• ಹೋಂ
 • »
 • ನ್ಯೂಸ್
 • »
 • Jobs
 • »
 • ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ʻಭೂತʼ: ಎನ್ ಸುಕುಮಾರ್ ಅವರ ಪುಸ್ತಕದಲ್ಲಿ ಈ ಬಗ್ಗೆ ಏನಿದೆ? ಇಲ್ಲಿದೆ ಮಾಹಿತಿ

ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ʻಭೂತʼ: ಎನ್ ಸುಕುಮಾರ್ ಅವರ ಪುಸ್ತಕದಲ್ಲಿ ಈ ಬಗ್ಗೆ ಏನಿದೆ? ಇಲ್ಲಿದೆ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಹಿಳಾ ದಲಿತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳದ ನಿದರ್ಶನಗಳು ಮತ್ತು ದಲಿತ ವಿದ್ಯಾರ್ಥಿಗಳನ್ನು ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಮಾಡಿದ ಪ್ರಕರಣಗಳು. ಜಾತಿಯು ಕಾರ್ಯನಿರ್ವಹಿಸುವ ಇನ್ನೂ ಹಲವಾರು ಅಗ್ರಾಹ್ಯ ಮಾರ್ಗಗಳನ್ನು ಉಲ್ಲೇಖಿಸಿದ್ದಾರೆ.

 • Share this:
 • published by :

ಸಮಾಜಕ್ಕೆ ಅಂಟಿರುವ ಜಾತಿ (Cast) ಎಂಬ ಭೂತ, ಮೇಲು-ಕೀಳು ಎಂಬ ತಾರತಮ್ಮ, ಭ್ರಷ್ಟಾಚಾರ (Corruption) ಇವುಗಳು ನಮ್ಮ ದೇಶದಲ್ಲಿ ಭೂಮಿಯ ಆಳಕ್ಕೆ ಬೇರೂರಿದ್ದು, ಕಿತ್ತೊಗೆಯುವುದು ಅಸಾಧ್ಯದ ಮಾತು. ಜಾತಿ ನಿರ್ಮೂಲನಾ ವಾದ ಇಂದು-ನಿನ್ನೆಯದಲ್ಲ. ಸಮಾಜ ಸುಧಾರಕರಿಂದ ಹಿಡಿದು ಸ್ವಾತಂತ್ರ್ಯ ಹೋರಾಟಗಾರರವರೆಗೂ ಅಷ್ಟೇ ಯಾಕೆ ಇಂದಿನ ಯುಗಕ್ಕೆ ಸ್ಪೂರ್ತಿಯಾಗಿರುವ ಅನೇಕ ಬರಹಗಾರರು, ಕವಿಗಳು, ಲೇಖಕರು ಜಾತಿ ಆಧಾರಿತ ಅಸಮಾನತೆ ಮತ್ತು ಅಸ್ಪೃಶ್ಯತೆಯು ಸಮಾಜಕ್ಕೆ (Social) ಮಾರಕ ಎಂದು ವಾದಿಸಿದವರು.


ಇದನ್ನು ತೊಡೆದುಹಾಕಿ ಆದರ್ಶಪ್ರಾಯವಾದ ವ್ಯವಸ್ಥೆಯನ್ನು ಕಟ್ಟಬೇಕು ಎಂಬುದು ಅವರ ನಿಲುವು.


ಜಾತಿ ಎಂಬ ಅಸ್ತ್ರ


ಆದರೆ ಪ್ರಸ್ತುತ ಸಮಾಜದಲ್ಲಿ ಜಾತಿ ಎಂಬುವುದು ಕೂಡ ಒಂದು ಶಕ್ತಿಯಾಗಿ, ಅಸ್ತ್ರವಾಗಿ ಬಳಕೆಯಾಗುತ್ತಿದೆ. ಜಾತಿ ರಾಜಕೀಯ ದಾಳವಾಗಿದ್ದರಿಂದ ಹಿಡಿದು ಜಾತಿಯ ಒಂದಿಷ್ಟು ನೆರಳು ಕೂಡ ಬೀಳಬಾರದ ಶಿಕ್ಷಣ ಸಂಸ್ಥೆಗಳಲ್ಲಿಯೂ ಸಹ ಜಾತಿ ಎಂಬ ಭೂತ ಆವರಿಸಿದೆ.


ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ʻಭೂತʼ


ಅನೇಕ ಲೇಖಕರು, ಬರಹಗಾರರು, ಚಿಂತಕರು ಈ ಬಗ್ಗೆ ಅವರದ್ದೇ ಆದ ಧಾಟಿಯಲ್ಲಿ ಹೇಳುತ್ತಲೇ ಬಂದಿದ್ದಾರೆ. ಈ ಕುರಿತಾಗಿ ಅನೇಕ ಪುಸ್ತಕಗಳನ್ನು ಸಹ ಹೊರ ತಂದಿದ್ದಾರೆ. ಭಾರತದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ವ್ಯವಸ್ಥೆ ಜೀವಂತವಾಗಿದೆ ಎನ್ನುವುದಕ್ಕೆ ಅಲ್ಲಿ ನಡೆಯುವ ಜಾತಿಗೆ ಸಂಬಂಧಿಸಿದ ರ್ಯಾಗಿಂಗ್‌ಗಳು, ಅವಹೇಳನಕಾರಿ ಮಾತು, ಹಿಂಸೆ, ಇವುಗಳಿಂದೆಲ್ಲಾ ಮನನೊಂದ ವಿದ್ಯಾರ್ಥಿಗಳ ಆತ್ಮಹತ್ಯೆ ಸಾಕ್ಷಿಯಾಗಿವೆ.


ಇಂತಹ ಪ್ರಕರಣಗಳು ಪ್ರತಿದಿನ ವರದಿಯಾಗುತ್ತಲೇ ಇರುತ್ತದೆ. ಜಾತಿ ಎಂಬ ಪದ್ಧತಿಯನ್ನು ಬುಡ ಸಮೇತ ಕಿತ್ತು ಬೀಸಾಕುವಲ್ಲಿ ಒಗ್ಗೂಡಬೇಕಾದ ಯುವಕರೇ ಜಾತಿ, ತಾರತಮ್ಯವನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂಬುದಕ್ಕೆ ಅವರು ಕಾಲೇಜಿನಲ್ಲಿ ನಡೆಸುವ ಚಟುವಟಿಕೆಗಳೇ ಸಾಕ್ಷಿಯಾಗಿವೆ. ಇದು ಆತಂಕಕಾರಿ ಬೆಳವಣಿಗೆ ಕೂಡ ಹೌದು.


ಇದನ್ನೂ ಓದಿ: Education News: ಈ ರಾಜ್ಯದಲ್ಲಿ ಖಾಸಗಿ ಶಾಲೆಗಳಲ್ಲೂ ಸಿಗುತ್ತೆ ಉಚಿತ ಶಿಕ್ಷಣ!


ಶಿಕ್ಷಣ ಸಂಸ್ಥೆಗಳಲ್ಲಿರುವ ಜಾತಿ ವ್ಯವಸ್ಥೆ ಮೇಲೆ ಬೆಳಕು ಚೆಲ್ಲಿದ ಎನ್. ಸುಕುಮಾರ್ ಪುಸ್ತಕ


ಭಾರತೀಯ ಉನ್ನತ ಶಿಕ್ಷಣದಲ್ಲಿ ಜಾತಿ ಜೀವಂತವಾಗಿದೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುವ ವಿಚಾರ. ಹೀಗೆ ಭಾರತೀಯ ಉನ್ನತ ಶಿಕ್ಷಣದಲ್ಲಿ ಜಾತಿ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಎನ್. ಸುಕುಮಾರ್ ಎಂಬ ಲೇಖಕರು ಕ್ಯಾಸ್ಟ್‌ ಡಿಸ್ಕ್ರಿಮಿನೇಷನ್‌ ಆಂಡ್‌ ಎಕ್ಸ್‌ಕ್ಲೂಷನ್‌ ಇನ್‌ ಇಂಡಿಯನ್‌ ಯುನಿವರ್ಸಿಟಿ: ಎ ಕ್ರಿಟಿಕಲ್‌ ರಿಫ್ಲೆಕ್ಷನ್ (Caste Discrimination and Exclusion in Indian Universities: A Critical Reflection' ) ಪುಸ್ತಕದಲ್ಲಿ ವಿವರಿಸಿದ್ದಾರೆ.


ಇವರ ಈ ಪುಸ್ತಕ ವಿಶ್ವವಿದ್ಯಾನಿಲಯಗಳಲ್ಲಿ ಜಾತಿಯು ಕಾರ್ಯನಿರ್ವಹಿಸುವ ಸ್ಪಷ್ಟ ಮತ್ತು ಅಗ್ರಾಹ್ಯ ವಿಧಾನಗಳ ಮೇಲೆ ಬೆಳಕು ಚೆಲ್ಲುತ್ತದೆ. ಈ ಪುಸ್ತಕವು ದೇಶಾದ್ಯಂತದ 600 ದಲಿತ ವಿದ್ಯಾರ್ಥಿಗಳನ್ನು ಸಂದರ್ಶಿಸುವ ಮೂಲಕ ತರಗತಿಗಳು, ಹಾಸ್ಟೆಲ್‌ಗಳು ಮತ್ತು ಸಾಂಸ್ಕೃತಿಕ ವೇದಿಕೆಗಳು ಸೇರಿದಂತೆ ಅನೇಕ ಸ್ಥಳಗಳಲ್ಲಿ ಜಾತಿ ತಾರತಮ್ಯ ಇರುವುದನ್ನು ಸುಕುಮಾರ್ ಪತ್ತೆ ಮಾಡಿದ್ದಾರೆ.


ಎನ್. ಸುಕುಮಾರ್ ಅವರ ಈ ಪುಸ್ತಕ ಸಂಪೂರ್ಣ ಶಿಕ್ಷಣ ಸಂಸ್ಥೆಗಳಲ್ಲಿರುವ ಜಾತಿ ವ್ಯವಸ್ಥೆ ಮೇಲೆ ಬೆಳಕು ಚೆಲ್ಲಿದೆ. ಪುಸ್ತಕದ ಮೊದಲ ಅಧ್ಯಾಯಗಳು ಶೈಕ್ಷಣಿಕತೆಯು ನಿರ್ವಾತದಲ್ಲಿ ಅಸ್ತಿತ್ವದಲ್ಲಿಲ್ಲ, ಆದರೆ ಜಾತಿ, ಲಿಂಗ, ವರ್ಗ ಮತ್ತು ಭಾಷೆಯ ನಡುವಿನ ಪರಸ್ಪರ ಕ್ರಿಯೆಗಳ ಜಾಲದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರೆ, ನಾಲ್ಕನೇ ಅಧ್ಯಾಯವು ಉನ್ನತ ಶಿಕ್ಷಣದಲ್ಲಿ ದಲಿತ ವಿದ್ಯಾರ್ಥಿಗಳ 16 ನಿರೂಪಣೆಗಳನ್ನು ಪ್ರಸ್ತುತಪಡಿಸುತ್ತದೆ.
ಅಂತಿಮ ಅಧ್ಯಾಯದಲ್ಲಿ, ಸುಕುಮಾರ್ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯದ ಕರಾಳ ಪರಿಣಾಮಗಳನ್ನು ಪರಿಶೀಲಿಸಿದ್ದಾರೆ. ಇಲ್ಲಿ ನೀತಿ ಬದಲಾವಣೆಗಳು ಮತ್ತು ಕಾನೂನು ಪರಿಹಾರಗಳ ಮೇಲೆಯೂ ಬೆಳಕು ಚೆಲ್ಲಿದ್ದಾರೆ.


ಶಿಕ್ಷಣದಲ್ಲಿ ಜಾತಿ ತಾರತಮ್ಯದ ಬಗ್ಗೆ ಸುಕುಮಾರ್ ಬರೆದಿರುವುದು ಇದೇ ಮೊದಲಲ್ಲ. ಅವರ ಹಿಂದಿನ ಸ್ವಯಂ ಜನಾಂಗೀಯ ಕೆಲಸವು ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ SC ವಿದ್ಯಾರ್ಥಿಗಳ ಜೀವನದ ಮೇಲೆ ಕೇಂದ್ರೀಕರಿಸಿದೆ.


ಅವರು ಈಗ ಎರಡು ದಶಕಗಳಿಂದ ದೆಹಲಿ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಅಧ್ಯಾಪಕರಾಗಿದ್ದಾರೆ. ಸಮಾಜ ನನ್ನನ್ನು ನನ್ನ ಪದವಿಯಿಂದ ಈಗಲೂ ಗುರುತಿಸಿಲ್ಲ, ಬದಲಿಗೆ ನನ್ನನ್ನು ಸಾಮಾನ್ಯವಾಗಿ SC/ST ವೀಕ್ಷಕ ಎಂದು ಮಾತ್ರ ಪರಿಗಣಿಸಲಾಗಿದೆ ಎಂದು ಅವರು ಹೇಳುತ್ತಾರೆ. ಅವರಿಗೂ ಈ ಜಾತಿ ಎಂಬ ಪೆಡಂಭೂತ ಬಿಟ್ಟಿಲ್ಲ ಎಂದು ನೇರವಾಗಿ ಹೇಳಿದ್ದಾರೆ.


ಮೀಸಲಾತಿ ಮೂಲಕ ಬಂದವರ ಕಡೆಗಣನೆ


ಪುಸ್ತಕಗಳ ಮೂಲಕ, ಜಾತಿ ತಾರತಮ್ಯವು ಬಹು ರೂಪಗಳಲ್ಲಿ ಪ್ರಕಟವಾಗುತ್ತದೆ ಎಂದು ಸುಕುಮಾರ್ ಪದೇ ಪದೇ ವಾದಿಸುತ್ತಲೇ ಬಂದಿದ್ದಾರೆ. ಸುಕುಮಾರ್ ಅವರು ಶೈಕ್ಷಣಿಕ ಸ್ಥಳಗಳಲ್ಲಿ, ಜಾತಿ ಸವಲತ್ತುಗಳನ್ನು "ಮೆರಿಟ್" ಭಾಷೆಯಾಗಿ ಪರಿವರ್ತಿಸಲಾಗಿದೆ ಎಂದು ವಾದಿಸುತ್ತಾರೆ.


ಮೀಸಲಾತಿ ಮೂಲಕ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಿಸುವ ವಿದ್ಯಾರ್ಥಿಗಳನ್ನು ಮಂಡಳಿ ಅರ್ಹರಲ್ಲದವರು ಎಂಬ ಹಣೆಪಟ್ಟಿ ಕಟ್ಟಿಬಿಡುತ್ತಾರೆ. ಅಧ್ಯಾಪಕರು, ಶಿಕ್ಷಣ ಮಂಡಳಿ ಕೂಡ ಜಾತಿ ಆಧಾರಿತ ಮೀಸಲಾತಿ ಮೇಲೆ ಕಾಲೇಜಿನಲ್ಲಿ ಪ್ರವೇಶ ಪಡೆದವರನ್ನು ತುಚ್ಯವಾಗಿ ಕಾಣುತ್ತಾರೆ ಮತ್ತು ಅದೇ ತಾರತಮ್ಯತೆಯಿಂದ ನಡೆಸಿಕೊಳ್ಳುತ್ತಾರೆ ಎಂದು ಪುಸ್ತಕದಲ್ಲಿ ವಿವರಿಸುತ್ತಾರೆ.


ಕಾಲೇಜುಗಳಲ್ಲಿ ಒಂದಲ್ಲ ಒಂದು ರೀತಿ ಹಿಂಸೆಗೆ ಒಳಗಾಗುತ್ತಿದ್ದಾರೆ ದಲಿತ ವಿದ್ಯಾರ್ಥಿಗಳು


ವಿಶ್ವವಿದ್ಯಾನಿಲಯದ ಅಧ್ಯಾಪಕರು ಮತ್ತು ಸಿಬ್ಬಂದಿ ದಲಿತ ವಿದ್ಯಾರ್ಥಿಗಳನ್ನು ವಿದ್ಯಾರ್ಥಿವೇತನವನ್ನು ಪಡೆಯುವುದನ್ನು ಅಥವಾ ಉತ್ತೀರ್ಣ ಅಂಕವನ್ನು ಪಡೆದುಕೊಳ್ಳುವುದನ್ನು ಹೇಗೆ ತಡೆಯುತ್ತಾರೆ ಎಂಬುದನ್ನು ಸುಕುಮಾರ್ ಪುಸ್ತಕದಲ್ಲಿ ಚರ್ಚಿಸಿದ್ದಾರೆ. ಮಹಿಳಾ ದಲಿತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳದ ನಿದರ್ಶನಗಳು ಮತ್ತು ದಲಿತ ವಿದ್ಯಾರ್ಥಿಗಳನ್ನು ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಮಾಡಿದ ಪ್ರಕರಣಗಳು. ಜಾತಿಯು ಕಾರ್ಯನಿರ್ವಹಿಸುವ ಇನ್ನೂ ಹಲವಾರು ಅಗ್ರಾಹ್ಯ ಮಾರ್ಗಗಳನ್ನು ಉಲ್ಲೇಖಿಸಿದ್ದಾರೆ.


ದಲಿತ ವಿದ್ಯಾರ್ಥಿಗಳ ಬಗ್ಗೆ ಗಾಸಿಪ್‌ ಮಾಡುವುದು, ಸಾಂಸ್ಕೃತಿಕ ಮತ್ತು ಸಾಮಾಜಿಕ ಅವಕಾಶಗಳ ಕೊರತೆ ಮತ್ತು ರೋಲ್ ಮಾಡೆಲ್‌ಗಳು ಮತ್ತು ಮಾರ್ಗದರ್ಶನದ ಕೊರತೆಯಿದೆ.


ತಾರತಮ್ಯವನ್ನು ಒಂದು ಸ್ಪೆಕ್ಟ್ರಮ್‌ನಂತೆ ನೋಡುವುದರಿಂದ ತಮ್ಮನ್ನು ತಾವು ಪ್ರಗತಿಪರರು ಎಂದು ನಂಬುವವರನ್ನು ಸಹ ಸೇರಿಸಿಕೊಳ್ಳಲು ಸಂಕೀರ್ಣತೆಯ ಜಾಲವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಹೀಗಾಗಿ, ವೈಯಕ್ತಿಕ ಉದ್ದೇಶವು ಜಾತಿ ತಾರತಮ್ಯಕ್ಕೆ ಅಪ್ರಸ್ತುತವಾಗಬಹುದು ಎಂದು ಸುಕುಮಾರ್‌ ಪುಸ್ತಕದಲ್ಲಿ ವಾದಿಸಿದ್ದಾರೆ.


ಆರ್‌ಟಿಐ ಮೂಲಕ ಮಾಹಿತಿ


ದಲಿತ ವಿದ್ಯಾರ್ಥಿ ವಿರುದ್ಧ ನಡೆಯುವ ತಾರತಮ್ಯ, ಅಸಹಿಷ್ಣುತೆಯಲ್ಲಿ ಶಿಕ್ಷಣ ಸಂಸ್ಥೆಗಳು ಕೂಡ ಭಾಗಿಯಾಗಿದೆ ಎಂದು ಪುಸ್ತಕವು ಹೇಳಿದೆ. ಸುಕುಮಾರ್ ಅವರ ಪುಸ್ತಕವು ಕಳಪೆ ಅಧ್ಯಾಪಕರ ನೇಮಕಾತಿ, ಮೀಸಲಾತಿಯ ಅಸಮರ್ಪಕ ಅನುಷ್ಠಾನ ಮತ್ತು ವಿದ್ಯಾರ್ಥಿವೇತನವನ್ನು ಕಡಿತಗೊಳಿಸುವ ಹಲವು ಪ್ರಕರಣಗಳನ್ನು ಪುರಾವೆಗಳನ್ನು ನೀಡುವ ಮೂಲಕ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.


ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ವ್ಯವಸ್ಥೆ ಜೀವಂತವಾಗಿರುವ ಬಗ್ಗೆ ಕೆಲವು ಮಾಹಿತಿಗಳನ್ನು ಮಾಹಿತಿ ಹಕ್ಕು (RTI) ಮೂಲಕ ಪಡೆದು ಆ ವಿಚಾರವನ್ನು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.


ಸಾವಿಗೆ ಶರಣಾಗುತ್ತಿದ್ದಾರೆ ಮನನೊಂದ ದಲಿತ ವಿದ್ಯಾರ್ಥಿಗಳು


ಅನೇಕ ದಲಿತ ವಿದ್ಯಾರ್ಥಿಗಳಿಗೆ ಬದುಕುಳಿಯುವ ಸುಲಭ ವಿಧಾನವೆಂದರೆ ಅಗೋಚರವಾಗಿರುವುದು ಮತ್ತು 'ಸಾಮಾನ್ಯ' ಜೀವನವನ್ನು ನಡೆಸಲು ಪ್ರಯತ್ನಿಸುವುದು ಎಂದು ಸುಕುಮಾರ್ ಬರೆಯುತ್ತಾರೆ.


ಆದಾಗ್ಯೂ, ದಬ್ಬಾಳಿಕೆಯ ವ್ಯವಸ್ಥೆಯನ್ನು ನಿಭಾಯಿಸುವಲ್ಲಿ ಅನೇಕರು ವಿಫಲವಾಗುತ್ತಾರೆ ಮತ್ತು ಕೊನೆಯಾದಾಗಿ ಸಾವಿನ ಮೂಲಕ ಇದಕ್ಕೆ ವಿದಾಯ ಹಾಡುತ್ತಾರೆ ಎಂದು ಬರೆದಿದ್ದಾರೆ. ಸದ್ಯ ನಡೆಯುತ್ತಿರುವ ಪ್ರಕರಣಗಳು ಸುಕುಮಾರ್‌ ಹೇಳಿಕೆಗಳಿಗೆ ಪುಷ್ಠಿ ನೀಡುತ್ತಿವೆ ಎನ್ನಬಹುದು. ಮೀಸಲಾತಿಗಳು ಉನ್ನತ ಶಿಕ್ಷಣಕ್ಕೆ ಪ್ರವೇಶವನ್ನು ಒದಗಿಸಬಹುದು, ಆದರೆ ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಜಾತಿ ವ್ಯವಸ್ಥೆಯನ್ನು ಮತ್ತಷ್ಟು ಓರೆ ಹಚ್ಚಿ ನೋಡುವಂತಾಗಿದೆ.


ನಾವು ಭಿನ್ನಜಾತಿ ಮತ್ತು ಸಾಂಸ್ಥಿಕ ಜಾತಿ ತಾರತಮ್ಯವನ್ನು ಪರಿಹರಿಸಬೇಕಾದರೆ, ಇಡೀ ಸ್ಪೆಕ್ಟ್ರಮ್ಗೆ ಹಾಜರಾಗಬಹುದಾದ ಪರಿಹಾರಗಳನ್ನು ಪರಿಶೀಲಿಸುವ ಅವಶ್ಯಕತೆಯಿದೆ. ಇನ್ನೂ ಹೆಚ್ಚಾಗಿ, ಮೂಲಭೂತವಾದ ಮತ್ತು ಸಹಾನುಭೂತಿಯ ರಾಜಕೀಯಕ್ಕೆ ತುರ್ತು ಅವಶ್ಯಕತೆಯಿದೆ ಎಂದು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿರುವ ಜಾತಿ ವ್ಯವಸ್ಥೆ ಬಗ್ಗೆ ಬೆಳಕು ಚೆಲ್ಲಿದ್ದಾರೆ ಸುಕುಮಾರ್.


ಒಟ್ಟಾರೆ ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಜಾತಿ ವ್ಯವಸ್ಥೆ ಅಂತರ್ಗತವಾಗಿರುವ ಕಾರಣ ಉಳಿದುಕೊಂಡಿದೆ ಎಂದು ಸುಕುಮಾರ್ ಅಧ್ಯಯನದ ಮೂಲಕ ಕಂಡುಕೊಂಡಿದ್ದಾರೆ. ಈ ಪುಸ್ತಕವು ಶಿಕ್ಷಣ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆಯಾಗಿದೆ, ಜಾತಿ ನಿರ್ಮೂಲನೆ ಮತ್ತು ಸುರಕ್ಷಿತ ಶಿಕ್ಷಣ ಸಂಸ್ಥೆಗಳ ರಚನೆಯು ದಲಿತ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಎಲ್ಲರಿಗೂ ಪ್ರಯೋಜನವನ್ನು ನೀಡುತ್ತದೆ.

top videos


  ಉನ್ನತ ಶಿಕ್ಷಣ ಸಂಸ್ಥೆ ಮಾತ್ರವಲ್ಲ ಪ್ರತಿ ಶಿಕ್ಷಣ ಸಂಸ್ಥೆಗಳಲ್ಲಿರುವ ಜಾತಿ ವ್ಯವಸ್ಥೆಯನ್ನು ಕಿತ್ತು ಹಾಕುವ ಉದಾತ್ತ ಧ್ಯೇಯವನ್ನು ಈ ಪುಸ್ತಕ ಹೊಂದಿದೆ. ಸಮಾಜದಲ್ಲಿ ಬೇರೂರಿರುವ ಜಾತಿ ವ್ಯವಸ್ಥೆ ನಿರ್ಮೂಲನೆಗೆ ಮೊದಲು ಕೈಜೋಡಿಸಬೇಕಾದ ವಿದ್ಯಾರ್ಥಿಗಳೇ ಈ ಮಟ್ಟಕ್ಕೆ ಇಳಿದರೆ, ಆದರ್ಶಪ್ರಾಯ ಸಮಾಜ ನಿರ್ಮಾಣ ಹೇಗೆ? ಜಾತಿಗೆ ಕುಮ್ಮಕ್ಕು ನೀಡುತ್ತಿರುವ ರಾಜಕೀಯವನ್ನು ದೂರಬೇಕೋ? ಜಾತಿ ವ್ಯವಸ್ಥೆ ಮಾಡಿದವರನ್ನು ದೂರಬೇಕೋ? ವಿದ್ಯಾರ್ಥಿಗಳ ಮನಸ್ಸಿನಲ್ಲಿ ಜಾತಿ ಎಂಬ ವಿಷ ಬೀಜ ಬಿತ್ತಿದವರನ್ನು ದೂಷಿಸಬೇಕೋ? ಹೀಗೆ ಯಾರನ್ನು ಗುರಿ ಮಾಡಬೇಕು ಏಂಬುವುದೇ ಯಕ್ಷಪ್ರಶ್ನೆ.

  First published: