• ಹೋಂ
  • »
  • ನ್ಯೂಸ್
  • »
  • Jobs
  • »
  • Teachers Training: ಫಿನ್‌ಲ್ಯಾಂಡ್‌ಗೆ ಹೋಗಿ ತರಬೇತಿ ಪಡೆದ ಭಾರತದ ಶಿಕ್ಷಕರು! ಫಿನ್ನಿಷ್ ಮಾದರಿಯ ಶಿಕ್ಷಣ ಭಾರತದಲ್ಲೂ ಬರುತ್ತಾ?

Teachers Training: ಫಿನ್‌ಲ್ಯಾಂಡ್‌ಗೆ ಹೋಗಿ ತರಬೇತಿ ಪಡೆದ ಭಾರತದ ಶಿಕ್ಷಕರು! ಫಿನ್ನಿಷ್ ಮಾದರಿಯ ಶಿಕ್ಷಣ ಭಾರತದಲ್ಲೂ ಬರುತ್ತಾ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

“ಭಾರತೀಯ ಬಿಎಡ್ ಪದವಿಯಲ್ಲಿ, ನಮಗೆ ನೀಡಲಾದ ಅಧ್ಯಯನ ಸಾಮಗ್ರಿಗಳು ತುಂಬಾ ಹಳೆಯದಾಗಿದೆ. ನನ್ನ ಶಿಕ್ಷಕರು ತಮ್ಮ ಬೋಧನಾ ಕಾರ್ಯಕ್ರಮದಲ್ಲಿ ಅಧ್ಯಯನ ಮಾಡಿದಂತೆಯೇ ನಮಗೆ ಕಲಿಸುತ್ತಾರೆ. ಕಾಲ ಬದಲಾಗಿದ್ದರೂ ಅಧ್ಯಯನದ ವಸ್ತುವು ಒಂದೇ ಆಗಿರುತ್ತದೆ” ಎಂಬುದಾಗಿ ಕಾಬ್ರಾ ಅಭಿಪ್ರಾಯ ಪಡುತ್ತಾರೆ.

ಮುಂದೆ ಓದಿ ...
  • News18 Kannada
  • 3-MIN READ
  • Last Updated :
  • New Delhi, India
  • Share this:

ಸರ್ಕಾರಿ ಶಿಕ್ಷಕರನ್ನು ಫಿನ್‌ಲ್ಯಾಂಡ್‌ಗೆ (Finland) ತರಬೇತಿಗಾಗಿ ಕಳುಹಿಸುವ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ನಡುವಿನ ಸಂಘರ್ಷ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಈ ಮಧ್ಯೆ ತರಬೇತಿಗಾಗಿ (Training) ವಿದೇಶಕ್ಕೆ ಹೋದ ದೆಹಲಿಯ 1,000 ಕ್ಕೂ ಹೆಚ್ಚು ಶಿಕ್ಷಣತಜ್ಞರು ಹಿಂತಿರುಗಿದ ನಂತರ ತಮ್ಮ ಶಾಲೆಗಳನ್ನು (School) ಪರಿವರ್ತಿಸಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಇನ್ನು, ಶಿಕ್ಷಣ ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡ ಫಿನ್‌ಲ್ಯಾಂಡ್‌ನ ಶಿಕ್ಷಣ (Education) ವ್ಯವಸ್ಥೆಯನ್ನು ವಿಶ್ವದಲ್ಲೇ ಅತ್ಯುತ್ತಮವೆಂದು ಪರಿಗಣಿಸಲಾಗಿದೆ ಎಂದು ಪದೇ ಪದೇ ಹೇಳಿಕೊಂಡಿದ್ದಾರೆ.


ಹಾಗಾದ್ರೆ ನಿಜವಾಗಿಯೂ ಇಲ್ಲಿನ ಶಿಕ್ಷಕರಿಗೆ ಫಿನ್‌ಲ್ಯಾಂಡ್‌ನ ಶಿಕ್ಷಣ ಪದ್ಧತಿಯ ತರಬೇತಿಯ ಅವಶ್ಯಕತೆ ಇದೆಯಾ? ಈ ಬಗ್ಗೆ ತಜ್ಞರು ಏನಂತಾರೆ ಅನ್ನೋದನ್ನು ನೋಡೋಣ. ಫಿನ್‌ಲ್ಯಾಂಡ್‌ ದೇಶದ ಶಿಕ್ಷಕರ ತರಬೇತಿ ಕಾರ್ಯಕ್ರಮಗಳ ಬಗ್ಗೆ ಮಿಶ್ರ ಅಭಿಪ್ರಾಯಗಳಿವೆ. ಭಾರತವು ಫಿನ್ನಿಷ್ ಮಾದರಿಯ ಶಿಕ್ಷಣವನ್ನು ಅಳವಡಿಸಿಕೊಳ್ಳಬೇಕು ಎಂದು ಕೆಲವರು ಭಾವಿಸಿದರೆ, ದೇಶದ ವೈವಿಧ್ಯತೆಯು ಅದನ್ನು ಅನುಸರಿಸಲು ಕಷ್ಟವಾಗಿಸುತ್ತದೆ ಎಂದು ಇತರರು ನಂಬುತ್ತಾರೆ.


ಭಾರತೀಯ ಶಿಕ್ಷಕರಿಗೆ ಫಿನ್ನಿಷ್ ಶಿಕ್ಷಣ ಪದ್ಧತಿಯ ತರಬೇತಿ ಅಗತ್ಯವಿದೆಯೇ?


2019 ರಲ್ಲಿ CCE ಫಿನ್‌ಲ್ಯಾಂಡ್‌ನಿಂದ ಆರಂಭಿಕ ಬಾಲ್ಯ ಶಿಕ್ಷಣದಲ್ಲಿ ಡಿಪ್ಲೊಮಾ ಕೋರ್ಸ್ ತೆಗೆದುಕೊಂಡ ನಿಹಾರಿಕಾ ಕಬ್ರಾ, ಎರಡು ದೇಶಗಳ ಶಿಕ್ಷಕರ ತರಬೇತಿ ಮಾಡ್ಯೂಲ್‌ನಲ್ಲಿ ತಾನು ಕಂಡ ದೊಡ್ಡ ವ್ಯತ್ಯಾಸವೆಂದರೆ ಅಧ್ಯಯನ ಸಾಮಗ್ರಿ ಎಂಬುದಾಗಿ ಹೇಳುತ್ತಾರೆ. “ಭಾರತೀಯ ಬಿಎಡ್ ಪದವಿಯಲ್ಲಿ, ನಮಗೆ ನೀಡಲಾದ ಅಧ್ಯಯನ ಸಾಮಗ್ರಿಗಳು ತುಂಬಾ ಹಳೆಯದಾಗಿದೆ. ನನ್ನ ಶಿಕ್ಷಕರು ತಮ್ಮ ಬೋಧನಾ ಕಾರ್ಯಕ್ರಮದಲ್ಲಿ ಅಧ್ಯಯನ ಮಾಡಿದಂತೆಯೇ ನಮಗೆ ಕಲಿಸುತ್ತಾರೆ. ಕಾಲ ಬದಲಾಗಿದ್ದರೂ ಅಧ್ಯಯನದ ವಸ್ತುವು ಒಂದೇ ಆಗಿರುತ್ತದೆ” ಎಂಬುದಾಗಿ ಕಾಬ್ರಾ ಅಭಿಪ್ರಾಯ ಪಡುತ್ತಾರೆ.


ಇದನ್ನೂ ಓದಿ: Exam Paper Leak: ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ! ಪರೀಕ್ಷೆ ಮುಂದೂಡಿಕೆ


ಪಾಠ ಮಾಡುವ ವಿಧಾನವೂ ವಿಭಿನ್ನವಾಗಿದೆ


ಅಲ್ಲದೇ ಭಾರತ ಮತ್ತು ಫಿನ್‌ಲ್ಯಾಂಡ್‌ನಲ್ಲಿ ಪಾಠ ಮಾಡುವ ವಿಧಾನವೂ ವಿಭಿನ್ನವಾಗಿದೆ. ಫಿನ್‌ಲ್ಯಾಂಡ್‌ ಹೆಚ್ಚು ಪ್ರಾಯೋಗಿಕ ವಿಧಾನವನ್ನು ಅಳವಡಿಸಿಕೊಂಡಿದೆ ಎಂದೂ ಅವರು ಹೇಳುತ್ತಾರೆ. ಫಿನ್‌ಲ್ಯಾಂಡ್‌ನ ಜ್ವಾಸ್ಕೈಲಾ ವಿಶ್ವವಿದ್ಯಾಲಯದಿಂದ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುವ ಮತ್ತು ಪ್ರಸ್ತುತ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿರುವ ಗೋಮತಿ ಸೌಂದರರಾಜ್, ಫಿನ್ನಿಷ್ ವ್ಯವಸ್ಥೆಯು "ಸಮಗ್ರ ಮೌಲ್ಯಮಾಪನ ಮತ್ತು ಜ್ಞಾನ ನಿರ್ಮಾಣ, ನಾವೀನ್ಯತೆ ಮತ್ತು ಸಂಶೋಧನೆಯ ಮೇಲೆ ಹೆಚ್ಚು ಗಮನಹರಿಸುತ್ತದೆ" ಎಂಬುದಾಗಿ ಅಭಿಪ್ರಾಯ ಪಡುತ್ತಾರೆ.


ಸಿಇಒ ಆಶಿಶ್ ಶ್ರೀವಾಸ್ತವ ಅವರು ಹೇಳಿದ್ದೇನು?


ಫಿನ್‌ಲ್ಯಾಂಡ್ ಎಜುಕೇಶನ್ ಹಬ್‌ನ ಶೈಕ್ಷಣಿಕ ಸಲಹೆಗಾರ ಮತ್ತು ಸಿಇಒ ಆಶಿಶ್ ಶ್ರೀವಾಸ್ತವ ಅವರು, "ಭಾರತದಲ್ಲಿನ ಕೋರ್ಸ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸುವ ಅಗತ್ಯವಿದೆ. ಭಾರತೀಯ ಶಿಕ್ಷಕರ ತರಬೇತಿ ಕೋರ್ಸ್‌ಗಳಿಗೆ ಪ್ರಮುಖ ಪುನರುಜ್ಜೀವನದ ಅಗತ್ಯವಿದೆ. BEd ಅಥವಾ ಡಿಪ್ಲೊಮಾ ಕಾರ್ಯಕ್ರಮಗಳು ಈ ಕಾಲಕ್ಕೆ ತಕ್ಕಂತ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ನೀಡಲು ಶಿಕ್ಷಕರನ್ನು ಸಿದ್ಧಪಡಿಸುವುದಿಲ್ಲ" ಎಂದು ಅಭಿಪ್ರಾಯ ಪಡುತ್ತಾರೆ.


ನಮ್ಮ ದೇಶದ ವೈವಿಧ್ಯತೆ – ಫಿನ್‌ಲ್ಯಾಂಡ್‌ನ ಏಕರೂಪತೆ


ಫಿನ್ನಿಷ್ ತರಬೇತಿ ಕಾರ್ಯಕ್ರಮಗಳು ಬಹಳಷ್ಟು ವಿಚಾರಗಳಲ್ಲಿ ಪ್ರಶಂಸಿಸಲ್ಪಟ್ಟಿದ್ದರೂ, ಅವುಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಅಥವಾ ತರಬೇತಿಗಾಗಿ ನಾರ್ಡಿಕ್ ದೇಶಕ್ಕೆ ಶಿಕ್ಷಕರನ್ನು ಕಳುಹಿಸಲು ಸಾಧ್ಯವೇ ಅನ್ನೋದು ಮುಖ್ಯವಾಗುತ್ತದೆ.




ಈ  ಶಿಕ್ಷಣ ಪದ್ದತಿ ಅನುಸರಿಸುವುದು ಕಷ್ಟ


ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ ಗೋಮತಿ ಸೌಂದರರಾಜ್ ಅವರು ಫಿನ್ನಿಷ್ ಮಾದರಿಯ ಶಿಕ್ಷಣವನ್ನು ಸಂಪೂರ್ಣವಾಗಿ ಅನುಸರಿಸುವುದು ನಮ್ಮಲ್ಲಿ ಕಷ್ಟ ಎಂಬುದಾಗಿ ಹೇಳುತ್ತಾರೆ. "ಫಿನ್ಲ್ಯಾಂಡ್ ಒಂದು ಏಕರೂಪದ ದೇಶವಾಗಿದೆ. ವಿಷಯಗಳು ಕೇಂದ್ರೀಕೃತವಾಗಿರಬಹುದಾದ ಶಿಕ್ಷಣದ ಮಾದರಿಯನ್ನು ಅನುಸರಿಸಲು ಫಿನ್ನಿಷ್ ಶಿಕ್ಷಕರಿಗೆ ಸುಲಭವಾಗಿದೆ. ಆದರೆ ಭಾರತವು ವೈವಿಧ್ಯತೆಯಿಂದ ತುಂಬಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ" ಎಂದು ವಿವರಿಸುತ್ತಾರೆ.


ಭಾರತದಲ್ಲಿ ಇದೇ ರೀತಿಯ ತರಬೇತಿ ಮಾಡ್ಯೂಲ್‌ಗಳು ಬರಬಹುದೇ


ಇದಕ್ಕೆ ಪೂರಕವಾಗಿ ಫಿನ್‌ಲ್ಯಾಂಡ್ ಎಜುಕೇಶನ್ ಹಬ್‌ನ ಶ್ರೀವಾಸ್ತವ ಅವರು, ಎಲ್ಲಾ ಶಿಕ್ಷಕರನ್ನು ತರಬೇತಿ ಕಾರ್ಯಕ್ರಮಗಳಿಗಾಗಿ ಫಿನ್‌ಲ್ಯಾಂಡ್ ಅಥವಾ ಬೇರೆ ಯಾವುದೇ ದೇಶಕ್ಕೆ ಕಳುಹಿಸಲಾಗುವುದಿಲ್ಲ. ಭಾರತದಲ್ಲಿ ಇದೇ ರೀತಿಯ ತರಬೇತಿ ಮಾಡ್ಯೂಲ್‌ಗಳು ಮತ್ತು ಸಂಸ್ಥೆಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ ಎಂಬುದಾಗಿ ಅವರು ಅಭಿಪ್ರಾಯ ಪಡುತ್ತಾರೆ.


ಒಟ್ಟಾರೆ ಈ ಕುರಿತು ಪರ – ವಿರೋಧ ಚರ್ಚೆಗಳು ಆರಂಭವಾಗಿದ್ದು, ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಷ್ಟೆ.

First published: