿಸಿಟಿಂಗ್ ವೀಸಾದಲ್ಲಿ ಪ್ರಯಾಣಿಸುವ ಭಾರತೀಯರ ಸಂಖ್ಯೆಯು 2022 ರಲ್ಲಿ ಗಣನೀಯವಾಗಿ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.


ಇದನ್ನೂ ಓದಿ: ABVP ಗೆ ಪ್ರತಿಸ್ಪರ್ಧಿ NSUI, ಈ ವಿದ್ಯಾರ್ಥಿ ಸಂಘಟನೆಯ ಹಿಂದಿನ ಕಥೆ ಇಲ್ಲಿದೆ ನೋಡಿ


ಅಂಕಿಅಂಶಗಳು ನೀಡಿರುವ ಮಾಹಿತಿಗಳೇನು?


ಜನವರಿ ಮತ್ತು ನವೆಂಬರ್ 30 ರ ನಡುವೆ 1.83 ಕೋಟಿ ಭಾರತೀಯರು ವಿವಿಧ ಉದ್ದೇಶಗಳಿಗಾಗಿ ಬೇರೆ ದೇಶಗಳಿಗೆ ಪ್ರಯಾಣಿಸಿದ್ದಾರೆ. ಇದರಲ್ಲಿ 72.49 ಲಕ್ಷ ಜನರು ನಿವಾಸ ಸ್ಥಳಕ್ಕೆ ಪ್ರಯಾಣಿಸಿದ್ದು, 30.85 ಲಕ್ಷ ಜನರು ಪ್ರವಾಸಿ ವೀಸಾದಲ್ಲಿ ವಿದೇಶಕ್ಕೆ ಪ್ರಯಾಣಗೈದಿದ್ದಾರೆ ಮತ್ತು 40.92 ಲಕ್ಷ ಜನರು ವಿದೇಶಕ್ಕೆ ಪ್ರಯಾಣಿಸಲು ವಿಸಿಟಿಂಗ್ ವೀಸಾಗಳನ್ನು ಪಡೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.


ಕಳೆದ ವರ್ಷಕ್ಕಿಂತ ಈ ವರ್ಷಕ್ಕೆ ಏರಿಕೆಯಾಗಿರುವ ಸಂಖ್ಯೆ


ಒಟ್ಟಾರೆಯಾಗಿ, 2021 ಕ್ಕೆ ಹೋಲಿಸಿದರೆ ವಿದೇಶಕ್ಕೆ ಹೋಗುವ ಭಾರತೀಯರ ಸಂಖ್ಯೆ 137% ಕ್ಕಿಂತ ಹೆಚ್ಚಾಗಿದೆ. 2019 ರಲ್ಲಿ, ಇತರ ದೇಶಗಳಿಗೆ ಭೇಟಿ ನೀಡಿದ ಒಟ್ಟು ಭಾರತೀಯರ ಸಂಖ್ಯೆ 2.52 ಕೋಟಿಯಾಗಿದ್ದು, ಅದರಲ್ಲಿ 63.80 ಲಕ್ಷ ಪ್ರವಾಸಿ ವೀಸಾಗಳಲ್ಲಿ ಪ್ರಯಾಣಿಸಿದ್ದಾರೆ, 42.11 ಲಕ್ಷ ವಿಸಿಟಿಂಗ್ ವೀಸಾಗಳಲ್ಲಿ ಮತ್ತು 89.50 ಲಕ್ಷ ಭಾರತೀಯರು ನಿವಾಸ ಮತ್ತು ಮರು-ಪ್ರವೇಶದ ಉದ್ದೇಶಗಳಿಗಾಗಿ ಪ್ರಯಾಣಿಸಿದ್ದಾರೆ ಎಂದು ವರದಿ ತಿಳಿಸಿದೆ.


ಕೆನಡಾ ಹಾಗೂ ಯುಕೆಗೆ ಹೆಚ್ಚು ಭಾರತೀಯರ ಪ್ರಯಾಣ


ಕೆನಡಾ ಮತ್ತು ಯುಕೆಯಂತಹ ದೇಶಗಳಿಗೆ 2022 ರ ಪ್ರಯಾಣ ಪ್ರಮಾಣಗಳನ್ನು ನೋಡಿದಾಗ ಸಾಂಕ್ರಾಮಿಕ ಪೂರ್ವದ ಸಮಯಗಳಿಗೆ ಹೋಲಿಸಿದರೆ ಹೆಚ್ಚು ಭಾರತೀಯರು ಈ ದೇಶಗಳಿಗೆ ಪ್ರಯಾಣಿಸಿರುವುದು ವರದಿಯಾಗಿದೆ. 2019 ರಲ್ಲಿ 6.17 ಲಕ್ಷ ಭಾರತೀಯರು ಕೆನಡಾಕ್ಕೆ ಪ್ರಯಾಣಿಸದ್ದರೆ, ಈ ವರ್ಷದ ಮೊದಲ 11 ತಿಂಗಳಲ್ಲಿ ಈ ಸಂಖ್ಯೆ 6.60 ಲಕ್ಷಕ್ಕೆ ಏರಿಕೆಯಾಗಿದೆ. 2019 ರಲ್ಲಿ ಭಾರತದಿಂದ ಯುಕೆಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಯು 7.45 ಲಕ್ಷದಿಂದ 2022 ರಲ್ಲಿ 7.54 ಲಕ್ಷಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

First published: