• Home
  • »
  • News
  • »
  • jobs
  • »
  • Education News: ಹೆಚ್ಚಾಯ್ತು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವ ಕ್ರೇಜ್​​, ಆದರೆ ಭಾರತಕ್ಕೆ ಬಂದವರು ಇಷ್ಟೇ ಜನ!

Education News: ಹೆಚ್ಚಾಯ್ತು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವ ಕ್ರೇಜ್​​, ಆದರೆ ಭಾರತಕ್ಕೆ ಬಂದವರು ಇಷ್ಟೇ ಜನ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

NEP 2020 ಅಸ್ತಿತ್ವಕ್ಕೆ ಬಂದ ನಂತರ ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣವನ್ನು ನೀಡಲು ಹೊಂದಿಕೊಳ್ಳುವ ಪಠ್ಯಕ್ರಮ ಮತ್ತು ಶಿಕ್ಷಣ ವ್ಯವಸ್ಥೆಯನ್ನು ತರಲಾಗುತ್ತದೆ. ಕ್ಯೂರೇಟಿಂಗ್ ಮಾಡುವ ಮೂಲಕ ಬದಲಾವಣೆಗಳನ್ನೂ ಸಹ ತಂದಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಓದಲು 49,000 ವಿದ್ಯಾರ್ಥಿಗಳು ಭಾರತಕ್ಕೆ ಬಂದಿದ್ದಾರೆ ಮತ್ತು 10 ಲಕ್ಷ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿದ್ದಾರೆ.

ಮುಂದೆ ಓದಿ ...
  • News18 Kannada
  • 5-MIN READ
  • Last Updated :
  • New Delhi, India
  • Share this:

ದೇಶವನ್ನು ಜಾಗತಿಕ ಜ್ಞಾನದ ಸೂಪರ್ ಪವರ್ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಹೊಸ ಶಿಕ್ಷಣ ನೀತಿಯನ್ನು (New Education Policy) ಜಾರಿಗೆ ತಂದು ಆ ಮೂಲಕ ಮಕ್ಕಳ ಶೈಕ್ಷಣಿಕ (Education) ಪ್ರಗತಿ ಮಾಡುವ ಎಲ್ಲಾ ಸಿದ್ಧತೆಗಳು ಈಗಾಗಲೇ ಜರುಗಿವೆ. ಕೇಂದ್ರ ಸಚಿವ ಸುಭಾಸ್ ಸರ್ಕಾರ್ ಅವರು ಈಗಾಗಲೇ ಈ ವಿಚಾರದ ಕುರಿತಾಗಿ ತಮ್ಮ ಕೆಲವು ಅಭಿಪ್ರಾಯ ಹಾಗೂ ನಿರ್ಧಾರಗಳನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ (Information) ಈ ಲೇಖನ ಓದಿ.


ಕೇಂದ್ರ ಶಿಕ್ಷಣ ರಾಜ್ಯ ಸಚಿವ ಸರ್ಕಾರ್ ಅವರು ಭಾರತೀಯ ವಾಣಿಜ್ಯ ಮಂಡಳಿಯ 5 ನೇ ಜಾಗತೀಕರಣಗೊಂಡ ಶಿಕ್ಷಣ ವೇದಿಕೆಯನ್ನುದ್ದೇಶಿಸಿ ಮಾತನಾಡುವಾಗ ಅಂತರರಾಷ್ಟ್ರೀಕರಣದ ಕಲ್ಪನೆಯನ್ನು ಮರುಪರಿಶೀಲಿಸುವ ಕುರಿತು ಮಾತನಾಡಿದರು. ಜಾಗತಿಕವಾಗಿ ಸ್ಥಳೀಯವಾಗಿ ಶಿಕ್ಷಣ ಕ್ಷೇತ್ರದಲ್ಲಾಗಬೇಕಾದ ಪ್ರಗತಿಯ ಕುರಿತು ಮಾತನಾಡಿದರು.


ಅಂತಾರಾಷ್ಟ್ರೀಯವಾಗಿ ಸೂಕ್ತವಾದ ಪಠ್ಯಕ್ರಮವನ್ನು ಹೊಂದಿರುವ ಬಹು-ಶಿಸ್ತಿನ ಶಿಕ್ಷಣ ವ್ಯವಸ್ಥೆಯನ್ನು ದೇಶವು ರೂಪಿಸಿದ್ದು, ಉದ್ಯೋಗವನ್ನು ಸೃಷ್ಟಿಸಲು ಸಹಾಯ ಮಾಡುವ ಮೂಲಕ ಭಾರತವನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಸೂಪರ್ ಪವರ್ ಮಾಡುವುದು ನಮ್ಮ ಧ್ಯೇಯವಾಗಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: Life Lesson: ಮಕ್ಕಳಿಗೆ ಈ ವಿಷಯಗಳನ್ನು ಕಲಿಸದೆ ಇರುವುದೇ ಉತ್ತಮ!


ಇಂದು ಭಾರತವು ಅತ್ಯಧಿಕ ಸಂಖ್ಯೆಯ ವಿದ್ಯಾವಂತ ಯುವಕರನ್ನು ಹೊಂದಿರುವ ವಿಶ್ವದ ಜ್ಞಾನ ಕೇಂದ್ರವಾಗುವ ಸಾಮರ್ಥ್ಯವನ್ನು ಹೊಂದಿದೆ, ಆದರೆ ಇದು ದೇಶವನ್ನು ಮುಂದಕ್ಕೆ ಕೊಂಡೊಯ್ಯುವ ಕೌಶಲ್ಯ ಬಂಡವಾಳವಾಗಿದೆ ಬದಲಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಮಟ್ಟದಲ್ಲಿ ಶಿಕ್ಷಣವನ್ನು ನೀಡುವ ಮೂಲಕ ಈ ಗುರಿಯನ್ನು ಸಾಧಿಸಬಹುದು ಎಂದಿದ್ದಾರೆ.


ಭಾರತ ಜಾಗತಿಕ ಶೈಕ್ಷಣಿಕ ಕೇಂದ್ರವಾಗಲಿದೆ


ರಾಷ್ಟ್ರೀಯ ಶಿಕ್ಷಣ ನೀತಿ 2020 ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡಲು ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ ಮತ್ತು ಅಧ್ಯಾಪಕರಿಗೂ ಸಹ ಆದ್ಯತೆ ನೀಡುತ್ತಿದೆ. ವಿದೇಶಿ ವಿಶ್ವವಿದ್ಯಾಲಯಗಳನ್ನು ಭಾರತದಲ್ಲಿ ಸ್ಥಾಪನೆ ಮಾಡಲು ಅಸ್ತು ಎಂದಿದೆ. ಒಂದಲ್ಲ ಒಂದು ನಿಟ್ಟಿನಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸಲು ಈ ವರ್ಷ ಸಿದ್ಧವಾಗಿ ನಿಂತಿದೆ ಎಂದೇ ಹೇಳಬಹುದು.  ಕೇಂದ್ರ ಸರ್ಕಾರವು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ನೆರವು ನೀಡಲು ವೇದಿಕೆಯನ್ನು ಒದಗಿಸುತ್ತಿದೆ ಎಂದು ಅವರು ಹೇಳಿದರು.




NEP 2020 ಅಸ್ತಿತ್ವಕ್ಕೆ ಬಂದ ನಂತರ ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣವನ್ನು ನೀಡಲು ಹೊಂದಿಕೊಳ್ಳುವ ಪಠ್ಯಕ್ರಮ ಮತ್ತು ಶಿಕ್ಷಣ ವ್ಯವಸ್ಥೆಯನ್ನು ತರಲಾಗುತ್ತದೆ. ಕ್ಯೂರೇಟಿಂಗ್ ಮಾಡುವ ಮೂಲಕ ಬದಲಾವಣೆಗಳನ್ನೂ ಸಹ ತಂದಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಓದಲು 49,000 ವಿದ್ಯಾರ್ಥಿಗಳು ಭಾರತಕ್ಕೆ ಬಂದಿದ್ದಾರೆ ಮತ್ತು 10 ಲಕ್ಷ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ಲೆಕ್ಕಾಚಾರವನ್ನು ಗಮನಿಸಿದರೆ ನಮ್ಮ ದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯಾಸಕ್ಕೆಂದು ವಿದೇಶವನ್ನೇ ಆರಿಸಿಕೊಳ್ಳುವುದು ತಿಳಿದುಬಂದಿದೆ.


ಸಾರ್ಕ್ ಮತ್ತು ಆಫ್ರಿಕಾ ದೇಶದ ವಿದ್ಯಾರ್ಥಿಗಳಿಗೆ ಭಾರತ ಶಿಕ್ಷಣ ನೀಡುತ್ತಿದೆ


ಭಾರತವು ಸಾರ್ಕ್ ಮತ್ತು ಆಫ್ರಿಕಾ ದೇಶದ ವಿದ್ಯಾರ್ಥಿಗಳಿಗೆ ಕಲಿಕೆಗೆ ಆಸಕ್ತಿದಾಯಕ ಸ್ಥಳವಾಗಿದೆ. ಈ ಎರಡು ದೇಶದಿಂದ ಹಲವಾರು ವಿದ್ಯಾರ್ಥಿಗಳು ಭಾರತಕ್ಕೆ ಆಗಮಿಸುತ್ತಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು. . "ಇಂದು ಭಾರತವು ಹೆಚ್ಚಿನ ಸಂಖ್ಯೆಯ ಸಮರ್ಥ ಯುವಕರನ್ನು ಹೊಂದಿದೆ, ಪ್ರಪಂಚದ ಅಭಿವೃದ್ಧಿಯ ಎಂಜಿನ್ ಆಗಬಲ್ಲ ನುರಿತ ಮಾನವ ಸಂಪನ್ಮೂಲ ಬಂಡವಾಳವನ್ನು ನಾವು ಹೊಂದಿದ್ದೇವೆ" ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತವು ಉನ್ನತ ಶಿಕ್ಷಣದ ಅಂತರಾಷ್ಟ್ರೀಯೀಕರಣದ ಮಹತ್ವದ ಹಂತದಲ್ಲಿದೆ. ಅತ್ಯುತ್ತಮ ಶೈಕ್ಷಣಿಕ ಪ್ರಗತಿಯನ್ನು ಉತ್ತೇಜಿಸಲು ಮತ್ತು ವೈವಿಧ್ಯಮಯ ಶಿಕ್ಷಣ ವ್ಯವಸ್ಥೆಯೊಂದಿಗೆ ವಿದ್ಯಾರ್ಥಿಗಳನ್ನು ಹುರಿದುಂಬಿಸಲು ಭಾರತ ಅಣಿಯಾಗುತ್ತಿದೆ.

First published: